ಗುಜರಾತ್ ಕಂಪನಿಗಳಿಗೆ ಸಬ್ಸಿಡಿ ವಿಚಾರದ ಹೇಳಿಕೆ ತಿರುಚಲಾಗಿದೆ-ಹೆಚ್ಡಿ ಕುಮಾರಸ್ವಾಮಿ
ಬೆಂಗಳೂರಿನಲ್ಲಿ ಮಾತನಾಡಿದ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ(H. D. Kumaraswamy), ‘ಗುಜರಾತ್ ಕಂಪನಿಗಳಿಗೆ ಸಬ್ಸಿಡಿ ವಿಚಾರ, ‘ನನ್ನ ಹೇಳಿಕೆಯನ್ನು ಬೇರೆ ರೀತಿಯಲ್ಲಿ ತಿರುಚಲಾಗಿದೆ. ಈ ಮೊದಲು ನಮ್ಮಲ್ಲಿ ಸೆಮಿಕಂಡಕ್ಟರ್ ಉತ್ಪಾದನೆ ಕಂಪನಿ ಇರಲಿಲ್ಲ, ಆದರೆ, ಪ್ರಧಾನಿ ಮಂತ್ರಿಗಳು ನಮ್ಮ ದೇಶದಲ್ಲಿ ಉತ್ಪಾದನೆ ಮಾಡಲು ಪ್ರಯತ್ನ ಆರಂಭಿಸಿದ್ದಾರೆ
ಬೆಂಗಳೂರು, ಜೂ.18: ಗುಜರಾತ್ ಕಂಪನಿಗಳಿಗೆ ಸಬ್ಸಿಡಿ ವಿಚಾರ, ‘ನನ್ನ ಹೇಳಿಕೆಯನ್ನು ಬೇರೆ ರೀತಿಯಲ್ಲಿ ತಿರುಚಲಾಗಿದೆ ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ(H. D. Kumaraswamy) ಅವರು ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ‘ನಮ್ಮ ದೇಶದಲ್ಲಿ ಮೊದಲು ಸೆಮಿಕಂಡಕ್ಟರ್ ಉತ್ಪಾದನೆ ಕಂಪನಿ ಇರಲಿಲ್ಲ. ಪ್ರಧಾನಿ ಮಂತ್ರಿಗಳು ನಮ್ಮ ದೇಶದಲ್ಲಿ ಉತ್ಪಾದನೆ ಮಾಡಲು ಪ್ರಯತ್ನ ಆರಂಭಿಸಿದ್ದಾರೆ ಎಂದರು.
ಸೆಮಿಕಂಡಕ್ಟರ್ ಎಲ್ಲದಕ್ಕೂ ಬೇಕಾದ ಪ್ರಮುಖವಾದ ಉತ್ಪನ್ನವಾಗಿದ್ದು, ರಫ್ತಿನಲ್ಲಿ ತೈವಾನ್ ಮೊದಲ ಸ್ಥಾನದಲ್ಲಿದೆ. ಅಮೇರಿಕದಲ್ಲೂ ಸಬ್ಸಿಡಿ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಸೆಮಿಕಂಡಕ್ಟರ್ ಉತ್ಪಾದನೆ ಮಾಡಲು ಪ್ರಧಾನಿ ಪೈಲೆಟ್ ಪ್ರಾಜೆಕ್ಟ್ ಶುರು ಮಾಡಿದ್ದಾರೆ. ಈ ಹಿಂದೆ ಇದನ್ನೂ ಹೆಚ್ಚು ಆಮದು ಮಾಡಿಕೊಳ್ಳಲಾಗುತ್ತಿತ್ತು. ಇನ್ನು ಪ್ರಧಾನಿ ಒತ್ತಡದಿಂದ ಯೂಟರ್ನ್ ವಿಚಾರ, ‘ಯೂಟರ್ನ್ ಪ್ರಶ್ನೆಯಿಲ್ಲ. ವಿಚಾರ ಗೊತ್ತಾದಾಗ ತಿದ್ದುಕೊಳ್ಳಬೇಕು. ಯಾವುದಕ್ಕೆ ಆದ್ಯತೆ ಕೊಡಬೇಕು ಎಂಬ ವಿಚಾರವನ್ನು ಗೃಹಿಸಿದಾಗ ನನ್ನ ಸ್ಟ್ಯಾಂಡ್ ಬದಲಾವಣೆ ಮಾಡಿಕೊಂಡಿದ್ದೆನೆ ಎಂದು ಹೇಳಿದರು.
ಇದನ್ನೂ ಓದಿ:ನನ್ನ ಮುಗಿಸಲು ಕೆಲ ನಾಯಕರು ಪ್ರಯತ್ನಿಸುತ್ತಿದ್ದಾರೆ: ಹೆಚ್ಡಿ ಕುಮಾರಸ್ವಾಮಿ ಆರೋಪ
ಇನ್ನು ಕುದುರೆಮುಖ ಕಂಪನಿ ಜೊತೆ ಸಭೆ ಬಳಿಕ ಮಾತನಾಡಿ, ‘ರಾಜ್ಯದಲ್ಲಿ ಕುದುರೆಮುಖ ಸಂಸ್ಥೆ 1976 ರಲ್ಲಿ ಆರಂಭ ಆಗಿ 2005 ರ ವರೆಗೆ ಲಾಭದಾಯಕವಾಗಿ ನಡೆದಿತ್ತು. ಈಗ 596 ಸಿಬ್ಬಂದಿಗಳು ಸಂಸ್ಥೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಹಿಂದೆ ದೇವದಾರಿ ಪಾರೆಸ್ಟ್ ಏರಿಯಾದಲ್ಲಿ ಆತಂಕ ಮೂಡಿತ್ತು. 2016 ರಲ್ಲಿ 444 ಹೆಕ್ಟೇರ್ ಜಮೀನಿನಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ಸಿಕ್ಕಿತ್ತು. ನಾನು ಸಹಿ ಹಾಕಿದ್ದರಿಂದ ಜನರಿಗೆ ಸಮಸ್ಯೆ ಆಗುತ್ತದೆ. ದೇವದಾರಿ ಭಾಗದಲ್ಲಿ ಜೀವರಾಶಿಗೆ ಹಾನಿಯಾಗುತ್ತೆ. ಮರ ಕಡಿತಾರೆ ಅಂತೆಲ್ಲಾ ಚರ್ಚೆ ಆಗ್ತಿದೆ.
ಕುದುರೆಮುಖ ಕಂಪನಿ ಇಲ್ಲಿ ಗಣಿ ನಡೆಸೋದಕ್ಕೆ ಮುಂಚೆನೇ ಅದಕ್ಕೆ ಪರ್ಯಾಯವಾಗಿ 194 ಕೋಟಿ ವೆಚ್ಚದಲ್ಲಿ 808 ಹೆಕ್ಟೇರ್ ಜಮೀನಿನಲ್ಲಿ ಅರಣ್ಯ ಬೆಳೆಸುತ್ತಾರೆ. ಪರಿಸರ ಇಲಾಖೆಗೆ ಈ ಕಂಪನಿ ಹಣವನ್ನು ಕೊಡಲಾಗಿದೆ. ಇದನ್ನು ಜನರು ಗಮನಿಸಬೇಕು, ಅರಣ್ಯ ನಾಶಕ್ಕೆ ನಾನು ಸಹಿ ಹಾಕಿದ್ದಲ್ಲ. ಕಂಪನಿಯಿಂದ ದೇಶದಲ್ಲಿ ಹೆಚ್ಚು ಸ್ಟೀಲ್ ಉತ್ಪಾದನೆ ಅಗಬೇಕು. ಹೆಚ್ಚಿನ ಆದ್ಯತೆ ಕೊಡಬೇಕು, ಭಾರತ ಆತ್ಮನಿರ್ಬರ ಆಗಬೇಕು ಎಂಬುದು ಪ್ರಧಾನಿ ಆದ್ಯತೆ. ಕಂಪನಿಯಿಂದ ಹೊಸ ಕಾರ್ಯಕ್ರಮವೂ ಬರಲಿದ್ದು, ಅರಣ್ಯ ಉಳಿಸಲು ಕಂಪನಿಯಿಂದ ಹಣ ಸಂದಾಯವಾಗಿದೆ ಎಂದರು.
ಪೆಟ್ರೋಲ್ ದರ ಏರಿಕೆಗೆ ಸಿಎಂ ಸಮರ್ಥನೆ
ಪೆಟ್ರೋಲ್ ದರ ಏರಿಕೆಗೆ ಸಿಎಂ ಸಮರ್ಥನೆ ವಿಚಾರ, ‘ಎರಡು ದಿನದ ಹಿಂದೆ ಏಕಾಏಕಿ ಸೆಸ್ ಹೆಚ್ಚಿಸಿದ್ದಾರೆ. ಎಕಾಏಕಿ ಸೆಸ್ ಹೆಚ್ಚಳ ಮಾಡಿರೋದ್ರಿಂದ ಘರ್ಷಣೆ ಆರಂಭವಾಗಿದೆ. ಹಳೆ ಕಾರಣ ಇಟ್ಟುಕೊಂಡು ಸಬೂಬು ಕೊಟ್ಟು ನಾನು ಮಾಡಿರೋದು ಸರಿ ಎನ್ನೊದು ಎಷ್ಟರ ಮಟ್ಟಿಗೆ ಸರಿ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ