ಕೋಲಾರದಲ್ಲಿ ಕಾಂಗ್ರೆಸ್​ ನೆಲಕಚ್ಚಿದೆ, ಸಿದ್ಧರಾಮಯ್ಯರನ್ನು ಸೋಲಿಸಲು ಇಲ್ಲಿಗೆ ಕರೆತರಲಾಗುತ್ತಿದೆ: ಸಿ.ಎಂ. ಇಬ್ರಾಹಿಂ

ಮಾಜಿ ಸಿಎಂ ಸಿದ್ಧರಾಮಯ್ಯ ಕೋಲಾರದಲ್ಲಿ ನಿಲ್ಲಲ. ಕೊನೆ ಕ್ಷಣದಲ್ಲಿ ಹೈಕಮಾಂಡ್​ ಮೇಲೆ ಹಾಕಿ ಬೇರೆ ಕ್ಷೇತ್ರದಲ್ಲಿ ನಿಲ್ಲತ್ತಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.

ಕೋಲಾರದಲ್ಲಿ ಕಾಂಗ್ರೆಸ್​ ನೆಲಕಚ್ಚಿದೆ, ಸಿದ್ಧರಾಮಯ್ಯರನ್ನು ಸೋಲಿಸಲು ಇಲ್ಲಿಗೆ ಕರೆತರಲಾಗುತ್ತಿದೆ: ಸಿ.ಎಂ. ಇಬ್ರಾಹಿಂ
ಸಿ.ಎಂ. ಇಬ್ರಾಹಿಂ
Updated By: ಗಂಗಾಧರ​ ಬ. ಸಾಬೋಜಿ

Updated on: Jan 16, 2023 | 5:07 PM

ಕೋಲಾರ: ಮಾಜಿ ಸಿಎಂ ಸಿದ್ಧರಾಮಯ್ಯ (Siddaramaiah) ಕೋಲಾರದಲ್ಲಿ ನಿಲ್ಲಲ. ಕೊನೆ ಕ್ಷಣದಲ್ಲಿ ಹೈಕಮಾಂಡ್​ ಮೇಲೆ ಹಾಕಿ ಬೇರೆ ಕ್ಷೇತ್ರದಲ್ಲಿ ನಿಲ್ಲತ್ತಾರೆ. ಸಿದ್ದರಾಮಯ್ಯ ಅವರನ್ನು ಬಲಿಕೊಡಲು ಇಲ್ಲಿಗೆ ಕರೆದುಕೊಂಡು ಬಂದಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅವರು ಕೆಲವರ ಬಲವಂತದಿಂದ‌ ಬಂದು ನಿಲ್ಲುತ್ತಿದ್ದಾರೆ.  ಅಲ್ಪಸಂಖ್ಯಾತ ಮುಖಂಡ ಸಿಎಂ ಇಬ್ರಾಹಿಂ ಅವರನ್ನು ಕಡೆಗಣಿಸಿದ ಅವರಿಗೆ ಮುಸಲ್ಮಾನರು ಪಾಠ ಕಲಿಸ್ತಾರೆ. ಅಹಿಂದ ನಾಯಕ ಸಿದ್ದರಾಮಯ್ಯಗೆ ಅ ತೆಗೆದು ಹಿಂದ ಮಾಡಿದ್ದಾರೆ. ಕೆ.ಎಚ್.ಮುನಿಯಪ್ಪ ಅವರನ್ನು ಸೋಲಿಸಿದವರು ಇವತ್ತು ಕಾಂಗ್ರೆಸ್​ಗೆ ಮತ‌ ಕೇಳುತ್ತಿದ್ದಾರೆ. ಎಂಎಲ್‌ಸಿ‌ಚುನಾವಣೆಯಲ್ಲಿ ಕಾಂಗ್ರೆಸ್ ಅವರು ಹಣ ಪಡೆದು ಶ್ರೀನಿವಾಸಗೌಡರಿಂದ ಬಿಜೆಪಿಗೆ ಮತ ಹಾಕಿಸಿದರು ಎಂದು ಕಿಡಿಕಾರಿದರು.

ಈ ಬಾರಿ ಕೋಲಾರದಲ್ಲಿ ಕಾಂಗ್ರೆಸ್ ಮುಕ್ತವಾಗಲಿದೆ

ಕೋಲಾರದಲ್ಲಿ ಕಾಂಗ್ರೆಸ್ ಪಾಲಿಟಿಕ್ಸ್ ನೆಲಕಚ್ಚಿದೆ. ಈ ಬಾರಿ ಕೋಲಾರದಲ್ಲಿ ಕಾಂಗ್ರೆಸ್ ಮುಕ್ತವಾಗಲಿದೆ. ಸಿದ್ದರಾಮಯ್ಯ ಬಂದಾಗ 7 ಎಂಎಲ್​ಗಳಿದ್ದರು 2 ಸಾವಿರ ಜನ ಸೇರಿಸಲು ಆಗಿಲ್ಲ. ಕಾಂಗ್ರೆಸ್ ವರ್ಚಸ್ಸು ಕಳೆದುಕೊಂಡಿದೆ. ಕುರುಬರಿಗೆ ಸಿದ್ದರಾಮಯ್ಯ ಲೀಡರ್, ಒಕ್ಕಲಿಗರಿಗೆ ಕುಮಾರಸ್ವಾಮಿ, ಮುಸ್ಲಿಂಮರಿಗೆ ನಾನು ಲೀಡರ್ ಎಂದು ಗುಡುಗಿದರು.

ಇದನ್ನೂ ಓದಿ: ‘ನಾ ನಾಯಕಿ’ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ನಿರೂಪಿಕಿಯನ್ನು ಕೆಳಗಿನಿಂದ ಮೇಲೆ, ಮೇಲಿಂದ ಕೆಳಗೆ ಆಶ್ಚರ್ಯಚಕಿತರಾಗಿ ನೋಡಿದ್ದು ಯಾಕೋ?

ಜೆಡಿಎಸ್ ಅಭ್ಯರ್ಥಿ ಆಗಿ ಶ್ರೀನಾಥ ಅಖಾಡಕ್ಕೆ 

ಇನ್ನು ಕೋಲಾರದಲ್ಲಿ ಜೆಡಿಎಸ್ ಅಭ್ಯರ್ಥಿ ಶ್ರೀನಾಥ ಬದಲಾವಣೆ ಇಲ್ಲ, ಗೆಲುವುದು ಖಚಿತ. ಕಳೆದ ಚುನಾವಣೆಯಲ್ಲಿ ಮುಸ್ಲಿಂ ರನ್ನು ಸೋಲಿಸಿ ಶ್ರೀ‌ನಿವಾಸಗೌಡರನ್ನು ಗೆಲ್ಲಿಸಿದರು. ಚುನಾವಣೆಯಲ್ಲಿ ಅಲ್ಪಸಂಖ್ಯಾತರು ಕೈ ಹಿಡಿದಿದ್ದಾರೆ. 19 ಕೌನಿಲ್ ಸದಸ್ಯರನ್ನು ಗೆಲ್ಲಿಸಿ ಕಳುಹಿಸಿದೆ. ನನ್ನ ಉಳಿಸಿಕೊಳ್ಳಲು ಆಗಿಲ್ಲ. ಕೆ.ಹೆಚ್. ಮುನಿಯಪ್ಪ‌ರನ್ನು ಸೋಲಿಸಿದವರಿಗೆ ಅವರ ಸಮುದಾಯ ಪಾಠ ಕಲಿಸುತ್ತದೆ. ಇದು ಜೆಡಿಎಸ್ ಅಭ್ಯರ್ಥಿ ಶ್ರೀನಾಥ್ ಅಲ್ಲ, ಇಬ್ರಾಹಿಂ ಹಾಗಾಗಿ ಮುಸ್ಲಿಂ ಜೆಡಿಎಸ್​ಪರ ನಿಲ್ತಾರೆ ಎಂದು ಸಿ.ಎಂ. ಇಬ್ರಾಹಿಂ ತಿಳಿಸಿದರು.

ಮುಸ್ಲಿಂರ‌ ಮತ ಬೇಕು, ಆದರೆ ಅವರ ವಿರುದ್ದ ಧ್ವನಿ ಎತ್ತಲ್ಲ

ನನ ಮುಂದೆ ಬರಲಿ ಕಾಂಗ್ರೆಸ್​ನವರು. ಹಿಜಾಬ್ ವಿಷಯಕ್ಕೆ ಕಾಂಗ್ರೆಸ್​ನವರು ಯಾರು ಬಂದಿಲ್ಲ. ನರಗುಂದದಲ್ಲಿ ಮುಸ್ಲಿಂ ಹುಡುಗ‌ ಸತ್ತ. ಅವರಿಗೆ ಹಣ ಕೊಡಿಸುವುದಕ್ಕೆ ಕಾಂಗ್ರೆಸ್ ಕೈಯಲ್ಲಿ ಆಗಿಲ್ಲ. ಮುಸ್ಲಿಂರ‌ ಮತ ಬೇಕು, ಆದರೆ ಅವರ ವಿರುದ್ದ ಧ್ವನಿ ಎತ್ತಲ್ಲ. ಸಮುದಾಯದ ಲೀಡರ್​ನ್ನು ತುಳಿದವರು ಇನ್ನು ಅಲ್ಪಸಂಖ್ಯಾತರು ಕೈ ಹಿಡಿಯುತ್ತಾರಾ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಅಹಿಂದ ನಾಯಕರೇ ಸಿದ್ದು ಟಾರ್ಗೆಟ್​; ಅಹಿಂದ ನಾಯಕರಾಗಿ ಅಹಿಂದ ಮುಖಂಡರನ್ನೇ ಮುಗಿಸುತ್ತಿದ್ದಾರಾ ಸಿದ್ದರಾಮಯ್ಯ?

ಸ್ಯಾಂಟ್ರೋ ರವಿ, ಸಿಟಿ ರವಿ ಇವ್ರೆಲ್ಲಾ ಎರಡು ರಾಷ್ಟ್ರೀಯ ಪಕ್ಷಗಳ ಗಿರಾಕಿಗಳು

ಸ್ಯಾಂಟ್ರೋ ರವಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಸ್ಯಾಂಟ್ರೋ ರವಿ, ಸಿಟಿ ರವಿ ಇವ್ರೆಲ್ಲಾ ಎರಡು ರಾಷ್ಟ್ರೀಯ ಪಕ್ಷಗಳ ಗಿರಾಕಿಗಳು. ಸಿಐಡಿಗಿಂತಲೂ ಸಿಬಿಐ ತನಿಖೆ ಆಗಲೇಬೇಕು. ಸಿಟ್ಟಿಂಗ್ ಹೈಕೋರ್ಟ್ ಜಡ್ಜ್ ತನಿಖೆ ನಡೆಸಬೇಕು. 12 ಕ್ಯಾಸೆಟ್​ಗಳ ಬಗ್ಗೆ ಕಾಂಗ್ರೆಸ್​ ಅವರು ಮಾತನಾಡುತ್ತಲೆ ಇಲ್ಲ. ಕೆಲ ಮಂತ್ರಿಗಳು ಸ್ಟೇ ತೆಗೆದುಕೊಂಡಿದ್ದಾರೆ. ಈ ಕುರಿತು ಕಾಂಗ್ರೆಸ್​ ಅವರು ಬಾಯಿಬಿಡುತ್ತಿಲ್ಲ.

ನಾನೊಬ್ಬನೇ ಎಂಎಲ್​ಸಿ ಇದ್ದಾಗ ಹೇಳಿದ್ದೆ, ಕ್ಯಾಸೆಂಟ್ ಬಹಿರಂಗಪಡಿಸಿ ಎಂದು. ಈ ಕ್ಯಾಸೆಟ್​ನಲ್ಲಿ ಸದಾನಂದ ಗೌಡ ಅವರು ಇದ್ದಾರೆ. ಅವರು ಸಹ ಸ್ಟೇ ತೆಗೆದುಕೊಂಡಿದ್ದಾರೆ. ತೆಗೆದುಕೊಳ್ಳದೆ ಇರುವುದು ಗೋಪಾಲಯ್ಯ ಒಬ್ಬನೆ. ನಾನೇನು ತಪ್ಪೇ ಮಾಡಿಲ್ಲ ಎಂದು ಆತನೇ ಹೇಳುತ್ತಾನೆ. ಸ್ಟೇ ತೆಗೆದುಕೊಂಡ ಮಂತ್ರಿಗಳು ಪಕ್ಕದಲ್ಲೇ ಕುಳಿತಿದ್ದಾರೆ. ನಿಮಗೆ ಮಾನ ಮರ್ಯಾದೆ ಇದೆಯಾ ಎಂದು ಕಿಡಿಕಾರಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.