ನಾನೊಬ್ಬ ಹಿಂದೂ, ನನ್ನ ವಿರುದ್ಧ ಸ್ಪರ್ಧೆ ಮಾಡಲಿ: ಸಿದ್ದರಾಮಯ್ಯಗೆ ಪಂಥಹ್ವಾನ ನೀಡಿದ ಮಾಜಿ ಸಚಿವ
ಆರ್ಎಸ್ಎಸ್ ಬ್ಯಾನ್ ಮಾಡಬೇಕು ಎನ್ನುವ ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಸಚಿವ ಆಕ್ರೋಶ ವ್ಯಕ್ತಪಡಿಸಿದ್ದು, ನಾನೊಬ್ಬ ಹಿಂದೂ, ನನ್ನ ವಿರುದ್ಧ ಸ್ಪರ್ಧೆ ಮಾಡಲಿ ಎಂದು ಸಿದ್ದರಾಮಯ್ಯಗೆ ಪಂಥಹ್ವಾನ ನೀಡಿದ್ದಾರೆ,
ತುಮಕೂರು: ಪಿಎಫ್ಐ ಸಂಘಟನೆ ನಿಷೇಧ ಬೆನ್ನಲ್ಲೇ ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಪರ-ವಿರೋಧ ಚರ್ಚೆಗಳು ನಡೆದಿವೆ. ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಆರ್ಎಸ್ಎಸ್ ಸಂಘಟನೆಯನ್ನು ನಿಷೇಧ ಮಾಡಬೇಕೆಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಹೇಳಿಕೆಗೆ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.
ಈ ಬಗ್ಗೆ ತುಮಕೂರಿನಲ್ಲಿ ಇಂದು(ಸೆ.29) ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಸೊಗಡು ಶಿವಣ್ಣ, ಆರ್.ಎಸ್.ಎಸ್ ಸ್ವಾತಂತ್ರ ಬರುವ ಮುಂಚೆನೇ ಹುಟ್ಟಿತ್ತು. ನಾನು ಒಬ್ಬ ಆರ್.ಎಸ್.ಎಎಸ್ ನವನು. ನಾನೇನಾದ್ರೂ ತಪ್ಪು ಮಾಡಿದರೆ ನೀವು ಹೇಳಿದವರ ಮನೆ ಮುಂದೆ ಕಸ ಗುಡಿಸುತ್ತೇನೆ. ಅವನು ಸಿದ್ದರಾಮಯ್ಯ ಕಸ ಗುಡಿಸುವುದು ಬೇಡ. ನಾನು ಆರ್ಎಸ್ಎಸ್. ಯಾರಿಗದ್ರೂ ಗುಂಡು ಹೊಡೆದಿದ್ದೀನಾ. ಹಾಗಾದ್ರೆ ಏಕೆ ಬ್ಯಾನ್ ಮಾಡ್ಬೇಕು. ಸಿದ್ದರಾಮಯ್ಯ ಅವರಿಗೆ ಮುಸ್ಲಿಂ ಸಮುನದಾಯದ ವೋಟ್ ಬೇಕು. ಹಾಗಾಗಿ ಬ್ಯಾನ್ ಮಾಡ್ಬೇಕು ಅಂತಾ ಹೇಳ್ತಾರೆ ಎಂದು ತಿರುಗೇಟು ನೀಡಿದರು.
ಕನಕದಾಸ ಕುಲ ಕುಲ ಎಂದು ಯಾಕ್ ಹೊಡೆದಾಡುತ್ತಿರಾ ಎಂದು ಕಿವಿಯಲ್ಲಿ ತುರುಕಿದ್ರು ಸಿದ್ದರಾಮಯ್ಯ ಗೆ, ಅರ್ಥ ಆಗ್ತಿಲ್ಲ, ಆ ಮನುಷ್ಯನಿಗೆ ಸಾಬ್ರು ವೋಟ್ ಬೇಕು ಅಷ್ಟೇ. ಸಿದ್ದರಾಮಯ್ಯನವರು ತುಮಕೂರಿಗೆ ಬಂದು ನನ್ನ ವಿರುದ್ಧ ಸ್ಪರ್ಧೆ ಮಾಡಲಿ. ನಾನೊಬ್ಬ ಹಿಂದೂ ಅವರು ಇಲ್ಲಿಗೆ ಬಂದು ನಿಂತುಕೊಳ್ಳಲಿ. ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದವರು, ಎಲ್ಲಿ ಬೇಕಾದ್ರೂ ನಿಲ್ಲಬಹುದು, ತುಮಕೂರಿನಲ್ಲಿ ಸ್ಪರ್ಧೆ ಮಾಡಲಿ ಎಂದು ಸಿದ್ದರಾಮಯ್ಯಗೆ ಶಿವಣ್ಣ ಪಂಥಹ್ವಾನ ನೀಡಿದರು.
ಪಿಎಫ್ ಐ ಸಂಘನೆ ಬ್ಯಾನ್ ಸ್ವಾಗತಾರ್ಹ. ಕೇವಲ ಬ್ಯಾನ್ ಮಾಡಿದ್ರೆ ಆಗಲ್ಲ, ಎಲ್ಲಾರನ್ನು ಹುಡುಕಿ ಹುಡುಕಿ ಜೈಲ್‌ಗೆ ಹಾಕ್ಬೇಕು.ಓವೈಸಿಯನ್ನು ಬ್ಯಾನ್ ಮಾಡ್ಬೇಕು. ನಿಜವಾದ ಕಾಂಗ್ರೆಸ್ ಗಾಂಧಿ, ಗೋಖಲೆ ಅವರದ್ದು. ಈಗ ಇರುವಂತಹದ್ದು ನೆಹರು ಕಾಂಗ್ರೆಸ್ ಎಂದು ಕಿಡಿಕಾರಿದರು.
ಇನ್ನು ಇದೇ ವೇಳೆ 40 ಪರ್ಸೆಂಟ್ ಕಮಿಷನ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಕೂಡ ಪಾಯಿಖಾನೆ ತಿನ್ನುವ ಪ್ರವೃತ್ತಿಯವರು. ನಾನು ಕೂಡ ತಿಂದ್ದಿದ್ದೇನೆ, ಚುನಾವಣೆಗೆ ಸ್ಪರ್ಧಿಸಲ್ಲ ಅಂತ ಹೇಳ್ಬೇಕಿತ್ತು. ಮುಂದಿನ ಚುನಾವಣೆಯಲ್ಲಿ ಸಾಚಾ ಇರುವವರನ್ನು ನಿಲ್ಲಿಸಿ ಗೆಲ್ಲಿಸಿಕೊಂಡು ಬರ್ತಿನಿ ಅಂತ ಹೇಳ್ಬೇಕಿತ್ತು. ಆ ಧೈರ್ಯ ಸಿದ್ದರಾಮಯ್ಯಗೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ದೇಶ ವಿಭಜನೆಯಾದಾಗ ಇವರೆಲ್ಲಾ ಪಾಕಿಸ್ತಾನಕ್ಕೆ ಹೋಗಬಿಡಬೇಕಿತ್ತು. 75 ವರ್ಷದಿಂದ ಒಬ್ಬರಿಗಾದ್ರೂ ನೆಮ್ಮದಿ ಇದೆಯಾ ಈ ದೇಶದಲ್ಲಿ ಮುಸ್ಲಿಂರ ಏರಿಯಾದಲ್ಲಿ ಹಿಂದೂಗಳು ನೆಮ್ಮದಿಯಾಗಿ ಬದುಕುವುದಕ್ಕೆ ಆಗುತ್ತಾ. ವೋಟಿಗಾಗಿ ಮುಸ್ಲಿಂರ ತುಷ್ಟೀಕರಣ ಮಾಡ್ತಾರೆ. 20 ವರ್ಷ ನಾನು ಎಂಎಲ್ ಎ ಆಗಿದ್ದೆ. ಮುಸ್ಲಿಂರನ್ನು ನಾನು ವಿರೋಧ ಮಾಡಲ್ಲ, ಅವರು ವಿರೋಧ ಮಾಡಿಲ್ಲ ಎಂದರು.
ಸಿಎಂಗೆ ಅಪಮಾನ ಮಾಡುವ ದೃಷ್ಟಿಯಿಂದ ವಾಲ್ ಪೋಸ್ಟ್ ಅಂಟಿಸಲಾಗಿದೆ. ನಿಂದು ಪೋಸ್ಟರ್ ಅಂಟಿಸಿಕೋ ಎಂದು ಸಿದ್ದರಾಮಯ್ಯರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:39 pm, Thu, 29 September 22