ಬೇರೆ ದೇಶದ ಲಸಿಕೆಯ ಫಾರ್ಮುಲಾ ತರಿಸಿಕೊಂಡು ನಮ್ಮಲ್ಲಿ ತಯಾರಿಸಿ; ಸಿದ್ದರಾಮಯ್ಯ ಸಲಹೆ

Rajiv Gandhi Death Anniversary: ರಾಜೀವ್ ಗಾಂಧಿಯವರನ್ನು ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ವಿಶೇಷವಾಗಿ ಸ್ಮರಿಸಬೇಕು. ದೂರ ಸಂಪರ್ಕ ಕ್ರಾಂತಿಯಾಗಲಿಕ್ಕೆ ರಾಜೀವ್ ಗಾಂಧಿ ಕಾರಣ ಎಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಮರಿಸಿಕೊಂಡರು.

ಬೇರೆ ದೇಶದ ಲಸಿಕೆಯ ಫಾರ್ಮುಲಾ ತರಿಸಿಕೊಂಡು ನಮ್ಮಲ್ಲಿ ತಯಾರಿಸಿ; ಸಿದ್ದರಾಮಯ್ಯ ಸಲಹೆ
ಸಿದ್ದರಾಮಯ್ಯ

Updated on: May 21, 2021 | 3:38 PM

ಬೆಂಗಳೂರು: ಬೇರೆ ದೇಶಗಳಲ್ಲಿ ಲಸಿಕೆ ತುಂಬಾ ಚೆನ್ನಾಗಿ ವರ್ಕ್ ಆಗ್ತಿದೆಯಂತೆ. ಕೊವ್ಯಾಕ್ಸಿನ್, ಕೊವಿಶೀಲ್ಡ್​ಗಿಂತ ವಿದೇಶದ ಲಸಿಕೆ ಹೆಚ್ಚು ಪರಿಣಾಮಕಾರಿಯಂತೆ. ಅಲ್ಲಿಯ ಲಸಿಕೆಯ ಫಾರ್ಮುಲಾ ತರಿಸಿಕೊಂಡು ಇಲ್ಲಿ ಲಸಿಕೆ ಉತ್ಪಾದನೆ ಮಾಡಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಸರ್ಕಾರಕ್ಕೆ ಸಲಹೆ ನೀಡಿದರು.

ಕೊವಿಡ್ 2ನೇ ಅಲೆ ಬಹಳ ವೇಗವಾಗಿ ಹರಡುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲೂ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದೆ. ಹೀಗೆ ಕೊವಿಡ್ ಹೆಚ್ಚಾಗಲು ಸರ್ಕಾರದ ಉದಾಸೀನತೆಯೇ ಕಾರಣ. ಹೆಸರಿಗೆ ಮಾತ್ರ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ನಾನು ಜಿಲ್ಲಾಧಿಕಾರಿಗಳ ಜತೆ ಸಭೆ ನಡೆಸಲೂ ಅವಕಾಶ ‌ಕೊಟ್ಟಿಲ್ಲ. ಆದ್ದರಿಂದ ಇದು ಪ್ರಜಾಪ್ರಭುತ್ವ ಕೊಲೆಗೇಡಿ ಸರ್ಕಾರ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದರು.

ಕೇರಳದಂತಹ ಸಣ್ಣ ರಾಜ್ಯ‌ ಕೊವಿಡ್​ಗಾಗಿ  20 ಸಾವಿರ ಕೋಟಿ ಇಟ್ಟಿದೆ. ನಮ್ಮಲ್ಲಿ ‌ಹೆಸರಿಗೆ ಮಾತ್ರ ಪ್ಯಾಕೇಜ್ ಕೊಟ್ಟಿದ್ದಾರೆ
ಅದನ್ನು ಪ್ರಶ್ನೆ ಮಾಡಿದ್ರೆ ಬಂಧನ ‌ಮಾಡುತ್ತಾರೆ. ಯಾರು ಹೆದರಬೇಡಿ, ಜೈಲಿಗೆ ಹಾಕಿದ್ರು ಪರವಾಗಿಲ್ಲ. ಅದೊಂದು ಆಂದೋಲನವನ್ನೂ ‌ಮಾಡಿಯೇ ಬಿಡೋಣ ಎಂದ ಸಿದ್ದರಾಮಯ್ಯ, ನಾನು ಡಿಸಿಗಳ ಜೊತೆ ಸಭೆ ಮಾಡುವುದಕ್ಕೂ ಅವಕಾಶ ‌ಕೊಟ್ಟಿಲ್ಲ. ಪತ್ರ ಬರೆದರೆ ಮರು‌ಪತ್ರ ಬರೆದು ಅವಕಾಶ ಇಲ್ಲ ಎನ್ನುತ್ತಾರೆ ಎಂದು ದೂರಿದರು.

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಸಂಸ್ಮರಣೆ
ಇಂದು ರಾಜೀವ್ ಗಾಂಧಿಯವರ ಪುಣ್ಯತಿಥಿ ಆಚರಣೆ ಮಾಡ್ತಿದ್ದೇವೆ. ಇವತ್ತು ರಾಜಕೀಯ ಮೀಸಲಾತಿ ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ, ದಲಿತರಿಗೆ ಸಿಕ್ಕಿದೆ. ಅದಕ್ಕೆ ರಾಜೀವ್ ಗಾಂಧಿಯವರು ಮಾಡಿದ 24 ತಿದ್ದುಪಡಿಗಳು ಕಾರಣ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಪಾದಿಸಿದರು.

ಭಾರತೀಯ ಜನತಾ ಪಾರ್ಟಿಯವರು ಮಹಿಳೆಯರ ಬಗ್ಗೆ ಮೊಸಳೆ ಕಣ್ಣೀರಿಟ್ಟು ಬಹಳ ಮಾತನಾಡ್ತಾರೆ. ಆದ್ರೆ ಮಹಿಳಾ ಮೀಸಲಾತಿ ಯಾಕೆ ಅವರು ಮಾಡಬಾರದು? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಬಿಜೆಪಿಯವರಿಗೆ ಸಾಮಾಜಿಕ ಬದ್ದತೆ ಇಲ್ಲ. ಸಾಮಾಜಿಕ ಬದ್ದತೆ ಇದೆ ಅಂದ್ರೆ ಅದು ಕಾಂಗ್ರೆಸ್​ಗೆ ಮಾತ್ರ. ರಾಜೀವ್ ಗಾಂಧಿಯವರನ್ನು ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ವಿಶೇಷವಾಗಿ ಸ್ಮರಿಸಬೇಕು. ದೂರ ಸಂಪರ್ಕ ಕ್ರಾಂತಿಯಾಗಲಿಕ್ಕೆ ರಾಜೀವ್ ಗಾಂಧಿ ಕಾರಣ. ಯುವಕರನ್ನು ಗುರುತಿಸಿ ಚುನಾವಣೆಯಲ್ಲಿ ಭಾಗವಹಿಸುವಂತೆ ಮಾಡಿದ್ದಾರೆ ಎಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಮರಿಸಿಕೊಂಡರು.

ಇದನ್ನೂ ಓದಿ: ಚಿಪ್ಕೊ ಚಳವಳಿಯ ರೂವಾರಿ ಸುಂದರ್​ಲಾಲ್ ಬಹುಗುಣ ಕೊವಿಡ್​ಗೆ ಬಲಿ

Rajiv Gandhi Death Anniversary 2021: ಪೈಲಟ್​ನಿಂದ ಪ್ರಧಾನಿ, ಸೋನಿಯಾರ ಜತೆ ವಿವಾಹ, ಪಕ್ಷಾಂತರ ತಡೆ ಕಾಯ್ದೆ..ಇಲ್ಲಿವೆ ರಾಜೀವ್ ಗಾಂಧಿ ವ್ಯಕ್ತಿತ್ವದ ವೈವಿಧ್ಯಮಯ ಮುಖಗಳು

(Rajiv Gandhi Death Anniversary event Opposition Leader Siddaramaiah urges bring foreign covid vaccine formulas to India)

Follow Us