AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ಪ್ರಗತಿ ರಥ ಯಾತ್ರೆಗೆ ಚಾಲನೆ; ಬಿಜೆಪಿಯೇ ಜನರ ಭರವಸೆ ಎಂದ ಸಿಎಂ ಬಸವರಾಜ ಬೊಮ್ಮಾಯಿ

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಡಿರುವ ಸಾಧನೆಗಳನ್ನು ಜನರಿಗೆ ತಲುಪಿಸಲು ರಾಜ್ಯಾದ್ಯಂತ ರಥ ಯಾತ್ರೆ ಆರಂಭವಾಗಿದೆ. ಹೆಣ್ಣುಮಕ್ಕಳು ಬಡವರು, ಶಾಲಾ ಮಕ್ಕಳು ಎಲ್ಲರಿಗೂ ಮಾಹಿತಿ ತಲುಪಿಸಿ‌ಜಾಗೃತಿ ಮೂಡಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಬಿಜೆಪಿ ಪ್ರಗತಿ ರಥ ಯಾತ್ರೆಗೆ ಚಾಲನೆ; ಬಿಜೆಪಿಯೇ ಜನರ ಭರವಸೆ ಎಂದ ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)
Rakesh Nayak Manchi
|

Updated on:Feb 24, 2023 | 7:26 PM

Share

ಬೆಂಗಳೂರು: ಬಿಜೆಪಿಗೆ ಸಮರ್ಥ ನಾಯಕತ್ವವಿದ್ದು, ಜನರು ಬಿಜೆಪಿಯೇ ಭರವಸೆ ಅಂತ ನಂಬಿದ್ದಾರೆ. ಭರವಸೆ ವಾಹನಗಳು ರಾಜ್ಯ ಸುತ್ತಿ ಬರುವಷ್ಟರಲ್ಲಿ ರಾಜ್ಯದಲ್ಲಿ ಬಿಜೆಪಿ (BJP Karnataka) ಸುನಾಮಿ ಏಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದರು. ಬಿಜೆಪಿ ವತಿಯಿಂದ ಆಯೋಜಿಸಿದ್ದ ಪ್ರಗತಿ ರಥ ಯಾತ್ರೆಗೆ (BJP Pragati Rath Yatra) ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಡಿರುವ ಸಾಧನೆಗಳನ್ನು ಜನರಿಗೆ ತಲುಪಿಸಲು ರಾಜ್ಯಾದ್ಯಂತ 130 ರಥಗಳ ಯಾತ್ರೆ ಆರಂಭವಾಗಿದೆ. ಹೆಣ್ಣುಮಕ್ಕಳು ಬಡವರು, ಶಾಲಾ ಮಕ್ಕಳು ಎಲ್ಲರಿಗೂ ಮಾಹಿತಿ ತಲುಪಿಸಿ‌ಜಾಗೃತಿ ಮೂಡಿಸಲಾಗುವುದು. ನವ ಕರ್ನಾಟಕದ ಮೂಲಕ ನವ ಭಾರತ ಕಟ್ಟುವ ಕೆಲಸ ಬಿಜೆಪಿಯಿಂದ‌ ಮಾತ್ರ ಸಾಧ್ಯ ಎಂದರು.

ನಮ್ಮ ಪ್ರಧಾನಿಯವರು ಹೇಳಿರುವಂತೆ ಸಂಕಲ್ಪವೇ ಸಿದ್ದಿ. ಅದನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತವೆ. ರಾಜ್ಯದ ಹಳ್ಳಿ ಹಳ್ಳಿಗಳಿಗೆ ತಲುಪುವ ಈ ವಾಹನ ಎಲ್ಲರಿಗೂ ಸಂಕಲ್ಪ ಸಿದ್ದಿ ಮಾಡುವಂತಾಗಲಿ ಎಂದು ಸಿಎಂ ಹೇಳಿದರು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಕೋವಿಡ್ ಸಂಕಷ್ಟದ ನಂತರ‌ ಜನ ಕಲ್ಯಾಣ ಕೆಲಸ ಮಾಡಿದೆ. ಬೆಂಗಳೂರಿನ 75 ಶಾಲೆ, ಕೆರೆಗಳ ಅಭಿವೃದ್ಧಿ, ಎಲ್ಲ ವಾರ್ಡ್​​ಗಳಲ್ಲಿ ನಮ್ಮ ಕ್ಲಿನಿಕ್ ಸ್ಥಾಪನೆ, ಬೆಂಗಳೂರು ಅಭಿವೃದ್ಧಿಗೆ 6000 ಕೋಟಿ, ಸಬ್ ಅರ್ಬನ್ ರೈಲಿಗೆ ಕೇಂದ್ರದಿಂದ ಹಣ, ಸ್ಮಾರ್ಟ್ ಸಿಟಿ ಅಭಿವೃದ್ಧಿಗೆ ಕೇಂದ್ರದಿಂದ ಹಣ ತಂದಿದ್ದೇವೆ. ಕೇಂದ್ರದಿಂದ ಹಣ ತರಲು ರಾಜ್ಯದ ಸಂಸದರ ಪಾತ್ರ ಮುಖ್ಯವಾಗಿದೆ ಎಂದರು.

ಇದನ್ನೂ ಓದಿ: Last day in Session: ಸದನದ ಕಲಾಪಗಳಿಗೆ ಸಿದ್ದರಾಮಯ್ಯ ನೀಡಿರುವ ಕೊಡುಗೆ ಮುಕ್ತವಾಗಿ ಕೊಂಡಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ರಾಷ್ಟ್ರೀಯ ಹೆದ್ದಾರಿ, ಸಬ್ ಅರ್ಬನ್ ಸೇರಿದಂತೆ ಎಲ್ಲ ಯೋಜನೆಗಳಿಗೆ ಕೇಂದ್ರದಿಂದ ಹಣ ಬಂದಿದೆ. ಈ ವಿಶ್ವದಲ್ಲಿ ಅಗ್ರನಾಯಕತ್ವ ನೀಡುವ ಕೆಲಸ ಮೋದಿ ನೇತೃತ್ವದಲ್ಲಿ ನಡೆಯುತ್ತಿದೆ. ರಾಜ್ಯ ಸರ್ಕಾರದಿಂದ ರೈತ ವಿದ್ಯಾನಿಧಿ, ಜೊತೆಗೆ ರೈತ ಕೂಲಿ ಕಾರ್ಮಿಕರು, ಮೀನುಗಾರರು, ನೇಕಾರರ ಮಕ್ಕಳಿಗೂ ನೀಡುತ್ತಿದ್ದೇವೆ. ಸ್ವನಿಧಿ ಯೋಜನೆ ಅಡಿ ಮಹಿಳೆಯರಿಗೆ ಸಾಲ, ಯುವಕರಿಗೆ ಸ್ವಯಂ ಉದ್ಯೊಗ ನೀಡಲು ಯೋಜನೆ, ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್, ಮಹಿಳೆಯರಿಗೆ ಉಚಿತ ಬಸ್ ಪಾಸ್, ಕೃಷಿ ಕಾರ್ಮಿಕರಿಗೆ ಪ್ರತಿ ತಿಂಗಳು ಒಂದು ಸಾವಿರ ರೂ. ನೀಡುತ್ತಿದ್ದು, ಇವೆಲ್ಲವೂ ರಾಜ್ಯವನ್ನು ಪ್ರಗತಿಯತ್ತ ಮುನ್ನಡೆಸಲಿದೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:24 pm, Fri, 24 February 23