ಮಂಗಳೂರು: ಕಲಬುರಗಿ ಪಾಲಿಕೆಯಲ್ಲಿ ಜೆಡಿಎಸ್- ಕಾಂಗ್ರೆಸ್ ಮೈತ್ರಿ ವಿಚಾರವಾಗಿ ಮಂಗಳೂರಿನಲ್ಲಿ ಮಾಜಿ ಸಚಿವ ಯು.ಟಿ. ಖಾದರ್ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯೇ ಮೇಯರ್ ಆಗುವ ವಿಶ್ವಾಸವಿದೆ. ಜನಸಾಮಾನ್ಯರು ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಕೊಟ್ಟಿದ್ದಾರೆ. ಸಿದ್ಧಾಂತದ ಪ್ರಕಾರ ಜೆಡಿಎಸ್ನವರು ಕಾಂಗ್ರೆಸ್ ಬೆಂಬಲಿಸಬೇಕು. ಜೆಡಿಎಸ್ ಕಾಂಗ್ರೆಸ್ ಮಾಡಿದ ಉಪಕಾರ ಮರೆಯಲು ಸಾಧ್ಯವಿಲ್ಲ. ಜೆಡಿಎಸ್ನವರು ಅದನ್ನು ಮರೀತಾರೆ ಅಂತಾನೂ ಹೇಳೋಕೆ ಸಾಧ್ಯವಿಲ್ಲ. ನಾವು 80 ಶಾಸಕರಿದ್ರೂ 30 ಸ್ಥಾನದ ಜೆಡಿಎಸ್ಗೆ ಈ ಮೊದಲು ಸಿಎಂ ಸ್ಥಾನ ನೀಡಿದ್ದೆವು. 30 ಸ್ಥಾನದ ಜೆಡಿಎಸ್ಗೆ ಮುಖ್ಯಮಂತ್ರಿ ಸ್ಥಾನ ಕೊಟ್ಟಿದ್ದೆವು ಎಂದು ಯು.ಟಿ. ಖಾದರ್ ತಿಳಿಸಿದ್ದಾರೆ.
ರಾಜ್ಯಸಭಾ ಚುನಾವಣೆ ಸಂದರ್ಭದಲ್ಲೂ ಹೆಚ್.ಡಿ. ದೇವೇಗೌಡಗೆ ಅವಕಾಶ ನೀಡಲಾಗಿದೆ. ಕಾಂಗ್ರೆಸ್ ಉಪಕಾರ ಖಂಡಿತವಾಗಿಯೂ ಜೆಡಿಎಸ್ ಮರೆಯಲ್ಲ. ಉಪಕಾರ ಮಾಡಿದವರನ್ನು ಮರೆಯಲ್ಲ ಎಂಬ ವಿಶ್ವಾಸವಿದೆ. ಕಲಬುರಗಿಯಲ್ಲಿ ಜೆಡಿಎಸ್ ನಮ್ಮನ್ನ ಬೆಂಬಲಿಸುವ ವಿಶ್ವಾಸ ಇದೆ ಎಂದು ಯು.ಟಿ. ಖಾದರ್ ತಿಳಿಸಿದ್ದಾರೆ.
ಕಲಬುರಗಿಯಲ್ಲಿ ಮೇಯರ್, ಉಪಮೇಯರ್ ನಾವೇ ಆಗ್ತೇವೆ: ಜಗದೀಶ್ ಶೆಟ್ಟರ್
ಇತ್ತ ಬೆಳಗಾವಿಯಲ್ಲಿ ಮೇಯರ್, ಉಪಮೇಯರ್ ನಾವೇ ಆಗ್ತೇವೆ. ಜನರು ಈ ಬಾರಿಯೂ ನಮಗೆ ಆಶೀರ್ವಾದ ಮಾಡಿದ್ದಾರೆ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದಾರೆ. ಕಲಬುರಗಿಯಲ್ಲಿ ಜೆಡಿಎಸ್ ಬೆಂಬಲಕ್ಕೆ ಪ್ರಯತ್ನ ಮಾಡುತ್ತಿದ್ದೇವೆ. ಅಲ್ಲಿಯೂ ಮೇಯರ್, ಉಪಮೇಯರ್ ನಾವೇ ಆಗುತ್ತೇವೆ ಎಂದು ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿಗೆ ಬರಲು ಹಣದ ಆಫರ್ ಕೊಟ್ಟಿರಲಿಲ್ಲ: ಯುಟರ್ನ್ ಹೊಡೆದ ಶ್ರೀಮಂತ ಪಾಟೀಲ್