ಜೆಡಿಎಸ್​ ಭದ್ರಕೋಟೆ ಮಂಡ್ಯ ಜಿಲ್ಲೆಯಲ್ಲಿ ಮುಂದುವರಿದ ಭಿನ್ನಮತ: ದಳಪತಿಗಳಿಗೆ ತಲೆ ನೋವಾದ ಬಂಡಾಯ ನಾಯಕರ ನಡೆ

ಮಂಡ್ಯ ವಿಧಾನಸಭಾ ಕ್ಷೇತ್ರದ ಸರದಿಯಾಗಿದ್ದು, ದಳಪತಿಗಳ ಭದ್ರಕೋಟೆಯಲ್ಲಿ ಒಳ ಬೇಗುದಿ ಸ್ಪೋಟಗೊಂಡಿದೆ. ಹಾಲಿ ಶಾಸಕ ಎಂ. ಶ್ರೀನಿವಾಸ್ ವಿರುದ್ದ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಹಾಗೂ ಹಾಲಿ ಮನ್ಮೂಲ್ ಅಧ್ಯಕ್ಷ ಬಿ.ಆರ್ ರಾಮಚಂದ್ರ ಸಿಡಿದೆದ್ದಿದ್ದಾರೆ.

ಜೆಡಿಎಸ್​ ಭದ್ರಕೋಟೆ ಮಂಡ್ಯ ಜಿಲ್ಲೆಯಲ್ಲಿ ಮುಂದುವರಿದ ಭಿನ್ನಮತ: ದಳಪತಿಗಳಿಗೆ ತಲೆ ನೋವಾದ ಬಂಡಾಯ ನಾಯಕರ ನಡೆ
ಶಾಸಕ ಎಂ.ಶ್ರೀನಿವಾಸ್​ರಿಂದ ಪ್ರಚಾರ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Feb 27, 2023 | 3:12 PM

ಮಂಡ್ಯ: ರಾಜ್ಯ ರಾಜಕಾರಣದಲ್ಲಿ ವಿಧಾನಸಭಾ ಚುನಾವಣೆಯ ಕಾವು ಹೆಚ್ಚಾಗುತ್ತಿದೆ. ರಾಜ್ಯದ ಪ್ರಮುಖ ಪಕ್ಷಗಳು ಯಾತ್ರೆಗಳ ಮೂಲಕ ಮತದಾರರಿರುವಲ್ಲಿಯೇ ಹೋಗಿ ಮತಯಾಚಿಸುತ್ತಿದ್ದಾರೆ. ಸದ್ಯ ಕೆ.ಆರ್ ಪೇಟೆ, ಶ್ರೀರಂಗಪಟ್ಟಣ ಆಯ್ತು ಈಗ ಮಂಡ್ಯ (Mandya) ವಿಧಾನಸಭಾ ಕ್ಷೇತ್ರದ ಸರದಿಯಾಗಿದ್ದು, ದಳಪತಿಗಳ ಭದ್ರಕೋಟೆಯಲ್ಲಿ ಒಳ ಬೇಗುದಿ ಸ್ಪೋಟಗೊಂಡಿದೆ. ಹಾಲಿ ಶಾಸಕ ಎಂ. ಶ್ರೀನಿವಾಸ್ ವಿರುದ್ದ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಹಾಗೂ ಹಾಲಿ ಮನ್ಮೂಲ್ ಅಧ್ಯಕ್ಷ ಬಿ.ಆರ್ ರಾಮಚಂದ್ರ ಸಿಡಿದೆದ್ದಿದ್ದಾರೆ. ಒಂದೆಡೆ ಎಂ.ಶ್ರೀನಿವಾಸ್ ಪ್ರಚಾರ ನಡೆಸುತ್ತಿದ್ರೆ ರಾಮಚಂದ್ರ ಪ್ರತ್ಯೇಕವಾಗಿ ಪ್ರಚಾರ ನಡೆಸುತ್ತಿದ್ದಾರೆ. ಆದರೆ ಈಗಾಗ್ಲೆ ಎಂ.ಶ್ರೀನಿವಾಸ್​ಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟಿಕೆಟ್ ಘೋಷಣೆ ಮಾಡಿದ್ದಾರೆ. ಅಧಿಕೃತವಾಗಿ ಟಿಕೆಟ್ ಘೋಷಣೆ ಮಾಡಿದ್ರು ಕೂಡ ರಾಮಚಂದ್ರ ಪತ್ನಿಯಿಂದ ಪ್ರತ್ಯೇಕ ಪ್ರಚಾರ ಮಾಡಲಾಗುತ್ತಿದೆ.

ಅಷ್ಟೇ ಅಲ್ಲದೆ ಮುಂದಿನ ದಿನಗಳಲ್ಲಿ ಅಭ್ಯರ್ಥಿ ಬದಲಾವಣೆ ಆಗುತ್ತೆಂಬ ಭರವಸೆ ಮೇಲೆ ರಾಮಂದ್ರ ಬೆಂಬಲಿಗರು ಪ್ರತ್ಯೇಕ ಪ್ರಚಾರಕ್ಕೆ ಇಳಿದಿದ್ದಾರೆ. ಟಿಕೆಟ್ ಕೈ ತಪ್ಪಿದ್ರೆ ಪಕ್ಷೇತರವಾಗಿ ಅಖಾಡಕ್ಕೆ ಇಳಿಯಲು ತೆರೆ ಮರೆಯಲ್ಲಿ ಕಸರತ್ತು ಕೂಡ ಮಾಡಲಾಗುತ್ತಿದೆ. ಸದ್ಯ ಇಷ್ಟೆಲ್ಲಾ ಸಂಗತಿಗಳಿಂದ ಜೆಡಿಎಸ್ ಭದ್ರಕೋಟೆಯಲ್ಲಿ ಬಂಡಾಯದ ಹೊಗೆ ಭುಗಿಲೆದಿದ್ದು, ದಳಪತಿಗಳಿಗೆ ಭಂಡಾಯ ನಾಯಕರ ನಡೆ ತಲೆ ನೋವಾಗಿಸಿದೆ.

ಇದನ್ನೂ ಓದಿ: ನನಗೆ ರಾಜಕೀಯವಾಗಿ ಅಗ್ನಿಪರೀಕ್ಷೆ ಇದೆ, ಅರ್ಥಮಾಡಿಕೊಳ್ಳಿ: ಹಾಸನದಲ್ಲಿ ಕುಮಾರಸ್ವಾಮಿ ಹೇಳಿಕೆ

ತಾರಕಕ್ಕೇರಿದ ಹಾಸನ ವಿಧಾನಸಭಾ ಕ್ಷೇತ್ರದ JDS​ ಟಿಕೆಟ್​ ಫೈಟ್​

ಇನ್ನು ಹಾಸನದಲ್ಲಿ ಜೆಡಿಎಸ್ ಟಿಕೆಟ್​ ಫೈಟ್ ತಾರಕಕ್ಕೇರಿದೆ. ನಿನ್ನೆ(ಫೆ. 26) ಸ್ವರೂಪ್ ಪರವಾಗಿ ಕುಮಾರಸ್ವಾಮಿಗೆ ಸಹಸ್ರಾರುಜನರು ಅಹವಾಲು ಸಲ್ಲಿಸಿದ್ದರು. ಆ ಹಿನ್ನೆಲೆ ಭವನಿ ರೇವಣ್ಣ ಬೆಂಬಲಿಗರು ಸೆಡ್ಡು ಹೊಡೆದಿದ್ದು, ಸಂಸದರ ನಿವಾಸದ ಎದುರು ಸಾವಿರಾರು ಜನರು ಜಮಾಯಿಸಿದ್ದಾರೆ. ಭವಾನಿ ರೇವಣ್ಣಗೆ ಹಾಸನ ಕ್ಷೇತ್ರದ ಟಿಕೆಟ್​ ನೀಡುವಂತೆ ಒತ್ತಾಯಿಸಲಾಗುತ್ತಿದೆ. ಭವಾನಿ ರೇವಣ್ಣ ಫೋಟೋ ಹಿಡಿದು ಘೋಷಣೆ ಹಾಕಲಾಗಿದೆ.

 ಸಾಮಾನ್ಯ ಕಾರ್ಯಕರ್ತನಿಗೆ ಹಾಸನದ ಟಿಕೆಟ್​: ಕುಮಾರಸ್ವಾಮಿ

ಕ್ಷೇತ್ರದಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸುವ ಶಕ್ತಿ ಕಾರ್ಯಕರ್ತರಿಗೆ ಇದೆ ಎಂದು ಹೆಚ್​.ಡಿ  ಕುಮಾರಸ್ವಾಮಿ ಹೇಳಿದ್ದರು. ಆ ಮಾತಿಗೆ ನಾನು ಬದ್ದನಾಗಿದ್ದೇನೆ. ಆದರೆ ಎಲ್ಲರೂ ಒಂದಾಗಿ ಹೋಗಬೇಕಿದೆ. ಯಾವುದೇ ಕಾರಣದಿಂದ ಒಡಕು ಇರಬಾರದು. ನಾನು ಕೈಗೊಳ್ಳುವ ತೀರ್ಮಾನಕ್ಕೆ ಒಂದೇ ಧ್ವನಿಯಾಗಿ ಇರಬೇಕು. ನಾವು ಉಳಿದಿರುವುದೆ ನಿಮ್ಮಂತ ಲಕ್ಷಾಂತರ ಕಾರ್ಯಕರ್ತರ ಬಲದಿಂದ, ಅದು ನನಗೆ ಗೊತ್ತಿದೆ. ಮತ್ತೊಮ್ಮೆ ಹಾಸನದ ನೆಲದಲ್ಲಿ ನಿಂತು ಹಾಸನದ ಟಿಕೆಟ್​ ಕಾರ್ಯಕರ್ತನಿಗೆ ಎಂದು ಹೇಳಿದರು.

ಹಾಸನ ಕ್ಷೇತ್ರದ ಜೆಡಿಎಸ್​ ಟಿಕೆಟ್ ವಿಚಾರವಾಗಿ ಫೈಟ್ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, ನಾನು ಯಾವುದೇ ಕಾರಣಕ್ಕೂ ತಪ್ಪು ನಿರ್ಧಾರ ತೆಗೆದುಕೊಳ್ಳಲ್ಲ. ನಿಮ್ಮ ಛಲಕ್ಕೆ ಲೋಪ ಆಗಲು ನಾನು ಬಿಡುವುದಿಲ್ಲ. ನನ್ನ ಕಾರ್ಯಕರ್ತರನ್ನು ನಾನು ಬಿಟ್ಟುಕೊಡುವುದಿಲ್ಲ ಸಕಾರಾತ್ಮಕವಾಗಿ ನಾವು ತೀರ್ಮಾನ ತೆಗೆದುಕೊಳ್ಳುತ್ತೇವೆ. ಕೆಲವೇ ದಿನಗಳಲ್ಲಿ ಜೆಡಿಎಸ್‌ನ​ ಎರಡನೇ ಪಟ್ಟಿ ಪ್ರಕಟ ಆಗುತ್ತದೆ. ಎರಡನೇ ಪಟ್ಟಿಯಲ್ಲಿ ಹಾಸನ ಅಭ್ಯರ್ಥಿ ಹೆಸರು ಕೂಡ ಇರುತ್ತದೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 3:12 pm, Mon, 27 February 23

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ