ನಾಳೆ ಶಕ್ತಿ ಯೋಜನೆಗೆ ಚಾಲನೆ, ಅಲ್ಲೇ ಪಕ್ಕದಲ್ಲಿ ಇರುವ ರಿಕ್ಷಾ ಸ್ಟ್ಯಾಂಡ್​ಗೂ ಹೋಗಿ ಬನ್ನಿ: ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯ

ನಾಳೆ ಬಸ್​ಗೆ ಚಾಲನೆ ಕೊಡುವ ಹಾಗೆ, ಅಲ್ಲೇ ಪಕ್ಕದಲ್ಲಿ ಇರುವ ರಿಕ್ಷಾ ಸ್ಟ್ಯಾಂಡ್​ಗೂ ಹೋಗಿ ಬನ್ನಿ ಎಂದು ಸಿಎಂ ಸಿದ್ಧರಾಮಯ್ಯ ವಿರುದ್ಧ ಎಂಎಲ್‌ಸಿ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ.

ನಾಳೆ ಶಕ್ತಿ ಯೋಜನೆಗೆ ಚಾಲನೆ, ಅಲ್ಲೇ ಪಕ್ಕದಲ್ಲಿ ಇರುವ ರಿಕ್ಷಾ ಸ್ಟ್ಯಾಂಡ್​ಗೂ ಹೋಗಿ ಬನ್ನಿ: ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯ
ಎಂಎಲ್‌ಸಿ ಛಲವಾದಿ ನಾರಾಯಣಸ್ವಾಮಿ
Follow us
ಗಂಗಾಧರ​ ಬ. ಸಾಬೋಜಿ
|

Updated on: Jun 10, 2023 | 7:19 PM

ಬೆಂಗಳೂರು: ನಾಳೆ ಬಸ್​ಗೆ ಚಾಲನೆ ಕೊಡುವ ಹಾಗೆ, ಅಲ್ಲೇ ಪಕ್ಕದಲ್ಲಿ ಇರುವ ರಿಕ್ಷಾ ಸ್ಟ್ಯಾಂಡ್​ಗೂ ಹೋಗಿ ಬನ್ನಿ ಎಂದು ಸಿಎಂ ಸಿದ್ಧರಾಮಯ್ಯ (siddaramaiah) ವಿರುದ್ಧ ಎಂಎಲ್‌ಸಿ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆ ವೇಳೆ ಆಟೋ ಚಾಲಕರಿಗೂ ಹಲವು ಭರವಸೆ ನೀಡಿದ್ದಿರಿ. ನಮಗೆ ತೊಂದರೆ ಆಗಿದೆ ಎಂದು ಅವರು ಹೇಳುತ್ತಿದ್ದಾರೆ. ನಾಳೆ ಆಟೋ ಸ್ಟ್ಯಾಂಡ್‌ಗೆ ಭೇಟಿ ನೀಡಿ ಅವರ ಕಷ್ಟವನ್ನೂ ಕೇಳಿ ಬನ್ನಿ ಎಂದು ಸಿಎಂ ಸಿದ್ದರಾಮಯ್ಯಗೆ ಒತ್ತಾಯಿಸಿದ್ದಾರೆ.

ಜನರನ್ನು ಕೆರಳಿಸುವ ಕೆಲಸ ಮಾಡುತ್ತಿದ್ದಾರೆ

ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಜನರ ಹಾದಿ ತಪ್ಪಿಸುತ್ತಿದೆ. ಐದು ಗ್ಯಾರಂಟಿ ನೀಡಿ ಮತ ಗಳಿಸಿ ಈಗ ಹಲವು ಷರತ್ತು ಹಾಕುತ್ತಿದೆ. ಜನರನ್ನು ಕೆರಳಿಸುವ ಕೆಲಸ ಮಾಡ್ತಿದ್ದಾರೆ. ಬಸ್‌ನಲ್ಲಿ ಉಚಿತ ಪ್ರಯಾಣದಿಂದ ಮಹಿಳೆಯರು ಖಷಿ ಆಗಿರಬಹುದು. ಇದರಿಂದ ಕೆಲಸ ಮಾಡಲು ಹೋಗುವವರಿಗೆ ಅನುಕೂಲವಾಗಬಹುದು. ಆದರೆ ಮನೆಯಲ್ಲಿ ಕುಳಿತ ಮಹಿಳೆಯೂ ಸರ್ಕಾರಿ ಬಸ್‌ನಲ್ಲಿ ಫ್ರೀ ಎಂದು ಎಲ್ಲಾದ್ರೂ ಎದ್ದು ಹೊರಟರೆ ದಂಪತಿ ಜಗಳ ಮಾಡಿಕೊಳ್ಳದೇ ಇದ್ದರೆ ಸಾಕು ಎಂದಿದ್ದಾರೆ.

ಇದನ್ನೂ ಓದಿ: ಯಾರೂ ಹೆಚ್ಚಾದ ಕರೆಂಟ್ ಬಿಲ್​ನ್ನು ಪಾವತಿ ಮಾಡಬೇಡಿ: ಸಾರ್ವಜನಿಕರಲ್ಲಿ ವಿನಂತಿಸಿದ ಶಾಸಕ ಯತ್ನಾಳ್​

ನಿಮ್ಮದು ಗ್ಯಾರಂಟಿ ಸರ್ಕಾರ ಅಲ್ಲ. 420 ಸರ್ಕಾರ

ನಿಮ್ಮದು ಗ್ಯಾರಂಟಿ ಸರ್ಕಾರ ಅಲ್ಲ. 420 ಸರ್ಕಾರ ಎಂದು ಜನ ವಾಟ್ಸಾಪ್‌ನಲ್ಲಿ ಹಾಕಲು ಶುರು ಮಾಡಿದ್ದಾರೆ. ಹೊಳೆ ದಾಟಿದ ಮೇಲೆ ಅಂಬಿಗನ ಹಂಗು ಏಕೆ?, ಸಿಎಂ ಈ ರೀತಿ ಇದ್ದಾರೆ. ಎಲೆಕ್ಷನ್‌ನಲ್ಲಿ ದುಡ್ಡು ನೀಡಿ ಮತ ಹಾಕಿಸಿಕೊಳ್ತೀರಿ ಎಂದು ಆರೋಪವಿತ್ತು. ಆದರೆ ಈ ಬಾರಿ ಕಾಂಗ್ರೆಸ್ ಸಾಲದ ಕಾರ್ಡ್ ನೀಡಿ ಮತ ಹಾಕಿಸಿಕೊಂಡಿದೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: Mysuru News: ಮೈಸೂರಿನಲ್ಲಿ ಝೀರೋ ಟ್ರಾಫಿಕ್ ಮಾಡಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಗರಂ

ಕಾಂಗ್ರೆಸ್​ ವಿರುದ್ಧ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಕಿಡಿ

ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ಷರತ್ತು ವಿಧಿಸಿರುವ ವಿಚಾರವಾಗಿ ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಕಿಡಿಕಾರಿದ್ದು, ಯಾವ ಷರತ್ತಿಲ್ಲದೆ ಎಲ್ಲರಿಗೂ ಉಚಿತ, ಖಚಿತ, ನಿಶ್ಚಿತ ಎಂದಿದ್ದರು. ಆದರೆ ಈಗ ಷರತ್ತು ವಿಧಿಸಿ ಕರ್ನಾಟಕದ ಜನತೆಗೆ ಮೋಸ ಮಾಡಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ. 200 ಯೂನಿಟ್ ಒಳಗೆ ಬಳಸುವವರು ಕರೆಂಟ್ ಬಿಲ್ ನೀಡುವವರನ್ನು ವಿನಮ್ರತೆಯಿಂದ ವಾಪಸ್​ ಕಳುಹಿಸಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ