ತುರ್ತು ಪರಿಸ್ಥಿತಿ ಹೇರಿ 47 ವರ್ಷ ಹಿನ್ನೆಲೆ ರಾಜ್ಯ ಬಿಜೆಪಿ ಸಾಲು ಸಾಲು ಟ್ವೀಟ್: ಭಾರತೀಯ ಪ್ರಜಾಪ್ರಭುತ್ವದಲ್ಲಿ ಅತ್ಯಂತ ಕಠಿಣ ಅಧ್ಯಾಯವೆಂದ ಬಿಜೆಪಿ

| Updated By: ಗಂಗಾಧರ​ ಬ. ಸಾಬೋಜಿ

Updated on: Jun 25, 2022 | 1:10 PM

The Emergency of 1975: 1975 ಜೂನ್‌ 25 ಭಾರತೀಯ ಪ್ರಜಾಪ್ರಭುತ್ವದಲ್ಲಿ ಅತ್ಯಂತ ಕಠಿಣ ಅಧ್ಯಾಯ. ಕಾಂಗ್ರೆಸ್‌ನ ಕೆಟ್ಟ ಕಾರ್ಯಗಳನ್ನು ವಿರೋಧಿಸಿ ಧ್ವನಿ ಎತ್ತಿದ್ದ ಎಲ್ಲರಿಗೂ ಪ್ರಣಾಮಗಳು ಎಂದು ರಾಜ್ಯ ಬಿಜೆಪಿ ಸಾಲು ಸಾಲು ಟ್ವೀಟ್ ಮಾಡಿದೆ.

ತುರ್ತು ಪರಿಸ್ಥಿತಿ ಹೇರಿ 47 ವರ್ಷ ಹಿನ್ನೆಲೆ ರಾಜ್ಯ ಬಿಜೆಪಿ ಸಾಲು ಸಾಲು ಟ್ವೀಟ್: ಭಾರತೀಯ ಪ್ರಜಾಪ್ರಭುತ್ವದಲ್ಲಿ ಅತ್ಯಂತ ಕಠಿಣ ಅಧ್ಯಾಯವೆಂದ ಬಿಜೆಪಿ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ತುರ್ತು ಪರಿಸ್ಥಿತಿ ಹೇರಿ 47 ವರ್ಷ ಹಿನ್ನೆಲೆ ರಾಜ್ಯ ಬಿಜೆಪಿ (BJP) ಟ್ವೀಟ್ ಮಾಡಿದ್ದು, 1975ರ ತುರ್ತು (Emergency) ಪರಿಸ್ಥಿತಿ ವಿರೋಧಿಸಿದ್ದ ಪ್ರತಿ ಧ್ವನಿಗೂ ಪ್ರಣಾಮಗಳನ್ನು ಸಲ್ಲಿಸಿದೆ. 1975 ಜೂನ್‌ 25 ಭಾರತೀಯ ಪ್ರಜಾಪ್ರಭುತ್ವದಲ್ಲಿ ಅತ್ಯಂತ ಕಠಿಣ ಅಧ್ಯಾಯ. ಕಾಂಗ್ರೆಸ್‌ನ ಕೆಟ್ಟ ಕಾರ್ಯಗಳನ್ನು ವಿರೋಧಿಸಿ ಧ್ವನಿ ಎತ್ತಿದ್ದ ಎಲ್ಲರಿಗೂ ಪ್ರಣಾಮಗಳು ಎಂದು ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ. ಪ್ರಜಾಪ್ರಭುತ್ವದ ಕಲ್ಪನೆಯೇ ಕೈ ಪಕ್ಷಕ್ಕಿಲ್ಲ. 47 ವರ್ಷಗಳ ಹಿಂದೆ ತುರ್ತುಪರಿಸ್ಥಿತಿ ಹೇರಿ ಪ್ರಜಾಪ್ರಭುತ್ವದ ಕೊಲೆ ಮಾಡಿದ ಕೈ ಪಕ್ಷ, ದೇಶದ ಪರ ದನಿ ಎತ್ತಿದ ಲಕ್ಷಾಂತರ ಮಂದಿಯನ್ನು ಜೈಲಿಗೆ ತಳ್ಳಿ ವಿಕೃತಿ ಮೆರೆಯಿತು. ಅಸಾಂವಿಧಾನಿಕವಾಗಿ ತುರ್ತು ಪರಿಸ್ಥಿತಿ ಹೇರಿದ್ದು ದೇಶದ ಇತಿಹಾಸದ ಅತ್ಯಂತ ಕರಾಳ ಅಧ್ಯಾಯವಾಗಿದೆ. ಸ್ವಾತಂತ್ರ್ಯಾನಂತರ ದೇಶದ ಪ್ರಜಾತಂತ್ರದ ಇತಿಹಾಸದಲ್ಲಿ ತುರ್ತು ಪರಿಸ್ಥಿತಿ ಕರಾಳ ಅಧ್ಯಾಯ. ತಮ್ಮ ಸ್ವಾರ್ಥಕ್ಕಾಗಿ ಈಡಿ ದೇಶವನ್ನೇ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಕತ್ತಲೆಯಲಿಟ್ಟರು. ಕಾಂಗ್ರೆಸ್‌ ನಾಯಕರು ನಕಲಿ ಗಾಂಧಿ ಕುಟುಂಬದ ಪಾದಪೂಜೆ ಮಾಡುವ ಮುನ್ನ ಇತಿಹಾಸದ ಪುಟಗಳನ್ನು ತಿರುವಿಹಾಕಲಿ ಎಂದು ಕಾಂಗ್ರೆಸ್​ ವಿರುದ್ಧ ಖಾರವಾಗಿ ಟೀಕಿಸಲಾಗಿದೆ.

ದೇಶದಲ್ಲಿ ಈಗ ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂದು ಹುಯಿಲೆಬ್ಬಿಸುವ ಕಾಂಗ್ರೆಸ್ಸಿಗರಿಗೆ ಘೋಷಿತ ತುರ್ತು ಪರಿಸ್ಥಿತಿಯ ಕರಾಳ ಅಧ್ಯಾಯ ಮರೆತು ಹೋಗಿದೆ. ಬ್ರಿಟಿಷ್ ಕಾಲದಲ್ಲಿ ನಡೆದ ದೌರ್ಜನ್ಯ ಮೀರಿಸುವ ರೀತಿ‌ ಇಂದಿರಾ ಗಾಂಧಿ ದೇಶವಾಸಿಗಳನ್ನು ಹಿಂಸಿಸಿದ್ದನ್ನು ಮರೆಯಲು ಹೇಗೆ ಸಾಧ್ಯ? ಸಂವಿಧಾನದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ, ಮಹಾದೇವಪ್ಪ ಮೊದಲಾದವರಿಗೆ ಸಂವಿಧಾನದ ಆಶಯಗಳಿಗೆ ಧಕ್ಕೆ ತಂದ ಮಹಾನ್ ಕುಟುಂಬ ಯಾವುದು ಎಂಬುದೇ ಗೊತ್ತಿಲ್ಲ. ಸತ್ಯವನ್ನು ಗ್ರಹಿಸದ ನಿಮ್ಮ ಏಕಮುಖ ರಸ್ತೆಯ ಪ್ರಯಾಣದ ಬಗ್ಗೆ ವಿಷಾದ ಮಾತ್ರ ವ್ಯಕ್ತಪಡಿಸಲು ಸಾಧ್ಯ ಎಂದು ಹೇಳಲಾಗಿದೆ.


ತುರ್ತುಪರಿಸ್ಥಿತಿಯ ಮೂಲಕ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ನಿರ್ಧಾರದ ಬಗ್ಗೆ ಡಿಕೆಶಿ ಮತ್ತು ಸಿದ್ದರಾಮಯ್ಯ ಅಭಿಪ್ರಾಯವೇನು? ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂದು ಕಳವಳ ವ್ಯಕ್ತಪಡಿಸುವ #ಬುರುಡೆರಾಮಯ್ಯ ಅವರೇ, ಘೋಷಿತ ತುರ್ತುಸ್ಥಿತಿಯ ಕರಾಳ ದಿನಗಳ ಬಗ್ಗೆ ಕನ್ನಡಿಗರಿಗೆ ವಿಶೇಷ ಉಪನ್ಯಾಸ ನೀಡಲು ಆಹ್ವಾನಿಸುತ್ತಿದ್ದೇವೆ, ಒಪ್ಪಿಕೊಳ್ಳುವಿರಾ? ಜಲದರ್ಶಿನಿ ವೀರನ ಬಡಾಯಿ ಪರೀಕ್ಷೆಗೆ ಇದೊಂದು ವೇದಿಕೆಯಾಗಲಿ ಎಂದು ಟ್ವೀಟ್​ ಮಾಡಲಾಗಿದೆ.

ಇದನ್ನೂ ಓದಿ: ಡಿಕೆ ಶಿವಕುಮಾರ್ ವಿರುದ್ಧ ದೆಹಲಿ ಕೋರ್ಟ್​ಗೆ ಸಲ್ಲಿಕೆಯಾಗಿರುವ ಇಡಿ ಚಾರ್ಜ್ ಶೀಟ್​​ನಲ್ಲಿ ಏನೆಲ್ಲಾ ಆರೋಪಗಳಿವೆ?

ಇದನ್ನೂ ಓದಿ: Reporter’s Diary : ಸನ್ಯಾಸಿಯಾಗಲು ಹೊರಟವನು ಇಂದು ಐಎಎಸ್ ಅಧಿಕಾರಿಯಾಗಲು ಹೊರಟಿದ್ದಾನೆ

Published On - 1:07 pm, Sat, 25 June 22