ಅವರು ನಮ್ಮ ಬಗ್ಗೆ ಯೋಚಿಸಲ್ಲ, ನಾವೇಕೆ ಅವರ ಬಗ್ಗೆ ಯೋಚಿಸಬೇಕು? ಇಂಗ್ಲೆಂಡ್ಗೆ ರೋಹಿತ್ ಶರ್ಮಾ ತಿರುಗೇಟು
ಮೈದಾನ ಎರಡೂ ತಂಡಗಳಿಗೆ ಒಂದೇ ಆಗಿರುತ್ತದೆ. ಈ ಚರ್ಚೆ ಏಕೆ ಆರಂಭವಾಯಿತು ಎಂದು ನನಗೆ ತಿಳಿಯುತ್ತಿಲ್ಲ ಎಂದು ರೋಹಿತ್ ಶರ್ಮಾ ಮಾತು ಆರಂಭಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ನಲ್ಲಿ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡಿ ಗೆದ್ದಿತ್ತು. ಸೋಲನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲದ ಇಂಗ್ಲೆಂಡ್ ಆಟಗಾರರು ಪಿಚ್ ಅನ್ನು ದೂರಿದ್ದರು. ಚೆನ್ನೈ ಸ್ಟೇಡಿಯಂ ಐದು ದಿನದ ಟೆಸ್ಟ್ ಆಡಲು ಸರಿಯಾದ ಪಿಚ್ ಅಲ್ಲ ಎಂದು ಹೇಳಿದ್ದರು. ಅಲ್ಲದೆ, ಈ ಪಿಚ್ ಟೀಂ ಇಂಡಿಯಾಗೆ ಸಹಕಾರಿಯಾಗುವ ರೀತಿಯಲ್ಲಿದೆ ಎಂದೂ ಹೇಳಿದ್ದರು. ಇದಕ್ಕೆ ಟೀಂ ಇಂಡಿಯಾ ಓಪನರ್ ರೋಹಿತ್ ಶರ್ಮಾ ತಿರುಗೇಟು ನೀಡಿದ್ದು, ಅವರು ನಮ್ಮ ಬಗ್ಗೆ ಯೋಚಿಸಲ್ಲ, ನಾವೇಕೆ ಅವರ ಬಗ್ಗೆ ಯೋಚಿಸಲಿ ಎಂದು ಪ್ರಶ್ನೆ ಮಾಡಿದ್ದಾರೆ.
ಮೈದಾನ ಎರಡೂ ತಂಡಗಳಿಗೆ ಒಂದೇ ಆಗಿರುತ್ತದೆ. ಈ ಚರ್ಚೆ ಏಕೆ ಆರಂಭವಾಯಿತು ಎಂದು ನನಗೆ ತಿಳಿಯುತ್ತಿಲ್ಲ. ಭಾರತದಲ್ಲಿ ಪಿಚ್‌ಗಳನ್ನು ಹಲವು ವರ್ಷಗಳಿಂದ ಒಂದೇ ರೀತಿಯಲ್ಲಿ ತಯಾರಿಸಲಾಗುತ್ತಿದೆ. ಆ ನಿಟ್ಟಿನಲ್ಲಿ ಯಾವುದೇ ಬದಲಾವಣೆಗಳಾಗಿವೆ ಎಂದು ನಾನು ಭಾವಿಸುವುದಿಲ್ಲ ಎಂದು ಬಿಸಿಸಿಐ ಟ್ವೀಟ್ ಮಾಡಿದ ವಿಡಿಯೋದಲ್ಲಿ ರೋಹಿತ್ ಹೇಳಿದ್ದಾರೆ.
ಪ್ರತಿ ತಂಡವೂ ಹೋಂ ಪಿಚ್ ಅನುಕೂಲವನ್ನು ಸಂಪೂರ್ಣವಾಗಿ ಬಳಸಿಕೊಳ್ಳುತ್ತದೆ. ನಾವು ವಿದೇಶಕ್ಕೆ ಆಡಲು ಹೋದಾಗ ಅಲ್ಲಿಯೂ ನಮಗೆ ಇದೇ ರೀತಿ ಆಗುತ್ತದೆ. ಅವರಿಗೆ ಹೋಂ ಪಿಚ್ ಅನುಕೂಲ ಸಿಗುತ್ತದೆ. ಅವರು ನಮ್ಮ ಬಗ್ಗೆ ಯೋಚಿಸುವುದಿಲ್ಲ. ಹೀಗಿರುವಾಗ ನಾವೇಕೆ ಅವರ ಬಗ್ಗೆ ಯೋಚಿಸಬೇಕು. ನಾವು ಏನು ಇಷ್ಟಪಡುತ್ತೇವೆ ಮತ್ತು ನಮ್ಮ ತಂಡದ ಆದ್ಯತೆ ಏನು ಎಂಬುದನ್ನು ತಿಳಿದುಕೊಂಡು ಅದನ್ನೇ ಮಾಡಬೇಕು. ಪಿಚ್ ಸಿದ್ಧಪಡಿಸುವ ಬಗ್ಗೆ ಐಸಿಸಿ ನಿಯಮವನ್ನು ಮಾಡಲು ಹೇಳಿ ಎಂದು ಹೇಳುವ ಮೂಲಕ ಇಂಗ್ಲೆಂಡ್ಗೆ ಬಿಸಿ ಮುಟ್ಟಿಸಿದ್ದಾರೆ.
?️?️ Every team has the right to home advantage, reckons @ImRo45. @Paytm #INDvENG #TeamIndia pic.twitter.com/ZbF7ufj01M
— BCCI (@BCCI) February 21, 2021
ಪಿಚ್ ಬಗ್ಗೆ ದೂರುವುದನ್ನು ಬಿಟ್ಟು, ಯಾವ ಆಟಗಾರ ಹೇಗೆ ಬೌಲಿಂಗ್ ಮಾಡುತ್ತಿದ್ದಾರೆ ಎಂಬುದನ್ನು ಗಮನಿಸಿ. ಕೊನೆಯಲ್ಲಿ ಯಾವ ತಂಡ ಉತ್ತಮವಾಗಿ ಆಡುತ್ತೆದೆಯೋ ಅವರೇ ಗೆಲ್ಲುತ್ತಾರೆ ಎಂದು ರೋಹಿತ್ ಹೇಳಿದ್ದಾರೆ.
ಇದನ್ನೂ ಓದಿ: India vs England: ಕುಣಿಲಾಗದವರು ನೆಲ ಡೊಂಕು ಎಂದರು.. ಚೆನ್ನೈ ಪಿಚ್ ಟೀಕಿಸಿದವರ ವಿರುದ್ಧ ಗಾವಸ್ಕರ್ ಗರಂ
Published On - 10:10 pm, Sun, 21 February 21