AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈಗ ಬಿಡುಗಡೆ ಆದ ಪಟ್ಟಿಯೇ ಫೈನಲ್​ ಎಂದ ಸತೀಶ್ ಜಾರಕಿಹೊಳಿ: ಖಾತೆ ಹಂಚಿಕೆ ಬಗ್ಗೆ ಸ್ಪಷ್ಟನೆ ನೀಡಿದ ಸಚಿವ

ಖಾತೆ ಹಂಚಿಕೆ ಈಗಾಗಲೇ ಫೈನಲ್ ಆಗಿದೆ, ಈಗ ಬಂದಿರುವ ಲಿಸ್ಟ್ ಫೈನಲ್​​. ರಾಜ್ಯಪಾಲರಿಂದ ಅಂತಿಮ ಮುದ್ರೆ ಅಷ್ಟೇ ಬಾಕಿ ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಈಗ ಬಿಡುಗಡೆ ಆದ ಪಟ್ಟಿಯೇ ಫೈನಲ್​ ಎಂದ ಸತೀಶ್ ಜಾರಕಿಹೊಳಿ: ಖಾತೆ ಹಂಚಿಕೆ ಬಗ್ಗೆ ಸ್ಪಷ್ಟನೆ ನೀಡಿದ ಸಚಿವ
ಸಚಿವ ಸತೀಶ್ ಜಾರಕಿಹೊಳಿ
ಗಂಗಾಧರ​ ಬ. ಸಾಬೋಜಿ
|

Updated on:May 28, 2023 | 5:01 PM

Share

ಬೆಳಗಾವಿ: ಖಾತೆ ಹಂಚಿಕೆ ಈಗಾಗಲೇ ಫೈನಲ್ ಆಗಿದೆ, ಈಗ ಬಂದಿರುವ ಲಿಸ್ಟ್ ಫೈನಲ್​​. ರಾಜ್ಯಪಾಲರಿಂದ ಅಂತಿಮ ಮುದ್ರೆ ಅಷ್ಟೇ ಬಾಕಿ ಎಂದು ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಸ್ಪಷ್ಟನೆ ನೀಡುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ನಿನ್ನೆ ಖಾತೆ ಹಂಚಿಕೆಯಾದ ಪಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಹೀಗೆ ಹರಿದಾಡುತ್ತಿದ್ದ ಪಟ್ಟಿಯನ್ನು ನಕಲಿ ಎಂದು ಕಾಂಗ್ರೆಸ್​ ಟ್ವೀಟ್​ ಮಾಡಿತ್ತು. ಆದರೆ ಬಿಡುಗಡೆ ಆದ ಪಟ್ಟಿಯೇ ಫೈನಲ್​ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಮತ್ತೊಂದೆಡೆ ಇನ್ನೂ ಅಧಿಕೃತವಾಗಿ ಖಾತೆ ಹಂಚಿಕೆ ಮಾಡಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಕೂಡ ಹೇಳಿದ್ದಾರೆ.

ನಕಲಿ ಪಟ್ಟಿಗೆ ಕಾಂಗ್ರೆಸ್​ ಸ್ಪಷ್ಟನೆ

ಸಿಎಂ ಸಿದ್ಧರಾಮಯ್ಯ ನೇತೃತ್ವದ ಸಂಪುಟ ವಿಸ್ತರಣೆ ಬೆನ್ನಲ್ಲೆ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ ಎಂಬ ಪಟ್ಟಿಯೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​​ ಆಗಿತ್ತು. ಇದನ್ನು ಗಮನಿಸಿದ ಕಾಂಗ್ರೆಸ್​ ಟ್ವೀಟ್​ ಮಾಡುವ ಮೂಲಕ ಅದು ನಕಲಿ ಪಟ್ಟಿ ಎಂದು ಸ್ಪಷ್ಟನೆ ನೀಡಿತ್ತು. ಇನ್ನೂ ಯಾವುದೇ ಸಚಿವರಿಗೆ ಖಾತೆ ಹಂಚಿಕೆಯಾಗಿರುವುದಿಲ್ಲ. ಯಾರೂ ಸಹ ಊಹಾಪೋಹಗಳಿಗೆ ಕಿವಿಗೊಡಬೇಡಿ ಹಾಗೂ ನಕಲಿ ಸುದ್ದಿಗಳನ್ನು ಹಂಚಬೇಡಿ. ಸರ್ಕಾರ ಅಧಿಕೃತವಾಗಿ ಖಾತೆ ಹಂಚಿಕೆಯ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ ಎಂದು ಹೇಳಿತ್ತು.

ಇದನ್ನೂ ಓದಿ: ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾಯ್ತು, ಖಾತೆ ಹಂಚಿಕೆ ಕಸರತ್ತು ಶುರು: ಸೀನಿಯರ್ಸ್​ಗೆ ಪ್ರಬಲ ಖಾತೆ ಭಾಗ್ಯ!

ಖಾತೆ ಹಂಚಿಕೆ ಕಸರತ್ತು ಶುರು

ಸಿದ್ದರಾಮಯ್ಯ ಸಂಪುಟದಲ್ಲಿ ಸಿಎಂ, ಡಿಸಿಎಂ ಸೇರಿ ಒಟ್ಟು 34 ಸಚಿವರಿದ್ದಾರೆ. ಫಲಿತಾಂಶ ಹೊರ ಬಿದ್ದ 15 ದಿನಗಳ ಬಳಿಕ ಸಿದ್ದರಾಮಯ್ಯ ಸಂಪುಟ ಪೂರ್ಣಗೊಂಡಿದೆ. ಮೊದಲಿಗೆ ಸಿಎಂ, ಡಿಸಿಎಂ ಹಾಗೂ 8 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಬಳಿಕ ಮೇ 27 ರಂದು 24 ಶಾಸಕರಿಗೆ ಸಚಿವರಾಗಿ ಪಟ್ಟಾಭಿಷೇಕ ಮಾಡಲಾಗಿದೆ.

ಇದನ್ನೂ ಓದಿ: 5 ಗ್ಯಾರಂಟಿಗಳ ಜಾರಿಗೆ ಮೊದಲ ಸಂಪುಟದಲ್ಲಿ ತಾತ್ವಿಕ ಒಪ್ಪಿಗೆ ನೀಡಲಾಗಿದೆ ಎಂದ ಲಕ್ಷ್ಮೀ ಹೆಬ್ಬಾಳ್ಕರ್​​

ಸದ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ, ಡಿಸಿಎಂ ಸೇರಿ 34 ಸಚಿವರ ದರ್ಬಾರ್ ಶುರುವಾಗಿದೆ. ಪ್ರಮಾಣ ವಚನ ಸ್ವೀಕರಿಸಿದ್ದಾಯ್ತು ಇನ್ನೇನಿದ್ರೂ ಯಾರಿಗೆ ಯಾವ ಖಾತೆ ಸಿಗುತ್ತೆ ಎನ್ನುವ ಕುತೂಹಲ ಮೂಡಿಸಿದೆ. ಖಾತೆಗಳು ಸಹ ಬಹುತೇಕ ಕನ್ಫರ್ಮ್ ಆಗಿದ್ದು, ಅಂತಿಮ ಮುದ್ರೆಯೊಂದೇ ಬಾಕಿ ಇದೆ. ಈ ನಡುವೆ ಖಾತೆಗಾಗಿ ನಾನಾ ಕಸರತ್ತು, ಲಾಬಿ ಒಳಗೊಳಗೆ ಜೋರಾಗಿಯೇ ನಡೆಯುತ್ತಿದೆ.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:41 pm, Sun, 28 May 23