ಹಾಸನದಲ್ಲಿ ತಾರಕಕ್ಕೇರಿದ ಜೆಡಿಎಸ್ ಟಿಕೆಟ್​ ಫೈಟ್: ರೇವಣ್ಣ ನಡೆಯಿಂದ ಬೇಸರ ವ್ಯಕ್ತಪಡಿಸಿದ ಹೆಚ್​ಡಿ ಕುಮಾರಸ್ವಾಮಿ

ಗಂಗಾಧರ​ ಬ. ಸಾಬೋಜಿ

|

Updated on:Mar 18, 2023 | 3:22 PM

ಪತ್ನಿ ಭವಾನಿಗೆ ಹಾಸನ ಟಿಕೆಟ್ ಕೈತಪ್ಪಿದ್ದಕ್ಕೆ ಸ್ವರೂಪ್​ಗೂ ಟಿಕೆಟ್ ನೀಡದಂತೆ ಪಟ್ಟು ಹಿಡಿದಿದ್ದಾರಂತೆ. ಈ ಹಿನ್ನೆಲೆ ಚುನಾವಣೆ ಸಮೀಪದಲ್ಲಿ ರೇವಣ್ಣ ನಡೆಯಿಂದ ಹೆಚ್.​ಡಿ. ದೇವೆಗೌಡ ಬಳಿ ಹೆಚ್​. ಡಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿಕೊಂಡಿದ್ದಾರೆ.

ಹಾಸನದಲ್ಲಿ ತಾರಕಕ್ಕೇರಿದ ಜೆಡಿಎಸ್ ಟಿಕೆಟ್​ ಫೈಟ್: ರೇವಣ್ಣ ನಡೆಯಿಂದ ಬೇಸರ ವ್ಯಕ್ತಪಡಿಸಿದ ಹೆಚ್​ಡಿ ಕುಮಾರಸ್ವಾಮಿ
ಹೆಚ್‌.ಡಿ‌.ರೇವಣ್ಣ, ಹೆಚ್​.ಡಿ ಕುಮಾರಸ್ವಾಮಿ

Follow us on

ಬೆಂಗಳೂರು: ಹಾಸನದಲ್ಲಿ ಜೆಡಿಎಸ್ ಟಿಕೆಟ್ ಫೈಟ್ (Hassan JDS Ticket Fight) ತಾರಕಕ್ಕೇರಿದೆ. ಹಾಸನ ಕ್ಷೇತ್ರದ ‌ಟಿಕೆಟ್​​ಗೆ ದಳಮನೆಯಲ್ಲಿ ಮಹಾಯುದ್ಧವೇ ಶುರುವಾದಂತಾಗಿದೆ. ಕಾರ್ಯಕರ್ತನಿಗೆ ಟಿಕೆಟ್ ಎಂದು ಪಟ್ಟು ಹಿಡಿದಿರುವ ಮಾಜಿ ಸಿಎಂ ಹೆಚ್.​ಡಿ. ಕುಮಾರಸ್ವಾಮಿಗೆ ಟಕ್ಕರ್ ಕೊಡಲು ಮಾಜಿ ಸಚಿವ ರೇವಣ್ಣ ಸಜ್ಜಾಗಿದ್ದಾರೆ. ಪತ್ನಿ ಭವಾನಿಗೆ ಹಾಸನ ಟಿಕೆಟ್ ಕೈತಪ್ಪಿದ್ದಕ್ಕೆ ಸ್ವರೂಪ್​ಗೂ ಟಿಕೆಟ್ ನೀಡದಂತೆ ಪಟ್ಟು ಹಿಡಿದಿದ್ದಾರಂತೆ. ಈ ಹಿನ್ನೆಲೆ ಚುನಾವಣೆ ಸಮೀಪದಲ್ಲಿ ರೇವಣ್ಣ ನಡೆಯಿಂದ ಹೆಚ್.​ಡಿ. ದೇವೆಗೌಡ ಬಳಿ ಹೆಚ್​. ಡಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿಕೊಂಡಿದ್ದಾರೆ. ಹಾಸನ ಟಿಕೆಟ್ ವಿಚಾರ ಚರ್ಚೆಗಾಗಿ ಹೆಚ್.​ಡಿ. ದೇವೆಗೌಡರನ್ನು ಭೇಟಿ ಮಾಡಿದ ಹೆಚ್.​ಡಿ. ಕುಮಾರಸ್ವಾಮಿ ರಾಜೇಗೌಡರ ಹೆಸರು ಈ ಸಮಯದಲ್ಲಿ ಯಾಕೆ ತರುತ್ತಿದ್ದಾರೆ. ನಮ್ಮ ಪಕ್ಷದೊಳಗೆ ಎರಡು ಎರಡು ಬಣಗಳಾದರೆ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗುತ್ತದೆ. ರೇವಣ್ಣ ಕರೆದು ಮನವರಿಕೆ ಮಾಡುವಂತೆ ಹೆಚ್​​ಡಿಡಿ ಬಳಿ ಮನವಿ ಮಾಡಿಕೊಂಡಿದ್ದಾರೆ. ರಾಜ್ಯದ್ಯಂತ ಪಕ್ಷ ಅಧಿಕಾರಕ್ಕೆ ತರಲು ಹೋರಾಟ ಮಾಡುತ್ತೀದ್ದೇವೆ. ಒಂದು ಟಿಕೆಟ್​​ಗೋಸ್ಕರ ಈ ರೀತಿ ಪಟ್ಟು ಹಿಡಿದರೆ ಪಲಿತಾಂಶದ ಮೇಲೆ ಹೊಡೆತ ಬೀಳುತ್ತೆ ಎಂದು ಹೇಳಿದ್ದಾರೆ.

ಕೆ.ಎಂ.ರಾಜೇಗೌಡ ಓಪನ್ ಆಫರ್ ನೀಡಿದ ರೇವಣ್ಣ  

ಭವಾನಿ ರೇವಣ್ಣ ಅಭ್ಯರ್ಥಿ ಆಗಲಿ ಎನ್ನುವ ಅಭಿಪ್ರಾಯ ಹೊಂದಿದ್ದ ಎಲ್ಲರೂ ಈಗ ರಾಜೇಗೌಡರ ಮನೆಗೆ ಶಿಫ್ಟ್ ಆಗಿದ್ದಾರೆ. ಸದ್ಯ ಕೆಎಂ ರಾಜೇಗೌಡ ನಿವಾಸ ರಾಜಕೀಯ ಚಟುವಟಿಕೆಯ ಕೇಂದ್ರವಾಗಿದೆ. ಜೆಡಿಎಸ್​ನ ಹಿರಿಯ ನಾಯಕ, ಹಾಸನ ನಗರಾಭಿವೃದ್ಧಿ ಪ್ರಾದಿಕಾರದ ಮಾಜಿ ಅಧ್ಯಕ್ಷ ಕೆ.ಎಂ.ರಾಜೇಗೌಡ ಅವರನ್ನು ಕಣಕ್ಕಿಳಿಸಲು ಜೆಡಿಎಸ್ ಮುಖಂಡರು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಇನ್ನು ನಿನ್ನೆ ರಾಜೇಗೌಡರ ಮನೆಯಲ್ಲಿ ನಡೆದ ಬೆಂಬಲಿಗರ ಸಭೆಯಲ್ಲಿ ರಾಜೇಗೌಡರ ಪರ ರೇವಣ್ಣ ಬ್ಯಾಟ್ ಬೀಸಿದರು. ಆ ಮೂಲಕ ಬಹಿರಂಗವಾಗಿಯೇ ಕೆ.ಎಂ‌.ರಾಜೇಗೌಡರಿ ಬೆಂಬಲವಾಗಿ ನಿಂತತಿದೆ.

ಇದನ್ನೂ ಓದಿ: ನಿಮಗೆ ತೊಂದ್ರೆ ಕೊಡಲ್ಲ ಆದರೆ… ಆದರೆ…ನನ್ನನ್ನು ಗೌರವದಿಂದ ನಡೆಸಿಕೊಳ್ಳಿ: ಪರೋಕ್ಷವಾಗಿ ರೇವಣ್ಣಗೆ ಎಚ್ಚರಿಸಿದ ಮಂಜು

ಸಭೆಯಲ್ಲಿ ರಾಜೇಗೌಡರೇ ಅಭ್ಯರ್ಥಿ ಆಗಲಿ ಎಂದು ರೇವಣ್ಣ ಬೆಂಬಲಿಗರು ಕೂಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಭೆ ಬಳಿಕ ರಾಜೇಗೌಡರ ಮುಂದೆ ರೇವಣ್ಣ ಟಿಕೆಟ್​ ನೀಡುವ ಒಲವು ತೋರಿದ್ದಾರೆ. ನೀವೇ ನಮ್ಮ ಅಭ್ಯರ್ಥಿ. ಎರಡು ದಿನ ಸಮಯ ತಗೋಳಿ. ಕ್ಷೇತ್ರ ಒಂದು ಸುತ್ತು ಹಾಕಿ ನಿಮ್ಮ ಅಭಿಪ್ರಾಯ ಹೇಳಿ ಎಂದು ಓಪನ್ ಆಫರ್ ಕೊಟ್ಟಿದ್ದಾರೆ.

ಚುನಾವಣೆಗೆ ಸ್ಪರ್ಧಿಸಲು ಒಪ್ಪಿದ ಬೆನ್ನೆಲೆ ಕೆ.ಎಂ.ರಾಜೇಗೌಡ ಟೆಂಪಲ್ ರನ್   

ಇನ್ನು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಒಪ್ಪಿದ ಕೆ.ಎಂ.ರಾಜೇಗೌಡ ಅವರು ಹಾಸನದಲ್ಲಿ ತಮ್ಮ ಬೆಂಬಲಿಗರೊಂದಿಗೆ ಟೆಂಪಲ್ ರನ್ ಆರಂಭಿಸಿದ್ದಾರೆ. ಎಚ್.ಡಿ.ರೇವಣ್ಣ ಪ್ರಸ್ತಾಪಿಸಿದ ರಾಜೇಗೌಡ ಅವರ ಉಮೇದುವಾರಿಕೆಗೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಸಿರು ನಿಶಾನೆ ತೋರಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ದೇವೇಗೌಡ ಮತ್ತು ಹೆಚ್.ಡಿ.ಕುಮಾರಸ್ವಾಮಿ ಅವರ ಬಳಿಯೂ ಕೆ.ಎಂ.ರಾಜೇಗೌಡರ ಸಾಧಕ-ಬಾಧಕಗಳ ಬಗ್ಗೆ ಹೆಚ್​.ಡಿ.ರೇವಣ್ಣ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಹಾಸನ ಜೆಡಿಎಸ್​ ಟಿಕೆಟ್​ ಫೈಟ್: ಭವಾನಿ ರೇವಣ್ಣ-ಸ್ವರೂಪ್​ ಮಧ್ಯೆ ತೇಲಿಬಂತು ಹೊಸ ಹೆಸರು

ಮತದಾರರು ಜೆಡಿಎಸ್ ಪರ ಇದ್ದಾರೆ

ಕೋಲಾರದಲ್ಲಿ ಸಿದ್ದರಾಮಯ್ಯ ನಿಂತರು ನಮಗೆ ಸಮಸ್ಯೆ ಇಲ್ಲ. ಮತದಾರರು ಜೆಡಿಎಸ್ ಪರ ಇದ್ದಾರೆ. ಯಾರು ಅಭ್ಯರ್ಥಿ ನಿಲ್ಲುತ್ತಾರೆ ಮುಖ್ಯ ಅಲ್ಲ. ನಮ್ಮ ಅಭ್ಯರ್ಥಿ ಅಲ್ಲಿ ಗೆಲ್ಲುತ್ತಾರೆ. ಈಗಾಗಲೇ ಶ್ರೀನಾಥ್ ಕೆಲಸ ಆರಂಭಿಸಿದ್ದು, ಕಳೆದ ಏಳೆಂಟು ತಿಂಗಳಿನಿಂದ ಸಂಘಟನೆ ನಡೆಯುತ್ತಿದೆ. ಅಲ್ಲಿ ವಿಶೇಷವಾಗಿ ಯಾರು ಪ್ರಮುಖ ಅಭ್ಯರ್ಥಿ ಬರ್ತಾರೆ ಅಂತ ಲೆಕ್ಕಾಚಾರ ಹಾಕಿಲ್ಲ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada