ಜಾಮೀನಿನ ಮೇಲೆ ಹೊರಬಂದಿರುವ ಹೇಮಂತ್ ಸೋರೆನ್ ಜಾರ್ಖಂಡ್ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ

Hemant Soren Oath Taking Ceremony: ಕಳೆದ ವಾರವಷ್ಟೇ ಜಾಮೀನಿನ ಮೇಲೆ ಹೊರಬಂದಿರುವ ಹೇಮಂತ್ ಸೊರೇನ್ ಮತ್ತೆ ಜಾರ್ಖಂಡ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಂಚಿಯ ರಾಜಭವನದಲ್ಲಿ ಜಾರ್ಖಂಡ್ ರಾಜ್ಯಪಾಲ ಸಿ.ಪಿ ರಾಧಾಕೃಷ್ಣನ್ ಅವರು ಪ್ರಮಾಣವಚನ ಬೋಧಿಸಿದ್ದಾರೆ.

ಜಾಮೀನಿನ ಮೇಲೆ ಹೊರಬಂದಿರುವ ಹೇಮಂತ್ ಸೋರೆನ್ ಜಾರ್ಖಂಡ್ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ
ಹೇಮಂತ್ ಸೋರೆನ್ ಪ್ರಮಾಣವಚನ ಸ್ವೀಕಾರ
Follow us
|

Updated on:Jul 04, 2024 | 5:24 PM

ರಾಂಚಿ: ಜೆಎಂಎಂ ಮುಖ್ಯಸ್ಥ ಶಿಬು ಸೊರೆನ್ ಅವರ ಪುತ್ರ ಹೇಮಂತ್ ಸೋರೆನ್ ಇಂದು (ಗುರುವಾರ) ಮೂರನೇ ಬಾರಿಗೆ ಜಾರ್ಖಂಡ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಜಾರ್ಖಂಡ್ ಮುಖ್ಯಮಂತ್ರಿಯಾಗಿದ್ದ ಚಂಪೈ ಸೊರೆನ್ ಅವರು ಬುಧವಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ, ಬುಧವಾರ ರಾಜ್ಯಪಾಲ ಸಿ.ಪಿ ರಾಧಾಕೃಷ್ಣನ್ ಹೇಮಂತ್ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸಿದ್ದರು.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಹೇಮಂತ್ ಸೋರೆನ್ ಅವರು ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ನಂತರ ಈ ಬೆಳವಣಿಗೆ ನಡೆದಿದೆ. ಈ ಮೂಲಕ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸುಮಾರು 5 ತಿಂಗಳ ಬಳಿಕ ಜೈಲಿನಿಂದ ಬಿಡುಗಡೆಯಾಗಿರುವ ಜಾರ್ಖಂಡ್ ಮುಖ್ಯಮಂತ್ರಿಯಾಗಿ ಹೇಮಂತ್ ಸೊರೇನ್ ಇಂದು ಮತ್ತೊಮ್ಮೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಂಚಿಯ ರಾಜಭವನದಲ್ಲಿ ಜಾರ್ಖಂಡ್ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅವರು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಕಾರ್ಯಕಾರಿ ಅಧ್ಯಕ್ಷರಾದ ಹೇಮಂತ್ ಸೋರೆನ್​ ಅವರಿಗೆ ಪ್ರಮಾಣ ವಚನ ಬೋಧಿಸಿದರು.

ಇದನ್ನೂ ಓದಿ: ಮೋದಿಗೆ ಸುಳ್ಳು ಹೇಳುವ ಅಭ್ಯಾಸ; ರಾಜ್ಯಸಭೆಯಿಂದ ಹೊರನಡೆದಿದ್ದಕ್ಕೆ ಕಾರಣ ನೀಡಿದ ಮಲ್ಲಿಕಾರ್ಜುನ ಖರ್ಗೆ

ರಾಜ್ಯದಲ್ಲಿ ಸರ್ಕಾರ ರಚಿಸಲು ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅವರನ್ನು ಆಹ್ವಾನಿಸಿದ ನಂತರ ಜುಲೈ 7ರಂದು ಹೇಮಂತ್ ಸೋರೆನ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಜೆಎಂಎಂ ಇಂದು ಬೆಳಗ್ಗೆ ಹೇಳಿಕೆ ನೀಡಿತ್ತು. ಆದರೆ, ಹೇಮಂತ್ ಸೋರೆನ್ ನಿವಾಸದಲ್ಲಿ ನಡೆದ ಒಕ್ಕೂಟದ ನಾಯಕರ ಸಭೆಯಲ್ಲಿ ಇಂದೇ ಪ್ರಮಾಣವಚನ ಸ್ವೀಕರಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ರಾಜೇಶ್ ಠಾಕೂರ್ ತಿಳಿಸಿದ್ದಾರೆ.

ಚಂಪೈ ಸೊರೆನ್ ಬುಧವಾರ ಜಾರ್ಖಂಡ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಹೇಮಂತ್ ಸೊರೆನ್ ಅವರು ಸರ್ಕಾರ ರಚಿಸಲು ಹಕ್ಕು ಮಂಡಿಸಿದರು. ಜೆಎಂಎಂ ನೇತೃತ್ವದ ಮೈತ್ರಿಕೂಟದ ನಿಯೋಗ ಬುಧವಾರ ರಾಜಭವನದಲ್ಲಿ ರಾಜ್ಯಪಾಲ ರಾಧಾಕೃಷ್ಣನ್ ಅವರನ್ನು ಭೇಟಿ ಮಾಡಿತು. ಹೇಮಂತ್ ಸೊರೆನ್ ನೇತೃತ್ವದ ನಿಯೋಗದಲ್ಲಿ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ರಾಜೇಶ್ ಠಾಕೂರ್, ಆರ್‌ಜೆಡಿ ಸಚಿವ ಸತ್ಯಾನಂದ ಭೋಕ್ತಾ ಮತ್ತು ಸಿಪಿಐ(ಎಂಎಲ್)-ಎಲ್ ಶಾಸಕ ವಿನೋದ್ ಸಿಂಗ್ ಇದ್ದರು. ಹೇಮಂತ್ ಸೋರೆನ್ ಅವರ ಪತ್ನಿ ಮತ್ತು ಗಂಡೆ ಶಾಸಕಿ ಕಲ್ಪನಾ ಸೋರೆನ್ ಕೂಡ ಈ ನಿಯೋಗದ ಭಾಗವಾಗಿದ್ದರು.

ಇದನ್ನೂ ಓದಿ: Hemant Soren: ಜಾರ್ಖಂಡ್ ಮುಖ್ಯಮಂತ್ರಿಯಾಗಿ ಇಂದು ಸಂಜೆ ಹೇಮಂತ್ ಸೋರೆನ್ ಪ್ರಮಾಣ ವಚನ ಸ್ವೀಕಾರ

ಜಾರ್ಖಂಡ್ ಮುಕ್ತಿ ಮೋರ್ಚಾ ನಾಯಕ ಅವರು ಜನವರಿ 31 ರಂದು ಭೂ ಹಗರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಇಡಿಯಿಂದ ಬಂಧಿಸುವ ಸ್ವಲ್ಪ ಮೊದಲು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಜೂನ್ 28ರಂದು ಸೋರೆನ್ ಜೈಲಿನಿಂದ ಬಿಡುಗಡೆಗೊಂಡರು. ಸುಮಾರು 5 ತಿಂಗಳ ನಂತರ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಹೈಕೋರ್ಟ್ ಅವರಿಗೆ ಜಾಮೀನು ನೀಡಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:21 pm, Thu, 4 July 24

ತಾಜಾ ಸುದ್ದಿ
ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ
ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ
ಧೋನಿಯ ಪಾದ ಮುಟ್ಟಿ ನಮಸ್ಕರಿಸಿದ ಸಾಕ್ಷಿ: ವಿಡಿಯೋ ನೋಡಿ
ಧೋನಿಯ ಪಾದ ಮುಟ್ಟಿ ನಮಸ್ಕರಿಸಿದ ಸಾಕ್ಷಿ: ವಿಡಿಯೋ ನೋಡಿ
ಎದುರಗಡೆ ಆನೆ​, ಪಕ್ಕದಲ್ಲಿ ಎರಡೆರಡು ಹುಲಿ: ಸಫಾರಿಗರ ಪಾಡು ಏನಾಯ್ತು ನೋಡಿ
ಎದುರಗಡೆ ಆನೆ​, ಪಕ್ಕದಲ್ಲಿ ಎರಡೆರಡು ಹುಲಿ: ಸಫಾರಿಗರ ಪಾಡು ಏನಾಯ್ತು ನೋಡಿ
ವಾರ ಭವಿಷ್ಯ, ಜುಲೈ 08ರಿಂದ 14ರ ತನಕದ ರಾಶಿ ಭವಿಷ್ಯ ಹೀಗಿದೆ
ವಾರ ಭವಿಷ್ಯ, ಜುಲೈ 08ರಿಂದ 14ರ ತನಕದ ರಾಶಿ ಭವಿಷ್ಯ ಹೀಗಿದೆ
ಬಂಧುಗಳ ಮನೆಗೆ ಬರಿಗೈಯಲ್ಲಿ ಏಕೆ ಹೋಗಬಾರದು ಈ ವಿಡಿಯೋ ನೋಡಿ
ಬಂಧುಗಳ ಮನೆಗೆ ಬರಿಗೈಯಲ್ಲಿ ಏಕೆ ಹೋಗಬಾರದು ಈ ವಿಡಿಯೋ ನೋಡಿ
ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿದುಕೊಳ್ಳಲು ಈ ವಿಡಿಯೋ ನೋಡಿ
ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿದುಕೊಳ್ಳಲು ಈ ವಿಡಿಯೋ ನೋಡಿ
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ