AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಿರುಚಿದ ಆಡಿಯೋ ವೈರಲ್ ಮಾಡಿ ನನ್ನ ವಿರುದ್ಧ ಅಪಪ್ರಚಾರ; ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ

ಬಿಜೆಪಿ ಶಾಸಕ ಪ್ರೀತಂಗೌಡ ಅವರದ್ದು ಎನ್ನಲಾದ ಆಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೂರಕ್ಕೆ ನೂರು ಆ ಆಡಿಯೋ ನಂದಲ್ಲ. ತಿರುಚಿದ ಆಡಿಯೋ ವೈರಲ್ ಮಾಡಿ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಶಾಸಕ ಪ್ರೀತಂ ಗೌಡ ಆರೋಪಿಸಿದ್ದಾರೆ.

ತಿರುಚಿದ ಆಡಿಯೋ ವೈರಲ್ ಮಾಡಿ ನನ್ನ ವಿರುದ್ಧ ಅಪಪ್ರಚಾರ; ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ
ಬಿಜೆಪಿ ಶಾಸಕ ಪ್ರೀತಂ ಗೌಡ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Apr 10, 2023 | 4:10 PM

Share

ಹಾಸನ: ಬಿಜೆಪಿ ಶಾಸಕ ಪ್ರೀತಂಗೌಡ ಅವರದ್ದು ಎನ್ನಲಾದ ಆಡಿಯೋ (viral audio) ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೂರಕ್ಕೆ ನೂರು ಆ ಆಡಿಯೋ ನಂದಲ್ಲ. ತಿರುಚಿದ ಆಡಿಯೋ ವೈರಲ್ ಮಾಡಿ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಶಾಸಕ ಪ್ರೀತಂ ಗೌಡ (Preetham Gowda) ಆರೋಪಿಸಿದ್ದಾರೆ. ಈ ಕುರಿತಾಗಿ ಟಿವಿ9 ಜೊತೆ ಮಾತನಾಡಿದ ಅವರು, ಆ ಆಡಿಯೋ ನನ್ನದಲ್ಲ, ಕಟ್ ಮಾಡಿ ಪ್ಲಾಂಟ್ ಮಾಡಲಾಗಿದೆ. ಮುಸಲ್ಮಾನರು ನನಗೆ ಹೆಚ್ಚಾಗಿ ಬೆಂಬಲ ನೀಡುತ್ತಿರುವ ಕಾರಣ ಹೀಗೆ ಮಾಡಿದ್ದಾರೆ ಎಂದು ಆರೋಪಿಸಿದರು. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆಡಿಯೋವನ್ನು ನಾನು ಚೆಕ್ ಮಾಡಿದ್ದೇನೆ, ಅದು ನನ್ನ ಆಡಿಯೋ ಅಲ್ಲವೇ ಅಲ್ಲಾ ಎಂದು ಪ್ರೀತಂ ಗೌಡ ಸ್ಪಷ್ಟನೆ ನೀಡಿದ್ದಾರೆ.

ವೈರಲ್​ ಆದ ಆಡಿಯೋದಲ್ಲಿ ಏನಿದೆ?

ಅಕ್ರಮ ಗೋಮಾಂಸ ಮಾರಾಟ ಕೇಂದ್ರದ ಮೇಲೆ ದಾಳಿ ಮಾಡಿದ್ದ ಪೊಲೀಸರಿಗೆ ವಾಪಸ್ ಬರುವಂತೆ ಫೋನ್​ನಲ್ಲಿ ಮಾತನಾಡಿರುವ ರೀತಿಯ ಆಡಿಯೋ ವೈರಲ್​ ಆಗಿದೆ. ಹಾಸನದ ಶ್ರೀನಗರ ಬಡಾವಣೆಯಲ್ಲಿ ದಾಳಿ ಮಾಡಿದ್ದ ವೇಳೆ ಪೊಲೀಸ್ ಅಧಿಕಾರಿಗಳ ಜೊತೆ ಶಾಸಕರು ಮಾತನಾಡಿದ್ದಾರೆನ್ನಲಾದ ಆಡಿಯೋ ಇದಾಗಿದ್ದು, ಫೋನ್ ಮಾಡಿ ಶಾಸಕರು ಮಾತನಾಡುತ್ತಾರೆ ಎಂದು ಅಧಿಕಾರಿಗಳಿಗೆ ವ್ಯಕ್ತಿ ಓರ್ವ ಫೋನ್ ಕೊಟ್ಟಿದ್ದಾನೆ. ಅಣ್ಣ ಶ್ರೀನಗರ ಏರಿಯಾದ ಮಟನ್ ಅಂಗಡಿ ಮುಚ್ಚಿಸುವುದಕ್ಕೆ ಅಂತಾ ಸರ್ಕಲ್ ಇನ್ಸ್ಪೆಕ್ಟರ್ ಬಂದಿದಾರೆ ಎಂದು ವ್ಯಕ್ತಿ ಹೇಳುತ್ತಾನೆ. ಆಗ ಯಾರು ಎಂದು ಕೇಳಿರುವ ಶಾಸಕರು, ಹಾಸನ ಟೌನ್ ಸರ್ಕಲ್ ಎಂದು ಹೇಳಿ ಇನ್ಸ್ಪೆಕ್ಟರ್​ಗೆ ಫೋನ್​ ಕೊಡಲಾಗುತ್ತದೆ.

ಇದನ್ನೂ ಓದಿ: Congress: ಕಾಂಗ್ರೆಸ್ ನಾಯಕರ ಬಗ್ಗೆ ಮುಸ್ಲಿಂ ನಾಯಕರಿಂದ ತೀವ್ರ ಅಸಮಾಧಾನ; ಕಾರಣ ಇಲ್ಲಿದೆ

ಆ ಕಡೆಯಿಂದ ಯಾರು ಎಂದು ಕೇಳಿದಾಗ ಫೋನ್ ತೆಗೆದುಕೊಂಡು ಮಾತನಾಡಿರುವ ಹಾಸನ ನಗರ ಠಾಣೆ ಇನ್ಸ್ಪೆಕ್ಟರ್ ಯೋಗೇಶ್​ ಎಂದು ಹೇಳಿದ್ದಾರೆ. ಯೋಗೇಶಣ್ಣ ಚುನಾವಣೆ ಸಂದರ್ಭ ಬನ್ನಿ ನಿಮ್ಮ ದಮ್ಮಯ್ಯ ಎಂದಿರುವ ಶಾಸಕರು. ಅವರು ಕೂಡ ನಮ್ಮ ಅಣ್ಣತಮ್ಮಂದ್ರು ಬಾ ಎಂದು ಶಾಸಕರು ಹೇಳಿದ್ದಾರೆ ಎಂದು  ಆಡಿಯೋ ಹೇಳಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಕಾರ್ಯಕರ್ತನೇ ಹಾಸನದ ಜೆಡಿಎಸ್ ಅಭ್ಯರ್ಥಿ, ಬ್ಲ್ಯಾಕ್​ಮೇಲ್​​ ನನ್ನ ಹತ್ತಿರ ನಡೆಯಲ್ಲ: ಭವಾನಿ ರೇವಣ್ಣಗೆ ಕುಮಾರಸ್ವಾಮಿ ಟಾಂಗ್

ಬಿಜೆಪಿ ಶಾಸಕರು ಅಕ್ರಮ ಗೋಮಾಂಸ ಮಾರಾಟಕ್ಕೆ ಬೆಂಬಲ ನೀಡಿದ್ದಾರೆ ಎಂದು ಆರೋಪಿಸಿದ್ದು, ಜೊತೆಗೆ ಶಾಸಕರೇ ಇನ್ಸ್ಪೆಕ್ಟರ್ ಯೋಗೇಶ್ ಜೊತೆ ಮಾತನಾಡಿದ್ದಾರೆ ಎನ್ನಲಾಗುತ್ತಿರುವ ಆಡಿಯೋ ಒಂದು ಸದ್ಯ ವೈರಲ್​ ಆಗಿದೆ. ಚುನಾವಣೆ ಸಂದರ್ಭದಲ್ಲಿ ಶಾಸಕ ಪ್ರೀತಂಗೌಡ ಅವರದ್ದ ಎನ್ನಲಾದ ಆಡಿಯೋ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಿಮರೋಡಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ: ಪೂಜಾರ್, ವಕೀಲ
ತಿಮರೋಡಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ: ಪೂಜಾರ್, ವಕೀಲ
ಎನ್​ಡಿಆರ್​ಎಫ್ ನಿಯಮ ಉಲ್ಲಂಘಿಸಿ ವಯನಾಡ್​ಗೆ ನೆರವು ನೀಡಲಾಗಿದೆ: ಅಶೋಕ
ಎನ್​ಡಿಆರ್​ಎಫ್ ನಿಯಮ ಉಲ್ಲಂಘಿಸಿ ವಯನಾಡ್​ಗೆ ನೆರವು ನೀಡಲಾಗಿದೆ: ಅಶೋಕ
‘ಸಾರಥಿ’ ಸಿನಿಮಾ ಬಿಡುಗಡೆ ಸಮಯದಲ್ಲಿ ಪಟ್ಟ ಕಷ್ಟ ನೆನೆದ ನಿರ್ಮಾಪಕ
‘ಸಾರಥಿ’ ಸಿನಿಮಾ ಬಿಡುಗಡೆ ಸಮಯದಲ್ಲಿ ಪಟ್ಟ ಕಷ್ಟ ನೆನೆದ ನಿರ್ಮಾಪಕ
ಸಮೀರ್​ನನ್ನು ಕೇಳಿಕೊಂಡು 4-5 ಪೊಲೀಸರು ಬಂದಿದ್ದರು: ಆಶಾ, ಗೃಹಿಣಿ
ಸಮೀರ್​ನನ್ನು ಕೇಳಿಕೊಂಡು 4-5 ಪೊಲೀಸರು ಬಂದಿದ್ದರು: ಆಶಾ, ಗೃಹಿಣಿ
ಮುಂಬರುವ ದಿನಗಳಲ್ಲಿ ಮಾಸ್ಕ್​ಮ್ಯಾನ್ ವಿರುದ್ಧವೂ ದೂರು: ಸ್ನೇಹಮಯಿ ಕೃಷ್ಣ
ಮುಂಬರುವ ದಿನಗಳಲ್ಲಿ ಮಾಸ್ಕ್​ಮ್ಯಾನ್ ವಿರುದ್ಧವೂ ದೂರು: ಸ್ನೇಹಮಯಿ ಕೃಷ್ಣ
ಬಿಹಾರ: ಔಂಟಾ-ಸಿಮಾರಿಯಾ ಸೇತುವೆ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಬಿಹಾರ: ಔಂಟಾ-ಸಿಮಾರಿಯಾ ಸೇತುವೆ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ
ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ
‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆ ಸಮಯದ ಸವಾಲು ಹೇಗಿತ್ತು?
‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆ ಸಮಯದ ಸವಾಲು ಹೇಗಿತ್ತು?
ಯುವತಿಯ ಹತ್ಯೆಗೆ ತ್ರಿಕೋನ ಪ್ರಣಯ ಪ್ರಸಂಗ ಕಾರಣವಾಗಿರುವ ಶಂಕೆ
ಯುವತಿಯ ಹತ್ಯೆಗೆ ತ್ರಿಕೋನ ಪ್ರಣಯ ಪ್ರಸಂಗ ಕಾರಣವಾಗಿರುವ ಶಂಕೆ
ಶರಣಗೌಡ ಕಂದ್ಕೂರ್ ನೆರವಿಗೆ ಧಾವಿಸಿದ ಜೆಡಿಎಸ್ ಮತ್ತು ಬಿಜೆಪಿ ಶಾಸಕರು
ಶರಣಗೌಡ ಕಂದ್ಕೂರ್ ನೆರವಿಗೆ ಧಾವಿಸಿದ ಜೆಡಿಎಸ್ ಮತ್ತು ಬಿಜೆಪಿ ಶಾಸಕರು