ಎನ್​ಡಿಎ ಮೈತ್ರಿಕೂಟ ಸಭೆಯಿಂದ ದೂರ ಉಳಿದ ಕುಮಾರಸ್ವಾಮಿ, ಸಂಚಲನ ಮೂಡಿಸಿದ ದಳಪತಿಗಳ ನಡೆ

ವಿರೋಧ ಪಕ್ಷಗಳ ನಾಯಕರು ಒಂದೇ ವೇದಿಕೆಗೆ ಬರುತ್ತಿದ್ದಂತೆಯೇ ಬಿಜೆಪಿ ಕೂಡ ತನ್ನ ಬಳಗವನ್ನ ಭದ್ರ ಮಾಡಿಕೊಳ್ಳುತ್ತಿದ್ದು, ಜೆಡಿಎಸ್​ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ.

ಎನ್​ಡಿಎ ಮೈತ್ರಿಕೂಟ ಸಭೆಯಿಂದ ದೂರ ಉಳಿದ ಕುಮಾರಸ್ವಾಮಿ, ಸಂಚಲನ ಮೂಡಿಸಿದ ದಳಪತಿಗಳ ನಡೆ
ಹೆಚ್​​ಡಿ ಕುಮಾರಸ್ವಾಮಿ
Follow us
Sunil MH
| Updated By: ರಮೇಶ್ ಬಿ. ಜವಳಗೇರಾ

Updated on: Jul 18, 2023 | 9:48 AM

ಬೆಂಗಳೂರು, (ಜುಲೈ 18): ಬಿಜೆಪಿ (BJP) ಸೋಲುಣಿಸಲು ವಿಪಕ್ಷಗಳು ಒಗ್ಗಟ್ಟಿನ ಮಂತ್ರ ಜಪಿಸ್ತಿವೆ. ಇದಕ್ಕೆ ಕೌಂಟರ್ ಕೊಡಲು ಬಿಜೆಪಿ ಸಹ ಮಾಸ್ಟರ್ ಪ್ಲ್ಯಾನ್ ಮಾಡಿದೆ. ಇಂದು ಶ್ರೀಜುಲೈ 18) ಸಂಜೆ ದೆಹಲಿಯಲ್ಲಿ ಎನ್‌ಡಿಎ ಒಕ್ಕೂಟದ ಸಭೆ (NDA Meeting)ನಡೆಯಲಿದ್ದು, ವಿಪಕ್ಷಗಳ ತಂತ್ರಕ್ಕೆ ಪ್ರತಿತಂತ್ರ ಹೆಣೆಯಲು ಮುಂದಾಗಿವೆ. ಇನ್ನು ಇತ್ತ ಬೆಂಗಳೂರಿನಲ್ಲಿ 24 ಪಕ್ಷಗಳ ಶಕ್ತಿ ಪ್ರದರ್ಶನವಾದ್ರೆ, ಅತ್ತ ದೆಹಲಿಯಲ್ಲಿ 38 ಪಕ್ಷಗಳ ಶಕ್ತಿ ಪ್ರದರ್ಶನವಾಗೋ ಸಾಧ್ಯತೆ ಇದೆ. ಇನ್ನು ಜೆಡಿಎಸ್-ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುತ್ತಾರೆ ಎನ್ನುವ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ. ಆದ್ರೆ, ಕಹಾನಿ ಮೇ ಟೆಸ್ಟ್ ಅಂದ್ರೆ, ಇಂದಿನ ಎನ್‌ಡಿಎ ಸಭೆಯಲ್ಲಿ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಪಾಲ್ಗೊಳ್ಳುತ್ತಿಲ್ಲ. ಬದಲಿಗೆ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ.

ಇದನ್ನೂ ಓದಿ: ತೆನೆ ಹೊತ್ತ ಮಹಿಳೆ ಬಹುತೇಕ ಕಮಲ ಮುಡಿಯುವುದು ಫಿಕ್ಸ್, BJP ಜತೆ ಮೈತ್ರಿ ಹಿಂದಿದೆ ಜೆಡಿಎಸ್​ ಲೆಕ್ಕಾಚಾರ!

ಕಾದು ನೋಡುವ ತಂತ್ರ ಮೊರೆ ಹೊದ ಜೆಡಿಎಸ್

ಹೌದು…ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆಯೂ ಚರ್ಚೆ ನಡೆಯಲಿದೆಯಂತೆ, ಹೆಚ್‌ಡಿಕೆ ಸಭೆಯಲ್ಲಿ ಭಾಗಿಯಾಗ್ತಾರಂತೆ ಅನ್ನೋ ವಿಚಾರ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಎಬ್ಬಿಸಿತ್ತು. ಆದ್ರೆ, ಎನ್​ಡಿಎ ಮೈತ್ರಿಕೂಟ ಸಭೆಗೆ ಜೆಡಿಎಸ್​ಗೆ ಆಹ್ವಾನ ನೀಡಿಲ್ಲ. ಈ ಬಗ್ಗೆ ಖುದ್ದು ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದು, ಎನ್‌ಡಿಎ ಸಭೆಗೆ ನನಗೆ ಆಹ್ವಾನ ಬಂದಿಲ್ಲ ಎಂದಿದ್ದರು. ಇದರೊಂದಿಗೆ ಇತ್ತ ಮಹಾಘಟಬಂಧನ್​​ ಸಭೆಗೂ ಆಹ್ವಾನವಿಲ್ಲ, ಅತ್ತ ಎನ್​ಡಿಎ ಮೈತ್ರಿಕೂಟದ ಸಭೆಗೂ ಆಹ್ವಾನ ಬಂದಿಲ್ಲ. ಈ ಹಿನ್ನೆಯಲ್ಲಿ ಕುಮಾರಸ್ವಾಮಿ ನಡೆ ಯಾವ ಕಡೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.

ಹೌದು…ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಉತ್ಸುಕರಾಗಿರುವ ದಳಪತಿಗಳು ಇಂದಿನ ಎನ್​ಡಿಎ ಮೈತ್ರಿಕೂಟ ಸಭೆಗೆ ಆಹ್ವಾನ ಬರದಿರುವುದರಿಂದ ಕುಮಾರಸ್ವಾಮಿ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಸಭೆಯಿಂದ ಅಂತರ ಕಾಯ್ದುಕೊಂಡಿರುವ ಹೆಚ್​ಡಿ ದೇವೇಗೌಡ, ಹೆಚ್​ಡಿ ಕುಮಾರಸ್ವಾಮಿ, ಇಂದಿನ ಸಭೆಯ ನಿರ್ಧಾರ ನೊಡಿಕೊಂಡು ಮೈತ್ರಿ ಬಗ್ಗೆ ಮಾತುಕತೆ ನಡೆಸಲು ದೆಹಲಿಗೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ನಿನ್ನೆ(ಜುಲೈ 17) ಮೈತ್ರಿ ವಿಚಾರವಾಗಿ ಕುಮಾರಸ್ವಾಮಿ ಪಕ್ಷದ ಶಾಸಕರ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ.

ನಾವು ಬಿಜೆಪಿ ಜೊತೆ ಹೋದರೆ ಕೆಲ ಸಮುದಾಯದ ವಿರೋಧವನ್ನ ಕಟ್ಟಿಕೊಳ್ಳಬೇಕು. ಇದರಿಂದ ಪಕ್ಷಕ್ಕೆ ಹೊಡೆತ ಆಗಬಹುದು. ಹೀಗಾಗಿ ಎಚ್ಚರಿಕೆಯಿಂದ ಹೆಚ್ಚೆ ಇಡಬೇಕು ಎಂದು ಶಾಸಕರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಇದರಿಂದ ಕುಮಾರಸ್ವಾಮಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಬೇಕೋ ಬೇಡ್ವಾ ಎನ್ನುವ ಬಗ್ಗೆ ಚಿಂತನೆ ನಡೆಸಿದ್ದಾರೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರೇಷನ್‌ ಕಾರ್ಡ್ ರದ್ದಾಗಿರುವುದಕ್ಕೆ ಸರ್ಕಾರದ ವಿರುದ್ಧ ಮಹಿಳೆಯರು ಕಿಡಿ
ರೇಷನ್‌ ಕಾರ್ಡ್ ರದ್ದಾಗಿರುವುದಕ್ಕೆ ಸರ್ಕಾರದ ವಿರುದ್ಧ ಮಹಿಳೆಯರು ಕಿಡಿ
ವಕ್ಫ್ ವಿವಾದದ ಬಗ್ಗೆ ಯಡಿಯೂರಪ್ಪ-ವಿಜಯೇಂದ್ರಗೆ ಕಾಳಜಿಯಿಲ್ಲ: ಯತ್ನಾಳ್
ವಕ್ಫ್ ವಿವಾದದ ಬಗ್ಗೆ ಯಡಿಯೂರಪ್ಪ-ವಿಜಯೇಂದ್ರಗೆ ಕಾಳಜಿಯಿಲ್ಲ: ಯತ್ನಾಳ್
‘ಶ್... ಬಾಯ್ಮುಚ್ಚು‘: ಸುಳ್ಳು ಹೇಳಿದ ಚೈತ್ರಾ ಮೇಲೆ ಕಿಚ್ಚ ಕೆಂಡ
‘ಶ್... ಬಾಯ್ಮುಚ್ಚು‘: ಸುಳ್ಳು ಹೇಳಿದ ಚೈತ್ರಾ ಮೇಲೆ ಕಿಚ್ಚ ಕೆಂಡ
ಸ್ಟಾರ್ ಪ್ರಚಾರಕ ಅಲ್ಲ, ಹಾಗಾಗೇ ಚನ್ನಪಟ್ಟಣದಲ್ಲಿ ಪ್ರಚಾರ ಮಾಡಿಲ್ಲ:ಯತ್ನಾಳ್
ಸ್ಟಾರ್ ಪ್ರಚಾರಕ ಅಲ್ಲ, ಹಾಗಾಗೇ ಚನ್ನಪಟ್ಟಣದಲ್ಲಿ ಪ್ರಚಾರ ಮಾಡಿಲ್ಲ:ಯತ್ನಾಳ್
ನಾನ್ಯಾಕೆ ಬೇಡವಾಗಿದ್ದೇನೆಂದು ಕುಮಾರಸ್ವಾಮಿಯೇ ಹೇಳಬೇಕು: ದೇವೇಗೌಡ
ನಾನ್ಯಾಕೆ ಬೇಡವಾಗಿದ್ದೇನೆಂದು ಕುಮಾರಸ್ವಾಮಿಯೇ ಹೇಳಬೇಕು: ದೇವೇಗೌಡ
ಜಾಗೃತಿ ಅಭಿಯಾನಕ್ಕಾಗಿ ವಿಜಯೇಂದ್ರ 3 ತಂಡಗಳನ್ನು ರಚಿಸಿದ್ದಾರೆ: ಯಡಿಯೂರಪ್ಪ
ಜಾಗೃತಿ ಅಭಿಯಾನಕ್ಕಾಗಿ ವಿಜಯೇಂದ್ರ 3 ತಂಡಗಳನ್ನು ರಚಿಸಿದ್ದಾರೆ: ಯಡಿಯೂರಪ್ಪ
ನಂಬಿಕೆಗಳ ಮಹಾ ತರ್ಕ, ಲೆಕ್ಕಚಾರ ಮಾಡಲು ಬಂದ ಸುದೀಪ್
ನಂಬಿಕೆಗಳ ಮಹಾ ತರ್ಕ, ಲೆಕ್ಕಚಾರ ಮಾಡಲು ಬಂದ ಸುದೀಪ್
ವಕ್ಫ್ ಭೂವಿವಾದ; ಬಿಜೆಪಿಯ ಪ್ರಸ್ತಾಪಿತ ಜಾಗೃತಿ ಜಾಥಾಗೆ ಸಮನ್ವಯತೆಯ ಕೊರತೆ
ವಕ್ಫ್ ಭೂವಿವಾದ; ಬಿಜೆಪಿಯ ಪ್ರಸ್ತಾಪಿತ ಜಾಗೃತಿ ಜಾಥಾಗೆ ಸಮನ್ವಯತೆಯ ಕೊರತೆ
ರೌಡಿಶೀಟರ್ ಸ್ನೇಹಮಯಿ ಕೃಷ್ಣರನ್ನು ಗಡಿಪಾರು ಮಾಡುವಂತೆ ದೂರಿನಲ್ಲಿ ಕೋರಿಕೆ
ರೌಡಿಶೀಟರ್ ಸ್ನೇಹಮಯಿ ಕೃಷ್ಣರನ್ನು ಗಡಿಪಾರು ಮಾಡುವಂತೆ ದೂರಿನಲ್ಲಿ ಕೋರಿಕೆ
ದೆಹಲಿಯಲ್ಲಿ ಮಿತಿ ಮೀರಿದ ವಾಯುಮಾಲಿನ್ಯ, ಪರಿಸ್ಥಿತಿ ಗಂಭೀರ
ದೆಹಲಿಯಲ್ಲಿ ಮಿತಿ ಮೀರಿದ ವಾಯುಮಾಲಿನ್ಯ, ಪರಿಸ್ಥಿತಿ ಗಂಭೀರ