ಚಿಕ್ಕಬಳ್ಳಾಪುರ, (ಏಪ್ರಿಲ್, 08): ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ನಾಯಕ ಎಂ ವೀರಪ್ಪ ಮೊಯ್ಲಿ(Veerappa Moily) ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದ್ರೆ, ಹೈಕಮಾಂಡ್ ಕೊನೆ ಕ್ಷಣದಲ್ಲಿ ಯುವ ನಾಯಕರ ರಕ್ಷಾ ರಾಮಯ್ಯ ಅವರಿಗೆ ನೀಡಿದೆ. ಇದರಿಂದ ವೀರಪ್ಪ ಮೊಯ್ಲಿ ಕೊಂಚ ನಿರಾಸೆಯಲ್ಲಿದ್ದರು. ಇದೀಗ ಅಂತಿಮವಾಗಿ ಅವರು ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ. ಅಲ್ಲದೇ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಅವರಿಗೆ ಬೆಂಬಲ ಘೋಷಣೆ ಮಾಡಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ವೀರಪ್ಪ ಮೊಯ್ಲಿ, ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಟಿಕೆಟ್ ಟಿಕೆಟ್ ನೀಡಬೇಕೆಂದು ಕಾಂಗ್ರೆಸ್ ನಾಯಕರು ಮನವಿ ಮಾಡಿದ್ದರು. ಆದ್ರೆ, ಹೈಕಮಾಂಡ್ ಸ್ಪರ್ಧೆಯಿಂದ ಹಿಂದೆ ಸರಿಯಲು ಮಾನವಿ ಮಾಡಿತ್ತು. ಹೈಕಮಾಂಡ್ಗೆ ಗೌರವ ಕೊಟ್ಟು ಸ್ಪರ್ಧೆಯಿಂದ ಹಿಂದೆ ಸರಿದಿದ್ದೇನೆ. ನನ್ನ ಬೆಂಬಲಿಗರು ನಮ್ಮ ಅಭ್ಯರ್ಥಿ ರಕ್ಷಾ ರಾಮಯ್ಯ ಅವರಿಗೆ ಬೆಂಬಲಿಸಬೇಕೆಂದು ಕರೆ ನೀಡಿದರು. ಈ ಮೂಲಕ ಟಿಕೆಟ್ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡಿದ್ದ ವೀರಪ್ಪ ಮೊಯ್ಲಿ ಅಂತಿಮವಾಗಿ ಪಕ್ಷದ ಅಭ್ಯರ್ಥಿ ರಕ್ಷಾ ರಾಮಯ್ಯಗೆ ಬೆಂಬಲ ಘೋಷಿಸಿದರು.
ವೀರಪ್ಪ ಮೊಯ್ಲಿಯವರು ಕೇವಲ ರಾಜಕಾರಣಿ ಅಲ್ಲ ಸಾಹಿತಿ ಸಹ ಆಗಿದ್ದಾರೆ. ಅವರ ಹೆಂಡತಿ ಮಾಲತಿ ಮೊಯ್ಲಿ ಸಹ ಲೇಖಕಿಯಾಗಿದ್ದಾರೆ. ಇನ್ನು ಮೊಯ್ಲಿಯವರ ಕೃತಿಗಳು ಯಾವುವು ಎನ್ನುವುದನ್ನು ನೋಡುವುದಾದರೆ.
ಕಾದಂಬರಿ: ಸುಳಿಗಾಳಿ, ಸಾಗರದೀಪ. ಕೊಟ್ಟ. ತೆಂಬರೆ
ನಾಟಕಗಳು: ಮಿಲನ, ಪ್ರೇಮವೆಂದರೆ, ಪರಾಜಿತ.
ಕವನ ಸಂಕಲನ: ಹಾಲು ಜೇನು, ಮತ್ತೆ ನಡೆಯಲಿ ಸಮರ, ಯಕ್ಷಪ್ರಶ್ನೆ
ಜೊತೆಯಾಗಿ ನಡೆಯೋಣ ( ಮಾಲತಿ ಮೊಯಿಲಿಯವರ ಜೊತೆಯಲ್ಲಿ)
ಮಹಾಕಾವ್ಯ: ಶ್ರೀರಾಮಾಯಣ ಮಹಾನ್ವೇಷಣಂ, ಶ್ರೀಬಾಹುಬಲಿ ಅಹಿಂಸಾದಿಗ್ವಿಜಯಂ
Published On - 2:51 pm, Mon, 8 April 24