ಜಮೀರ್​​ಗೆ ಸಿಎಂ ಸಿದ್ದರಾಮಯ್ಯ ಬಿಗ್ ಶಾಕ್!: ಹೈಕಮಾಂಡ್ ನಿನ್ನ ಮೇಲೆ ಸಿಟ್ಟಾಗಿದೆ, ನೀನೇ ಸಮಜಾಯಿಷಿ ನೀಡಬೇಕು

ದಾವಣಗೆರೆ ಉಪಚುನಾವಣೆ ಟಿಕೆಟ್ ಬಂಡಾಯದ ಕಿಚ್ಚು ಸಚಿವ ಜಮೀರ್ ಅಹ್ಮದ್ ಅವರ ಬುಡಕ್ಕೆ ಬಂದಿದೆ. ಅಲ್ಪಸಂಖ್ಯಾತ ನಾಯಕರ ರಾಜೀನಾಮೆಗೆ ಜಮೀರ್ ಪ್ರಚೋದನೆ ನೀಡಿದ್ದಾರೆಂದು ಗಂಭೀರ ಆರೋಪ ಕೇಳಿಬಂದಿದೆ. ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಜಮೀರ್ ಜೊತೆ ಸುದೀರ್ಘ ಚರ್ಚೆ ನಡೆಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೈಕಮಾಂಡ್‌ಗೆ ಸಮಜಾಯಿಷಿ ನೀಡಲು ಸಿಎಂ ತಾಕೀತು ಮಾಡಿದ್ದಾರೆ. ಜಮೀರ್‌ ಮೇಲೆಯೂ ಕ್ರಮದ ಸಾಧ್ಯತೆ ಇದೆ.

ಜಮೀರ್​​ಗೆ ಸಿಎಂ ಸಿದ್ದರಾಮಯ್ಯ ಬಿಗ್ ಶಾಕ್!: ಹೈಕಮಾಂಡ್ ನಿನ್ನ ಮೇಲೆ ಸಿಟ್ಟಾಗಿದೆ, ನೀನೇ ಸಮಜಾಯಿಷಿ ನೀಡಬೇಕು
ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್
Edited By:

Updated on: Apr 15, 2026 | 6:38 AM

ಬೆಂಗಳೂರು, ಏ.15: ದಾವಣಗೆರೆ ಉಪಚುನಾವಣೆ ಟಿಕೆಟ್ ಘೋಷಣೆಯ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಬಂಡಾಯದ ಕಿಚ್ಚು ಈಗ ಸಚಿವ ಜಮೀರ್ ಅಹ್ಮದ್ ಅವರ ಬುಡಕ್ಕೆ ಬಂದಿದೆ. ಮುಸ್ಲಿಂ ನಾಯಕರ ತಲೆದಂಡ ಆಗುತ್ತಿದೆ. ದಾವಣಗೆರೆ ಉಪಚುನಾವಣೆ ಕಾಂಗ್ರೆಸ್​​​​ಗೆ ಪ್ರತಿಷ್ಠೆಯ ಚುನಾವಣೆ ಆಗಿತ್ತು. ಇದೀಗ ಅಲ್ಪಸಂಖ್ಯಾತ ನಾಯಕರ ಅಸಮಾಧನದಿಂದ ಕಾಂಗ್ರೆಸ್​​ ಇಲ್ಲಿ ಗೆಲ್ಲುವುದು ಅನುಮಾನವಾಗಿದೆ, ಈ ಕಾರಣಕ್ಕೆ ನಜೀರ್ ಅಹಮದ್, ಅಬ್ದುಲ್ ಜಬ್ಬರ್ ಅವರು ರಾಜೀನಾಮೆ ನೀಡಿದ್ದಾರೆ. ಆದರೆ ಇದರಲ್ಲಿ ಪ್ರಮುಖ ಪಾತ್​ರವಹಿಸಿ ಸಚೀವ ಜಮೀರ್​ ಎಂದು ಹೇಳಲಾಗಿದೆ. ಈ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಜಮೀರ್ ಅವರೊಂದಿಗೆ ಸುಮಾರು ಎರಡೂವರೆ ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿ, ತಮ್ಮ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಪಕ್ಷದೊಳಗೆ ಟಿಕೆಟ್ ವಿಚಾರವಾಗಿ ಬಂಡಾಯ ಎದ್ದಿರುವ ನಾಯಕರಿಗೆ ಜಮೀರ್ ಅಹ್ಮದ್ ಪ್ರಚೋದನೆ ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ದೂರುಗಳು ಸಲ್ಲಿಕೆಯಾಗಿರುವುದು ಸಿಎಂ ಸಿದ್ದರಾಮಯ್ಯ ಅವರ ಕೆಂಗಣ್ಣಿಗೆ ಕಾರಣವಾಗಿದೆ. ಬಂಡಾಯದ ವಿಚಾರವಾಗಿ ಹೈಕಮಾಂಡ್ ನಿನ್ನ ಮೇಲೆ ಸಿಟ್ಟಾಗಿದೆ. ನೀನೇ ದೆಹಲಿಗೆ ಹೋಗಿ ಸೂಕ್ತ ಸಮಜಾಯಿಷಿ ನೀಡಬೇಕು” ಎಂದು ಸಿದ್ದರಾಮಯ್ಯ ಅವರು ಜಮೀರ್ ಅವರಿಗೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ಜತೆ ರಹಸ್ಯ ಮಾತುಕತೆ ನಡೆಸಿ ಹೊರಟ ಜಮೀರ್ ಅಹ್ಮದ್, ಮಂತ್ರಿ ಕಥೆ ಏನು?

ಸಿಎಂ ಪ್ರಶ್ನೆಗಳಿಗೆ ಉತ್ತರಿಸಿರುವ ಜಮೀರ್ ಅಹ್ಮದ್, ತಾನು ಕೇರಳ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದೆ ಮತ್ತು ವೈಯಕ್ತಿಕ ಕಾರಣಗಳಿಗಾಗಿ ಮುಂಬೈಗೆ ತೆರಳಿದ್ದೆ ಹೊರತು, ಬಂಡಾಯಕ್ಕೆ ಪ್ರಚೋದನೆ ನೀಡಿಲ್ಲ ಎಂದು ವಿವರಣೆ ನೀಡಿದ್ದಾರೆ. ಈಗಾಗಲೇ ಅಬ್ದುಲ್ ಜಬ್ಬಾರ್ ಮತ್ತು ನಸೀರ್ ಅಹ್ಮದ್ ಅವರ ರಾಜೀನಾಮೆ ವಿಚಾರ ಕಾಂಗ್ರೆಸ್‌ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಈಗ ಪ್ರಭಾವಿ ಸಚಿವ ಜಮೀರ್ ಅಹ್ಮದ್ ವಿರುದ್ಧವೇ ದೂರುಗಳು ಹೋಗಿರುವುದು ಪಕ್ಷದ ಒಗ್ಗಟ್ಟಿಗೆ ಪೆಟ್ಟು ನೀಡುವ ಸಾಧ್ಯತೆ ಇದೆ. ಈ ಕಾರಣಕ್ಕೆ ಈ ವಿಚಾರಕ್ಕೆ ಅಂತ್ಯ ಹಾಡಬೇಕು ಎಂಬುದು ಸಿದ್ಧರಾಮಯ್ಯ ಅವರ ಯೋಚನೆ ಆಗಿದೆ, ಇದರ ಜತೆಗೆ ಹೈಕಮಾಂಡ್​​​ಗೂ ಸೂಕ್ತ ಉತ್ತರ ಹಾಗೂ ಮನವರಿಕೆ ಮಾಡಬೇಕಾಗಿದೆ. ಒಟ್ಟಿನಲ್ಲಿ ಈಗಾಗಲೇ ಈ ವಿಚಾರವಾಗಿ ಇಬ್ಬರ ತಲೆದಂಡವಾಗಿದೆ. ಮುಂದೆ ಜಮೀರ್​​ ಮೇಲೆಯೂ ಕ್ರಮ ಕೈಗೊಳ್ಳುವ ಸಾಧ್ಯತೆಗಳು ಇದೆ ಎಂದು ಹೇಳಲಾಗಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Follow Us