ಪ್ರಧಾನಿ ಮೋದಿ ಮೇಲೆ ಅವಲಂಬಿತರಾಗುವುದು ಬಿಡಿ, ಕಾಂಗ್ರೆಸ್ ಮಾಡಿರುವ ಸಾಧನೆ ಏನು? ಸಂಸದ ತೇಜಸ್ವಿ ಸೂರ್ಯ ಪ್ರಶ್ನೆ
ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಸರ್ಕಾರ ಕೆಲ ದಿನಗಳಿಂದ ನಿರಂತರವಾಗಿ ಅಭಿಯಾನ ಮಾಡಿಕೊಂಡು ಬರುತ್ತಿದೆ. ಸದ್ಯ ಈ ವಿಚಾರವಾಗಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತಿರುಗೇಟು ನಿಡಿದ್ದಾರೆ. ನಿಮ್ಮ ಸರ್ಕಾರವನ್ನು ನಡೆಸಲು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಅವಲಂಬಿತರಾಗುವ ಬದಲು, ದಯವಿಟ್ಟು ಕೆಲವು ತಿಂಗಳುಗಳಲ್ಲಿ ಕಾಂಗ್ರೆಸ್ ಏನು ಸಾಧಿಸಿದೆ ನಮಗೆ ತಿಳಿಸಿ ಎಂದು ವಾಗ್ದಾಳಿ ಮಾಡಿದ್ದಾರೆ.
ಬೆಂಗಳೂರು, ಅಕ್ಟೋಬರ್ 29: ಕೇಂದ್ರ ಸರ್ಕಾರ ಕರ್ನಾಟಕದ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆಯೇ? ಎಂದು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಸರ್ಕಾರ ಕೆಲ ದಿನಗಳಿಂದ ನಿರಂತರವಾಗಿ ಅಭಿಯಾನ ಮಾಡಿಕೊಂಡು ಬರುತ್ತಿದೆ. ಸದ್ಯ ಈ ವಿಚಾರವಾಗಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejaswi Surya) ತಿರುಗೇಟು ನಿಡಿದ್ದಾರೆ. ನಿಮ್ಮ ಸರ್ಕಾರವನ್ನು ನಡೆಸಲು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಅವಲಂಬಿತರಾಗುವ ಬದಲು, ದಯವಿಟ್ಟು ಕೆಲವು ತಿಂಗಳುಗಳಲ್ಲಿ ಕಾಂಗ್ರೆಸ್ ಏನು ಸಾಧಿಸಿದೆ ನಮಗೆ ತಿಳಿಸಿ ಎಂದು ವಾಗ್ದಾಳಿ ಮಾಡಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ಈ ಕುರಿತಾಗಿ ಟ್ವೀಟ್ ಮಾಡಿದ್ದು, ಸಿದ್ದರಾಮಯ್ಯ ಸರ್, ನಿಮ್ಮ ಸಂವೇದನಾಶೀಲ ಕಾಂಗ್ರೆಸ್ ಪಕ್ಷವು 2007 ಮತ್ತು 2022 ರಲ್ಲಿ ಗೋವಾ ಜನತೆಗೆ ಮಹದಾಯಿ ನದಿಯ ಒಂದು ಹನಿ ನೀರನ್ನು ಕರ್ನಾಟಕಕ್ಕೆ ನೀಡಲು ಬಿಡುವುದಿಲ್ಲ ಎಂದು ಬಹಿರಂಗವಾಗಿ ಭರವಸೆ ನೀಡಿತ್ತು. ಆವಾಗ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವಿತ್ತು. ಗೋವಾದೊಂದಿಗಿನ ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸಿದ ಅವರು, ನದಿಯ ನೀರು ಕರ್ನಾಟಕದ ರೈತರಿಗೆ ತಲುಪಿಸುವಲ್ಲಿ ಸಫಲರಾದರು.
ಸಂಸದ ತೇಜಸ್ವಿ ಸೂರ್ಯ ಟ್ವೀಟ್
Siddaramaiah Sir, your insensitive Congress party had openly promised the people of Goa in both 2007 and 2022 that it will not allow even a single drop of water from the Mahadayi River to be given to Karnataka.
It was BJP Govt. led by Shri @BSBommai Ji that amicably addressed… https://t.co/Xvd15JWHmw
— Tejasvi Surya (@Tejasvi_Surya) October 29, 2023
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಸರ್ಕಾರವು 2022 ರಲ್ಲಿ ಕಳಸಾ ಬಂಡೂರಿ ನಾಲಾ ಯೋಜನೆಯ ಡಿಪಿಆರ್‌ಗೆ ಅನುಮೋದನೆಯನ್ನು ಖಚಿತಪಡಿಸಿತ್ತು. ರಾಜ್ಯದ ನೀರಾವರಿ ಮತ್ತು ಕುಡಿಯುವ ನೀರಿನ ಅಗತ್ಯತೆಗಳನ್ನು ಪರಿಹರಿಸುವ ಬದಲು ನಿಮ್ಮ ವೈಫಲ್ಯಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಿರಿ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಶಿಫಾರಸು ಆದ ವಿಶೇಷ ಅನುದಾನ ನಿರಾಕರಣೆ: ಕೈಗೆ ಬಂದ ತುತ್ತು ಕಸಿದ ವಿತ್ತ ಸಚಿವೆ: ಸಿಎಂ ಸಿದ್ದರಾಮಯ್ಯ ಆರೋಪ
ಕರ್ನಾಟಕದ ಜನರು ನಿಮ್ಮ ಪೋಸ್ಟ್‌ಗೆ I.N.D.I ಎಂದು ನಿಮಗೆ ನೆನಪಿಸುತ್ತಿದ್ದಾರೆ. ಮೈತ್ರಿ ಪಾಲುದಾರ ಅರಿವಲಯಂ ಅದು ತಮಿಳುನಾಡನ್ನು ಆಳುತ್ತಿದೆ. ಕಾಂಗ್ರೆಸ್‌ಗೆ ಕನ್ನಡಿಗರ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ ನಿಮ್ಮ ಸರ್ಕಾರ ಏಕೆ ಮಾಡಿದೆ? ಕೇಂದ್ರದ ಪ್ರತಿನಿಧಿಗಳು ನೆಲದ ಪರಿಸ್ಥಿತಿಯ ನೈಜ ಚಿತ್ರಣವನ್ನು ನೀಡಿದರೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಬಲವಾದ ಪ್ರಕರಣವನ್ನು ಮಂಡಿಸಲು ವಿಫಲವಾಗಿದೆ.
ರಾಜ್ಯದ ವಿರುದ್ಧದ ಪ್ರತಿಕೂಲ ಆದೇಶವನ್ನು ಸ್ವಾಗತಿಸಿದವರು ಮತ್ತು ತಮಿಳುನಾಡಿನಲ್ಲಿ ತಮ್ಮ ರಾಜಕೀಯ ಮಿತ್ರನನ್ನು ಮೆಚ್ಚಿಸುವ ಪ್ರಯತ್ನದಲ್ಲಿ ಕರ್ನಾಟಕದ ಜನರಿಗೆ ನೀರು ಹರಿಸಿದವರು ನಿಮ್ಮ ಡಿಸಿಎಂ ಎಂದು ಪರೋಕ್ಷವಾಗಿ ಡಿಕೆ ಶಿವಕುಮಾರ್ ವಿರುದ್ಧ ಕಿಡಿಕಾರಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:03 pm, Sun, 29 October 23