ಎರಡು ಹಂತದಲ್ಲಿ ಸಚಿವ ಸಂಪುಟ ವಿಸ್ತರಣೆ; ನಾಳೆ ಬೆಳಗ್ಗೆ ಶುಭ ಸೂಚನೆ ಸಿಗಲಿದೆ: ಬಸವರಾಜ ಬೊಮ್ಮಾಯಿ

| Updated By: ganapathi bhat

Updated on: Aug 03, 2021 | 11:26 PM

Basavaraj Bommai on Cabinet: ಡಿಸಿಎಂಗಳ ಬಗ್ಗೆ ಹೈಕಮಾಂಡ್‌ ತೀರ್ಮಾನವೇ ಅಂತಿಮವಾಗುತ್ತೆ. ವಿಜಯೇಂದ್ರಗೆ ಸ್ಥಾನಮಾನ ಬಗ್ಗೆ ಹೈಕಮಾಂಡ್‌ ನಿರ್ಧರಿಸುತ್ತೆ. ಯಡಿಯೂರಪ್ಪ ಜೊತೆ ಚರ್ಚಿಸಿ ಹೈಕಮಾಂಡ್‌ ನಿರ್ಧರಿಸುತ್ತೆ. 2 ಹಂತದಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡುತ್ತೇವೆ ಎಂದು ದೆಹಲಿಯಲ್ಲಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

ಎರಡು ಹಂತದಲ್ಲಿ ಸಚಿವ ಸಂಪುಟ ವಿಸ್ತರಣೆ; ನಾಳೆ ಬೆಳಗ್ಗೆ ಶುಭ ಸೂಚನೆ ಸಿಗಲಿದೆ: ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ
Follow us on

ಬೆಂಗಳೂರು: ಕರ್ನಾಟಕ ಸರ್ಕಾರದ ಸಚಿವ ಸಂಪುಟ ರಚನೆ ಸಂಬಂಧ ವರಿಷ್ಠರ ಭೇಟಿಗೆ ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಳೆ (ಆಗಸ್ಟ್ 4) ಬೆಳಗ್ಗೆ 6 ಗಂಟೆ 10 ನಿಮಿಷಕ್ಕೆ ವಿಮಾನದಲ್ಲಿ ಪ್ರಯಾಣ ನಡೆಸಲಿದ್ದಾರೆ. ಬೆಳಗ್ಗೆ 8.50ಕ್ಕೆ ಬೆಂಗಳೂರಿಗೆ ತಲುಪಲಿದ್ದಾರೆ. ನಿನ್ನೆಯಿಂದ ವರಿಷ್ಠರ ಭೇಟಿಯಲ್ಲಿ ನಿರತರಾಗಿರುವ ಬೊಮ್ಮಾಯಿ, ಸಚಿವರ ಪಟ್ಟಿಗೆ ಗ್ರೀನ್​ಸಿಗ್ನಲ್​ ಪಡೆಯಲು ಹೈಕಮಾಂಡ್‌ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಬಗ್ಗೆ ಕೇಂದ್ರ ಬಿಜೆಪಿ ನಾಯಕರ ಭೇಟಿ ಬಳಿಕ ದೆಹಲಿಯಲ್ಲಿ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.

ಇಂದು ಸಂಜೆ ಅಂತಿಮವಾಗಿ ಸಂಪೂರ್ಣ ಮಾತುಕತೆ ನಡೆಸಿದ್ದೇವೆ. ನಾಳೆ ಬೆಳಗ್ಗೆ ಅಂತಿಮ ತೀರ್ಮಾನ ಹೇಳುವುದಾಗಿ ವರಿಷ್ಠರು ಸೂಚನೆ ಕೊಟ್ಟಿದ್ದಾರೆ. ಅದರಂತೆ, ನಾಳೆ ಬೆಳಗ್ಗೆ ಶುಭ ಸೂಚನೆ ಸಿಗಲಿದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ. ಹೈಕಮಾಂಡ್‌ ಅಂತಿಮ ತೀರ್ಮಾನ ಹೇಳಿದ ಬಳಿಕ ಪಟ್ಟಿ ಪ್ರಕಟ ಮಾಡುತ್ತೇವೆ. ನಾಳೆ ಮಧ್ಯಾಹ್ನ ಅಥವಾ ಸಂಜೆ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಹೇಳಿದ್ದಾರೆ.

ಡಿಸಿಎಂಗಳ ಬಗ್ಗೆ ಹೈಕಮಾಂಡ್‌ ತೀರ್ಮಾನವೇ ಅಂತಿಮವಾಗುತ್ತೆ. ವಿಜಯೇಂದ್ರಗೆ ಸ್ಥಾನಮಾನ ಬಗ್ಗೆ ಹೈಕಮಾಂಡ್‌ ನಿರ್ಧರಿಸುತ್ತೆ. ಯಡಿಯೂರಪ್ಪ ಜೊತೆ ಚರ್ಚಿಸಿ ಹೈಕಮಾಂಡ್‌ ನಿರ್ಧರಿಸುತ್ತೆ. ಹಿರಿಯರಿಗೆ ಕೊಕ್‌ ನೀಡುವ ಬಗ್ಗೆಯೂ ವರಿಷ್ಠರೇ ನಿರ್ಧರಿಸ್ತಾರೆ. ನಾಯಕರು 2-3 ವಿಚಾರಗಳ ಬಗ್ಗೆ ನಾಳೆ ಬೆಳಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ. ನಾಳೆ ಪಕ್ಷದ ಯಾವುದೇ ವರಿಷ್ಠರನ್ನು ಭೇಟಿಯಾಗಲ್ಲ. ಪಕ್ಷದ ಹೈಕಮಾಂಡ್ ಫೋನ್ ಮೂಲಕವೇ ಮಾಹಿತಿ ನೀಡುತ್ತೆ. 2 ಹಂತದಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡುತ್ತೇವೆ ಎಂದು ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

ಸಂಪುಟದಲ್ಲಿ ಇವರಿಗೆ ಸ್ಥಾನ ಖಚಿತ?
ಕೆ.ಎಸ್.ಈಶ್ವರಪ್ಪಗೆ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಖಚಿತ ಎಂದು ತಿಳಿದುಬಂದಿದೆ. ಸಂಪುಟ ಸೇರಲಿರುವ ಶಾಸಕರಿಗೆ ಸಿಎಂ ಬೊಮ್ಮಾಯಿ ಕರೆ ಮಾಡಿದ್ದಾರೆಂದು ಮಾಹಿತಿ ಲಭ್ಯವಾಗಿದೆ. ಶಾಸಕರಾದ ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜ್, ಡಾ.ಸುಧಾಕರ್​, ಬಿ.ಸಿ.ಪಾಟೀಲ್, ಪೂರ್ಣಿಮಾ ಶ್ರೀನಿವಾಸ್, ಅಶ್ವತ್ಥ್ ನಾರಾಯಣ, ಬಿ.ಶ್ರೀರಾಮುಲುಗೆ ಬೊಮ್ಮಾಯಿ ಕರೆ ಮಾಡಿದ್ದಾರೆಂದು ತಿಳಿದುಬಂದಿದೆ. ಮುರುಗೇಶ್ ನಿರಾಣಿಗೆ ಸಿಎಂ ಬೊಮ್ಮಾಯಿ ದೂರವಾಣಿ ಕರೆ ಮಾಡಿದ್ದಾರೆ. ನಾಳೆ ಪ್ರ‌ಮಾಣ ವಚನ ಸ್ವೀಕಾರದ ಬಗ್ಗೆ ನಿರಾಣಿಗೆ ಸಿಎಂ ಮಾಹಿತಿ ನೀಡಿದ್ದಾರೆ ಎಂದು ಟಿವಿ 9ಗೆ ನಿರಾಣಿ ತಿಳಿಸಿದ್ದಾರೆ. ಸಚಿವ ಸಂಪುಟಕ್ಕೆ ಬಿ.ವೈ.ವಿಜಯೇಂದ್ರ ಸೇರುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ.

ಇದನ್ನೂ ಓದಿ: Karnataka Cabinet: ಬಸವರಾಜ ಬೊಮ್ಮಾಯಿ ಸಚಿವ ಸಂಪುಟ ನಾಳೆಯೇ ಅಸ್ತಿತ್ವಕ್ಕೆ: 24 ಮಂದಿಗೆ ಅವಕಾಶ ಸಾಧ್ಯತೆ

ಯಾರು ಸಚಿವರಾಗುತ್ತಾರೆ, ಯಾರು ಡಿಸಿಎಂ ಆಗುತ್ತಾರೆ ಎಂದು ನಾಳೆ ಗೊತ್ತಾಗುತ್ತೆ; ವರಿಷ್ಠರ ತೀರ್ಮಾನ ಅಂತಿಮ: ಬಸವರಾಜ ಬೊಮ್ಮಾಯಿ

(Karnataka CM Basavaraj Bommai on Cabinet Formation Oath Taking Ceremony Karnataka BJP Govt at Delhi)

Published On - 10:43 pm, Tue, 3 August 21