ಮಹಾನ್ ನಾಯಕರು ಪಾದಯಾತ್ರೆ ಮಾಡಿ ಬಂದಿದ್ದಾರೆ, ದಾಖಲೆ ಬಿಡುಗಡೆ ಮಾಡ್ತೀನಿ; ಕಾಂಗ್ರೆಸ್ ಪಾದಯಾತ್ರೆಗೆ ಹೆಚ್ಡಿ ಕುಮಾರಸ್ವಾಮಿ ಟಾಂಗ್
ನಮ್ಮ ನೀರು ನಮ್ಮ ಹಕ್ಕು ಅಂತ ಬಂದಿದ್ದಾರೆ. ದೇಹದಿಂದ ಬೆವರು ಸುರಿತು ಬಂದಿದ್ದಾರೆ ಅಲ್ವಾ. ನೀರು ಉಳಿಸಿಕೊಳ್ಳಲು ದಾಖಲೆ ಸಮೇತ ಚರ್ಚೆ ಮಾಡ್ತಾರಾ ನೋಡೋಣ. 26 ಅಣೆಕಟ್ಟು ಕಟ್ಟಿದ್ದಾರಂತೆ ಯಾರು ಕಟ್ಟಿಲ್ವಾಂತೆ. ನಿನ್ನೆ ರಾಮಲಿಂಗ ರೆಡ್ಡಿ ಹೇಳಿದ್ದನ್ನ ಕೇಳಿದ್ದೇನೆ.
ಬೆಂಗಳೂರು: ಮೇಕೆದಾಟು ಯೋಜನೆ (Mekedatu Project) ಆಗ್ರಹಿಸಿ ಕಾಂಗ್ರೆಸ್ (Congress) ನಾಯಕರು ಪಾದಯಾತ್ರೆ ನಡೆಸಿದರು. ಈ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ, ಮಹಾನ್ ನಾಯಕರು ಪಾದಯಾತ್ರೆ ಮಾಡಿ ಬಂದಿದ್ದಾರೆ. ನೀರಿಗಾಗಿ ಯಾಱರು ಏನು ಮಾಡಿದ್ದಾರೆಂದು ಚರ್ಚಿಸೋಣ. ದಾಖಲೆ ಸಮೇತ ಚರ್ಚೆಗೆ ಬರುತ್ತಾರಾ ನೋಡಬೇಕು. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಏನು ನಡೆದಿದೆ ಗೊತ್ತಿದೆ. ಈ ಬಗ್ಗೆ ಸಮಯ ಸಿಕ್ಕಾಗ ದಾಖಲೆ ಬಿಡುಗಡೆ ಮಾಡ್ತೀನಿ ಅಂತ ಹೇಳಿದರು.
ನಮ್ಮ ನೀರು ನಮ್ಮ ಹಕ್ಕು ಅಂತ ಬಂದಿದ್ದಾರೆ. ದೇಹದಿಂದ ಬೆವರು ಸುರಿತು ಬಂದಿದ್ದಾರೆ ಅಲ್ವಾ. ನೀರು ಉಳಿಸಿಕೊಳ್ಳಲು ದಾಖಲೆ ಸಮೇತ ಚರ್ಚೆ ಮಾಡ್ತಾರಾ ನೋಡೋಣ. 26 ಅಣೆಕಟ್ಟು ಕಟ್ಟಿದ್ದಾರಂತೆ ಯಾರು ಕಟ್ಟಿಲ್ವಾಂತೆ. ನಿನ್ನೆ ರಾಮಲಿಂಗ ರೆಡ್ಡಿ ಹೇಳಿದ್ದನ್ನ ಕೇಳಿದ್ದೇನೆ. ದೇವೇಗೌಡ್ರು ಪ್ರಧಾನಿಯಾಗಿ 9 ಟಿಎಂಸಿ ನೀರು ಕೊಡಲಿಲ್ಲ ಅಂದಿದ್ದರೆ ಆಗುತ್ತಿತ್ತ ಅಂತ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.
ಮುಂದುವರಿದು ಮಾತನಾಡಿದ ಹೆಚ್ಡಿಕೆ, ಸಿಎಂ ಬೊಮ್ಮಾಯಿ ಮೊದಲ ಬಜೆಟ್ ಮಂಡಿಸುತ್ತಿದ್ದಾರೆ. ಬಡವರಿಗೆ ಯಾವ ಕಾರ್ಯಕ್ರಮ ಕೊಡ್ತಾರೋ ನೋಡಬೇಕು. ಬೊಮ್ಮಾಯಿ ಸುದೀರ್ಘ ಆಡಳಿತ ಅನುಭವ ಹೊಂದಿದ್ದಾರೆ. ಸಿಎಂ ಬೊಮ್ಮಾಯಿ ಬಜೆಟ್ ಮೇಲೆ ಜನರಿಗೆ ಸಾಕಷ್ಟು ನಿರೀಕ್ಷೆಯಿದೆ. ಆ ನಿರೀಕ್ಷೆಯನ್ನ ಈಡೇರಿಸಲು ಅನುಮತಿ ಕೊಡಬೇಕಲ್ವಾ? ಕಾರ್ಯಕ್ರಮ ಕೊಡಲು ಹಿಂದೆ ಇರುವವರು ಬಿಡಬೇಕಲ್ವಾ? ಅಂತ ಪರೋಕ್ಷವಾಗಿ ಆರ್ಎಸ್ಎಸ್ ವಿರುದ್ಧ ಹೇಳಿಕೆ ನೀಡಿದರು.
ಇದನ್ನೂ ಓದಿ
ದಾವಣಗೆರೆ: ರಾತ್ರೋರಾತ್ರಿ ಗುಡಿಸಲು ತೆರವುಗೊಳಿಸಿದ ಜಿಲ್ಲಾಡಳಿತ; ಸ್ಥಳೀಯರ ತೀವ್ರ ಆಕ್ರೋಶ
ಉಕ್ರೇನ್: ಭಾರತೀಯ ವಿದ್ಯಾರ್ಥಿಗಳಿಗೆ ಸೋನು ಸೂದ್ ಸಹಾಯ; ಮತ್ತೆ ರಿಯಲ್ ಹೀರೋ ಆದ ನಟ
Published On - 11:24 am, Fri, 4 March 22