AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೋಕಸಭಾ ಚುನಾವಣೆ: ಬಿಜೆಪಿಯ ಕ್ಲಸ್ಟರ್‌ ಮಟ್ಟದ ಸಭೆ ಪೂರ್ಣ, ಈಗ ವಿಜಯೇಂದ್ರ ಚಿತ್ತ ದೆಹಲಿಯತ್ತ

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಳೆದ ಎರಡ್ಮೂರು ದಿನಗಳಿಂದ ಯಲಹಂಕ ಬಳಿ ರೆಸಾರ್ಟ್​ವೊಂದರಲ್ಲಿ ನಡೆಯುತ್ತಿರುವ ಬಿಜೆಪಿ ಪೂರ್ವ ಸಿದ್ಧತಾ ಸಭೆ ಅಂತ್ಯವಾಗಿದ್ದು, ಕ್ಲಸ್ಟರ್‌ ಮಟ್ಟದ ಸಭೆಯಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಮುಖಂಡರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಇನ್ನು ಈ ಸಭೆ ಬಗ್ಗೆ ವಿಜಯೇಂದ್ರ ಏನೆಲ್ಲಾ ಹೇಳಿದ್ದಾರೆ ಎನ್ನುವ ವಿವರ ಇಲ್ಲಿದೆ.

ಲೋಕಸಭಾ ಚುನಾವಣೆ: ಬಿಜೆಪಿಯ ಕ್ಲಸ್ಟರ್‌ ಮಟ್ಟದ ಸಭೆ ಪೂರ್ಣ, ಈಗ ವಿಜಯೇಂದ್ರ ಚಿತ್ತ ದೆಹಲಿಯತ್ತ
ಬಿಜೆಪಿ ಸಭೆ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Jan 11, 2024 | 9:19 PM

ಬೆಂಗಳೂರು, (ಜನವರಿ 11): ಮುಂಬರುವ ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಬಿಜೆಪಿ (BJP Karnataka) ಸಿದ್ಧತೆ ನಡೆಸಿದ್ದು, ಮೊದಲ ಹಂತದಲ್ಲಿ ಕ್ಲಸ್ಟರ್‌ ಮಟ್ಟದ ಸಭೆಯನ್ನು ಪೂರ್ಣಗೊಳಿಸಿದ್ದು, ಇಲ್ಲಿ ಪಕ್ಷದ ಕಾರ್ಯತಂತ್ರ ಸೇರಿದಂತೆ ಮುಂದಿನ ನಡೆ ಹೇಗಿರಬೇಕು ಎಂಬುದನ್ನು ಚರ್ಚೆ ಮಾಡಲಾಗಿದೆ. ಇನ್ನು ರಾಜ್ಯದ 8 ಕ್ಲಸ್ಟರ್‌ಗಳ ವ್ಯಾಪ್ತಿಯಲ್ಲಿ ಬರುವ 28 ಲೋಕಸಭಾ ಕ್ಷೇತ್ರಗಳ ಸಭೆ ಮುಕ್ತಾಯಗೊಂಡ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ,ಬುಧವಾರ ಮತ್ತು ಗುರುವಾರ ಎರಡು ದಿನಗಳ ಕಾಲ ರಾಜ್ಯದ 28 ಕ್ಷೇತ್ರಗಳ 8 ಕ್ಲಸ್ಟರ್‌ಗಳನ್ನೊಳಗೊಂಡ ನಾಯಕರ ಜತೆ ಸುದೀರ್ಘವಾಗಿ ಚರ್ಚೆ ಮಾಡಿದ್ದೇವೆ. ಮುಂದಿನ ಚುನಾವಣೆಯ ದೃಷ್ಟಿಯಿಂದ ದೇಶದಲ್ಲಿ ಬಿಜೆಪಿ ಪರವಾದ ವಾತಾವರಣ ಇದೆ ಎಂದರು.

ಉತ್ಸಾಹದಲ್ಲಿ ಬಿಜೆಪಿ ಕಾರ್ಯಕರ್ತರು

ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯ ಜನಪ್ರಿಯತೆ ಹೆಚ್ಚಾಗಿದೆ. ದೇಶದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುವ ವಾತಾವರಣ ಇದೆ. ರಾಜ್ಯದಲ್ಲಿ ಇದಕ್ಕೆ ಪೂರಕವಾಗದ ವಾತಾವರಣ ನಿರ್ಮಾಣ ಆಗಿದೆ. ಮತದಾರರು ಬಹಳ ಉತ್ಸಾಹದಲ್ಲಿದ್ದಾರೆ. ಕಾರ್ಯಕರ್ತರು ಕೂಡ ಸೋಲಿನ ಹತಾಶೆಯಿಂದ ಹೊರಗೆ ಬಂದಿದ್ದಾರೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ನಡೆಸಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಉತ್ಸಾಹದಲ್ಲಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ದೆಹಲಿಯಲ್ಲಿ ಅಮಿತ್ ಶಾ ಭೇಟಿಯಾಗಿ ಮಹತ್ವದ ಬೇಡಿಕೆ ಇಟ್ಟ ಕೆಎಸ್ ಈಶ್ವರಪ್ಪ

ಆದಷ್ಟು ಬೇಗ ಅಭ್ಯರ್ಥಿಗಳ ಘೋಷಣೆ

ಈ ಸಭೆಗಳಲ್ಲಿ ನಮ್ಮ ನಾಯಕರು ಅನೇಕ ಸಲಹೆಗಳನ್ನು ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಕ್ಷೇತ್ರಗಳಲ್ಲಿ ಕಾರ್ಯ ಯೋಜನೆ ಮಾಡುತ್ತೇವೆ. ಸುವರ್ಣಾಕ್ಷರದಲ್ಲಿ ಬರೆಯುವ ಫಲಿತಾಂಶ ಮುಂದೆ ಬರಲಿದೆ. ಆ ನಿಟ್ಟಿನಲ್ಲಿ ಹಿರಿಯರ ಮಾರ್ಗದರ್ಶನದಲ್ಲಿ ಒಗ್ಗಟ್ಟಾಗಿ ಯಶಸ್ವಿಯಾಗಿ ಚುನಾವಣೆ ಎದುರಿಸುತ್ತೇವೆ. ಹಿರಿಯರು ಅಭಿಪ್ರಾಯ, ಸಲಹೆಯನ್ನು ನೀಡಿದ್ದಾರೆ. ತಡ ಮಾಡದೆ ಅಭ್ಯರ್ಥಿಗಳ ಘೋಷಣೆ ಮಾಡುವಂತೆ ಸಲಹೆ ಕೊಟ್ಟಿದ್ದಾರೆ. ಹೀಗಾಗಿ ಆದಷ್ಟು ಬೇಗ ಅಭ್ಯರ್ಥಿಗಳ ಘೋಷಣೆ ಮಾಡಲಾಗುವುದು. ಇದಕ್ಕಾಗಿ ನಾನು ಆದಷ್ಟು ಬೇಗ ವರಿಷ್ಠರನ್ನು ಭೇಟಿ ಮಾಡಿ ಅಭ್ಯರ್ಥಿಯನ್ನು ತೀರ್ಮಾನ ಮಾಡುವಂತೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು.

ಶೀಘ್ರದಲ್ಲೇ ದೆಹಲಿಗೆ

ಅತಿ ಶೀಘ್ರದಲ್ಲೇ ನಾನು ದೆಹಲಿಗೆ ಹೋಗಿ ವರಿಷ್ಠರನ್ನ ಭೇಟಿ ಮಾಡುತ್ತೇನೆ. ಅಭ್ಯರ್ಥಿಗಳ‌ ಬಗ್ಗೆ ಸ್ಪಷ್ಟತೆ ಕೊಡಿ ಅಂತ ಕೇಳ್ತೇನೆ. ನಮ್ಮ ಸಂಸದರು ಎಲ್ಲಾ ಉತ್ಸಾಹದಲ್ಲಿ ಇದ್ದಾರೆ. ಮತ್ತೊಮ್ಮೆ ಸ್ಪರ್ಧಿಸುವ ಯೋಚನೆಯಲ್ಲಿದ್ದಾರೆ. ಆದರೆ ಕಾಂಗ್ರೆಸ್​ ಪಕ್ಷದವರಿಗೆ ಭಯ ಕಾಡುತ್ತಿದೆ. ಮಂತ್ರಿಗಳು ಸ್ಪರ್ಧೆ ಮಾಡಲು ಮುಂದೆ ಬರುತ್ತಿಲ್ಲ. ಸಚಿವರಿಗೆ ಸೋಲುವ ಭಯ ಇದೆ ಎಂದರು.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ