ಚನ್ನಪಟ್ಟಣ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿ ಸಿಕ್ಕಿದ್ದರೆ ನಾನು ನಿಲ್ಲುತ್ತಿರಲಿಲ್ಲ: ಇದು ನನ್ನ ಕೊನೆಯ ಚುನಾವಣೆ ಎಂದ ಹೆಚ್.ಡಿ.ಕುಮಾರಸ್ವಾಮಿ
ಚನ್ನಪಟ್ಟಣ ಬಿಟ್ಟು ಬೇರೆ ಕ್ಷೇತ್ರದಲ್ಲಿ ಅರ್ಜಿ ಹಾಕಲ್ಲ. ಸೂಕ್ತ ಅಭ್ಯರ್ಥಿ ಸಿಕ್ಕಿದ್ದರೆ ನಾನು ನಿಲ್ಲುತ್ತಿರಲಿಲ್ಲ. ಇದೇ ನನ್ನ ಕೊನೆಯ ಚುನಾವಣೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ರಾಮನಗರ: ಚನ್ನಪಟ್ಟಣ ಬಿಟ್ಟು ಬೇರೆ ಕ್ಷೇತ್ರದಲ್ಲಿ ಅರ್ಜಿ ಹಾಕಲ್ಲ. ಸೂಕ್ತ ಅಭ್ಯರ್ಥಿ ಸಿಕ್ಕಿದ್ದರೆ ನಾನು ನಿಲ್ಲುತ್ತಿರಲಿಲ್ಲ. ಇದೇ ನನ್ನ ಕೊನೆಯ ಚುನಾವಣೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಹೇಳಿದರು. ಜಿಲ್ಲೆಯ ಚನ್ನಪಟ್ಟಣದ ಬಮೂಲ್ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ನಾನು ಸಿಎಂ ಆಗಿದ್ದಾಗ ಅಧಿಕಾರ ದುರುಪಯೋಗ ಪಡಿಸಿಕೊಂಡಿಲ್ಲ. ಪ್ರತಿನಿತ್ಯ 16ರಿಂದ 18 ಗಂಟೆಗಳ ಕಾಲ ಪಕ್ಷ ಸಂಘಟನೆ ಮಾಡುತ್ತಿದ್ದೇನೆ. ಸಹಕಾರ ಸಂಘದಲ್ಲಿ ಲೂಟಿ ನಡೆಯುತ್ತಿದೆ. ಚನ್ನಪಟ್ಟಣದಲ್ಲಿ ಅಧಿಕಾರಿಗಳು ಯಾವ ರೀತಿ ನಡೆದುಕೊಳ್ತಿದ್ದಾರೆ ಗೊತ್ತು. ಅಧಿಕಾರ ಇಲ್ಲ ಎಂದು ನಾನು ಕುಗ್ಗಿಲ್ಲ, ಅಧಿಕಾರ ಸಿಕ್ಕಾಗ ದರ್ಪ ತೋರಿಲ್ಲ. ಎಂಎಲ್ಸಿ ಸಿ.ಪಿ.ಯೋಗೇಶ್ವರ್ ಸ್ವಾಭಿಮಾನಿ ನಡಿಗೆ ಮಾಡುತ್ತಿದ್ದಾರೆ. ಪೊಳ್ಳು ಮಾತಿಗೆ ಚನ್ನಪಟ್ಟಣ ಕ್ಷೇತ್ರದ ಜನರು ಸೊಪ್ಪು ಹಾಕುವುದಿಲ್ಲ. ನಮಗೆ BJP ಎಂಎಲ್ಸಿ ಸಿ.ಪಿ.ಯೋಗೇಶ್ವರ್ ಸರ್ಟಿಫಿಕೇಟ್ ಬೇಡ. ಬಿ.ಎಸ್.ಯಡಿಯೂರಪ್ಪ ವಿಧಾನಸೌಧದಲ್ಲೇ ಸರ್ಟಿಫಿಕೇಟ್ ಕೊಟ್ಟಿದ್ದಾರೆ ಎಂದು ಹೇಳಿದರು.
2018ರಲ್ಲಿ ಎರಡು ಕ್ಷೇತ್ರದಲ್ಲಿ ಸ್ವರ್ಧೆ
ಕಾರ್ಯಕರ್ತರ ಒತ್ತಡಕ್ಕೆ ಮಣಿದು 2018ರಲ್ಲಿ ಎರಡು ಕ್ಷೇತ್ರದಲ್ಲಿ ಸ್ವರ್ಧೆ ಮಾಡಿದ್ದೆ. ಎರಡು ಕಡೆ ಮತ ಕೇಳಲು ಬರದಿದ್ದರು ಗೆಲ್ಲಿಸಿದ್ರು. ರಾಮನಗರದಲ್ಲಿ ಅಸಮಾಧಾನ ಇದ್ದರು ನನ್ನನ್ನ ಗೆಲ್ಲಿಸಿದ್ರು. ಹಾಸನದಲ್ಲಿ ನಿನ್ನೆ ಕಾರ್ಯಕರ್ತರು ತಡೆದಿದ್ದರು. ಅವರಿಗೆ ಹೇಳಿಬಂದಿದ್ದೇನೆ. ಇದೀಗ ಚನ್ನಪಟ್ಟಣದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಭಗವಂತನ ಮೇಲೆ ಅಣೆ ಮಾಡುತ್ತೇನೆ. ಸ್ತ್ರೀ ಶಕ್ತಿ ಸಂಘದ ಸಾಲ ಮನ್ನಾ ಮಾಡುತ್ತೇನೆ ಎಂದು ಹೇಳಿಲ್ಲ. ಕ್ರಿಕೆಟ್ ದಂಧೆ ನಡೆಸುವವರ ಜೊತೆ ಸೇರಿ ನಮ್ಮ ಸರ್ಕಾರ ತೆಗೆದರು ಎಂದರು.
ಇದನ್ನೂ ಓದಿ: ಜೆಡಿಎಸ್ ಭದ್ರಕೋಟೆ ಮಂಡ್ಯ ಜಿಲ್ಲೆಯಲ್ಲಿ ಮುಂದುವರಿದ ಭಿನ್ನಮತ: ದಳಪತಿಗಳಿಗೆ ತಲೆ ನೋವಾದ ಬಂಡಾಯ ನಾಯಕರ ನಡೆ
ನಾವು ಅಧಿಕಾರಕ್ಕೆ ಬಂದ್ರೆ ರೈತರಿಗೆ ಸಬ್ಸಿಡಿ
ನಮ್ಮ ಸರ್ಕಾರ ಬಂದರೇ ಜಾನುವಾರುಗಳ ಮೇವಿಗೆ 50 ಪರ್ಸೆಂಟ್ ಸಬ್ಸಿಡಿ ಕೊಡುತ್ತೇವೆ. ಹಸುಗಳ ಫುಡ್ಗೆ ಸಬ್ಸಿಡಿ ನೀಡುತ್ತೇವೆ. ರೈತರಿಗೆ ಬಿತ್ತನೆ ಮಾಡಲು ಹತ್ತು ಸಾವಿರ ರೂ. ಒಂದು ಎಕರೆಗೆ ಹತ್ತು ಸಾವಿರ ರೂ, ಹತ್ತು ಎಕರೆಗೆ ಒಂದು ಲಕ್ಷ ರೂ. ಉಚಿತ ಹಣ ನೀಡಲಾಗುವುದು ಮತ್ತು ಹಾಲಿಗೆ ಪ್ರೋತ್ಸಾಹ ಧನ ಎಂಟು ರೂಪಾಯಿಗೆ ಹೇರಿಕೆ ಮಾಡುತ್ತೇವೆ. ಕ್ಷೇತ್ರಕ್ಕೆ ನಾನು ಪದೇ ಪದೇ ಬರಲು ಆಗಲ್ಲ. ನನಗೆ ಹಾಲು ಕೊಡುತ್ತೀರಾ, ಏನು ಕೊಡುತ್ತೀರಿ ಗೊತ್ತಿಲ್ಲ ಎಂದು ಜನರಿಗೆ ಪ್ರಶ್ನೆ ಮಾಡಿದರು.
ಇದನ್ನೂ ಓದಿ: ನನಗೆ ರಾಜಕೀಯವಾಗಿ ಅಗ್ನಿಪರೀಕ್ಷೆ ಇದೆ, ಅರ್ಥಮಾಡಿಕೊಳ್ಳಿ: ಹಾಸನದಲ್ಲಿ ಕುಮಾರಸ್ವಾಮಿ ಹೇಳಿಕೆ
ಯೋಗೇಶ್ವರ್ ವಿರುದ್ಧ ಕಿಡಿಕಾರಿದ ಕುಮಾರಸ್ವಾಮಿ
ಚನ್ನಪಟ್ಟಣ ಕ್ಷೇತ್ರದಲ್ಲಿ 20 ವರ್ಷ ಶಾಸಕರಾಗಿ ಏನು ಮಾಡಿದ್ದೀರಿ ಎಂದು ಯೋಗೇಶ್ವರ್ಗೆ ಪ್ರಶ್ನೆ ಮಾಡಿದರು. ಕೊರೊನಾ ಕಾಲದಲ್ಲಿ ಈ ಮಹಾನ್ ಭಾವ ಎಲ್ಲಿದ್ದ. ಕನಕಪುರದಲ್ಲಿ ನಮ್ಮ ಸೂಕ್ತ ನಾಯಕ ಇದ್ದಿದ್ದರೆ ಅಲ್ಲೂ ಗೆಲ್ಲುತ್ತಿದ್ದೇವು. ಯೋಗೇಶ್ವರ್ ಕೂಡ ಸಿಎಂ ಆಗುತ್ತೇನೆ ಎಂದು ಹೊರಟಿದ್ದಾರೆ ಎಂದು ಟಾಂಗ್ ಕೊಟ್ಟರು. ನಮ್ಮ ಸರ್ಕಾರ ಬಂದರೆ ಸ್ತ್ರೀ ಶಕ್ತಿ ಸಂಘದ ಸಾಲ ಮನ್ನಾ ಮಾಡುತ್ತೇವೆ. ನನ್ನ ಬಳಿ ಭೂ ಗಳ್ಳರಲ್ಲ ಬರುವುದಿಲ್ಲ. ಅಸಾಯಕರು ಬರುತ್ತಾರೆ. ಪ್ರತಿನಿತ್ಯ 50 ಲಕ್ಷದಿಂದ ಒಂದೂವರೆ ಕೋಟಿ ಬೇಕು. ಎಲ್ಲಿಂದ ತರಲಿ ಅವರಿಗೆ ಕೊಡಲು. ಸಿಎಂ ಆಗುವುದಕ್ಕೂ ಮೊದಲು ಕೇತಗಾನಹಳ್ಳಿ ಜಮೀನು ಖರೀದಿ ಮಾಡಿದ್ದೇ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:40 pm, Mon, 27 February 23