ಪಂಚಮಸಾಲಿ ಸಮಾವೇಶದಲ್ಲಿ ಸಿಎಂ BSY ವಿರುದ್ಧ ಯತ್ನಾಳ್​ ಗುಡುಗು.. ಹೈಕಮಾಂಡ್​ನಿಂದ ಬಂತು ಬುಲಾವ್

ಇಂದು ನಡೆದು ಪಂಚಮಸಾಲಿ ಸಮುದಾಯದ ಸಮಾವೇಶದಲ್ಲಿ ಭಾಗವಹಿಸಿ ರಾಜ್ಯ ಸರ್ಕಾರ ಹಾಗೂ ಸಿಎಂ ಬಿ.ಎಸ್​.ಯಡಿಯೂರಪ್ಪ ವಿರುದ್ಧ ಗುಡುಗಿದ್ದ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಇದೀಗ ದೆಹಲಿಗೆ ತೆರಳಿದ್ದಾರೆ. ರಾತ್ರಿ 9.30ರ ಫ್ಲೈಟ್​ನಲ್ಲಿ ಶಾಸಕ ಯತ್ನಾಳ್ ದೆಹಲಿಗೆ ತೆರಳಿದ್ದಾರೆ.

  • TV9 Web Team
  • Published On - 22:12 PM, 21 Feb 2021
ಪಂಚಮಸಾಲಿ ಸಮಾವೇಶದಲ್ಲಿ ಸಿಎಂ BSY ವಿರುದ್ಧ ಯತ್ನಾಳ್​ ಗುಡುಗು.. ಹೈಕಮಾಂಡ್​ನಿಂದ ಬಂತು ಬುಲಾವ್
ಬಸನಗೌಡ ಪಾಟೀಲ್​ ಯತ್ನಾಳ್

ಬೆಂಗಳೂರು: ಇಂದು ನಡೆದು ಪಂಚಮಸಾಲಿ ಸಮುದಾಯದ ಸಮಾವೇಶದಲ್ಲಿ ಭಾಗವಹಿಸಿ ರಾಜ್ಯ ಸರ್ಕಾರ ಹಾಗೂ ಸಿಎಂ ಬಿ.ಎಸ್​.ಯಡಿಯೂರಪ್ಪ ವಿರುದ್ಧ ಗುಡುಗಿದ್ದ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಇದೀಗ ದೆಹಲಿಗೆ ತೆರಳಿದ್ದಾರೆ. ರಾತ್ರಿ 9.30ರ ಫ್ಲೈಟ್​ನಲ್ಲಿ ಶಾಸಕ ಯತ್ನಾಳ್ ದೆಹಲಿಗೆ ತೆರಳಿದ್ದಾರೆ.ಪಂಚಮಸಾಲಿ ಸಮಾವೇಶ ಮುಗಿಸಿದ ಬಳಿಕ ಶಾಸಕ ದೆಹಲಿಗೆ ತೆರಳಿದ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್​.ಯಡಿಯೂರಪ್ಪರ ವಿರುದ್ಧ ಗುಡುಗಿದ್ದಕ್ಕೆ ಹೈಕಮಾಂಡ್​ ಬುಲಾವ್​ ನೀಡಿದೆಯಾ ಎಂಬ ಪ್ರಶ್ನೆ ಹಲವರಲ್ಲಿ ಮೂಡಿದೆ.

ಈ ನಡುವೆ, ಶಾಸಕ ಯತ್ನಾಳ್​ರಿಂದ ವರಿಷ್ಠರು ವಿವರಣೆ ಪಡೆಯುವ ಸಾಧ್ಯತೆಯಿದೆ. ಶಾಸಕ ಸಿಎಂ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ವಿರುದ್ಧ ಕಟುವಾಗಿ ಹೇಳಿಕೆ ನೀಡಿದ್ದರು. ಜೊತೆಗೆ, ಸರ್ಕಾರದ ವಿರುದ್ಧವೂ ಪದೇಪದೆ ಟೀಕೆ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ, ಹೈಕಮಾಂಡ್ ಕೆಲ ದಿನಗಳ ಹಿಂದೆ ನೋಟಿಸ್​ ನೀಡಿತ್ತು. ಯತ್ನಾಳ್​​ಗೆ ಕಾರಣ ಕೇಳಿ ನೋಟಿಸ್​ ನೀಡಿತ್ತು.

ನೋಟಿಸ್​ಗೆ 11 ಪುಟದ ಸುದೀರ್ಘ ಉತ್ತರ ಬರೆದಿದ್ದ ಯತ್ನಾಳ್ ತಮ್ಮ ಉತ್ತರದಲ್ಲೂ ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ಆರೋಪ ಮಾಡಿದ್ದರು. ಬಳಿಕ ಪಂಚಮಸಾಲಿ ಹೋರಾಟದಲ್ಲೂ ಮುಂಚೂಣಿಯಲ್ಲಿದ್ದರು. ಸಮುದಾಯದ ಹೋರಾಟದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡು ಸರ್ಕಾರಕ್ಕೆ ಮುಜುಗರ ಉಂಟುಮಾಡಿದ್ದರು. ಇದಲ್ಲದೆ, 3 ದಿನಗಳ ಹಿಂದೆ ರಾಜ್ಯ ಬಿಜೆಪಿ ಉಸ್ತುವಾರಿ ಭೇಟಿಯ ವೇಳೆ ಕೆಲ ನಿಗಮ ಮಂಡಳಿ ಅಧ್ಯಕ್ಷರಿಂದ ಯತ್ನಾಳ್ ವಿರುದ್ಧ ದೂರು ನೀಡಲಾಗಿತ್ತು.

ಇದೀಗ, ಸಮಾವೇಶದಲ್ಲೂ ಅಬ್ಬರದ ಮಾತುಗಳನ್ನಾಡಿದ್ದಕ್ಕೆ ಯತ್ನಾಳ್​ಗೆ ಹೈಕಮಾಂಡ್​​​ ಬುಲಾವ್ ಕೊಟ್ಟಿದೆ ಎಂದು ತಿಳಿದುಬಂದಿದೆ. ಎಲ್ಲ ಬೆಳವಣಿಗೆಗಳ ಕುರಿತು ವಿವರಣೆ ಪಡೆಯುವ ಸಾಧ್ಯತೆಯಿದೆ.

BASANAGOUDA PATIL YATNAL LEAD 2

ಬಸನಗೌಡ ಪಾಟೀಲ್​ ಯತ್ನಾಳ್

‘ನೊಟೀಸ್ ಕೊಟ್ಟರೆ ನನ್ನ ಬಾಯಿ ಬಂದ್ ಆಗಲ್ಲ’
ಅಂದ ಹಾಗೆ, ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿಗಾಗಿ ಹೋರಾಟದ ಭಾಗವಾಗಿ ಇಂದು ಆಯೋಜಿಸಲಾಗಿದ್ದ ಬೃಹತ್​ ಸಮಾವೇಶದಲ್ಲಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ನೊಟೀಸ್ ಕೊಟ್ಟರೆ ನನ್ನ ಬಾಯಿ ಬಂದ್ ಆಗಲ್ಲ. ಇವರ ನಾಟಕ ಕಂಪನಿಯ ಬಗ್ಗೆ ನನಗೆ ಎಲ್ಲಾ ಗೊತ್ತಿದೆ. ನೊಟೀಸ್ ಕೊಟ್ಟರೆ ಅಂಜುವ ಮಗ ಅಲ್ಲ. ಆ ರೀತಿ ತಿಳಿದುಕೊಂಡಿದ್ದರೆ ಕುರ್ಚಿ ಖಾಲಿ ಮಾಡಬೇಕಾಗುತ್ತೆ. ಹಲವರು ಈಗ 3B ಮೀಸಲಾತಿ ಕೊಟ್ಟಿದ್ದೇವೆ ಎಂದು ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಇದು ಎಲ್ಲಾ ಲಿಂಗಾಯತರಿಗೆ ಕೊಟ್ಟಿದ್ದಾರೆ. ಇದನ್ನು ಪದೇಪದೆ ಹೇಳಿಕೊಳ್ಳುವ ಅವಶ್ಯಕತೆ ನಮಗೆ ಇಲ್ಲ. 2A ಮೀಸಲಾತಿಗಾಗಿ ಪದೇಪದೆ ಮನವಿ ಮಾಡುತ್ತಿದ್ದೇವೆ ಎಂದು ವಾಗ್ದಾಳಿ ನಡೆಸಿದರು.

ಮೀಸಲಾತಿಗಾಗಿ 25 ಸಂಸದರನ್ನು ಕರೆದುಕೊಂಡು ಹೋಗಲು ಹೇಳಿದ್ದಾರೆ. ಆದರೆ, ಇದಕ್ಕಾಗಿ ನಾನ್ಯಾಕೆ ದೆಹಲಿಗೆ ಹೋಗಲಿ. ಲಿಂಗಾಯತರಿಗೆ OBC ಸಿಗಲು ಬೇಕಾದರೆ ದೆಹಲಿಗೆ ಹೋಗುತ್ತೇನೆ. ಸಂಸದರನ್ನು ಕೂಡ ಕರೆದುಕೊಂಡು ಹೋಗುತ್ತೇನೆ. ಆದರೆ, 2A ಮೀಸಲಾತಿಗಾಗಿ ನಾನ್ಯಾಕೆ ದೆಹಲಿಗೆ ಹೋಗಲಿ ಎಂದು ಯತ್ನಾಳ್ ಪ್ರಶ್ನಿಸಿದರು.

‘ಮೀಸಲಾತಿ ನೀಡಲು ಸಿಎಂ ಯಡಿಯೂರಪ್ಪಗೇ ಮನಸ್ಸಿಲ್ಲ’
ಮೀಸಲಾತಿ ನೀಡಲು ಸಿಎಂ ಯಡಿಯೂರಪ್ಪಗೇ ಮನಸ್ಸಿಲ್ಲ. ಹೋರಾಟಕ್ಕೆ ಹೋಗಬೇಡಿ ಎಂದು ಖುದ್ದು ಸಿಎಂ ಹೇಳಿದ್ದಾರೆ. ಇಬ್ಬರು ಸಚಿವರಿಗೆ ಖುದ್ದು ಸಿಎಂ ಬಿಎಸ್‌ವೈ ಹೇಳಿದ್ದಾರೆ. ಸಿಎಂ ಮತ್ತೆ ಕೇಂದ್ರದತ್ತ ಬೊಟ್ಟು ಮಾಡಿದ್ರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಇಬ್ಬರಿಗೆ ಹೇಳಿದ್ದೇವೆ ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಹೇಳಿದರು.

ಸಿಎಂ ಯಡಿಯೂರಪ್ಪರಿಂದ ಹೋರಾಟ ದಾರಿ ತಪ್ಪಿಸುವ ಯತ್ನ ನಡೆಯುತ್ತಿದೆ. ಹಾಗಾಗಿ, ಪಕ್ಷಾತೀತವಾಗಿ ನಮ್ಮ ಹೋರಾಟ ಬೆಂಬಲಿಸುವಂತೆ ಮನವಿ ಮಾಡುತ್ತೇನೆ. ಪಂಚಮಸಾಲಿಗರಿಗೆ ಶಾಸಕ ಬಸನಗೌಡ ಯತ್ನಾಳ್ ಮನವಿ ಮಾಡಿದರು. ನಾಳೆಯಿಂದ ಧರಣಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ. ಸಮುದಾಯದ ಸಹಕಾರದಿಂದ ಹೋರಾಟ ಯಶಸ್ವಿಯಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಮಾ.4ರೊಳಗೆ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸದಿದ್ರೆ ಅಮರಣಾಂತ ಸತ್ಯಾಗ್ರಹ -ಜಯಮೃತ್ಯುಂಜಯಶ್ರೀ ವಾರ್ನಿಂಗ್​

ಇದನ್ನೂ ಓದಿ: ನೊಟೀಸ್ ಕೊಟ್ಟರೆ ನನ್ನ ಬಾಯಿ ಬಂದ್ ಆಗಲ್ಲ, ನಾವು ಮೀಸಲಾತಿ ಪಡೆದೇ ಹೋಗುತ್ತೇವೆ: ಬಸನಗೌಡ ಪಾಟೀಲ ಯತ್ನಾಳ್