ಪಕ್ಷ ಹೇಳಿದ್ರೆ ಖಂಡಿತ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವೆ: ಅಣ್ಣಾಮಲೈ

ತಮಿಳುನಾಡಿನ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಅವರು ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಭಾಗವಹಿಸುವ ಬಗ್ಗೆ ಮಾತನಾಡಿದ್ದಾರೆ. ಒಂದು ವೇಳೆ ನಮ್ಮ ಹಿರಿಯ ನಾಯಕರು ಲೋಕಸಭೆಯಲ್ಲಿ ಸ್ಪರ್ಧಿಸು ಎಂದು ಹೇಳಿದ್ರೆ ಖಂಡಿತ ನಾನು ಸ್ಪರ್ಧಿಸುವೇ ಎಂದು ಹೇಳಿದ್ದಾರೆ. ಪಕ್ಷ ಏನು ಹೇಳಿದರೂ ನಾನು ಅದನ್ನು ಪಾಲಿಸಬೇಕು, ಅದು ಪಕ್ಷದ ಸ್ವಭಾವವಾಗಿದೆ. ಇಂದು ಪಕ್ಷವು ರಾಜ್ಯ ಮಟ್ಟದ ಯಾತ್ರೆಯನ್ನು (ಎನ್ ಮನ್ನಾ ಎನ್ ಮಕ್ಕಳು) ಪೂರ್ಣಗೊಂಡಿದೆ ಎಂದು ಹೇಳಿದ್ದಾರೆ.

ಪಕ್ಷ ಹೇಳಿದ್ರೆ ಖಂಡಿತ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವೆ: ಅಣ್ಣಾಮಲೈ
ಕೆ ಅಣ್ಣಾಮಲೈ
Follow us
|

Updated on: Mar 02, 2024 | 10:08 AM

ಚೆನ್ನೈ, ಮಾ.2: ತಮಿಳುನಾಡು (Tamil Nadu) ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ (K Annamalai) ಅವರು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಮಾತನಾಡಿದ್ದಾರೆ. ಆದರೆ ನಮ್ಮ ಪಕ್ಷದ ಹಿರಿಯರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಅದಕ್ಕೆ ನಾನು ಬದ್ಧ ಎಂದು ಹೇಳಿದ್ದಾರೆ. ಈ ಹಿಂದೆ ಅಣ್ಣಾಮಲೈ ಲೋಕಸಭೆಯಲ್ಲಿ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಇದೀಗ ಆ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ವೈಯಕ್ತಿಕ ಪೂರ್ವಾಗ್ರಹ ಅಥವಾ ಬಿಜೆಪಿಯಲ್ಲಿ ನನಗೆ ಆ ಸ್ಥಾನ ಬೇಕು ಈ ಸ್ಥಾನಬೇಕು ಎಂಬ ಬೇಡಿಕೆಯನ್ನು ನಾನು ಇಟ್ಟಿಲ್ಲ. ಅದು ನನಗೆ ಇಷ್ಟನೂ ಇಲ್ಲ ಎಂದು ಹೇಳಿದ್ದಾರೆ.

ಪಕ್ಷ ಏನು ಹೇಳಿದರೂ ನಾನು ಅದನ್ನು ಪಾಲಿಸಬೇಕು, ಅದು ಪಕ್ಷದ ಸ್ವಭಾವವಾಗಿದೆ. ಇಂದು ಪಕ್ಷವು ರಾಜ್ಯ ಮಟ್ಟದ ಯಾತ್ರೆಯನ್ನು (ಎನ್ ಮನ್ನಾ ಎನ್ ಮಕ್ಕಳು) ಪೂರ್ಣಗೊಂಡಿದೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಪಕ್ಷದ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳಲು ಬಿಜೆಪಿ ನನಗೆ ಕೆಲವು ಜವಾಬ್ದಾರಿಯನ್ನು ನೀಡಿದೆ. ಅದನ್ನು ನಾನು ಈಗಾಗಲೇ ಪ್ರಾರಂಭಿಸಿದ್ದೇನೆ ಎಂದು ಹೇಳಿದ್ದಾರೆ.

ಮುಂಬರುವ ಲೋಕಸಭೆ ಸ್ಪರ್ಧೆಯ ಬಗ್ಗೆ ತಿಳಿಸಿದ ಅವರು, ನಾಳೆ ಬೆಳಿಗ್ಗೆ ಪಕ್ಷ ಅದನ್ನು ಮಾಡು ಎಂದು ಹೇಳಿದರೆ ನಾನು ಅದನ್ನು ಮಾಡುತ್ತೇನೆ ಎಂದು ಹೇಳಿದರು. ನಾನು ಊಹಾಪೋಹಗಳಿಗೆ ಪ್ರತಿಕ್ರಿಯಿಸಲು ಹೋಗುವುದಿಲ್ಲ, ನಮ್ಮ ಹಿರಿಯ ರಾಷ್ಟ್ರೀಯ ನಾಯಕತ್ವವು ಯಾವುದೇ ನಿರ್ಧಾರವನ್ನು ತೆಗೆದುಕೊಂಡರೂ, ಅದನ್ನು ಪಾಲಿಸುವುದು ಮತ್ತು ಅದನ್ನು ತಮಿಳುನಾಡಿನಲ್ಲಿ ಕಾರ್ಯಗತಗೊಳಿಸುವುದು ನನ್ನ ಕರ್ತವ್ಯ ಎಂದು ಅಣ್ಣಾಮಲೈ ಹೇಳಿದ್ದಾರೆ.

ಬಿಜೆಪಿಯ ವಿರುದ್ಧ ಉದಯನಿಧಿ ಅವರ ಕಟು ಟೀಕೆಗಳ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅಣ್ಣಾಮಲೈ ಅವರ ಮಾತು ಚುನಾವಣೆಯಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ. ಇನ್ನು ಅವರಲ್ಲಿ ಡಿಎಂಕೆ ನಾಯಕರ ಸಿನಿಮಾದ ಬಗ್ಗೆ ಕೇಳಿದಾಗ ಅದು ರಾಜ್ಯ ಸಚಿವರ “ವಿಫಲ ನಟ” ಎಂದು ಹೇಳಿದರು. ಉದಯನಿಧಿ ಅವರು ರಾಜಕೀಯದಲ್ಲಿದ್ದವರು ತಮ್ಮ ಅಜ್ಜ (ದಿವಂಗತ ಎಂ ಕರುಣಾನಿಧಿ) ಮತ್ತು ತಂದೆ (ಎಂಕೆ ಸ್ಟಾಲಿನ್) ಹೆಸರಿನಲ್ಲಿ ಅವರು ಏನು ಸಮಾಜ ಸೇವೆ ಮಾಡಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ತಮಿಳುನಾಡು ಸಿಎಂ ಸ್ಟಾಲಿನ್​​ಗೆ ಮ್ಯಾಂಡರಿನ್ ಭಾಷೆಯಲ್ಲಿ ಹುಟ್ಟುಹಬ್ಬದ ಶುಭಾಶಯ ತಿಳಿಸಿ ಕುಟುಕಿದ ಬಿಜೆಪಿ

ಸ್ಟಾಲಿನ್ ಅವರ ಜನ್ಮದಿನದಂದು ಚೈನೀಸ್ ಭಾಷೆಯಲ್ಲಿ ಬಿಜೆಪಿ ಶುಭಾಶಯ ಕೋರಿದ್ದಾರೆ ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಮಾಧ್ಯಮಗಳು ಪ್ರಶ್ನಿಸಿದೆ. ಇದಕ್ಕೆ ಅಣ್ಣಾಮಲೈ ಅವರು ಇದರಲ್ಲಿ ಯಾವುದೇ ಆಕ್ಷೇಪಾರ್ಹವಾಗಿಲ್ಲ ಎಂದು ಹೇಳಿದರು. ಇಂತಹ ಅನೇಕ ಪೋಸ್ಟ್​​ಗಳನ್ನು ಅವರು ಕೂಡ ಹಾಕಿದ್ದಾರೆ ಎಂದು ಅಣ್ಣಾಮಲೈ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ