‘ಆರ್​ಎಸ್​ಎಸ್​ ಒಂದು ಕೋಮುವಾದಿ ಸಂಘಟನೆ’- ಹುಬ್ಬಳ್ಳಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ

ಬಿಜೆಪಿಯಲ್ಲಿ ಓರ್ವ ಮುಸ್ಲಿಂ ಎಂಎಲ್ಎ ಇದ್ದಾರಾ? ಎಂದು ಪ್ರಶ್ನಿಸಿದ ವಿಪಕ್ಷ ನಾಯಕ, ಆರ್​ಎಸ್​ಎಸ್​ ಅಲ್ಪಸಂಖ್ಯಾತರ ವಿರುದ್ಧ ಇರೋದು. ಈಶ್ವರಪ್ಪ ಮುಸ್ಲಿಂರು ಬಂದು ಆಫೀಸ್​ನಲ್ಲಿ ಕಸ ಹೊಡಿ ಅಂತಾರೆ. ಸಂವಿಧಾನ ಬದಲಾವಣೆ ಮಾಡುತ್ತೀನಿ ಅಂತಾರೆ ಎಂದು ಹೇಳಿದರು.

‘ಆರ್​ಎಸ್​ಎಸ್​ ಒಂದು ಕೋಮುವಾದಿ ಸಂಘಟನೆ’- ಹುಬ್ಬಳ್ಳಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ
ಸಿದ್ದರಾಮಯ್ಯ
Edited By: sandhya thejappa

Updated on: Oct 17, 2021 | 12:32 PM

ಹುಬ್ಬಳ್ಳಿ: ಆರ್​ಎಸ್​ಎಸ್​ (RSS) ಒಂದು ಕೋಮುವಾದಿ ಸಂಘಟನೆ. ಆರ್​ಎಸ್​ಎಸ್​ ಮನುಸ್ಮೃತಿ, ಶ್ರೇಣೀಕೃತ ಸಂಘಟನೆಯಾಗಿದೆ. ಹೀಗಾಗಿ ನಾನು ಆರ್​ಎಸ್​ಎಸ್​ ವಿರೋಧಿಸುತ್ತೇನೆ. 1971ರಿಂದ ನಾನು ವಿರೋಧ ಮಾಡುತ್ತಾ ಬಂದಿದ್ದೀನಿ ಅಂತ ಹುಬ್ಬಳ್ಳಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿಕೆ ನೀಡಿದ್ದಾರೆ. ಆರ್​ಎಸ್​ಎಸ್​ ದೇಶ, ಸಮಾಜ ವಿಭಜನೆ ಕೆಲಸ ಮಾಡುತ್ತಿದೆ. ಇದು ಅಲ್ಪಸಂಖ್ಯಾತರ ವಿರುದ್ಧವಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಬಿಜೆಪಿಯಲ್ಲಿ ಓರ್ವ ಮುಸ್ಲಿಂ ಎಂಎಲ್ಎ ಇದ್ದಾರಾ? ಎಂದು ಪ್ರಶ್ನಿಸಿದ ವಿಪಕ್ಷ ನಾಯಕ, ಆರ್​ಎಸ್​ಎಸ್​ ಅಲ್ಪಸಂಖ್ಯಾತರ ವಿರುದ್ಧ ಇರೋದು. ಈಶ್ವರಪ್ಪ ಮುಸ್ಲಿಂರು ಬಂದು ಆಫೀಸ್​ನಲ್ಲಿ ಕಸ ಹೊಡಿ ಅಂತಾರೆ. ಸಂವಿಧಾನ ಬದಲಾವಣೆ ಮಾಡುತ್ತೀನಿ ಅಂತಾರೆ ಎಂದು ಹೇಳಿದರು.

ಇನ್ನು ಇದೇ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಬರೀ ಸುಳ್ಳು ಹೇಳ್ತಾರೆ. ಹೀಗಾಗಿ ನಾನು ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ. ಹಿಟ್ ಆ್ಯಂಡ್ ರನ್ ಮಾಡ್ತಾರೆ ಅಂತ ಕುಮಾರಸ್ವಾಮಿ ವಿರುದ್ಧ ಗರಂ ಆಗಿದ್ದಾರೆ.

ಸಿದ್ದರಾಮಯ್ಯಗೆ ಅದ್ದೂರಿ ಸ್ವಾಗತ
ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಪರ ಪ್ರಚಾರಕ್ಕ ಆಗಮಿಸಿದ ಸಿದ್ದರಾಮಯ್ಯಗೆ ಅದ್ದೂರಿ ಸ್ವಾಗತ ಕೋರಿದ್ದಾರೆ. ಜೆಸಿಬಿ ಮೂಲಕ ಪುಪ್ಪಾರ್ಪಣೆ ಮಾಡಿದ್ದಾರೆ. ಬಳಿಕ ಬೈಕ್ ರ್ಯಾಲಿ ಮೂಲಕ ಸಿದ್ದರಾಮಯ್ಯ ಮಾಸನಕಟ್ಟಿ ಗ್ರಾಮಕ್ಕೆ ಹೊರಟಿದ್ದಾರೆ.

ಇದನ್ನೂ ಓದಿ

ಅಪ್ಪ, ಅಜ್ಜಿ, ಮುತ್ತಾತ ಪ್ರಧಾನಿಯಾಗಿದ್ದರೆಂಬ ಕಾರಣಕ್ಕೆ ಓರ್ವ ಹೆಬ್ಬೆಟ್ಟು ಗಿರಾಕಿ ಕನಸು ಕಾಣುತ್ತಿದ್ದಾನೆ; ಸಿದ್ದರಾಮಯ್ಯ ವಿರುದ್ಧ ಟ್ವೀಟ್ ವಾರ್ ನಡೆಸಿದ ಬಿಜೆಪಿ

ತುಮಕೂರಿನಲ್ಲಿ ಬಸ್-ಗೂಡ್ಸ್ ಮಧ್ಯೆ ಭೀಕರ ಅಪಘಾತ! ಸ್ಥಳದಲ್ಲೇ ನಾಲ್ವರ ಸಾವು

Published On - 12:24 pm, Sun, 17 October 21

TV9 Web

TV9 Kannada

Read More
Loading...
Unable to load recommendations.
Follow Us