ಮೊಹಮ್ಮದ್ ನಲಪಾಡ್ ಹಲ್ಲೆ ಮಾಡಿಲ್ಲ; ಈ ವಿಚಾರ ಸತ್ಯಕ್ಕೆ ದೂರವಾದದ್ದು: ಸಿದ್ದು ಹಳ್ಳೇಗೌಡ

| Updated By: ganapathi bhat

Updated on: Jan 20, 2022 | 12:55 PM

ರಕ್ಷಾ ರಾಮಯ್ಯ, ನಾನು ಇಬ್ಬರೂ ಸ್ನೇಹಿತರು. ನಮ್ಮಲ್ಲಿ ಯಾವುದೇ ಷಡ್ಯಂತ್ರ, ಪಾಲಿಟಿಕ್ಸ್ ಇಲ್ಲ. ನಾವು ಚುನಾವಣೆಯಲ್ಲಿ ಫೈಟ್ ಮಾಡಿದ್ದೇವಷ್ಟೇ. ಫಲಿತಾಂಶ ಬಂದಂತೆ ನಾವು ನಡೆದುಕೊಳ್ಳುತ್ತಿದ್ದೇವೆ. ಮಧ್ಯದಲ್ಲಿರುವ ಕೆಲವರು ಇದೆಲ್ಲಾ ಮಾಡುತ್ತಿದ್ದಾರೆ ಎಂದು ಮೊಹಮ್ಮದ್ ನಲಪಾಡ್ ಹೇಳಿದ್ದಾರೆ.

ಮೊಹಮ್ಮದ್ ನಲಪಾಡ್ ಹಲ್ಲೆ ಮಾಡಿಲ್ಲ; ಈ ವಿಚಾರ ಸತ್ಯಕ್ಕೆ ದೂರವಾದದ್ದು: ಸಿದ್ದು ಹಳ್ಳೇಗೌಡ
ಮೊಹಮ್ಮದ್ ನಲಪಾಡ್
Follow us on

ಬೆಂಗಳೂರು: ನನ್ನ ಮೇಲೆ ಮೊಹಮ್ಮದ್ ನಲಪಾಡ್ ಹಲ್ಲೆ ಮಾಡಿಲ್ಲ. ನನ್ನ ಮೇಲೆ ಹಲ್ಲೆ ಮಾಡಿದ್ದಾರೆಂಬುದು ಸತ್ಯಕ್ಕೆ ದೂರವಾದದ್ದು ಎಂದು ಮೊಹಮ್ಮದ್ ನಲಪಾಡ್ ಬೆಂಬಲಿಗರಿಂದ ಬಳ್ಳಾರಿ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಹಳ್ಳೇಗೌಡ ಮೇಲೆ ಹಲ್ಲೆ ಎಂಬ ಆರೋಪಕ್ಕೆ ಸಂಬಂಧಿಸಿ ಸ್ವತಃ ಹಳ್ಳೇಗೌಡ ಪ್ರತಿಕ್ರಿಯೆ ನೀಡಿದ್ದಾರೆ. ಹಲ್ಲೆ ನಡೆದಿಲ್ಲ ಎಂದು ಸಿದ್ದು ಹಳ್ಳೇಗೌಡ ವಿಡಿಯೋ ಮೂಲಕ ಸ್ಪಷ್ಟಪಡಿಸಿದ್ದಾರೆ. ನಾನು ಆರಾಮಾಗಿದ್ದೇನೆ, ನನಗೆ ಯಾವುದೇ ಗಾಯವಾಗಿಲ್ಲ ಎಂದು ಹೇಳಿದ್ದಾರೆ.

ಸಿದ್ದು ಹಳ್ಳೇಗೌಡ ಜೊತೆ ನಾನು ಮಾತನಾಡಿದ್ದೇನೆ. ಮೆಸೇಜ್ ಸೆಂಡ್ ಆದ ಬಗ್ಗೆ ಗೊತ್ತಿಲ್ಲ ಎಂದಿದ್ದಾರೆ. ಸಿದ್ದು ಹಳ್ಳೇಗೌಡರು ನನಗೆ ಮಾಹಿತಿ ನೀಡಿದರು. ಈ ಬಗ್ಗೆ ನೋಡಿಕೊಂಡು ಮಾತಾಡುತ್ತೇನೆ ಎಂದಿದ್ದಾರೆ. ಇದರ ಹಿಂದೆ ಯಾರದ್ದೋ ಪಿತೂರಿ ಇದೆ. ಸುಮ್ಮನೆ ನನ್ನ ಮೇಲೆ ಗೂಬೆ ಕೂರಿಸುವ ಕೆಲಸವಾಗ್ತಿದೆ ಎಂದು ಘಟನೆಯ ಬಗ್ಗೆ ಇತ್ತ ಬೆಂಗಳೂರಿನಲ್ಲಿ ಮೊಹಮ್ಮದ್ ನಲಪಾಡ್ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ನಿನ್ನೆ ನಾವು ಸಭೆ ಸೇರಿರುವುದು ನಿಜ. ಮುಂದಿನ ಕಾರ್ಯಚಟುವಟಿಕೆಗಳ ಬಗ್ಗೆ ಚರ್ಚಿಸಿದ್ದೇವೆ. ನಿನ್ನೆ ರಾತ್ರಿ ಹುಡುಗರು ಸೇರಿ ಪಾರ್ಟಿ ಮಾಡಿದ್ದಾರೆ. ನಾನು ರಾತ್ರಿ 9.30ರ ಸುಮಾರಿಗೆ ವಾಪಸಾಗಿದ್ದೆ. ಅಲ್ಲಿ ಯಾವುದೇ ರೀತಿಯ ಹಲ್ಲೆ ಘಟನೆ ನಡೆದಿಲ್ಲ. ಬೇಕಿದ್ದರೆ ರೆಸಾರ್ಟ್ ಸಿಸಿ ಕ್ಯಾಮರಾ ಪರಿಶೀಲಿಸಲಿ. ಸಿದ್ದು ಹಳ್ಳೇಗೌಡ, ನಾನು ಚೆನ್ನಾಗಿಯೇ ಇದ್ದೇವೆ ಎಂದು ಈ ಘಟನೆಯ ಬಗ್ಗೆ ಬೆಂಗಳೂರಿನಲ್ಲಿ ಮೊಹಮ್ಮದ್ ನಲಪಾಡ್ ಪ್ರತಿಕ್ರಿಯಿಸಿದ್ದಾರೆ.

10 ದಿನದಲ್ಲಿ ಪದಗ್ರಹಣ ಕಾರ್ಯಕ್ರಮ ಇದೆ. ಇಂತಹ ಸಮಯದಲ್ಲಿ ಗಲಾಟೆ ಮಾಡಿಕೊಳ್ತೀನಾ? ನನ್ನ ವಿರುದ್ಧ ಏನೋ ಷಡ್ಯಂತ್ರ ನಡೆಯುತ್ತಿದೆ. ಯಾರು ಮಾಡಿಸುತ್ತಿದ್ದಾರೆ ಎಂದು ನನಗೆ ಗೊತ್ತಿಲ್ಲ. ರಕ್ಷಾ ರಾಮಯ್ಯ, ನಾನು ಇಬ್ಬರೂ ಸ್ನೇಹಿತರು. ನಮ್ಮಲ್ಲಿ ಯಾವುದೇ ಷಡ್ಯಂತ್ರ, ಪಾಲಿಟಿಕ್ಸ್ ಇಲ್ಲ. ನಾವು ಚುನಾವಣೆಯಲ್ಲಿ ಫೈಟ್ ಮಾಡಿದ್ದೇವಷ್ಟೇ. ಫಲಿತಾಂಶ ಬಂದಂತೆ ನಾವು ನಡೆದುಕೊಳ್ಳುತ್ತಿದ್ದೇವೆ. ಮಧ್ಯದಲ್ಲಿರುವ ಕೆಲವರು ಇದೆಲ್ಲಾ ಮಾಡುತ್ತಿದ್ದಾರೆ ಎಂದು ಮೊಹಮ್ಮದ್ ನಲಪಾಡ್ ಹೇಳಿದ್ದಾರೆ.

ಇದನ್ನೂ ಓದಿ: ಮೊಹಮ್ಮದ್ ನಲಪಾಡ್ ಬೆಂಬಲಿಗರಿಂದ ಕ್ಲಬ್​ನಲ್ಲಿ ಪಾರ್ಟಿ ವೇಳೆ ಹಲ್ಲೆ ಆರೋಪ; ಅಂತಹ ಘಟನೆ ನಡೆದಿಲ್ಲ ಎಂದ ನಲಪಾಡ್

ಇದನ್ನೂ ಓದಿ: ಗುಜರಿ ಬಸ್ ಜಮೀರು ಸಿದ್ದರಾಮಯ್ಯ ಟೀಂ ವೈಸ್ ಕ್ಯಾಪ್ಟನ್! ಫರ್ಜಿ ಕೆಫೆ ಪುಂಡ ನಲಪಾಡ್ ಡಿಕೆಶಿ ಗ್ಯಾಂಗ್ ವೈಸ್ ಕ್ಯಾಪ್ಟನ್ ಎಂದ ಸಂಸದ ಪ್ರತಾಪ್