ಯಡಿಯೂರಪ್ಪರನ್ನು ಕಣ್ಣೀರು ಹಾಕಿಸಿ ಪದಚ್ಯುತಿಗೊಳಿಸಿದ್ದು ಡರ್ಟಿ ಪಾಲಿಟಿಕ್ಸ್ ಅಲ್ವೇ? ಬಿಜೆಪಿ ವಿರುದ್ಧ ಕೈ ಟ್ವೀಟ್ ವಾರ್
ಬಿಜೆಪಿ ನಾಯಕರ ಡರ್ಟಿ ಪಾಲಿಟಿಕ್ಸ್ ಹೇಳಿಕೆ ವಿರುದ್ಧ ತಿರುಗಿಬಿದ್ದ ಕಾಂಗ್ರೆಸ್ ಸರಣಿ ಟ್ವೀಟ್ ಮೂಲಕ ತಿರುಗೇಟು ನೀಡಿದೆ.
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಇನ್ನೇನು ಹತ್ತಿರವಾಗುತ್ತಿದ್ದಂತೆಯೇ ರಾಜ್ಯ ರಾಜಕಾರಣದಲ್ಲಿ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ. ಅದರಲ್ಲೂ ಇತ್ತೀಚೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಏಟು ಎದುರೇಟು ವಾರ್ ಮುಂದುವರಿದಿದೆ.
ಪರ್ಸೆಂಟೇಜ್ ಆರೋಪ ಮಾಡಿ ಪೇಸಿಎಂ ಪೋಸ್ಟ್ ಅಭಿಯಾನ ಆರಂಭಿಸಿದ್ದ ಕಾಂಗ್ರೆಸ್ಗೆ ಬಿಜೆಪಿ ಡರ್ಟಿ ಪಾಲಿಟಿಕ್ಸ್ ಎಂದು ಕರೆದಿದೆ. ಇದೀಗ ಇದಕ್ಕೆ ಕರ್ನಾಟಕ ಕಾಂಗ್ರೆಸ್ ಟ್ವಿಟ್ಟರ್ ಮೂಲಕ ತಿರುಗೇಟು ನೀಡಿದೆ.
ಯಾರದು ಡರ್ಟಿ ಪಾಲಿಟಿಕ್ಸ್ ಎನ್ನುತ್ತಾ ಕಾಂಗ್ರೆಸ್ ಬಿಜೆಪಿ ವಿರುದ್ಧ ಟ್ವಿಟ್ಟರ್ನಲ್ಲಿ ಮುಗಿಬಿದ್ದಿದ್ದು. ಸಂವಿಧಾನದ ವಿರುದ್ಧವಾಗಿ ಆಪರೇಷನ್ ಕಮಲ ಮಾಡಿದ್ದು. ‘ಮುಂಬೈ ಹೋಟೆಲ್ನಲ್ಲಿ ಹನಿಟ್ರ್ಯಾಪ್, CD ಬ್ಲ್ಯಾಕ್‌ಮೇಲ್’ ‘ಆಪರೇಷನ್ ಕಮಲಕ್ಕೆ 1 ಸಾವಿರ ಕೋಟಿ ಖರ್ಚು ಮಾಡಿದ್ದು’ ‘ಡರ್ಟಿ ಪಾಲಿಟಿಕ್ಸ್ ಯಾರದ್ದು #PayCM@BSBommai ಎಂದು ಪ್ರಶ್ನಿಸಿದೆ.
ಬಿಜೆಪಿ ಹೈಕಮಾಂಡ್‌ಗೆ ಕಪ್ಪ ಕೊಟ್ಟಿದ್ದನ್ನು ತಾವೇ ಒಪ್ಪಿದ್ದು. ಸುಳ್ಳು ಆರೋಪ ಜಗ್ಗಾಡಿ ಸದನದಲ್ಲಿಯೇ ಗಪ್ ಚುಪ್ ಆಗಿದ್ದು, ಈ ಎಲ್ಲಾ ಬಿಜೆಪಿ ಡರ್ಟಿ ಪಾಲಿಟಿಕ್ಸ್ ನೆನಪಿದ್ಯಾ #PayCM@BSBommai ಅವರೇ? ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಪ್ರಜಾಪ್ರಭುತ್ವ, ಸಂವಿಧಾನ ವಿರೋಧಿಗಳಿಗೆ ಮೌನದ ಸಾಥ್. ಮೌನದಿಂದ ಬೆಂಬಲಿಸಿದ್ದು ಬಿಜೆಪಿ ಡರ್ಟಿ ಪಾಲಿಟಿಕ್ಸ್ ಅಲ್ಲವೇ? ತಮ್ಮ ಸರ್ಕಾರದ ಭ್ರಷ್ಟಾಚಾರ, ವೈಫಲ್ಯಗಳನ್ನು ಮರೆಮಾಚಲು, ವಾರಕ್ಕೊಂದು ಕೋಮುವಿವಾದ ಸೃಷ್ಟಿಸಿ ಸಮಾಜ ಒಡೆದಿದ್ದು ರಾಜಕೀಯ ಹಿತಾಸಕ್ತಿಗೋಸ್ಕರ ಹಿಜಾಬ್ ವಿವಾದ ಹೆಸರಲ್ಲಿ ಹೆಣ್ಣುಮಕ್ಕಳ ಶಿಕ್ಷಣ ಕಿತ್ತುಕೊಂಡಿದ್ದು ಡರ್ಟಿ ಪಾಲಿಟಿಕ್ಸ್ ಅಲ್ವೇ? ಸಿಎಂ ಹುದ್ದೆ ಹೊಣೆ ಮರೆತು ರಿಯಾಕ್ಷನ್ ಹೇಳಿಕೆ. ಕೋಮು ಕಲಹಗಳನ್ನು ಹಬ್ಬಿಸಿ ಕಣ್ಮುಚ್ಚಿ ಕುಳಿತಿದ್ದು ಹೇಗೆ. ಇದು ಬಿಜೆಪಿ ಡರ್ಟಿ ಪಾಲಿಟಿಕ್ಸ್ ಅಲ್ಲವೇ? ಎಂದ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿದೆ.
ಇದನ್ನೂ ಓದಿ: ತನಿಖೆ ಪೂರ್ಣಗೊಳಿಸುತ್ತೇವೆ, ಸಿದ್ದರಾಮಯ್ಯ ಜೈಲು ಸೇರ್ತಾರೆ: ಹೊಸ ಬಾಂಬ್ ಸಿಡಿಸಿದ ಕಟೀಲ್
ಬಿಜೆಪಿಯ ಉನ್ನತ ನಾಯಕನನ್ನು ಮೂಲೆಗುಂಪು ಮಾಡಿದ್ದು. ಸರ್ಕಾರದ 2ನೇ ವರ್ಷ ಸಂಭ್ರಮದಲ್ಲೇ ಕಣ್ಣೀರು ಹಾಕಿಸಿದ್ಯಾರು. ಯಡಿಯೂರಪ್ಪರನ್ನು ಕಣ್ಣೀರು ಹಾಕಿಸಿ ಪದಚ್ಯುತಿಗೊಳಿಸಿದ್ದು. ಪಕ್ಷಕ್ಕೆ ಹಗಲಿರುಳು ದುಡಿದ ಲಿಂಗಾಯತ ನಾಯಕ ಬಿಎಸ್‌ವೈ. ಯಡಿಯೂರಪ್ಪರನ್ನು ಕಾರಣ ಕೇಳದೇ ಪದಚ್ಯುತಿ ಮಾಡಿದ್ರಿ. ನಾಯಕನ ಮೂಲೆಗುಂಪಾಗಿಸಿದ್ದು ಡರ್ಟಿ ಪಾಲಿಟಿಕ್ಸ್ ಅಲ್ವೇ? ಎಂದು ಟಾಂಗ್ ಕೊಟ್ಟಿದೆ.
ಪಠ್ಯಪುಸ್ತಕಗಳಲ್ಲೇ ರಾಜಕೀಯ ಹಿತಾಸಕ್ತಿ ತೂರಿಸಿದ್ದು ಏನು? ಕುರ್ಚಿ ಉಳಿಸಿಕೊಳ್ಳೋ ಏಕೈಕಕಾರಣಕ್ಕೆ ರಾಜಕೀಯ ಅಜೆಂಡಾ ಸಂಘ ಪರಿವಾರದ ತಾಳಕ್ಕೆ ಕುಣಿದಿದ್ದು ರಾಜಕೀಯ ಅಲ್ಲವೇ? #PayCM@BSBommai ಅವರೇ BJPDirtyPolitics ಅಲ್ಲವೇ? ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ