ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಜುಲೈ 28ಕ್ಕೆ ಸಿಎಂ ಪಟ್ಟಕ್ಕೆ ಏರಿ ಒಂದು ವರ್ಷ ಕಳೆಯುತ್ತದೆ. ಈ ಹಿನ್ನೆಲೆ ಜು.28ಕ್ಕೆ ದೊಡ್ಡಬಳ್ಳಾಪುರದಲ್ಲಿ ಬೃಹತ್ ಸಾಧನಾ ಸಮಾವೇಶ ನಡೆಯಲಿದ್ದು, 1 ವರ್ಷದ ಸ್ವಚ್ಛ ಆಡಳಿತ ಬಗ್ಗೆ ಜನರಿಗೆ ಮನವರಿಕೆ ಮಾಡುತ್ತೇವೆ ಎಂದು ಆರೋಗ್ಯ ಸಚಿವ ಡಾಕೆ ಸುಧಾಕರ್ (Dr K Sudhakar) ತಿಳಿಸಿದ್ದಾರೆ. ಇದೇ ವೇಳೆ ಕಾಂಗ್ರೆಸ್ನಿಂದ ಆಗಸ್ಟ್ 3ರಂದು ಸಿದ್ಧರಾಮೋತ್ಸವ ಕಾರ್ಯಕ್ರಮ ನಡೆಸುತ್ತಿರುವ ಬಗ್ಗೆ ಸಚಿವರು ಲೇವಡಿ ಮಾಡಿದರು. ಬಿಜೆಪಿ ಪಕ್ಷದಲ್ಲಿ ವ್ಯಕ್ತಿ ಪೂಜೆ, ಪಲ್ಲಕ್ಕಿ ಉತ್ಸವ ಇಲ್ಲ. ಬಿಜೆಪಿಯಲ್ಲಿ ದೇಶ ಮೊದಲು, ಪಕ್ಷ ಎರಡನೆಯದ್ದು, ಕೊನೆಗೆ ತಾನು. ಆದರೆ ಕಾಂಗ್ರೆಸ್ನಲ್ಲಿ ವ್ಯಕ್ತಿ ಪೂಜೆ ಮಾಡುವುದಕ್ಕೆ ಹೊರಟಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಮಳೆ ಬಂದು 12 ಜಿಲ್ಲೆಯಲ್ಲಿ ಮಳೆ ಗಂಭೀರವಾಗಿ ಹೊಡೆತ ಕೊಟ್ಟಿದೆ. ಇಂಥಹ ಪರಿಸ್ಥಿತಿಯಲ್ಲಿ ಜನರಿಗೆ ನೆರವಾಗುವ ಕಾರ್ಯಕ್ರಮ ಮಾಡಬೇಕು ಎಂದು ಸುಧಾಕರ್ ಹೇಳಿದರು.
ಮೊಟ್ಟೆ, ಹಾಲು ಪೌಷ್ಟಿಕ ಆಹಾರ:
ಮೊಟ್ಟೆ ಅಪೌಷ್ಟಿಕ ಆಹಾರ ಎಂಬ ಎನ್ಇಪಿ ಸಮಿತಿಯ ಶಿಫಾರಸ್ಸಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಸುಧಾಕರ್, ಇದುವರೆಗೂ ನನ್ನ ಜ್ಞಾನಕ್ಕೆ ತಿಳಿದಂತೆ ಮೊಟ್ಟೆ, ಹಾಲು ಪೌಷ್ಠಿಕ ಆಹಾರ. ಅದು ಯಾರು ವರದಿಕೊಟ್ಟಿದ್ದಾರೊ ನನ್ನ ಗಮನಕ್ಕೆ ಇಲ್ಲ. ಎನ್ಇಪಿ ಸಮಿತಿಯ ವರದಿಯ ಬಗ್ಗೆ ನನಗೆ ಮಾಹಿತಿ ಇಲ್ಲ. ಸಮಿತಿಯ ವರದಿಯ ಪಡೆದು ನಾನು ಮಾತನಾಡುತ್ತೇನೆ ಎಂದರು.
ಇದನ್ನೂ ಓದಿ: Onion Price: ಗ್ರಾಹಕರಿಗೆ ಗುಡ್ ನ್ಯೂಸ್; ಇನ್ನು ಗಗನಕ್ಕೇರಲ್ಲ ಈರುಳ್ಳಿ ಬೆಲೆ, ಸರ್ಕಾರದ ಹೊಸ ಪ್ಲಾನ್
75 ದಿನಗಳ ಕಾಲ ಉಚಿತ ಬೂಸ್ಟರ್ ಡೋಸ್ ಅಭಿಯಾನ ನಡೆಯಲಿದ್ದು, ಇಂದು ಸಿಎಂ ಬೊಮ್ಮಾಯಿ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಕೊವಿಡ್ ಪ್ರಭಾವ ಇನ್ನೂ ಇದೆ ಎಂದು ಡಬ್ಲ್ಯುಹೆಚ್ಒ ಹೇಳಿದೆ. ಹೀಗಾಗಿ ಬೂಸ್ಟರ್ ಡೋಸ್ ಲಸಿಕೆಯನ್ನು ತೆಗೆದುಕೊಳ್ಳಿ. ಪ್ರಧಾನಿ ಮೋದಿ ಉಚಿತವಾಗಿ ಲಸಿಕೆ ನೀಡಲು ಹೇಳಿದ್ದಾರೆ. ಬೂಸ್ಟರ್ ಡೋಸ್ ಕೂಡಾ ಉಚಿತವಾಗಿ ಕೊಡುತ್ತಿದ್ದಾರೆ. ಕೊರೊನಾ ಕಡಿಮೆ ಆಗಿದೆ ಎಂದು ನಿರ್ಲಕ್ಷ್ಯ ಮಾಡಬೇಡಿ. 75 ದಿನದೊಳಗೆ ಎಲ್ಲರಿಗೂ ಬೂಸ್ಟರ್ ಡೋಸ್ ನೀಡುವ ಗುರಿ ಇದೆ ಎಂದು ಹೇಳಿದರು.
ಇದನ್ನೂ ಓದಿ: ತೆರೆಗೆ ಬಂದು 3 ತಿಂಗಳ ಬಳಿಕ ‘ಕೆಜಿಎಫ್ 2’ ಚಿತ್ರದಿಂದ ಸೃಷ್ಟಿ ಆಯ್ತು ಯಾವ ಚಿತ್ರವೂ ಮಾಡಿರದ ದಾಖಲೆ
Published On - 12:30 pm, Sat, 16 July 22