ಚುನಾವಣಾ ರಾಜಕಾರಣಕ್ಕೆ ಆತ್ಮತೃಪ್ತಿಯಿಂದ ನಿವೃತ್ತಿ ಘೋಷಿಸುತ್ತಿದ್ದೇನೆ: ಬಿಜೆಪಿ ಸಂಸದ ವಿ.ಶ್ರೀನಿವಾಸ ಪ್ರಸಾದ್

ಚುನಾವಣಾ ರಾಜಕಾರಣಕ್ಕೆ ಆತ್ಮತೃಪ್ತಿಯಿಂದ ನಿವೃತ್ತಿ ಘೋಷಿಸುತ್ತಿದ್ದೇನೆ: ಬಿಜೆಪಿ ಸಂಸದ ವಿ.ಶ್ರೀನಿವಾಸ ಪ್ರಸಾದ್
ವಿ.ಶ್ರೀನಿವಾಸ ಪ್ರಸಾದ್

ನಿವೃತ್ತಿ ಘೋಷಿಸುತ್ತಲೇ ಇದು ನನ್ನ ಅಂತಿಮ ನಿಲುವು ಎಂಬುದನ್ನೂ ತಿಳಿಸಿರುವ ವಿ.ಶ್ರೀನಿವಾಸ ಪ್ರಸಾದ್, ಯಾವುದೇ ಕಾರಣಕ್ಕೂ ಇನ್ನು ಮುಂದೆ ನಾನು ಚುನಾವಣೆಗಳಿಗೆ ಸ್ಪರ್ಧಿಸುವುದಿಲ್ಲ. ಈ‌ ಮಾತಿನಿಂದ ಹಿಂದೆ ಸರಿಯುವುದೂ ಇಲ್ಲ ಎಂದು ಹೇಳಿದ್ದಾರೆ.

TV9kannada Web Team

| Edited By: Skanda

Aug 06, 2021 | 10:15 AM

ಮೈಸೂರು: ರಾಜ್ಯ ರಾಜಕಾರಣದಲ್ಲಿ ಅದರಲ್ಲೂ ಮೈಸೂರು ಭಾಗದಲ್ಲಿ ಪ್ರಭಾವಿ ನಾಯಕನಾಗಿ ಗುರುತಿಸಿಕೊಂಡಿರುವ ಬಿಜೆಪಿ ಸಂಸದ ವಿ.ಶ್ರೀನಿವಾಸ ಪ್ರಸಾದ್ (V Srinivasa Prasad) ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಇಂದು (ಆಗಸ್ಟ್​ 06) ಅವರ ಜನ್ಮವಾಗಿದ್ದು ಇದೇ ಸಂದರ್ಭದಲ್ಲಿ ಈ ಮಹತ್ತರ ನಿಲುವನ್ನು ಪ್ರಕಟಿಸಿದ್ದಾರೆ. ನಾಲ್ಕು ವರ್ಷದ ಹಿಂದೆಯೇ ನಾನು ನಿವೃತ್ತಿ (Retirement) ಬಯಸಿದ್ದೆ. ಆದರೆ ರಾಜಕೀಯ ಬೆಳವಣಿಗೆಗಳು ಬೇರೆ ತಿರುವು ಪಡೆದ ಕಾರಣ ಸ್ಪರ್ಧೆ ಮಾಡಬೇಕಾಯಿತು. ಈಗ ನಾನು ಚುನಾವಣಾ ರಾಜಕೀಯದಿಂದ ಹಿಂದೆ ಸರಿಯಲು ತೀರ್ಮಾನಿಸಿದ್ದೇನೆ. ಇನ್ನು ಮುಂದೆ ನಾನು ಚುನಾವಣೆಗಳಿಗೆ ಸ್ಪರ್ಧಿಸುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ.

ಕಾಂಗ್ರೆಸ್​ ಪಕ್ಷದಲ್ಲಿ ಸಿದ್ಧರಾಮಯ್ಯ ಹಾಗೂ ಮತ್ತಿತರರೊಂದಿಗೆ ಮನಸ್ತಾಪ ಉಂಟಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ವಿ.ಶ್ರೀನಿವಾಸ ಪ್ರಸಾದ್ ಚಾಮರಾಜನಗರ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಜಯಭೇರಿ ಬಾರಿಸಿದ್ದರು. ಆ ಗೆಲುವು ಅವರಿಗೆ ಮಹತ್ವದ್ದೂ ಆಗಿತ್ತು. ಆದರೆ, ಅದುವೇ ಅವರ ಕೊನೆಯ ಚುನಾವಣೆಯಾಗುವಂತಾಗಿದ್ದು, ಇನ್ನುಮುಂದೆ ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಆ ಮೂಲಕ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ.

ಕೊಟ್ಟ ಮಾತಿನಿಂದ ಹಿಂದೆ ಸರಿಯುವುದಿಲ್ಲ; ಆತ್ಮತೃಪ್ತಿಯ ನಿವೃತ್ತಿ ನಿವೃತ್ತಿ ಘೋಷಿಸುತ್ತಲೇ ಇದು ನನ್ನ ಅಂತಿಮ ನಿಲುವು ಎಂಬುದನ್ನೂ ತಿಳಿಸಿರುವ ವಿ.ಶ್ರೀನಿವಾಸ ಪ್ರಸಾದ್, ಯಾವುದೇ ಕಾರಣಕ್ಕೂ ಇನ್ನು ಮುಂದೆ ನಾನು ಚುನಾವಣೆಗಳಿಗೆ ಸ್ಪರ್ಧಿಸುವುದಿಲ್ಲ. ಈ‌ ಮಾತಿನಿಂದ ಹಿಂದೆ ಸರಿಯುವುದೂ ಇಲ್ಲ ಎಂದು ಹೇಳಿದ್ದಾರೆ. ನಾನು ಆತ್ಮತೃಪ್ತಿಯಿಂದ ನಿವೃತ್ತಿಯಾಗುತ್ತಿದ್ದೇನೆ. 50 ವರ್ಷದ ನನ್ನ ರಾಜಕೀಯ ಜೀವನದ ಪುಸ್ತಕ ಬಿಡುಗಡೆಯಾಗಲಿದ್ದು, ಅದರಲ್ಲಿ ನನ್ನ ರಾಜಕೀಯ ಜೀವನದ ಎಲ್ಲಾ ಏಳು ಬೀಳು ದಾಖಲಿಸಿದ್ದೇನೆ. ನಾಲ್ಕು ವರ್ಷದ ಹಿಂದೆಯೇ ನಾನು ನಿವೃತ್ತಿ ಬಯಸಿದ್ದೆನಾದರೂ ರಾಜಕೀಯ ಬೆಳವಣಿಗೆ ಬೇರೆಯಾದ ಕಾರಣ ಮತ್ತೆ ಸ್ಪರ್ಧೆ ಮಾಡಿದ್ದೆ ಎಂದು ಹೇಳಿದ್ದಾರೆ.

ಸಂಸದ ಶ್ರೀನಿವಾಸ್ ಪ್ರಸಾದ್ ಮನೆಗೆ ಶಾಸಕ‌ ಎನ್ ಮಹೇಶ್ ಭೇಟಿ ಬಿಎಸ್​ಪಿ ತೊರೆದು ನಿನ್ನೆಯಷ್ಟೇ ಬಿಜೆಪಿ ಸೇರಿರುವ ಕೊಳ್ಳೇಗಾಲ ಶಾಸಕ ಎನ್​.ಮಹೇಶ್​, ಜಯಲಕ್ಷ್ಮಿಪುರಂನಲ್ಲಿರುವ ಶ್ರೀನಿವಾಸ ಪ್ರಸಾದ್ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಇಂದು ವಿ.ಶ್ರೀನಿವಾಸ್ ಪ್ರಸಾದ್ ಹುಟ್ಟುಹಬ್ಬದ ಪ್ರಯುಕ್ತ ಭೇಟಿ ನೀಡಿದ ಅವರು ಹೂ ಬೊಕ್ಕೆ ನೀಡಿ ಶುಭ ಕೋರಿದ್ದಾರೆ.

ಇದನ್ನೂ ಓದಿ: ಯಡಿಯೂರಪ್ಪ ಭ್ರಷ್ಟ ಮುಖ್ಯಮಂತ್ರಿ ಹೇಳಿಕೆ ವಿಚಾರ: ಸಿದ್ದರಾಮಯ್ಯ ಹೇಳಿಕೆಗೆ ಶ್ರೀನಿವಾಸ ಪ್ರಸಾದ್ ಲೆಫ್ಟ್​​-ರೈಟ್​ 

ಸಂವಿಧಾನ ಓದು ಕಾರ್ಯಕ್ರಮದಲ್ಲಿ ಅಂಬೇಡ್ಕರ್​ ಕುರಿತು ಹಾಡುವಾಗ ಭಾವುಕರಾದ ಸಂಸದ ವಿ.ಶ್ರೀನಿವಾಸ ಪ್ರಸಾದ್

(V Srinivas Prasad retired from electoral politics after he said not contest in any election)

Follow us on

Related Stories

Most Read Stories

Click on your DTH Provider to Add TV9 Kannada