ರಾಹುಲ್ ಗಾಂಧಿ ಬಳಿ ಚರ್ಚಿಸಿದ ವಿಷಯಗಳನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

TV9 Digital Desk

| Edited By: guruganesh bhat

Updated on: Jun 22, 2021 | 4:21 PM

ಕೊವಿಡ್ ಸಂಕಷ್ಟದ ಸಮಯದಲ್ಲಿ ಕಾಂಗ್ರೆಸ್ ನಿರ್ವಹಿಸುತ್ತಿರುವ ಕೆಲಸಗಳ ಬಗ್ಗೆ ವರದಿ ನೀಡಿದ್ದೇನೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ. ಕಾಂಗ್ರೆಸ್ ಪಕ್ಷ ಸಂಘಟನೆ ಬಗ್ಗೆಯೂ ರಾಹುಲ್ ಜತೆ ಚರ್ಚೆ ನಡೆಸಿದ್ದೇನೆ ಎಂದು ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ರಾಹುಲ್ ಗಾಂಧಿ ಬಳಿ ಚರ್ಚಿಸಿದ ವಿಷಯಗಳನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್
ಡಿ ಕೆ ಶಿವಕುಮಾರ್ ಮತ್ತು ರಾಹುಲ್ ಗಾಂಧಿ

ದೆಹಲಿ: ಕಾಂಗ್ರೆಸ್ ವರಿಷ್ಠ, ಸಂಸದ ರಾಹುಲ್ ಗಾಂಧಿ ಜತೆ ರಾಜ್ಯದ ಬೆಳವಣಿಗೆ ಬಗ್ಗೆ ಚರ್ಚಿಸಿದ್ದೇನೆ. ಆದರೆ ಚರ್ಚಿಸಿದ ವಿಷಯಗಳನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಭೇಟಿ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.

ಕೊವಿಡ್ ಸಂಕಷ್ಟದ ಸಮಯದಲ್ಲಿ ಕಾಂಗ್ರೆಸ್ ನಿರ್ವಹಿಸುತ್ತಿರುವ ಕೆಲಸಗಳ ಬಗ್ಗೆ ವರದಿ ನೀಡಿದ್ದೇನೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ. ಕಾಂಗ್ರೆಸ್ ಪಕ್ಷ ಸಂಘಟನೆ ಬಗ್ಗೆಯೂ ರಾಹುಲ್ ಜತೆ ಚರ್ಚೆ ನಡೆಸಿದ್ದೇನೆ ಎಂದು ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.  ಈ ನಡುವೆಯೆ ತಮ್ಮ ದೆಹಲಿ ಭೇಟಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಅವರನ್ನೂ ಭೇಟಿಯಾಗಿದ್ದಾರೆ.

 ನಿನ್ನೆಯಷ್ಟೇ ಮಾಧ್ಯಮಗೋಷ್ಠಿ ನಡೆಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೀಗಂದಿದ್ದರು: 

* ನಾನು ಕೆಪಿಸಿಸಿ ಅಧ್ಯಕ್ಷನಾಗಿ ಪ್ರತಿಜ್ಞೆ ಸ್ವೀಕರಿಸಿದ ನಂತರ ಪಕ್ಷದ ದಿಲ್ಲಿ ನಾಯಕರನ್ನು ಅಧಿಕೃತವಾಗಿ ಭೇಟಿ ಮಾಡಿರಲಿಲ್ಲ. ಹೀಗಾಗಿ ಬಂದಿದ್ದೇನೆ. ಸೋನಿಯಾ ಗಾಂಧಿ ಅವರಿಗೆ ಆರೋಗ್ಯ ಸರಿ ಇಲ್ಲ. ಕೋರೋನಾ ಸಮಯದಲ್ಲಿ ದೂರದಿಂದಲೇ ಮಾತಕತೆ ಮಾಡಬೇಕಿದ್ದು, ಹೀಗಾಗಿ ಅವರ ಜತೆ ದೂರವಾಣಿಯಲ್ಲಿ ಮಾತನಾಡಲಾಗುವುದು. ರಾಹುಲ್ ಗಾಂಧಿ ಅವರ ಭೇಟಿಗೂ ಸಮಯ ಕೇಳಿದ್ದು, ಅವರು ಬಿಡುವಿದ್ದರೆ ಭೇಟಿ ಮಾಡುವೆ.

* ಪ್ರದೇಶ ಕಾಂಗ್ರೆಸ್ ಪದಾಧಿಕಾರಿಗಳ ಬದಲಾವಣೆ ಮಾಡಬೇಕಿದೆ. ಅದರ ಮಾರ್ಗಸೂಚಿ ಬಗ್ಗೆ ಪಕ್ಷದ ನಾಯಕರ ಜತೆ ಮಾತನಾಡಲು ಬಂದಿದ್ದೇನೆ. ಸದ್ಯಕ್ಕೆ ಕೆಲವು ಕಾರ್ಯಾಧ್ಯಕ್ಷರು ಮಾತ್ರ ಇದ್ದು, ಉಳಿದಂತೆ ಅಧಿಕೃತ ಸಮಿತಿ ಇಲ್ಲ. ಕೆಲವು ಜಿಲ್ಲಾಧ್ಯಕ್ಷರು ಮತ್ತು ಪದಾಧಿಕಾರಿಗಳ ಬದಲಾವಣೆ ಮಾಡಬೇಕಿದೆ. ಸಮಿತಿ ಗಾತ್ರ ಹೆಚ್ಚಿಸಬೇಕೆ, ಇಳಿಸಬೇಕೆ ಎಂದು ಎರಡು ಮೂರು ವರ್ಷಗಳಿಂದ ಚರ್ಚೆ ನಡೆದಿದೆ. ಈ ಬಗ್ಗೆ ನಮ್ಮ ಪ್ರಧಾನ ಕಾರ್ಯದರ್ಶಿಗಳ ಜತೆ ಮಾತನಾಡಲು ಬಂದಿದ್ದೇನೆ. ನಾಳೆ ಬೆಳಗ್ಗೆ ಸುರ್ಜೆವಾಲ ಅವರನ್ನು ಭೇಟಿ ಮಾಡಲಿದ್ದೇನೆ.

* ಪಕ್ಷದಲ್ಲಿ ಎಲ್ಲರೂ ಕೆಲಸ ಮಾಡುತ್ತಿದ್ದಾರೆ. ನಾನು ಒಂದು ವರ್ಷದಿಂದ ನೋಡಿದ್ದೇನೆ. ಕೆಲವು ಬದಲಾವಣೆ ಆಗಬೇಕಿದೆ. ಎಲ್ಲೆಲ್ಲಿ ಐದಾರು ವರ್ಷಗಳಿಂದ ಅಧ್ಯಕ್ಷರಿದ್ದಾರೋ ಅಲ್ಲಿ ಬದಲಾವಣೆ ಮಾಡಬೇಕು ಎಂದು ಹಿರಿಯ ನಾಯಕರ ಸಭೆಯಲ್ಲಿ ತೀರ್ಮಾನವಾಗಿದೆ. ಬ್ಲಾಕ್ ಅಥವಾ ಜಿಲ್ಲಾಧ್ಯಕ್ಷರು ಸತತ ಎರಡು ಬಾರಿ ಅಧ್ಯಕ್ಷರಾಗಿದ್ದರೆ ಬದಲಾವಣೆ ಮಾಡಬೇಕು ಎಂದು ತೀರ್ಮಾನಿಸಲಾಗಿದೆ. ಕೊರೋನಾ ಸಮಯದಲ್ಲಿ ಬದಲಾವಣೆ ಬೇಡ ಅಂತಾ ಸುಮ್ಮನಿದ್ದೆವು. ಕೊರೋನಾ ಸಮಯದಲ್ಲಿ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ.

* ಮಧ್ಯಂತರ ಚುನಾವಣೆ ವಿಚಾರ ಬಿಜೆಪಿಗೆ ಬಿಟ್ಟ ವಿಚಾರ. ಒಂದು ವಿಚಾರ ಏನೆಂದರೆ ಬಿಜೆಪಿಯಿಂದ ಆಡಳಿತ ನಡೆಸಲು ಸಾಧ್ಯವಿಲ್ಲ ಅನ್ನೋದು ರುಜುವಾತಾಗಿದೆ. ಕೊರೋನಾ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿದ್ದನ್ನು ಬೆಳಕಿಗೆ ತಂದಿದ್ದೆವು. ಈಗ ಬಿಜೆಪಿ ಶಾಸಕರುಗಳೇ ನಮಗಿಂತ ಹೆಚ್ಚಾಗಿ ಮಾತನಾಡುತ್ತಿದ್ದಾರೆ. ಆ ಮೂಲಕ ನಮ್ಮ ಮಾತಿಗೆ ಪುಷ್ಠಿ ನೀಡುತ್ತಿದ್ದಾರೆ. ಸದ್ಯಕ್ಕೆ ನಾವು ಜಿಲ್ಲಾ ಪಂಚಾಯಿತಿ, ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆ ಗಮನ ಹರಿಸುತ್ತಿದ್ದೇವೆ.

ಇದನ್ನೂ ಓದಿ: ಸುದ್ದಿ ವಿಶ್ಲೇಷಣೆ: ಬಿಜೆಪಿಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಇಲ್ಲ, ಕಾಂಗ್ರೆಸ್​ನಲ್ಲಿ ಈಗಲೇ ಹಲವಾರು ಮುಖ್ಯಮಂತ್ರಿಗಳು!

ಕೊವಿಡ್ 2ನೇ ಅಲೆಯಲ್ಲಿ ಮಾಸ್ಕ್ ಹಾಕದವರಿಂದ ಬೆಂಗಳೂರು ನಗರದಲ್ಲಿ 4,54,69,677 ರೂ. ದಂಡ ವಸೂಲಿ, 43,206 ದ್ವಿಚಕ್ರ ವಾಹನ ಸೀಜ್

( KPCC President DK Shivakumar denied to say anything about Rahul Gandhi meet in delhi)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada