ಕರ್ನಾಟಕ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ಎಂಎಲ್‌ಸಿ ಲಕ್ಷ್ಮಣ ಸವದಿ, ನಯನಾ ಗಣೇಶ್ ನೇಮಕ
Karnataka BJP: ಬಿಜೆಪಿ ಅನಿವಾಸಿ ಭಾರತೀಯ ವಿಭಾಗದ ರಾಜ್ಯ ಸಂಚಾಲಕರಾಗಿ ಕ್ಯಾ. ಗಣೇಶ್ ಕಾರ್ಣಿಕ್, ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಹ ಸಂಯೋಜಕರಾಗಿ ಜಯತೀರ್ಥ ಕಟ್ಟಿ ನೇಮಕವಾಗಿದ್ದಾರೆ.
ಬೆಂಗಳೂರು: ಕರ್ನಾಟಕ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ಎಂಎಲ್‌ಸಿ ಲಕ್ಷ್ಮಣ ಸವದಿ, ಉಡುಪಿಯ ನಯನಾ ಗಣೇಶ್ ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಆದೇಶ ನೀಡಿದ್ದಾರೆ. ಬಿಜೆಪಿ ರಾಜ್ಯ ಮುಖ್ಯ ವಕ್ತಾರರಾಗಿ ಎಂ.ಜಿ. ಮಹೇಶ್ ನೇಮಕಗೊಂಡಿದ್ದಾರೆ. ಬಿಜೆಪಿ ಅನಿವಾಸಿ ಭಾರತೀಯ ವಿಭಾಗದ ರಾಜ್ಯ ಸಂಚಾಲಕರಾಗಿ ಕ್ಯಾ. ಗಣೇಶ್ ಕಾರ್ಣಿಕ್, ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಹ ಸಂಯೋಜಕರಾಗಿ ಜಯತೀರ್ಥ ಕಟ್ಟಿ ನೇಮಕವಾಗಿದ್ದಾರೆ.
ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕರಾಗಿ ಯೋಗೇಂದ್ರ, ಸಹ ಸಂಚಾಲಕರಾಗಿ ವಿನೋದ್ ಪಾಟೀಲ್, ರಾಜ್ಯ ಬಿಜೆಪಿ ಮೀನುಗಾರರ ಪ್ರಕೋಷ್ಠದ ರಾಜ್ಯ ಸಂಚಾಲಕರಾಗಿ ಗೋವಿಂದ ಬಾಂಡೇಕರ, ಸಹ ಸಂಚಾಲಕರಾಗಿ ನಾಗಪ್ಪ ಅಂಬಿ, ಫಲಾನುಭವಿಗಳ ಪ್ರಕೋಷ್ಠದ ರಾಜ್ಯ ಸಂಚಾಲಕರಾಗಿ ಶಾಸಕ ಬಸವರಾಜ ಮತ್ತಿಮೂಡ, ಬಿಜೆಪಿ ಮಂಡ್ಯ ಜಿಲ್ಲಾ ಪ್ರಭಾರಿಯಾಗಿ ಜಗದೀಶ ಹಿರೇಮನಿ, ಯಾದಗಿರಿ ಜಿಲ್ಲಾ ಪ್ರಭಾರಿಯಾಗಿ ಅಮರನಾಥ ಪಾಟೀಲ್, ದಾವಣಗೆರೆ ಜಿಲ್ಲಾ ಪ್ರಭಾರಿಯಾಗಿ ಕೆ.ಶಿವಲಿಂಗಪ್ಪ, ಚಿತ್ರದುರ್ಗ ಜಿಲ್ಲಾ ಪ್ರಭಾರಿಯಾಗಿ ಸಿ.ಆರ್.ಪ್ರೇಮಕುಮಾರ್, ಬೆಂಗಳೂರು ಉತ್ತರ ಜಿಲ್ಲಾ ಪ್ರಭಾರಿಯಾಗಿ ಕೆ.ವಿ.ಶಿವಪ್ಪ ನೇಮಕವಾಗಿದ್ದಾರೆ.
ಬಿಜೆಪಿ ವಿಜಯನಗರ ಜಿಲ್ಲಾಧ್ಯಕ್ಷರಾಗಿ ಚನ್ನಬಸವನಗೌಡ, ಬಿಜೆಪಿ ಬಳ್ಳಾರಿ ಜಿಲ್ಲಾಧ್ಯಕ್ಷರಾಗಿ ಮುರಹರಗೌಡ ನೇಮಕಗೊಂಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಈ ಬಗ್ಗೆ ಆದೇಶ ಹೊರಡಿಸಿದ್ದಾರೆ.
ತುಮಕೂರು: ನಾಳೆ ಶಿರಾ ನಗರಸಭೆ ಚುನಾವಣೆ ಮತದಾನ ನಾಳೆ (ಡಿಸೆಂಬರ್ 27) ಶಿರಾ ನಗರಸಭೆ ಚುನಾವಣೆ ಮತದಾನ ನಡೆಯಲಿದೆ. ಶಿರಾ ನಗರದಲ್ಲಿ ಒಟ್ಟು 45,378 ಮತದಾರರು ಇದ್ದಾರೆ. ಒಟ್ಟು 30 ವಾರ್ಡ್ ಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ 26 ವಾರ್ಡ್ ,ಜೆಡಿಎಸ್ ಹಾಗೂ ಬಿಜೆಪಿ ಪಕ್ಷದಿಂದ ಒಟ್ಟು 24 ವಾರ್ಡ್ ಗಳಲ್ಲಿ ಸ್ಪರ್ದೇ ನಡೆಯಲಿದೆ. ಪಕ್ಷೇತರ ಅಭ್ಯರ್ಥಿಗಳು ಕೂಡ ಕಣದಲ್ಲಿ ಇದ್ದು ಒಟ್ಟು 260 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಮೂರು ಪಕ್ಷಗಳು ಹಾಗೂ ಪಕ್ಷೇತರರು ಸೇರಿ 260 ಅಭ್ಯರ್ಥಿಗಳು ಇದ್ದಾರೆ. ಬೆಳಿಗ್ಗೆ 7 ಗಂಟೆಯಿಂದ ಸಂಜೆ 5ವರೆಗೂ ಮತದಾನ ನಡೆಯಲಿದೆ. ಒಟ್ಟು 250 ಸಿಬ್ಬಂದಿ ಗಳು ಭಾಗಿ ಆಗಲಿದ್ದಾರೆ. ಚುನಾವಣಾ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಸೇರಿದಂತೆ ಒಟ್ಟು 250 ಸಿಬ್ಬಂದಿಗಳು ಭಾಗಿ ಆಗಲಿದ್ದಾರೆ. 21 ನೇ ವಾರ್ಡ್ ಹೊರತುಪಡಿಸಿ ಇನ್ನುಳಿದ 30 ವಾರ್ಡ್ ಗಳಲ್ಲಿ ಚುನಾವಣೆ ನಡೆಯಲಿದೆ. 22,356 ಪುರುಷರು 23,020 ಮಹಿಳೆಯರು ಒಟ್ಟು 45,378 ಮತದಾರರು ಇದ್ದಾರೆ. ಒಟ್ಟು 43 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.
ವಿಜಯಪುರ: ಜಿಲ್ಲೆಯ 6 ಪ.ಪಂ.ಗಳಿಗೆ ಚುನಾವಣೆ ವಿಜಯಪುರ ಜಿಲ್ಲೆಯ 6 ಪ.ಪಂ.ಗಳಿಗೆ ಚುನಾವಣೆ ನಡೆಯಲಿದೆ. ಮನಗೂಳಿ, ಆಲಮೇಲ, ದೇವರಹಿಪ್ಪರಗಿ, ನಾಲತವಾಡ, ಕೊಲ್ಹಾರ, ನಿಡಗುಂದಿ ಪಟ್ಟಣ ಪಂಚಾಯಿತಿಗೆ ಚುನಾವಣೆ ನಡೆಯಲಿದೆ. 6 ಪಟ್ಟಣ ಪಂಚಾಯಿತಿಗಳ 97 ವಾರ್ಡ್ಗಳಿಗೆ ಮತದಾನ ನಡೆಯಲಿದ್ದು 6 ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 98 ಮತಗಟ್ಟೆ ಸ್ಥಾಪನೆ ಮಾಡಲಾಗಿದೆ. 260 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 74,587 ಮತದಾರರು ಮತ ಚಲಾವಣೆ ಮಾಡಲಿದ್ದಾರೆ. 37392 ಪುರುಷರು, 37068 ಮಹಿಳಾ ಮತದಾರರಿದ್ದಾರೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. 12 ಸೆಕ್ಟರ್ ಆಫೀಸರ್ಸ್, 511 ಚುನಾವಣಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಬಾಗಲಕೋಟೆ: ಜಿಲ್ಲೆಯ 3 ಪ.ಪಂ.ಗಳಿಗೆ ಚುನಾವಣೆ ನಾಳೆ (ಡಿಸೆಂಬರ್ 27) ಬಾಗಲಕೋಟೆ ಜಿಲ್ಲೆಯ 3 ಪ.ಪಂ.ಗಳಿಗೆ ಚುನಾವಣೆ ನಡೆಯಲಿದೆ. ರನ್ನಬೆಳಗಲಿ, ಅಮೀನಗಡ, ಕಮತಗಿ ಪ.ಪಂ. ಚುನಾವಣೆ ನಡೆಯಲಿದೆ. 3 ಪಟ್ಟಣ ಪಂಚಾಯಿತಿಗಳ 50 ವಾರ್ಡ್ಗಳಿಗೆ ಮತದಾನ ನಡೆಯಲಿದ್ದು 111 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ಮತಗಟ್ಟೆಗಳ ಸುತ್ತಮುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಇದನ್ನೂ ಓದಿ: ಮಂಡ್ಯದಲ್ಲಿ ಶೋಭಾ ಕರಂದ್ಲಾಜೆ ನಾಟಿ ಮಾಡಿದ್ದ ಭತ್ತವನ್ನ ಕೂಯ್ಲು ಮಾಡಿದ ಬಿಜೆಪಿ ಕಾರ್ಯಕರ್ತರು
ಇದನ್ನೂ ಓದಿ: ಬಿಜೆಪಿ ನಿಧಿಗೆ 1000 ರೂ.ದೇಣಿಗೆ ನೀಡಿದ ಪ್ರಧಾನಿ ಮೋದಿ; ಕೈಲಾದಷ್ಟು ಹಣ ನೀಡಿ, ಪಕ್ಷ ಸದೃಢಗೊಳಿಸಲು ಕರೆ