AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೋಕಾಯುಕ್ತ ಮರುಸ್ಥಾಪನೆ ಮಾಡಿದ್ದು ಬಿಜೆಪಿ ಅಲ್ಲ, ಕೋರ್ಟ್: ಬಿಜೆಪಿ ನಾಯಕರ ಟೀಕೆಗೆ ಸಿದ್ದರಾಮಯ್ಯ ಖಡಕ್​ ತಿರುಗೇಟು

ಲೋಕಾಯುಕ್ತ ಮರುಸ್ಥಾಪನೆ ಮಾಡಿದ್ದು ಬಿಜೆಪಿ ಅಲ್ಲ, ಕೋರ್ಟ್​​​​ ಎಂದು ಹೇಳುವ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ನಾಯಕರ ಟೀಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಲೋಕಾಯುಕ್ತ ಮರುಸ್ಥಾಪನೆ ಮಾಡಿದ್ದು ಬಿಜೆಪಿ ಅಲ್ಲ, ಕೋರ್ಟ್: ಬಿಜೆಪಿ ನಾಯಕರ ಟೀಕೆಗೆ ಸಿದ್ದರಾಮಯ್ಯ ಖಡಕ್​ ತಿರುಗೇಟು
ಸಿದ್ದರಾಮಯ್ಯ Image Credit source: indianexpress.com
ಗಂಗಾಧರ​ ಬ. ಸಾಬೋಜಿ
|

Updated on:Mar 05, 2023 | 8:11 PM

Share

ಹಾಸನ: ಲೋಕಾಯುಕ್ತ ಮರುಸ್ಥಾಪನೆ ಮಾಡಿದ್ದು ಬಿಜೆಪಿ ಅಲ್ಲ, ಕೋರ್ಟ್​​​​ ಎಂದು ಹೇಳುವ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ನಾಯಕರ ಟೀಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ತಿರುಗೇಟು ನೀಡಿದ್ದಾರೆ. ಜಿಲ್ಲೆಯ ಅರಸೀಕೆರೆ ತಾಲೂಕಿನ ಕೋಡಿ ಮಠದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ನಾಲ್ಕು ವರ್ಷ ಆಯ್ತು. ಮೂರೂವರೆ ವರ್ಷ ಏಕೆ ಲೋಕಾಯುಕ್ತ ಮರುಸ್ಥಾಪನೆ ಮಾಡಲಿಲ್ಲ. ಕೋರ್ಟ್‌ನಲ್ಲಿ ಯಾರೋ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದರು. PIL ವಿಚಾರಣೆ ನಡೆಸಿ ಲೋಕಾಯುಕ್ತ ಮರುಸ್ಥಾಪನೆಗೆ ಆದೇಶ ನೀಡಿತ್ತು. ಹೀಗಾಗಿ ಲೋಕಾಯುಕ್ತ ಮರುಸ್ಥಾಪಿಸಿದ್ದು ಬಿಜೆಪಿ ಅಲ್ಲ, ಕೋರ್ಟ್ ಎಂದು ಸ್ಪಷ್ಟನೆ ನೀಡಿದರು.

ನಾವು ಲೋಕಾಯುಕ್ತ ಸಂಸ್ಥೆಯನ್ನು ಹಲ್ಲು ಕಿತ್ತ ಹಾವು ಮಾಡಿದ್ವಾ?

ನನ್ನ ಸರ್ಕಾರದ ಅವಧಿಯಲ್ಲಿ ಲೋಕಾಯುಕ್ತ ಸಂಸ್ಥೆ ಮುಚ್ಚಿರಲಿಲ್ಲ. ಲೋಕಾಯುಕ್ತ ನ್ಯಾಯಮೂರ್ತಿಯಾಗಿ ವಿಶ್ವನಾಥ್ ಶೆಟ್ಟಿ ಇದ್ದರು. ಗುಜರಾತ್‌, ಯುಪಿ, ಗೋವಾದಲ್ಲೂ ಎಸಿಬಿ ಇದೆ. ಗುಜರಾತ್‌, ಗೋವಾದಲ್ಲಿ ಎಸಿಬಿಯನ್ನು ರಕ್ಷಣೆಗೆ ಇಟ್ಟುಕೊಂಡಿದ್ದಾರಾ? ಎಸಿಬಿ ರಚಿಸಿದ್ದು ಸರಿ ಇದೆ ಎಂದು ಸರ್ಕಾರವೇ ವಾದ ಮಂಡಿಸಿತ್ತು. ನಾವು ಲೋಕಾಯುಕ್ತ ಸಂಸ್ಥೆಯನ್ನು ಹಲ್ಲು ಕಿತ್ತ ಹಾವು ಮಾಡಿದ್ವಾ? ಇವ್ರು ಹೊಸದಾಗಿ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ಮಾಡಿದ್ದಾರಾ? ಎಸಿಬಿಯನ್ನು ಇವರು ರದ್ದು ಮಾಡಿಲ್ಲ, ಕೋರ್ಟ್‌ ರದ್ದು ಮಾಡಿರೋದು ಎಂದು ವಾಗ್ದಾಳಿ ಮಾಡಿದರು.

ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಸೈಕ್ಲೋನ್ ಥರ ರಾಜ್ಯಕ್ಕೆ ಬಂದು ಹೋಗುತ್ತಿದ್ದಾರೆ: ವೀರಪ್ಪ ಮೊಯ್ಲಿ ಕಿಡಿ

ಪ್ರಲ್ಹಾದ್ ಜೋಶಿಗೆ ತಿರುಗೇಟು ನೀಡಿದ ಸಿದ್ಧರಾಮಯ್ಯ 

ಭ್ರಷ್ಟಾಚಾರ ಬಗ್ಗೆ ಮಾತಾಡಲು ಕಾಂಗ್ರೆಸ್‌ಗೆ ನೈತಿಕತೆಯಿಲ್ಲವೆಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟೀಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ಸರ್ಕಾರವಿದ್ದಾಗ ಯಾರಾದ್ರೂ ಸಿಕ್ಕಿಹಾಕಿಕೊಂಡಿದ್ರಾ? ಶಾಸಕರ ಮಗ 8 ಕೋಟಿ ಲಂಚ ಹೊಡೆದು ಸಿಕ್ಕಿಹಾಕಿಕೊಂಡಿದ್ರಾ ಎಂದು ಪ್ರಶ್ನಿಸಿದರು. ಶಾಸಕರ ಮಗ ಅಪ್ಪನ ಪರವಾಗಿ 8 ಕೋಟಿ ಲಂಚ ಪಡೆದಿದ್ದರು. ಇನ್ನು ಸಚಿವರು ಎಷ್ಟು ದುಡ್ಡು ಹೊಡೆದಿರಬೇಕು?. ವಿಧಾನಸೌಧದಲ್ಲಿ ಹಣ ಸಿಕ್ಕಾಗ ಯಾರು ರಾಜೀನಾಮೆ ನೀಡಿದ್ರೆಂದು ಟೀಕೆ ವಿಚಾರವಾಗಿ ಮಾತನಾಡಿ, ಆಗ ನಾನು ಸಿಎಂ ಆಗಿದ್ನಾ?, ನಾನು ಎಲ್ಲಿಗೆ ರಾಜೀನಾಮೆ ನೀಡಬೇಕಿತ್ತು? ಅಂದಿನ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ರಾಜೀನಾಮೆ ನೀಡಬೇಕಿತ್ತು, ನನ್ನ ಕೇಳಿದ್ರೆ ಹೇಗೆ ಎಂದರು.

ಇದನ್ನೂ ಓದಿ: ಪ್ರಧಾನಿ ಮೋದಿ ಹೇಳಿದಂತೆ ತಿನ್ನೋದೂ ಇಲ್ಲ, ತಿನ್ನುಲು ಬಿಡುವುದು ಇಲ್ಲ: ಡಿಕೆಶಿಗೆ ಸಚಿವ ಅಶೋಕ್ ತಿರುಗೇಟು

ಮೋದಿ ವಿರುದ್ಧ ಕಿಡಿಕಾರಿದ ಸಿದ್ದು

ಮೊನ್ನೆ ಕೂಡ ಗ್ಯಾಸ್ ಬೆಲೆ ಏರಿಕೆ ಮಾಡಿದಾರೆ. ನರೇಂದ್ರ ಮೋದಿ ಹೇಳಿದ್ರು ಅಚ್ಚೇದಿನ್ ಆಯೇಗ ಅಂತಾ ಬಂತಾ? ಎಲ್ಲಾ ಬೆಲೆ ಏರಿಕೆಯಾಗಿದೆ. ಮೋದಿ ಹೇಳ್ತಾರೆ ನಾ ಕಾವೂಂಗ ನಾ ಕಾನೆದೋಂಗ. ಹಾಗಿದ್ರೆ ಇವರನ್ನು ಯಾಕಪ್ಪಾ ಬಿಟ್ಟಿದೀಯ, ಲೂಟಿ ಮಾಡೋಕೆ ಬಿಟ್ಟಿದೀಯ ಎಂದು ಕಿಡಿಕಾರಿದರು. ಬಿಜೆಪಿ ಸೋಲಿಸಲು ಜೆಡಿಎಸ್​ಗೆ ಅಗಲ್ಲ ಅವರು ಅವಕಾಶ ವಾದಿಗಳು. ಕುಮಾರಸ್ವಾಮಿ ಅವರನ್ನ ನಾವು ಬೆಂಬಲ ನೀಡಿ ಸಿಎಂ ಮಾಡಿದ್ದೆವು. ಅವರು ತಾಜ್ ವೆಸ್ಟೆಂಡ್ ಹೊಟೆಲ್​ನಲ್ಲಿ ಇರೋಕೆ ಶುರುಮಾಡಿದ್ರು. ಅವರನ್ನು ಬೇಟಿ ಆಗೋಕೆ ಹೋದ್ರೆ ಸೆಕ್ಯುರಿಟಿಗಳು ಬಿಡುತ್ತಿರಲಿಲ್ಲ. ಹಾಗಾಗಿಯೇ ಅವರು ಅಧಿಕಾರ ಕಳೆದುಕೊಂಡರು. ಅದಕ್ಕೆ ನಾನು ಹೇಳೋದು ಕೊಟ್ಟ ಕುದುರೆ ಏರದವನು ವೀರನೂ ಅಲ್ಲ ಶೂರನು ಅಲ್ಲಾ ಅಂತಾ ಎಂದು ಲೇವಡಿ ಮಾಡಿದರು.

ರಾಜ್ಯದ ಮತ್ತಷ್ಟು ಸುದ್ದಿಗನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:11 pm, Sun, 5 March 23