ರಾಜ್ಯ ಸರ್ಕಾರ ಗ್ಯಾರಂಟಿಗಾಗಿ ಸಾರಿಗೆ ನಿಗಮವನ್ನ ಮಾರಟಕ್ಕಿಟ್ಟಿದೆ: ಬಿಜೆಪಿ ಆರೋಪ

ಕರ್ನಾಟಕ ಸರ್ಕಾರವು ಗ್ಯಾರಂಟಿ ಯೋಜನೆಯ ನಷ್ಟವನ್ನು ಭರಿಸಲು ಸಾರಿಗೆ ಇಲಾಖೆಯ ಆಸ್ತಿಗಳನ್ನು ಮಾರಾಟ ಮಾಡಲು ಯೋಜಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಸರ್ಕಾರವು ಸಾರಿಗೆ ಇಲಾಖೆಯ 7154 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ ಎಂಬ ಆರೋಪವನ್ನೂ ಬಿಜೆಪಿ ಮಾಡಿದೆ. ಇಂಧನ, ಸಿಬ್ಬಂದಿ ವೇತನ ಮುಂತಾದ ಹೆಚ್ಚುವರಿ ಹೊರೆಯಿಂದಾಗಿ ಸಾರಿಗೆ ನಿಗಮಕ್ಕೆ ಭಾರಿ ನಷ್ಟವಾಗುತ್ತಿದೆ ಎಂದು ಬಿಜೆಪಿ ಹೇಳಿದೆ. ಸಾರಿಗೆ ನಿಗಮದ ಭೂಮಿಯನ್ನು ಮಾರಾಟ ಮಾಡುವ ಯೋಜನೆಯನ್ನು ವಿರೋಧಿಸಲಾಗುತ್ತಿದೆ.

ರಾಜ್ಯ ಸರ್ಕಾರ ಗ್ಯಾರಂಟಿಗಾಗಿ ಸಾರಿಗೆ ನಿಗಮವನ್ನ ಮಾರಟಕ್ಕಿಟ್ಟಿದೆ: ಬಿಜೆಪಿ ಆರೋಪ
ಬಿಜೆಪಿ, ಕೆಎಸ್​ಆರ್​ಟಿಸಿ
Follow us
ಪ್ರಸನ್ನ ಗಾಂವ್ಕರ್​
| Updated By: ವಿವೇಕ ಬಿರಾದಾರ

Updated on:Dec 03, 2024 | 10:26 AM

ಬೆಂಗಳೂರು, ಡಿಸೆಂಬರ್​ 03: ಗ್ಯಾರಂಟಿ (Guarantee) ನಷ್ಟವನ್ನು ಭರಿಸಲು ಕರ್ನಾಟಕ ಸರ್ಕಾರ (Karnataka Government) ಸಾರಿಗೆ ಇಲಾಖೆಯ (Transport Department) ಆಸ್ತಿಗಳನ್ನು ಮಾರಾಟ ಮಾಡಲು ಮುಂದಾಗಿದೆ ಎಂದು ಬಿಜೆಪಿ (BJP) ಆರೋಪ ಮಾಡಿದೆ. ಸಾರಿಗೆ ಇಲಾಖೆಗೆ ನೀಡಬೇಕಾದ 7154 ಕೋಟಿ ರೂ. ಅನ್ನು ರಾಜ್ಯ ಸರ್ಕಾರ ಬಾಕಿ ಉಳಿಸಿಕೊಂಡಿದೆ ಎಂದು ಬಿಜೆಪಿ ಆರೋಪಿಸಿದೆ. 2023-24ರ ಸಾಲಿನ ಶಕ್ತಿಯೋಜನೆಯಡಿಯ 1480 ಕೋಟಿ ರೂ., 2024-25ರ ಸಾಲಿನಲ್ಲಿ ಶಕ್ತಿಯೋಜನೆಯಡಿ 360 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಹೀಗಾಗಿ, ರಾಜ್ಯ ಸರ್ಕಾರ ಗ್ಯಾರಂಟಿಗಾಗಿ ಸಾರಿಗೆ ನಿಗಮವನ್ನ ಮಾರಟಕ್ಕಿಟ್ಟಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಭವಿಷ್ಯನಿಧಿ, ನಿವೃತ್ತ ನೌಕರರ ಬಾಕಿ, ಇಂಧನ, ಸಾಲದ ಬಾಕಿ ಮತ್ತು ಇತರೆ ಬಿಲ್‌ಗಳ ಬಾಕಿ ಸೇರಿದಂತೆ 5614 ಕೋಟಿ ರೂ, ಅನ್ನು ಸರ್ಕಾರ ಬಾಕಿ ಉಳಿಸಿಕೊಂಡಿದೆ ಎಂದು ಗಂಭೀರ ಆರೋಪ ಮಾಡಿದೆ.

ಇದನ್ನೂ ಓದಿ: ಬಾಗಲಕೋಟೆ ಕ್ಷೀರ ಭಾಗ್ಯ ಹಗರಣ: 127 ಮುಖ್ಯೋಪಾಧ್ಯಾಯರಿಗೆ ನೋಟಿಸ್

ಅಗಸ್ಟ್‌ 19ರಂದು ಶಾಲಿನಿರಜಿನೀಶ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಾರಿಗೆ ಸಂಸ್ಥೆಗಳ ಆರ್ಥಿಕ ವ್ಯವಸ್ಥೆಗಳ ಬಗ್ಗೆ ಚರ್ಚಿಸಲಾಗಿತ್ತು. ಇಂಧನ ವೆಚ್ಚವೇ ಪ್ರತಿ ದಿನಕ್ಕೆ 9.5 ಕೋಟಿ ರೂ. ಭರಿಸಲಾಗುತ್ತಿದೆ. ಸಿಬ್ಬಂದಿ ವೇತನ ಸೇರಿ 3650 ಕೋಟಿ ಹೊರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶೇ 15ರಷ್ಟು ಪ್ರಯಾಣ ದರ ಹೆಚ್ಚಿಸುವಂತೆ ಸರ್ಕಾರಕ್ಕೆ ಪ್ರಸ್ತಾಪವನೆ ಸಲ್ಲಿಸಲು ಶಾಲಿನಿ ಅವರು ಸೂಚನೆ ನೀಡಿದ್ದಾರೆ ಎಂದು ಬಿಜೆಪಿ ಹೇಳಿದೆ.

ದರ ಹೆಚ್ಟಳ ಮಾಡಿದರೂ 1800 ಕೋಟಿ ರೂ. ನಿಗಮಕ್ಕೆ ನಷ್ಟವಾಗಲಿದೆ. ಹೀಗಾಗಿ ನಿಗಮದ 200 ಎಕರೆ ಭೂಮಿ ಲಭ್ಯವಿದ್ದು, ಆದಾಯ ಕೃಢೀಕರಣಕ್ಕೆ ಶಾಲಿನಿ ರಜಿನೀಶ್ ಸೂಚನೆ ನೀಡಿದ್ದಾರೆ. ಈ ಬಗ್ಗೆ ಶಾಲಿನಿ ರಜಿನೀಶ್ ನೇತೃತ್ವದ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಖಾಸಗಿಗಳಿಗೆ ನಿಗಮದ ಭೂಮಿ ಮಾರಾಟದ ಆರೋಪ ಕೇಳಿ ಬಂದಿದೆ. ನಿಗಮದ ಭೂಮಿಯನ್ನ ಆದಾಯ ಕ್ರೋಢೀಕರಣಕ್ಕೆ ಬಳಸಲು ವಿರೋಧ ವ್ಯಕ್ತವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:26 am, Tue, 3 December 24

ಬೆನ್ನಿಗೆ ವ್ಯಾಯಾಮ ನೀಡುವ ಯೋಗಾಸನ ಕಲಿಸಿದ ಶಿಲ್ಪಾ ಶೆಟ್ಟಿ; ವಿಡಿಯೋ ನೋಡಿ..
ಬೆನ್ನಿಗೆ ವ್ಯಾಯಾಮ ನೀಡುವ ಯೋಗಾಸನ ಕಲಿಸಿದ ಶಿಲ್ಪಾ ಶೆಟ್ಟಿ; ವಿಡಿಯೋ ನೋಡಿ..
ಜಗದಾಂಬಿಕಾ ಪಾಲ್​​ ಭೇಟಿಯಾದ ಯತ್ನಾಳ್​​ ಟೀಂ: ಏನೆಲ್ಲಾ ಚರ್ಚೆ ಆಯ್ತು?
ಜಗದಾಂಬಿಕಾ ಪಾಲ್​​ ಭೇಟಿಯಾದ ಯತ್ನಾಳ್​​ ಟೀಂ: ಏನೆಲ್ಲಾ ಚರ್ಚೆ ಆಯ್ತು?
ಮುಂಬೈನ ಬಾಂದ್ರಾದಲ್ಲಿ ಪೈಪ್‌ಲೈನ್ ಒಡೆದು 50 ಅಡಿ ಎತ್ತರಕ್ಕೆ ಹಾರಿದ ನೀರು
ಮುಂಬೈನ ಬಾಂದ್ರಾದಲ್ಲಿ ಪೈಪ್‌ಲೈನ್ ಒಡೆದು 50 ಅಡಿ ಎತ್ತರಕ್ಕೆ ಹಾರಿದ ನೀರು
ಎಟಿಎಂನಿಂದ ಹಣ ದೋಚಿದವ ಹೆಂಡತಿಗಾಗಿ ಎರಡು ಚಿನ್ನದ ಸರಗಳನ್ನು ಖರೀದಿಸಿದ
ಎಟಿಎಂನಿಂದ ಹಣ ದೋಚಿದವ ಹೆಂಡತಿಗಾಗಿ ಎರಡು ಚಿನ್ನದ ಸರಗಳನ್ನು ಖರೀದಿಸಿದ
ಧನರಾಜ್ ಮಿಮಿಕ್ರಿ ಕಲೆಗೆ ಭೇಷ್ ಎನ್ನಬೇಕು; ಬಿಗ್ ಬಾಸ್ ಮನೆಯ ಫನ್ನಿ ವಿಡಿಯೋ
ಧನರಾಜ್ ಮಿಮಿಕ್ರಿ ಕಲೆಗೆ ಭೇಷ್ ಎನ್ನಬೇಕು; ಬಿಗ್ ಬಾಸ್ ಮನೆಯ ಫನ್ನಿ ವಿಡಿಯೋ
ಮಂಗಳೂರಿನ ತಲಪಾಡಿಯಲ್ಲಿ ತಡೆಗೋಡೆ ಕುಸಿತ; ಸ್ಪೀಕರ್ ಯುಟಿ ಖಾದರ್ ಭೇಟಿ
ಮಂಗಳೂರಿನ ತಲಪಾಡಿಯಲ್ಲಿ ತಡೆಗೋಡೆ ಕುಸಿತ; ಸ್ಪೀಕರ್ ಯುಟಿ ಖಾದರ್ ಭೇಟಿ
ಆದಾಯಕ್ಕೆ ಮೀರಿದ ಆಸ್ತಿ ಪ್ರಕರಣದಲ್ಲಿ ಜಮೀರ್​ಗೆ ಸಮನ್ಸ್ ಜಾರಿಯಾಗಿತ್ತು
ಆದಾಯಕ್ಕೆ ಮೀರಿದ ಆಸ್ತಿ ಪ್ರಕರಣದಲ್ಲಿ ಜಮೀರ್​ಗೆ ಸಮನ್ಸ್ ಜಾರಿಯಾಗಿತ್ತು
ಕೆಪಿಸಿಸಿ ಅಧ್ಯಕ್ಷನಾದವನಿಗೆ ಮತಸೆಳೆಯುವ ಸಾಮರ್ಥ್ಯವಿರಬೇಕು: ಜಾರಕಿಹೊಳಿ
ಕೆಪಿಸಿಸಿ ಅಧ್ಯಕ್ಷನಾದವನಿಗೆ ಮತಸೆಳೆಯುವ ಸಾಮರ್ಥ್ಯವಿರಬೇಕು: ಜಾರಕಿಹೊಳಿ
ಭಾರತಕ್ಕೆ ಅವಮಾನಿಸಿದರಾ ಬಿಲ್ ಗೇಟ್ಸ್?
ಭಾರತಕ್ಕೆ ಅವಮಾನಿಸಿದರಾ ಬಿಲ್ ಗೇಟ್ಸ್?
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕೂಗಿನ ಬಗ್ಗೆ ತನಗೇನೂ ಗೊತ್ತಿಲ್ಲವೆಂದ ಸಚಿವೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕೂಗಿನ ಬಗ್ಗೆ ತನಗೇನೂ ಗೊತ್ತಿಲ್ಲವೆಂದ ಸಚಿವೆ