ಹುಬ್ಬಳ್ಳಿ: ಸಚಿವ ರಮೇಶ್ ಜಾರಕಿಹೊಳಿ ಸೆಕ್ಸ್ ವಿಡಿಯೋ ಬಯಲಾಗುತ್ತಿದ್ದಂತೆ ನಮ್ಮದು ಶಿಸ್ತಿನ ಪಕ್ಷ, BJPಯಲ್ಲಿ ಇವೆಲ್ಲಾ ಸಹಿಸಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ನಾಳೆ ದೆಹಲಿಯಲ್ಲಿ ವರಿಷ್ಠರ ಜೊತೆ ಚರ್ಚಿಸುತ್ತೇವೆ. ಮಾಧ್ಯಮಗಳಲ್ಲಿ ನೋಡಿದ್ದೇನೆ, ತಪ್ಪು ಮಾಡಿದ್ರೆ ಖಂಡಿತ ಕ್ರಮ ಜರುಗಿಸಲಾಗುವುದು. ಸಿಎಂ, ಪಕ್ಷದ ರಾಜ್ಯಾಧ್ಯಕ್ಷರ ಜೊತೆಯೂ ಮಾತನಾಡುತ್ತೇನೆ ಎಂದು ಹೇಳಿದರು.
ಎಲ್ಲ ಮಾಹಿತಿ ಪಡೆದು ವರಿಷ್ಠರ ಗಮನಕ್ಕೂ ತರುತ್ತೇನೆ ಎಂದ ಕೇಂದ್ರ ಸಚಿವ ಜೋಶಿ ಸಿಡಿ ಸತ್ಯಾಸತ್ಯತೆ ಗೊತ್ತಾಗಲಿ, ತಪ್ಪು ಸಾಬೀತಾದ್ರೆ ಕ್ರಮ ಖಚಿತ. ಇದು ಪಕ್ಷಕ್ಕೆ ಮುಜುಗರ ತರುವ ಸನ್ನಿವೇಶವಾಗಿವೆ. ನೈತಿಕತೆ ಪ್ರಶ್ನೆ ಬರುತ್ತೆ, ನಾಯಕರ ವರ್ತನೆ ಸರಿ ಇರಬೇಕು ಎಂದು ಜೋಶಿ ಹೇಳಿದರು.
‘ದೂರು ನೀಡಿದ್ದವರ ಬಳಿಯಿರುವ ಮಾಹಿತಿ ಪಡೆದಿದ್ದೇವೆ’
ಸಚಿವ ರಮೇಶ್ ಜಾರಕಿಹೊಳಿ ಸೆಕ್ಸ್ ವಿಡಿಯೋ ಕುರಿತು ದಿನೇಶ್ ಕಲ್ಲಹಳ್ಳಿ ಎಂಬುವರು ದೂರು ನೀಡಿದ್ದಾರೆ ಎಂದು ಬೆಂಗಳೂರಿನ ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್.ಅನುಚೇತ್ ಹೇಳಿದ್ದಾರೆ. ದೂರಿನ ಬಗ್ಗೆ ಮೊದಲು ಮಾಹಿತಿ ಪಡೆದುಕೊಳ್ಳುತ್ತೇವೆ. ಇಂತಹ ಪ್ರಕರಣದ ತನಿಖೆಗೆ ನಿಯಮಾವಳಿಯಿದೆ. ದೂರು ನೀಡಿದ್ದವರ ಬಳಿಯಿರುವ ಮಾಹಿತಿ ಪಡೆದಿದ್ದೇವೆ. ಮುಂದಿನ ಕ್ರಮ ಏನು ಮಾಡಬೇಕೆಂದು ನಿರ್ಧರಿಸುತ್ತೇವೆ ಎಂದು ಹೇಳಿದರು.
ದೂರು ನೀಡಿದ್ದ ದಿನೇಶ್ ಕುಟುಂಬಸ್ಥರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು. ಸಂತ್ರಸ್ತೆ ಕುಟುಂಬಸ್ಥರ ಬಗ್ಗೆ ಮಾಹಿತಿ ಪಡೆದು ಮುಂದಿನ ದಿನಗಳಲ್ಲಿ ಸಂಪರ್ಕಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ರಮೇಶ್ ಜಾರಕಿಹೊಳಿ ರಾಜೀನಾಮೆಗೆ ‘ಕೈ’ ಕಾರ್ಯಕರ್ತರ ಪಟ್ಟು; ರಾಸಲೀಲೆ ವಿಡಿಯೋ ಹೈಕಮಾಂಡ್ಗೆ ರವಾನೆ
ಇದನ್ನೂ ಓದಿ: ಸಿಡಿ ಬಾಂಬ್ ಸಿಡಿಯುತ್ತಿದ್ದಂತೆ ‘ಸಾಹುಕಾರ್’ ನಾಪತ್ತೆ.. ರಮೇಶ್ ಜಾರಕಿಹೊಳಿ ಸ್ವಕ್ಷೇತ್ರದಲ್ಲಿ ಪವರ್ ಕಟ್
ಇದನ್ನೂ ಓದಿ: ರಾಜ್ಯ ರಾಜಕೀಯದಲ್ಲಿ ‘ಸಿಡಿ’ದ ರಾಸಲೀಲೆ ಕರ್ಮಕಾಂಡ: ರಮೇಶ್ ಜಾರಕಿಹೊಳಿ ಹಸಿಬಿಸಿ ದೃಶ್ಯ ರಿಲೀಸ್