ಹೈಕಮಾಂಡ್ ಟಾಸ್ಕ್: ಮುನಿಸು ಶಮನಕ್ಕೆ ಇಂದಿನಿಂದ ಸಚಿವರು-ಶಾಸಕರ ಜೊತೆ ಸಿದ್ದರಾಮಯ್ಯ ಸಭೆ
ಕಾಂಗ್ರೆಸ್ ಶಾಸಕರು ಅಸಮಾಧಾನಗೊಂಡ ವಿಚಾರ ತಾರಕ್ಕೇರಿದ ಬೆನ್ನಲ್ಲೇ, ಶಾಸಕರ ಅಹವಾಲು ಆಲಿಕೆಗೆ ಸಿಎಂ ಹಾಗೂ ಡಿಸಿಎಂ ಅಖಾಡಕ್ಕಿಳಿದಿದ್ದಾರೆ.
ಬೆಂಗಳೂರು, (ಆಗಸ್ಟ್ -7): ಕರ್ನಾಟಕದಲ್ಲಿ ಕಾಂಗ್ರೆಸ್ (Congress) ಪಾಲಿಗೆ ಆಶಾಕಿರಣ ಜೀವಂತವಾಗಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ (Loksabha Elections 2024) ಕನಿಷ್ಠ 20 ಸ್ಥಾನ ಗೆಲ್ಲುವ ಗುರಿ ನೀಡಿರುವ ಹೈಕಮಾಂಡ್ ಕರ್ನಾಟಕವನ್ನೇ ಲೋಕಸಭೆಯ ಅಡಿಪಾಯ ಮಾಡಿಕೊಳ್ಳಲು ಹೊರಟಿದೆ. ಹೀಗಾಗಿ ಕಾಂಗ್ರೆಸ್ ತಂತ್ರಗಳ ಮೇಲೆ ತಂತ್ರ ಹೆಣೆಯುತ್ತಿದೆ. ಅದಕ್ಕೂ ಮೊದಲ ಪಕ್ಷದಲ್ಲಿರುವ ಅಸಮಾಧಾನಗಳನ್ನು ಶಮನ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮುಂದಾಗಿದ್ದಾರೆ. ಹೌದು.. ಒಂದೊಂದಾಗಿ ತಂತ್ರಗಾರಿಕೆ ಹೆಣೆಯುತ್ತಿರುವ ರಾಜ್ಯ ಕಾಂಗ್ರೆಸ್ ನಾಯಕರು ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಕೂಡ ಮಾಡಿದ್ದಾರೆ. ಶಾಸಕರ ಮುನಿಸು ಶಮನಕ್ಕೆ ಇಂದಿನಿಂದ (ಆಗಸ್ಟ್ 07) ಸಿಎಂ ಹಾಗೂ ಡಿಸಿಎಂ ನೇತೃತ್ರವದಲ್ಲಿ ಸಭೆ ನಡೆಯಲಿದೆ.
ಕಾಂಗ್ರೆಸ್ ಶಾಸಕರು ಅಸಮಾಧಾನಗೊಂಡ ವಿಚಾರ ತಾರಕ್ಕೇರಿದ ಬೆನ್ನಲ್ಲೇ, ಶಾಸಕರ ಅಹವಾಲು ಆಲಿಕೆಗೆ ಸಿಎಂ ಹಾಗೂ ಡಿಸಿಎಂ ಅಖಾಡಕ್ಕಿಳಿದಿದ್ದಾರೆ. ಆರು ಜಿಲ್ಲೆಗಳ ಶಾಸಕರೊಂದಿಗೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಲಿದ್ದಾರೆ. ಉಸ್ತುವಾರಿ ಸಚಿವರ ಸಮ್ಮುಖದಲ್ಲೇ ಸಭೆ ನಡೆಯಲಿದೆ. ಆರು ಜಿಲ್ಲೆಗಳ ಸಚಿವರು, ಶಾಸಕರ ಸಮಸ್ಯೆ ಆಲಿಸಲು ಸಿಎಂ ಸಭೆ ಕರೆದಿದ್ದಾರೆ. , ಇಂದು ಫಸ್ಟ್ ಡೇ 6 ಜಿಲ್ಲೆಗಳ 31 ಶಾಸಕರು, ಸಚಿವರ ಜೊತೆ ಗೃಹ ಕಚೇರಿ ಕೃಷ್ಣದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿವಕುಮಾರ್ ಸಭೆ ಮಾಡಲಿದ್ದಾರೆ . ಈ ವೇಳೆ ಶಾಸಕರ ದೂರು, ಅಹವಾಲು ಆಲಿಸಲಿದ್ದಾರೆ.
ಸಚಿವರು, ಶಾಸಕರ ಜೊತೆ ಮುಖಾಮುಖಿ
ಇಂದು(ಆಗಸ್ಟ್ 07) ಬೆಳಗ್ಗೆ 11 ಕ್ಕೆ ತುಮಕೂರು, ಯಾದಗಿರಿ, ಚಿತ್ರದುರ್ಗ ಜಿಲ್ಲೆ ಉಸ್ತುವಾರಿ ಸಚಿವರು ಶಾಸಕರ ಜೊತೆ ಸಿದ್ದರಾಮಯ್ಯ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 4ಕ್ಕೆ ಬಾಗಲಕೋಟೆ, ಬಳ್ಳಾರಿ ಹಾಗೂ ಧಾರವಾಡ ಜಿಲ್ಲೆಗಳ ಉಸ್ತುವಾರಿ ಸಚಿವರು, ಸಚಿವರು ಹಾಗೂ ಶಾಸಕರೊಂದಿಗೆ ಸಭೆ ನಡೆಯಲಿದೆ. ಉಸ್ತುವಾರಿ ಸಚಿವರ ಕಾರ್ಯವೈಖರಿ ಬಗ್ಗೆ ಕಾಂಗ್ರೆಸ್ ಶಾಸಕರು ಅಸಮಾಧಾನ ಹೊಂದಿದ್ದು, ಆರು ಜಿಲ್ಲೆಗಳ ಎಲ್ಲ ಶಾಸಕರೂ ಕೂಡ ಸಭೆಯಲ್ಲಿ ಭಾಗಿಯಾಗೋ ನಿರೀಕ್ಷೆ ಇದೆ. ಉಸ್ತುವಾರಿ ಸಚಿವರಿಗೆ ಶಾಸಕರ ಬೇಡಿಕೆಗಳ ಬಗ್ಗೆ ಸಿಎಂ ನೇರವಾಗಿ ಗಮನಕ್ಕೆ ತರಲಿದ್ದಾರೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ