ಇಂದಿರಾ ಗಾಂಧಿ ಪಾತ್ರದಲ್ಲಿ ಕಿರಿಕ್ ನಟಿ ಕಂಗನಾ ರಣಾವತ್​; ಹೊಸ ಸಿನಿಮಾ ಹೆಸರು ‘ಎಮರ್ಜೆನ್ಸಿ’

Indira Gandhi | Emergency: ಮೊದಲಿನಿಂದಲೂ ಕಂಗನಾ ಅವರು ಬಿಜೆಪಿ ಪರವಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಈಗ ಅವರು ಕಾಂಗ್ರೆಸ್​ ನಾಯಕಿ ಇಂದಿರಾ ಗಾಂಧಿ ಬಗ್ಗೆ ಸಿನಿಮಾ ಮಾಡುತ್ತಿರುವುದರಿಂದ ವಿರೋಧ ವ್ಯಕ್ತವಾದರೂ ಅಚ್ಚರಿ ಏನಿಲ್ಲ.

ಇಂದಿರಾ ಗಾಂಧಿ ಪಾತ್ರದಲ್ಲಿ ಕಿರಿಕ್ ನಟಿ ಕಂಗನಾ ರಣಾವತ್​; ಹೊಸ ಸಿನಿಮಾ ಹೆಸರು ‘ಎಮರ್ಜೆನ್ಸಿ’
ಕಂಗನಾ ರಣಾವತ್​, ಇಂದಿರಾ ಗಾಂಧಿ

Updated on: Jun 24, 2021 | 9:33 AM

ದಿನದಿಂದ ದಿನಕ್ಕೆ ನಟಿ ಕಂಗನಾ ರಣಾವತ್​ ಅವರ ಸಾಹಸ ಹೆಚ್ಚುತ್ತಲೇ ಇದೆ. ಒಂದು ಕಡೆ ವಿವಾದಗಳನ್ನು ನಿಭಾಯಿಸಿಕೊಳ್ಳುತ್ತ, ಇನ್ನೊಂದು ಕಡೆ ಸಿನಿಮಾಗಳನ್ನು ಮಾಡುತ್ತ ಅವರು ಮುಂದೆ ಸಾಗುತ್ತಿದ್ದಾರೆ. ಈಗ ಅವರ ಕೈಯಲ್ಲಿ ಹಲವು ಸಿನಿಮಾ ಆಫರ್​ಗಳಿವೆ. ಅದರ ನಡುವೆ ಒಂದು ಬಹುನಿರೀಕ್ಷಿತ ಚಿತ್ರಕ್ಕೆ ಅವರು ಚಾಲನೆ ನೀಡಲು ಸಜ್ಜಾಗಿದ್ದಾರೆ. ಆ ಸಿನಿಮಾ ಹೆಸರು ‘ಎಮರ್ಜೆನ್ಸಿ’. ಹೆಸರೇ ಸೂಚಿಸುವಂತೆ ಇದು ಇಂದಿರಾ ಗಾಂಧಿ ಅವರ ಕುರಿತ ಸಿನಿಮಾ!

ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಕಂಗನಾ ಮಾಹಿತಿ ನೀಡಿದ್ದಾರೆ. ಇಂದಿರಾ ಗಾಂಧಿ ಪಾತ್ರಕ್ಕಾಗಿ ಅವರು ಸಜ್ಜಾಗುತ್ತಿರುವ ಫೋಟೋವನ್ನು ಅಪ್​ಲೋಡ್​ ಮಾಡಿಕೊಂಡಿದ್ದಾರೆ. ಅಚ್ಚರಿ ಏನೆಂದರೆ, ಈ ಚಿತ್ರಕ್ಕೆ ಅವರೇ ನಿರ್ದೇಶನ ಮಾಡಲಿದ್ದಾರೆ. ಈ ಹಿಂದೆ ಅವರು ‘ಮಣಿಕರ್ಣಿಕಾ’ ಚಿತ್ರವನ್ನು ನಿರ್ದೇಶಿಸಿದ್ದರು. ಈಗ ಅವರ ನಿರ್ದೇಶನದ ಎರಡನೇ ಚಿತ್ರವಾಗಿ ‘ಎಮರ್ಜೆನ್ಸಿ’ ಮೂಡಿಬರಲಿದೆ. ಅಲ್ಲದೆ, ನಿರ್ಮಾಣದ ಹೊಣೆಯನ್ನೂ ಅವರೇ ಹೊತ್ತುಕೊಂಡಿದ್ದಾರೆ.

‘ಮತ್ತೊಮ್ಮೆ ನಿರ್ದೇಶಕಿಯ ಕ್ಯಾಪ್​ ಧರಿಸಲು ಖುಷಿ ಎನಿಸುತ್ತದೆ. ಈ ಚಿತ್ರಕ್ಕಾಗಿ ಎರಡು ವರ್ಷಕ್ಕೂ ಅಧಿಕ ಸಮಯ ಕೆಲಸ ಮಾಡಿದ ಬಳಿಕ ಅನಿಸುತ್ತಿರುವುದು ಏನೆಂದರೆ, ಈ ಚಿತ್ರಕ್ಕೆ ನನ್ನ ಹೊರತಾಗಿ ಬೇರೆ ಯಾರೂ ಕೂಡ ಚೆನ್ನಾಗಿ ನಿರ್ದೇಶನ ಮಾಡಲು ಸಾಧ್ಯವಿಲ್ಲ. ಈ ಸಿನಿಮಾಗಾಗಿ ನನ್ನ ನಟನೆಯ ಕೆಲವು ಬೇರೆ ಪ್ರಾಜೆಕ್ಟ್​ಗಳನ್ನು ತ್ಯಾಗ ಮಾಡಬೇಕಾಗಿದೆ. ಆದರೂ ನಾನು ಈ ಚಿತ್ರ ಮಾಡಲು ನಿರ್ಧರಿಸಿದ್ದೇನೆ. ತುಂಬ ಎಗ್ಸೈಟ್​ ಆಗಿದ್ದೇನೆ. ಇದು ಒಂದು ಅದ್ಭುತ ಜರ್ನಿ ಆಗಿರಲಿದೆ’ ಎಂದು ಕಂಗನಾ ಹೇಳಿದ್ದಾರೆ.

ರಾಜಕಾರಣಿಯ ಪಾತ್ರ ಮಾಡುವುದು ಕಂಗನಾಗೆ ಹೊಸದೇನಲ್ಲ. ಈಗಾಗಲೇ ಅವರು ‘ತಲೈವಿ’ ಸಿನಿಮಾದಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಆದರೆ ಲಾಕ್​ಡೌನ್ ಮತ್ತು ಕೊರೊನಾ ವೈರಸ್​ ಎರಡನೇ ಅಲೆ ಕಾರಣದಿಂದ ಆ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿದೆ.

ಮೊದಲಿನಿಂದಲೂ ಕಂಗನಾ ಅವರು ಬಿಜೆಪಿ ಪರವಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಈಗ ಅವರು ಕಾಂಗ್ರೆಸ್​ ನಾಯಕಿ ಇಂದಿರಾ ಗಾಂಧಿ ಬಗ್ಗೆ ಸಿನಿಮಾ ಮಾಡುತ್ತಿರುವುದರಿಂದ ವಿರೋಧ ವ್ಯಕ್ತವಾದರೂ ಅಚ್ಚರಿ ಏನಿಲ್ಲ. ಅಲ್ಲದೆ, ಅವರು ಇಂದಿರಾ ಗಾಂಧಿಯ ಪಾತ್ರವನ್ನು ಯಾವ ರೀತಿ ಬಿಂಬಿಸಲಿದ್ದಾರೆ ಎಂಬುದನ್ನು ತಿಳಿದುಕೊಳ್ಳುವ ಕೌತುಕ ಕೂಡ ಜನರಲ್ಲಿ ಮೂಡಿದೆ.

ಇದನ್ನೂ ಓದಿ:

‘ಇಂಡಿಯಾ’ ಅನ್ನೋದು ಗುಲಾಮರ ಹೆಸರು ಎಂದ ಕಂಗನಾ ರಣಾವತ್​​ಗೆ ಕ್ಲಾಸ್​ ತೆಗೆದುಕೊಂಡ ನೆಟ್ಟಿಗರು

Kangana Ranaut: ಹೈಕೋರ್ಟ್​ ಮೆಟ್ಟಿಲೇರಿದ ಕಂಗನಾ ರಣಾವತ್​; ಈ ಬಾರಿ ಮತ್ತೇನು ಕಿರಿಕ್​?

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us