ಲಿಂಗಾಯತರು ಮೊದಲಿಂದಲೂ ಹೆಚ್ಚು ಬಿಜೆಪಿ ಪರ ಇದ್ದಾರೆ, ಅದೇನು ಹೊಸದಲ್ಲ; ಸಚಿವ ಸತೀಶ್ ಜಾರಕಿಹೊಳಿ
ಬಿಜೆಪಿಯವರ ಜತೆ ಹೆಚ್ಚಿನ ಲಿಂಗಾಯತರು ಇದ್ದಾರೆ ಅಷ್ಟೇ. ಬಿಜೆಪಿ ರಾಜ್ಯ ಘಟಕದ ನೂತನ ಅಧ್ಯಕ್ಷ ವಿಜಯೇಂದ್ರ ಅವರಿಗೆ ಮುಂದೆ ಹೆಚ್ಚಿನ ಹೋರಾಟಗಳಿವೆ. ಆ ಎಲ್ಲ ಜವಾಬ್ದಾರಿ ನಿರ್ವಹಿಸುತ್ತಾರೆ ಎಂದು ಅವರಿಗೆ ಆ ಸ್ಥಾನ ಕೊಟ್ಟಿದ್ದಾರೆ. ನೋಡೋಣ, ಮುಂದೆ ಲೋಕಸಭಾ ಚುನಾವಣೆ ಇದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

ಚಾಮರಾಜನಗರ, ನವೆಂಬರ್ 15: ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಲಿಂಗಾಯತ ಮತಗಳನ್ನು ಸೆಳೆಯುತ್ತಾರೆ ಎನ್ನುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಚಿವ ಸತೀಶ್ ಜಾರಕಿಹೊಳಿ (Satish Jarkiholi), ಲಿಂಗಾಯತರು (Lingayat) ಮೊದಲಿಂದಲೂ ಹೆಚ್ಚು ಬಿಜೆಪಿ ಪರ ಇದ್ದಾರೆ. ಅದೇನು ಹೊಸದಲ್ಲ ಎಂದಿದ್ದಾರೆ. ಚಾಮರಾಜನಗರದಲ್ಲಿ ಮಾತನಾಡಿದ ಅವರು, ಲಿಂಗಾಯತರು ಮೊದಲಿಂದಲೂ ಹೆಚ್ಚು ಬಿಜೆಪಿ ಪರ ಇದ್ದಾರೆ. ನಮ್ಮ ಜತೆ ಇರುವವರು ಇದ್ದಾರೆ. ಅವರು ಬಂದ ತಕ್ಷಣ ಏನು ವ್ಯತ್ಯಾಸ ಆಗಲ್ಲ ಎಂದು ಹೇಳಿದ್ದಾರೆ.
ಬಿಜೆಪಿಯವರ ಜತೆ ಹೆಚ್ಚಿನ ಲಿಂಗಾಯತರು ಇದ್ದಾರೆ ಅಷ್ಟೇ. ಬಿಜೆಪಿ ರಾಜ್ಯ ಘಟಕದ ನೂತನ ಅಧ್ಯಕ್ಷ ವಿಜಯೇಂದ್ರ ಅವರಿಗೆ ಮುಂದೆ ಹೆಚ್ಚಿನ ಹೋರಾಟಗಳಿವೆ. ಆ ಎಲ್ಲ ಜವಾಬ್ದಾರಿ ನಿರ್ವಹಿಸುತ್ತಾರೆ ಎಂದು ಅವರಿಗೆ ಆ ಸ್ಥಾನ ಕೊಟ್ಟಿದ್ದಾರೆ. ನೋಡೋಣ, ಮುಂದೆ ಲೋಕಸಭಾ ಚುನಾವಣೆ ಇದೆ. ಅದಾದ ಮೇಲೆ ಫೈನಲ್ ಮ್ಯಾಚ್, 2028 ರ ವಿಧಾನಸಭಾ ಚುನಾವಣೆ ಇದೆ. ಅವರು ಯಾವ ರೀತಿ ಸಂಘಟನೆ ಮಾಡ್ತಾರೆ, ಪಕ್ಷ ಯಾವರೀತಿ ಸಹಕಾರ ನೀಡುತ್ತಾರೆ ಕಾದು ನೋಡಬೇಕು ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಸಿಎಂ ಬದಲಾವಣೆ ಇಲ್ಲ: ಸತೀಶ್ ಜಾರಕಿಹೊಳಿ
ಸಿಎಂ ಬದಲಾವಣೆ ವಿಚಾರ ಮುಗಿದು ಹೋದ ಕಥೆ. ಆ ಬಗ್ಗೆ ಪದೇ ಪದೇ ಹೇಳೋದು ಏನು ಇಲ್ಲ. ಸಿಎಂ ಬದಲಾವಣೆ ಅಂತೂ ಇಲ್ಲವೇ ಇಲ್ಲ. ಸಿಎಂ ಇದಾರೆ, ಸಿದ್ದರಾಮಯ್ಯ ಗಟ್ಟಿಯಾಗಿದ್ದಾರೆ ಅಷ್ಟೇ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಆ ಮೂಲಕ ಸಿಎಂ ಬದಲಾವಣೆ ಇಲ್ಲ ಎಂಬ ಸಂದೇಶವನ್ನು ಡಿಕೆ ಶಿವಕುಮಾರ್ ಬಣಕ್ಕೆ ರವಾನಿಸಿದ್ದಾರೆ.
ಜೆಡಿಎಸ್, ಬಿಜೆಪಿ ನಾಯಕರ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅದೆಲ್ಲಾ ಸಿಎಂ, ಡಿಸಿಎಂ ಹಂತದಲ್ಲಿ ಚರ್ಚೆ ನಡೆಯುತ್ತಿದೆ. ನಮ್ಮ ಹಂತದಲ್ಲಿ ಅದೆಲ್ಲ ಏನಿಲ್ಲ. ಜಿಟಿ ದೇವೇಗೌಡ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಜೆಡಿಎಸ್ ಸೇರುವ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಮುದ್ರಕ್ಕೆ ಗಂಗಾ ಜಲವೂ ಬರುತ್ತೆ, ಚರಂಡಿ ನೀರೂ ಬರುತ್ತೆ: ಗೌರಿಶಂಕರ್ ಕಾಂಗ್ರೆಸ್ ಸೇರ್ಪಡೆಗೆ ಕೆಎನ್ ರಾಜಣ್ಣ ಅಸಮಾಧಾನ
ಬಿಜೆಪಿ ನಾಯಕ ವಿ ಸೋಮಣ್ಣ ಕಾಂಗ್ರೆಸ್ ಸೇರುತ್ತಾರೆ ಎನ್ನುವ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಅವೆಲ್ಲ ನಡೆಯುತ್ತಿವೆ, ಕಾದು ನೋಡೋಣ ಎಂದು ಹೇಳಿದ್ದಾರೆ.
ಇನ್ನಷ್ಟು ರಾಜಕೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ