ದಾವಣಗೆರೆ: ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಮತ್ತು ಸಚಿವ ಮುರುಗೇಶ್ ನಿರಾಣಿ (Murugesh Nirani) ಮಧ್ಯೆ ಕೆಲ ದಿನಗಳಿಂದ ವಾಕ್ ಸಮರ ನಡೆಯುತ್ತಿದೆ. ಪರಸ್ಪರವಾಗಿ ಇಬ್ಬರೂ ನಾಯಕರು ಮಾತಿನಲ್ಲಿಯೇ ಕುಟುಕುತ್ತಿದ್ದಾರೆ. ಇತ್ತೀಚೆಗೆ ಶಾಸಕ ಯತ್ನಾಳ್ ಸಚಿವ ಮುರುಗೇಶ್ ನಿರಾಣಿ ಅವರನ್ನು ಪಿಂಪ್ ಸಚಿವ (PIMP minister) ಎಂದು ಹೇಳಿದ್ದರು. ಸದ್ಯ ಈ ಹೇಳಿಕೆಗೆ ಮನನೊಂದ ಸಚಿವ ಮುರುಗೇಶ್ ನಿರಾಣಿ ಭಾವುಕರಾಗಿದ್ದಾರೆ. ಬಳಿಕ ಮಾತನಾಡಿ, ಯತ್ನಾಳ್ ಎಲ್ಲರ ಬಗ್ಗೆ ಹಗುರವಾಗಿ ಮಾತನಾಡುತ್ತಲೇ ಇದ್ದಾರೆ. ಜೆಡಿಎಸ್ಗೆ ಹೋಗಿ ಮುಸ್ಲಿಂ ಟೋಪಿ ಹಾಕಿದ್ದು ಎಲ್ಲರಿಗೂ ಗೊತ್ತಿದೆ. ಯತ್ನಾಳ್ ಡೋಂಗಿ ರಾಜಕಾರಣ ಮಾಡುತ್ತಿದ್ದಾರೆ. ನಾವು ಕೃಷ್ಣಾ, ಘಟಪ್ರಭಾ ನದಿಯ ನೀರು ಕುಡಿದು ಬೆಳೆದಿದ್ದೇವೆ. ನಾವು ಸುಮ್ಮನೆ ಇದ್ದೀವಿ ಅಂದರೆ ದೌರ್ಬಲ್ಯ ಅಲ್ಲ. ಬಸನಗೌಡ ಪಾಟೀಲ್ ಯತ್ನಾಳ್ ಏನೂ ಸತ್ಯ ಹರಿಶ್ಚಂದ್ರ ಅಲ್ಲ. ದೊಡ್ಡ ಸಮುದಾಯದಲ್ಲಿ ಹುಟ್ಟಿದ್ದೀರಿ ಗೌರವದಿಂದ ಮಾತಾಡಿ ಎಂದು ಸಚಿವ ನಿರಾಣಿ ವಾಗ್ದಾಳಿ ಮಾಡಿದರು.
ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಜಯಮೃತ್ಯುಂಜ ಸ್ವಾಮೀಜಿ ರಾಜಕೀಯ ಮಾಡುತ್ತಿದ್ದಾರೆ. ಇದರಲ್ಲಿ ಎರಡು ಮಾತಿಲ್ಲ. ಕಳೆದ ಕಾಂಗ್ರೆಸ್ ಸರ್ಕಾರ ಇದ್ದಾಗ ಅಂದಿನ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕಾಂತರಾಜ 2ಎ ಮೀಸಲಾತಿ ನಿರಾಕರಿಸಿದ್ದರು. ಆಗ ಈ ಸ್ವಾಮೀಜಿ ಏನು ಮಾಡುತ್ತಿದ್ದರು. ಈಗ ನಾವು ಹಂತ ಹಂತವಾಗಿ ನಾವು ಬಿಜೆಪಿ ಅವರು ಮೀಸಲಾತಿ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಿದೆ.
ಇದನ್ನೂ ಓದಿ: ನಾಲಿಗೆ ಹರಿದು ಮಾತನಾಡಿದರೆ ನಾಲಿಗೆ ಕತ್ತರಿಸುವ ಕೆಲಸವಾಗುತ್ತದೆ : ಯತ್ನಾಳ್ಗೆ, ಮುರುಗೇಶ್ ನಿರಾಣಿ ಖಡಕ್ ಎಚ್ಚರಿಕೆ
ಆದರೆ ಸ್ವಾಮೀಜಿ ರಾಜಕೀಯ ಮಾಡುತ್ತಿದ್ದಾರೆ. ನಾನಾಗಿಯೇ ಯತ್ನಾಳ್ ವಿರುದ್ದ ವಾಗ್ದಾಳಿ ಮಾಡಿಲ್ಲ. ಅವರು ನೀಡಿದ ಹೇಳಿಕೆ ಉತ್ತರ ಕೊಟ್ಟಿದ್ದೇನೆ. ಅವರನ್ನ ಸಹಿಸಿಕೊಂಡಿದ್ದು ಆಗಿದೆ. ಈಗ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಸಚಿವ ಮುರಗೇಶ ನಿರಾಣಿ ಹೇಳಿದರು.
ಇನ್ನು ಶಾಸಕ ಯತ್ನಾಳ್ ವಿರುದ್ಧ ಮುರುಗೇಶ್ ನಿರಾಣಿ ಟೀಕೆ ವಿಚಾರವಾಗಿ ಬೆಂಗಳೂರಿನಲ್ಲಿ ಜಯಮೃತ್ಯುಂಜಯಶ್ರೀ ಪ್ರತಿಕ್ರಿಯೆ ನೀಡಿದ್ದು, ಸಚಿವ ಮುರುಗೇಶ್ ನಿರಾಣಿ ಆ ಹುಲಿ ಜೊತೆ ಮಾತನಾಡಲಿ ಎಂದು ಜಯಮೃತ್ಯುಂಜಯಶ್ರೀ ಯತ್ನಾಳರ್ರನ್ನು ಹುಲಿಗೆ ಹೋಲಿಸಿದರು. ಯತ್ನಾಳ್ ಪಕ್ಷದ ಒಳಗೆ ಇದ್ದುಕೊಂಡು ಹೋರಾಟ ಮಾಡಿದ್ದಾರೆ.
ಇದನ್ನೂ ಓದಿ: ಅವರ ಅಪ್ಪಂಗೆ ಹುಟ್ಟಿದ್ರೆ ಸಿಡಿ ಬಿಡುಗಡೆ ಮಾಡಲಿ: ಸಚಿವ ಮುರುಗೇಶ ನಿರಾಣಿಗೆ ಯತ್ನಾಳ್ ಸವಾಲ್
ಅಧಿಕಾರ, ಸಚಿವ ಸ್ಥಾನ ಅಪೇಕ್ಷಿಸದೇ ಹೋರಾಟ ಮಾಡಿದ್ದಾರೆ. ಅವರ ಹೆಸರು ಸಿಎಂ ರೇಸ್ನಲ್ಲಿ ಇದ್ರೂ ಹೋರಾಟ ಮಾಡಿದ್ದಾರೆ. ಜನರ ಹೃದಯದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ನೆಲೆಸಿದ್ದಾರೆ. ಉಂಡು ಮನೆಗೆ ದ್ರೋಹ ಬಗೆಯದೇ ಇರುವ ಮನಸ್ಸು ಅವರದ್ದು ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.