ವೇದಿಕೆ ಮೇಲೆ ಅನ್ನಭಾಗ್ಯ ಯೋಜನೆ ಟೀಕಿಸಿದ ಬಿಜೆಪಿ ಸಂಸದ ಎಸ್​​ ಮುನಿಸ್ವಾಮಿ

ಕೋಲಾರ ಜಿಲ್ಲೆ ಮಾಲೂರು ಪಟ್ಟಣದಲ್ಲಿ ಇಂದು ಅನ್ನಭಾಗ್ಯ ಯೋಜನೆಯ ಹಣ ವರ್ಗಾವಣೆಗೆ ಚಾಲನೆ ನೀಡಲಾಯಿತು. ಈ ವೇಳೆ ವೇದಿಕೆ ಮೇಲೆ ಅನ್ನಭಾಗ್ಯ ಯೋಜನೆ ಬಗ್ಗೆ ಸಂಸದ ಎಸ್​. ಮುನಿಸ್ವಾಮಿ ಟೀಕಿಸಿದ್ದಾರೆ.

ವೇದಿಕೆ ಮೇಲೆ ಅನ್ನಭಾಗ್ಯ ಯೋಜನೆ ಟೀಕಿಸಿದ ಬಿಜೆಪಿ ಸಂಸದ ಎಸ್​​ ಮುನಿಸ್ವಾಮಿ
ಸಂಸದ ಎಸ್.ಮುನಿಸ್ವಾಮಿ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Jul 15, 2023 | 3:51 PM

ಕೋಲಾರ: ಅನ್ನಭಾಗ್ಯ ಯೋಜನೆ ಅಡಿ ಹತ್ತು ಕೆಜಿ ಅಕ್ಕಿ ನೀಡುವುದಾಗಿ ಹೇಳಿದ್ದರು. ಆದರೆ ಈಗ ಮತ್ತೆ ಐದು ಕೆಜಿ ಅನ್ನೋದು ಸರಿಯಲ್ಲ ಎಂದು ಬಿಜೆಪಿ ಸಂಸದ ಎಸ್. ಮುನಿಸ್ವಾಮಿ (S Muniswamy) ಹೇಳಿದ್ದಾರೆ. ಜಿಲ್ಲೆಯ ಮಾಲೂರು ಪಟ್ಟಣದಲ್ಲಿ ಅನ್ನಭಾಗ್ಯ ಯೋಜನೆಯ ಹಣ ವರ್ಗಾವಣೆಗೆ ಚಾಲನೆ ಕಾರ್ಯಕ್ರಮ ವೇದಿಕೆ ಮೇಲೆ ಟೀಕಿಸಿದ್ದಾರೆ. ಕೇಂದ್ರ ಸರ್ಕಾರ ಪ್ರತಿ ಫಲಾನುಭವಿಗೆ 5 ಕೆಜಿ ಅಕ್ಕಿ ನೀಡುತ್ತಿದೆ. ಇನ್ನುಳಿದ 10 ಕೆಜಿ ಅಕ್ಕಿಯ 340 ರೂ. ಅಕೌಂಟ್​ಗಳಿಗೆ ಹಾಕಬೇಕು ಎಂದಿದ್ದಾರೆ.

10 ಕೆಜಿ ಕೊಟ್ಟರೆ ನುಡಿದಂತೆ ನಡೆದ ಸರ್ಕಾರವೆಂದು ನಾವೇ ಹೇಳುತ್ತೇವೆ. ಗ್ಯಾರಂಟಿ ಹೇಳುವಾಗ ಷರತ್ತು ಇರಲಿಲ್ಲ, ಈಗ ಕಂಡಿಷನ್ ಅಂತಿದ್ದಾರೆ. ಕೊರೊನಾ ವೇಳೆ ಯಾವುದೇ ಕಂಡಿಷನ್ ಇಲ್ಲದೆ ಲಸಿಕೆ ಹಾಕಿದ್ದೇವೆ. ಸ್ವಚ್ಚ ಭಾರತ್ ಮಿಷನ್​ ಯೋಜನೆ ಅಡಿ ಶೌಚಾಲಯಗಳ ನಿರ್ಮಾಣಕ್ಕೆ ಯಾವುದೇ ಕಂಡಿಷನ್ ಹಾಕಿಲ್ಲ ಎಂದು ಹೇಳಿದರು.

ಇದನ್ನೂ ಓದಿ: Gruha Lakshmi Scheme: ಗೃಹಲಕ್ಷ್ಮೀ ಯೋಜನೆ ಜಾರಿಗೆ ಪ್ರಜಾಪ್ರತಿನಿಧಿ ನೇಮಕಕ್ಕೆ ಸರ್ಕಾರ ನಿರ್ಧಾರ: ಮಾರ್ಗಸೂಚಿ ಪ್ರಕಟ

ಒಂದೆಡೆ ಅನ್ನಭಾಗ್ಯ ಯೋಜನೆಗೆ ಚಾಲನೆ ಕಾರ್ಯಕ್ರಮದಿಂದಾಗಿ ವೇದಿಕೆ ಪಕ್ಕದ ಕಾಲೇಜಿನಲ್ಲಿ ಕಿರುಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಸೌಂಡ್​​ನಿಂದಾಗಿ ತೊಂದರೆ ಉಂಟಾಗಿದೆ. ಜಿಲ್ಲೆಯ ಮಾಲೂರು ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಒಂದೆಡೆ ಪಿಯುಸಿ ಮಕ್ಕಳಿಗೆ ಕಿರುಪರೀಕ್ಷೆ ನಡೆಯುತ್ತಿದೆ.

ಇದನ್ನೂ ಓದಿ: ಗೃಹಲಕ್ಷ್ಮೀ ಯೋಜನೆಗೆ ಯಾವಾಗಿನಿಂದ ಅರ್ಜಿ ಸಲ್ಲಿಕೆ? ಯಾರು ಅರ್ಹರು? ಹೇಗೆ ಸಲ್ಲಿಸಬೇಕು? ಸಂಪೂರ್ಣ ಮಾಹಿತಿ ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್​

ಆಯೋಜಕರ ಬೇಜವಬ್ದಾರಿತನದಿಂದ ವಿದ್ಯಾರ್ಥಿನಿಯರು ಪರದಾಡಿದ್ದಾರೆ. ಜೋರು ಧ್ವನಿವರ್ಧಕದ ಮಧ್ಯೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಂತ್ತಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್ ಹಾಗೂ ಆಹಾರ ಸಚಿವ ಕೆಹೆಚ್ ಮುನಿಯಪ್ಪ‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ