ತನಿಖೆ ಪೂರ್ಣಗೊಳಿಸುತ್ತೇವೆ, ಸಿದ್ದರಾಮಯ್ಯ ಜೈಲು ಸೇರ್ತಾರೆ: ಹೊಸ ಬಾಂಬ್ ಸಿಡಿಸಿದ ಕಟೀಲ್
ಅರ್ಕಾವತಿ ಕೇಸ್ನಲ್ಲಿ ಮಾಜಿ CM ಸಿದ್ದರಾಮಯ್ಯ ಜೈಲು ಸೇರುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ರಾಜ್ಯ ರಾಜಕಾರಣದಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.
ಬಾಗಲಕೋಟೆ: ಬೊಮ್ಮಾಯಿ ಸರ್ಕಾರದ ವಿರುದ್ಧ ಸಾಲು-ಸಾಲು ಆರೋಪಗಳನ್ನು ಮಾಡುತ್ತಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೊಸ ಬಾಂಬ್ ಸಿಡಿಸಿದ್ದಾರೆ.
ಬಾಲಕೋಟೆಯ ಇಳಕಲ್ನಲ್ಲಿಇಂದು(ಸೋಮವಾರ) ಮಾತನಾಡಿದ ಕಟೀಲ್, ಅರ್ಕಾವತಿ ಹಗರಣದ ತನಿಖೆಯನ್ನ ನಾವು ಪೂರ್ಣಗೊಳಿಸುತ್ತೇವೆ. ಲೋಕಾಯುಕ್ತದ ಮೂಲಕ 52 ಕೇಸ್ಗಳು ಹೊರಗೆ ಬರುತ್ತವೆ. ಅರ್ಕಾವತಿ ಕೇಸ್ನಲ್ಲಿ ಯಾರೆಲ್ಲ ಇರ್ತಾರೋ ಅವರು ಜೈಲಿಗೆ ಹೋಗ್ತಾರೆ. ಅರ್ಕಾವತಿ ಕೇಸ್ನಲ್ಲಿ ಮಾಜಿ CM ಸಿದ್ದರಾಮಯ್ಯ (Siddaramaiah) ಜೈಲು ಸೇರುತ್ತಾರೆ ಎಂದು ಹೇಳುವ ,ಮೂಲಕ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಸಾಕಷ್ಟು ಭ್ರಷ್ಟಾಚಾರ ಮಾಡಿದೆ. ಅರ್ಕಾವತಿ ಮಾತ್ರವಲ್ಲ, ಹಾಸ್ಟೆಲ್ ದಿಂಬು, ಹಾಸಿಗೆಯಲ್ಲೂ ಅಕ್ರಮ . ಕಾಂಗ್ರೆಸ್ ಹಗರಣ ಬಗ್ಗೆ ಯಾಕೆ ತನಿಖೆ ಮಾಡಿಲ್ಲ. ಸಿದ್ದರಾಮಯ್ಯ ಅವಧಿಯ ಹಗರಣಗಳ ದಾಖಲೆ ಮುಚ್ಚಿಟ್ಟಿದ್ದಾರೆ. ದಾಖಲೆಗಳನ್ನು ಹುಡುಕಲು ನಮಗೆ ತುಂಬಾ ಕಷ್ಟವಾಗಿದೆ ಎಂದರು.
SDPI, PFI ಬ್ಯಾನ್ಗೆ ದಾಖಲೆ ಸಂಗ್ರಹ ರಾಜ್ಯದಲ್ಲಿ ಪಿಎಫ್ಐ, ಎಸ್ಡಿಪಿಐ ಬ್ಯಾನ್ ಮಾಡುವ ವಿಚಾರದ ಬಗ್ಗೆ ಮಾತನಾಡಿದ ಕಟೀಲ್, ಪಿಎಫ್ಐ, SDPI ಬ್ಯಾನ್ ಸಂಬಂಧ ದಾಖಲೆ ಸಂಗ್ರಹ ಆಗ್ತಿದೆ. ಒಂದು ರಾಜ್ಯದಲ್ಲಿ ಬ್ಯಾನ್ ಆದ್ರೆ, ತಕ್ಷಣ ಕೋರ್ಟ್ಗೆ ಹೋಗ್ತಾರೆ. ಹಾಗಾಗಿ ತಕ್ಷಣ ನ್ಯಾಯಾಲಯದ ಮುಂದೆ ಹೋಗೋಕೆ ಅದಕ್ಕಾಗಿ ಪೂರ್ಣವಾದ ದಾಖಲೆ,ಪೂರ್ಣ ಮಾಹಿತಿ. ಮತ್ತು ಪೂರ್ಷವಾದ ಅಂಕಿ ಅಂಶ ಬೇಕು. ಅದನ್ನೇ ಇವತ್ತು ಸಂಗ್ರಹ ಮಾಡಲಾಗುತ್ತಿದೆ. ಪೂರ್ಣವಾದ ಅವರ ಭಯೋತ್ಪಾಧನಾ ಚಟುವಟಿಕೆ ಇಟ್ಕೊಂಡು ನಿಷೇಧ ಆಗ್ಬೇಕಿದೆ. ಅದು ರಾಜಕೀಯ ಪಾರ್ಟಿ ಹೌದು,. ಇದನ್ನು ಚುನಾವಣಾ ಆಯೋಗ ಸಹ ಗಮನಿಸುತ್ತಿದೆ ಎಂದು ಸ್ಪಷ್ಟಪಡಿಸಿದರು.
ಹಗರಣಗಳ ಬಗ್ಗೆ ತನಿಖೆ ಪಿಎಸ್ ಐ ಹಗರಣ ಅವರ(ಕಾಂಗ್ರೆಸ್) ಕಾಲದಲ್ಲಿ ಆಗಿದ್ದು. ತನಿಖೆ ಮಾಡೋದಕ್ಕೆ ಇವರಿಗೆ ಧೈರ್ಯ ಇರಲಿಲ್ಲ. ನಾವು ಡಿಐಜಿ ರ್ಯಾಂಕ್ ಅಧಿಕಾರಿಯನ್ನು ಜೈಲಿಗೆ ಹಾಕಿದ್ದೇವೆ. ತನಿಖೆ ಪೂರ್ಣ ಮಾಡುತ್ತೇವೆ ಎಂದು ಕಾಂಗ್ರೆಸ್ ನಾಯಕರ ಆರೋಪಕ್ಕೆ ತಿರುಗೇಟು ನೀಡಿದರು.
ಶಿಕ್ಷಕರ ನೇಮಕಾತಿಯಲ್ಲೂ ಅವ್ಯವಹಾರ ನಡೆಯಿತು. ಅದನ್ನು ನಾವು ಪೂರ್ಣ ಮಾಡುತ್ತೇವೆ. ನಾವು ಬಂದ ಮೇಲೆ ಪಾರದರ್ಶಕ ತನಿಖೆ ಮಾಡುತ್ತೇವೆ.. ನೀವ್ಯಾಕೆ ಮಾಡಲಿಲ್ಲ. ಯಾಕೆ ಲೋಕಾಯುಕ್ತ ಬಂದ್ ಮಾಡಿದ್ರಿ. ನಿಮ್ಮ ಕಾಲಘಟ್ಟದಲ್ಲಿ ಎರಡು ಮಾಫಿಯಾದಲ್ಲಿ ಹಗರಣ ಮಾಡಿ ನೀವು ಸರಕಾರ ನಡೆಸಿದ್ದೀರಿ.. ಒಂದು ಸ್ಯಾಂಡ್ ಮಾಫಿಯಾ,ಇನ್ನೊಂಡು ಡ್ರಗ್ ಮಾಪಿಯಾ. ಈ ಎರಡು ಮಾಫಿಯಾದಲ್ಲೇ ಸಿದ್ದರಾಮಯ್ಯ ಸರಕಾರ ನಡೆಸಿದ್ರು. ನಮ್ಮ ಯಡಿಯೂರಪ್ಪ ಸರಕಾರ ಬಂದ ಮೇಲೆ ಡ್ರಗ್ ಹಗರಣ ಪೂರ್ಣ ಹೊರಗೆ ಹಾಕಿ ಬಂಧಿಸುವ ಕೆಲಸ ಮಾಡಿದ್ರು.. ಎಷ್ಟೇ ಪ್ರತಿಷ್ಠಿತರಿದ್ದರು ಜೈಲಿಗೆ ಹಾಕುವ ಕೆಲಸ ಆಗಿದೆ ಎಂದು ಹೇಳಿದರು.
ಬೀದಿ ಕಾಳಗ ಮುಚ್ಚಿ ಹಾಕಲು 40% ಭ್ರಷ್ಟಾಚಾರ ಆರೋಪ ಕಾಂಗ್ರೆಸ್ ದಿಕ್ಕು ತಪ್ಪಿ, ದಾರಿ ತಪ್ಪಿ ಅವರೊಳಗಿನ ಬೀದಿ ಕಾಳಗ ಮುಚ್ಚಿ ಹಾಕಲು 40% ಭ್ರಷ್ಟಾಚಾರ ಆರೋಪ ಮಾಡ್ತಾ ತಿರುಗುತ್ತಿದ್ದಾರೆ. ಜನ ಇದನ್ನ ತಿರಸ್ಕಾರ ಮಾಡಿದ್ದಾರೆ. ನಿಮ್ಮ ರಾಷ್ಟ್ರೀಯ ಅಧ್ಯಕ್ಷರು ಯಾಕೆ ಬೇಲ್ ಮೇಲೆ ಹೊರಗಿದ್ದಾರೆ. ಉಪಾಧ್ಯಕ್ಷ, ವಾದ್ರಾ ಯಾಕೆ ಬೇಲ್‌ಮೇಲೆ ಇದ್ದಾರೆ. ಇಡಿ ತನಿಖೆ ಮಾಡಿದ್ರೆ ಯಾಕೆ ಬೊಬ್ಬೆ ಹಾಕ್ತೀರಿ. ಹಾಗಾದ್ರೆ ಈ ದೇಶದ ಕಾನೂನಿನ ಮೇಲೆ ನಿಮಗೆ ಗೌರವ ಇಲ್ವಾ ಎಂದು ಪ್ರಶ್ನಿಸಿದರು.
ನಲಪಾಡ್‌ನ ಮೇಲೆ ಸಾವಿರ ಕೇಸ್ ಗಳಿವೆ. ಇವತ್ತು ನಿಮ್ಮಲ್ಲಿ ರಾಷ್ಟ್ರದಿಂದ ಹಿಡಿದು ಜಿಲ್ಲೆಯವರೆಗೂ ಹಗರಣದಲ್ಲೇ ಇದಾರೆ. ಕಾಂಗ್ರೆಸ್ ಹಗರಣ ಬೀದಿಪಲಾಗುತ್ತೆ ಅಂತಾ ತಿಳಿದು. 40% ಎಂಬ ಸುಳ್ಳು ಅಪಾದನೆ ಕೆಲಸ ಮಾಡ್ತಿದೆ. ಒಂದು ಸಮುದಾಯವನ್ನು ಟಾರ್ಗೆಟ್ ಮಾಡ್ತಿದಾರೆ ಎಂದು ಪರೋಕ್ಷವಾಗಿ ಲಿಂಗಾಯತರನ್ನು ಟಾರ್ಗೆಟ್‌ಮಾಡ್ತಿದಾರೆ ಎಂದರು.
ಯಡಿಯೂರಪ್ಪ ಅವರನ್ನು ಇಳಿಸೋಕೆ ಪ್ರಯತ್ನ ಮಾಡಿದ್ರು. ಕಾಂಗ್ರೆಸ್ ಅಧಿಕಾರದಲ್ಲಿ ಇಲ್ಲದಿದ್ದಾಗ ಗಲಭೆ, ಗೊಂದಲವನ್ನು ಸೃಷ್ಟಿ ಮಾಡುತ್ತೆ. ಎನ್ ಐಎ ತನಿಖೆಗಳು ಆಗ್ತಿವೆ. ಪಿಎಫ್ಐ, ಎಸ್ಡಿಪಿಐ ಭಯೋತ್ಪಾದಕ ನೀತಿಗಳು ಹೊರ ಬರ್ತಿವೆ. ಇದರ ಸಂಪರ್ಕ ಹೊಂದಿರುವವರನ್ನು ಕೇಂದ್ರ ಬಂಧಿಸುತ್ತೆ.. ಇವೆಲ್ಲ ಕರ್ನಾಟಕದಲ್ಲಿ ಯಾಕೆ ಜಾಸ್ತಿ ಇವೆ ಅಂದ್ರೆ ಸಿದ್ದರಾಮಯ್ಯ ಕಾಲಘಟ್ಟದಲ್ಲಿ ಮಾಡಿದ ತಪ್ಪು ನೀತಿ. ಸಿದ್ದರಾಮಯ್ಯ ಪಿಎಪ್ ಐ ,ಎಸ್ ಡಿಪಿಐ ಮೇಲಿನ ಕೇಸ್ ವಾಪಸ್ ಪಡೆದರು. ಅವರು ಜೈಲಿನಲ್ಲಿ ಇದ್ದಿದ್ರೆ ಇಂದು ಹೀಗಾಗುತ್ತಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಭಯೋತ್ಪಾದನೆಗೆ ಸಿದ್ದರಾಮಯ್ಯನೇ ಕಾರಣ. ಆದ್ರೆ ನಮ್ಮ ಸರ್ಕಾರ ಗಟ್ಟಿ ನಿರ್ಧಾರ ತೆಗೆದುಕೊಂಡಿದೆ. ರಾಷ್ಟ್ರ ವಿರೋಧಿ ಕೃತ್ಯ, ಹಿಂಸಾತ್ಮಕ ಚಳುವಳಿಗೆ ವಿರುದ್ಧವಾಗಿ ನಮ್ಮ ಸರ್ಕಾರ ಇದೆ. ಯಾರೇ ದೊಡ್ಡವರಿದ್ದರೂ ಅವರನ್ನ ಬಂಧಿಸುತ್ತದೆ. ಎನ್ಐಎಗೆ ಪೂರ್ಣ ಸ್ವಾತಂತ್ರ್ಯವನ್ನು ನೀಡಲಾಗಿದೆ ಎಂದು ಹೇಳಿದರು.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:50 pm, Mon, 26 September 22