ಸುಳ್ಳಾಡುವುದು, ವಂಚಿಸುವುದು, ಫೇಕ್ ಸುದ್ದಿ ಸೃಷ್ಟಿಸುವುದು ಸಿಎಂ ಸಿದ್ದರಾಮಯ್ಯಗೆ ಚೆನ್ನಾಗಿಯೇ ‘ಸಿದ್ದಿ’ಸಿದೆ: ಬಿಜೆಪಿ ವ್ಯಂಗ್ಯ

ಮೌಲ್ವಿಗಳಿಗೆ 10 ಸಾವಿರ ಕೋಟಿ ರೂಪಾಯಿ ಕೊಡಬೇಕು, ಮತಾಂಧ ಜಿಹಾದಿಗಳನ್ನು ರಕ್ಷಣೆ ಮಾಡಬೇಕು, ಪಿಎಫ್ಐ ಗೂಂಡಾಗಳನ್ನು ಅಮಾಯಕರೆಂದು ಬಿಡಬೇಕು ಎಂದಾಗ ಸಿಎಂ ಸಿದ್ದರಾಮಯ್ಯ ಸಾಹೇಬ್ರು ನಿದ್ದೆಯಿಂದ ತಕ್ಷಣವೇ ಎಚ್ಚರಗೊಳ್ಳುತ್ತಾರೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಸುಳ್ಳಾಡುವುದು, ವಂಚಿಸುವುದು, ಫೇಕ್ ಸುದ್ದಿ ಸೃಷ್ಟಿಸುವುದು ಸಿಎಂ ಸಿದ್ದರಾಮಯ್ಯಗೆ ಚೆನ್ನಾಗಿಯೇ ‘ಸಿದ್ದಿ’ಸಿದೆ: ಬಿಜೆಪಿ ವ್ಯಂಗ್ಯ
ಸುಳ್ಳಾಡುವುದು, ವಂಚಿಸುವುದು, ಫೇಕ್ ಸುದ್ದಿ ಸೃಷ್ಟಿಸುವುದು ಸಿಎಂ ಸಿದ್ದರಾಮಯ್ಯಗೆ ಚೆನ್ನಾಗಿಯೇ ‘ಸಿದ್ದಿ’ಸಿದೆ: ಬಿಜೆಪಿ ವ್ಯಂಗ್ಯ
Follow us
| Updated By: ಗಣಪತಿ ಶರ್ಮ

Updated on: Jan 17, 2024 | 9:58 AM

ಬೆಂಗಳೂರು, ಜನವರಿ 17: ಸುಳ್ಳು ಹೇಳುವುದು, ಜನರನ್ನು ವಂಚಿಸುವುದು, ಫೇಕ್ ಸುದ್ದಿ ಸೃಷ್ಟಿಸುವುದು, ಇದೆಲ್ಲವೂ ಮುಖ್ಯಮಂತ್ರಿ ಸಿದ್ದರಾಮಯ್ಯಗೆ (Siddaramaiah) ಚೆನ್ನಾಗಿಯೇ ‘ಸಿದ್ದಿ’ಸಿದೆ ಎಂದು ಬಿಜೆಪಿ (BJP) ವ್ಯಂಗ್ಯವಾಡಿದೆ. ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿ ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಸಂದೇಶ ಪ್ರಕಟಿಸಿರುವ ರಾಜ್ಯ ಬಿಜೆಪಿ, ನಕಲಿ ಸುದ್ದಿಗಳನ್ನು ರಚಿಸುತ್ತಾ ಕಾಲಹರಣ ಮಾಡುವ ಬದಲು ರಾಜ್ಯದ ಸಮಸ್ಯೆಗಳನ್ನು ಬಗೆಹರಿಸುವ ಕುರಿತು ಸಿಎಂ ಯೋಚಿಸಿದ್ದರೆ ರೈತರು ಆತ್ಮಹತ್ಯೆಗೆ ಶರಣಾಗುತ್ತಿರಲಿಲ್ಲ, ಮಹಿಳೆಯರ ಮೇಲೆ ಹಲ್ಲೆ ನಡೆಯುತ್ತಿರಲಿಲ್ಲ ಎಂದು ಉಲ್ಲೇಖಿಸಿದೆ. ಜತೆಗೆ ಎಡಿಟಿಂಗ್ ಮಾಸ್ಟರ್ ಎಂದು ಸಿದ್ದರಾಮಯ್ಯ ಅವರನ್ನು ಕುಹಕವಾಡಿದೆ.

ಎಲ್ಲೆಂದರಲ್ಲಿ ನಿದ್ದೆಗೆ ಜಾರುವುದು ನೀವೇ (ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ) ಎಂಬುದು ಜಗತ್ತಿಗೆ ತಿಳಿದಿರುವ ವಿಷಯ. ದಿನಕ್ಕೆ 18 ಗಂಟೆ ಕೆಲಸ ಮಾಡುವ ಪ್ರಧಾನಿಯವರನ್ನು ಅವಹೇಳನ ಮಾಡಿದರೆ ಜನರು ನಂಬುತ್ತಾರೆ ಎಂಬ ಭ್ರಮೆಯಿಂದ ಆದಷ್ಟು ಬೇಗ ಹೊರ ಬನ್ನಿ. ಸರ್ಕಾರವನ್ನು ಮೋದಿ ಮಾದರಿಯಲ್ಲಿ ಮುನ್ನಡೆಸಿ ಜನರ ಸಮಸ್ಯೆ ಬಗೆಹರಿಸಿ‌ ಎಂದು ಬಿಜೆಪಿ ಹೇಳಿದೆ.

ಮುಂದುವರಿದು, ಮಜವಾದಿ ಸಿದ್ದರಾಮಯ್ಯ ಅವರು ನಿದ್ದೆಗೆ ಶರಣಾಗುವಂತೆ ಮಾಡುವ ಅಂಶಗಳು ಎಂದು ಒಂದಿಷ್ಟು ವಿಚಾರಗಳನ್ನು ಪಟ್ಟಿ ಮಾಡಿದೆ. ರೈತರಿಗೆ ಕೊಡುವ ಪರಿಹಾರ, ಕರ್ನಾಟಕಕ್ಕೆ ಕಾವೇರಿ ನೀರು, ಮಹಿಳೆಯರಿಗೆ ಕೊಡಬೇಕಾದ ರಕ್ಷಣೆ, ಹಿಂದೂ ದೇವಾಲಯಗಳಿಗೆ ಅನುದಾನ, ಈಡೇರಿಸಲಾಗದ ಗ್ಯಾರಂಟಿಗಳು ಇವು ಸಿದ್ದರಾಮಯ್ಯ ನಿದ್ದೆಗೆ ಶರಣಾಗುವಂತೆ ಮಾಡುವ ಅಂಶಗಳು ಎಂದು ಬಿಜೆಪಿ ಟೀಕಿಸಿದೆ.

ಇದನ್ನೂ ಓದಿ: ಟೆಂಟ್​​ನಲ್ಲಿ 2 ಗೊಂಬೆ ಇಟ್ಟು ರಾಮ, ರಾಮ ಎನ್ನುತ್ತಿದ್ದರು: ಅಯೋಧ್ಯೆ ಬಗ್ಗೆ ಸಚಿವ ರಾಜಣ್ಣ ವಿವಾದಿತ ಹೇಳಿಕೆ

ಮೌಲ್ವಿಗಳಿಗೆ 10 ಸಾವಿರ ಕೋಟಿ ರೂಪಾಯಿ ಕೊಡಬೇಕು, ಮತಾಂಧ ಜಿಹಾದಿಗಳನ್ನು ರಕ್ಷಣೆ ಮಾಡಬೇಕು, ಪಿಎಫ್ಐ ಗೂಂಡಾಗಳನ್ನು ಅಮಾಯಕರೆಂದು ಬಿಡಬೇಕು, ಶಾಲೆಗಳಲ್ಲಿ ಹಿಜಾಬ್ ಹಾಕಿಕೊಂಡು ಹೋಗಬಹುದು, ಗ್ಯಾಂಗ್ ರೇಪ್ ಮಾಡಿದವರನ್ನು ಹೊರ ಬಿಡಬೇಕು ಎಂಬುದು ಸಿದ್ದರಾಮಯ್ಯ ಸಾಹೇಬ್ರು ನಿದ್ದೆಯಿಂದ ತಕ್ಷಣವೇ ಎಚ್ಚರಗೊಳ್ಳುವಂತೆ ಮಾಡುವ ಅಂಶಗಳು ಎಂದು ಬಿಜೆಪಿ ಲೇವಡಿ ಮಾಡಿದೆ. ಜತೆಗೆ, ಇದೇ ಮಜವಾದಿಯ ತುಘಲಕ್ ದರ್ಬಾರ್ ಎಂದು ಬಿಜೆಪಿ ಟೀಕಿಸಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಾಜಾ ಸುದ್ದಿ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ