ಪಂಜಾಬ್ ಸಿಎಂ ಪ್ರಧಾನ ಸಲಹೆಗಾರನ ಸ್ಥಾನಕ್ಕೆ ಪ್ರಶಾಂತ್ ಕಿಶೋರ್ ರಾಜೀನಾಮೆ; ಪತ್ರದಲ್ಲಿ ಅಚ್ಚರಿಯ ವಿಷಯ ಉಲ್ಲೇಖ
ಪ್ರಶಾಂತ್ ಕಿಶೋರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಪಂಜಾಬ್ ಮುಖ್ಯಮಂತ್ರಿ ಕಚೇರಿಗೆ ಗೊತ್ತಿರಲಿಲ್ಲ ಎಂದು ಮೂಲಗಳು ತಿಳಿಸಿವೆ. ಈ ಮಧ್ಯೆ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಾರೆ ಎಂಬುದೊಂದು ಸುದ್ದಿ ಹರಡುತ್ತಿದೆ.
ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಪ್ರಧಾನ ಸಲಹೆಗಾರ (Principal Advisor) ಸ್ಥಾನಕ್ಕೆ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ (Prashant Kishor) ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆ ಸಲ್ಲಿಸಿ ಬರೆದಿರುವ ಪತ್ರದಲ್ಲಿ ಪ್ರಶಾಂತ್ ಕಿಶೋರ್ ಒಂದು ಆಸಕ್ತಿದಾಯಕ ವಿಚಾರ ಹೇಳಿದ್ದಾರೆ. ನನಗೆ ಸಾರ್ವಜನಿಕ ಜೀವನದಿಂದ ತಾತ್ಕಾಲಿಕವಾಗಿ ವಿರಾಮಬೇಕಾಗಿದೆ. ನಿಮ್ಮ ಪ್ರಧಾನ ಸಲಹೆಗಾರನಾಗಿ ಮುಂದುವರಿಯಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ರಾಜೀನಾಮೆ ನೀಡುತ್ತಿದ್ದೇನೆ. ನಾನು ಮುಂದೆ ಏನು ಮಾಡುತ್ತೇನೆ ಎಂಬುದಿನ್ನೂ ನಿರ್ಧರಿಸಿಲ್ಲ ಎಂದು ಉಲ್ಲೇಖಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಏಕಾಏಕಿ ನಿರ್ಧಾರ? ಪ್ರಶಾಂತ್ ಕಿಶೋರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಪಂಜಾಬ್ ಮುಖ್ಯಮಂತ್ರಿ ಕಚೇರಿಗೆ ಗೊತ್ತಿರಲಿಲ್ಲ ಎಂದು ಮೂಲಗಳು ತಿಳಿಸಿವೆ. ಈ ಮಧ್ಯೆ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಾರೆ ಎಂಬುದೊಂದು ಸುದ್ದಿ ಹರಡುತ್ತಿದೆ. ಅದೇ ಹೊತ್ತಲ್ಲಿ ಹೀಗೆ ಪ್ರಧಾನ ಸಲಹೆಗಾರನ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದು, ಅನುಮಾನ ಇನ್ನಷ್ಟು ಬಲವಾಗುವಂತೆ ಮಾಡಿದೆ. ಕಳೆದ ತಿಂಗಳು ಪ್ರಶಾಂತ್ ಕಿಶೋರ್, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾರನ್ನು ಭೇಟಿಯಾಗಿದ್ದರು. ಆಗಿನಿಂದಲೇ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಹಾಗೇ, ಪ್ರಶಾಂತ್ ಕಿಶೋರ್ ಪಕ್ಷಕ್ಕೆ ಸೇರ್ಪಡೆಯಾಗುವ ಸಂಬಂಧ ಚರ್ಚೆ ನಡೆಸಲು ರಾಹುಲ್ ಗಾಂಧಿ ತಮ್ಮ ಪಕ್ಷದ ಹಿರಿಯ ನಾಯಕರೊಂದಿಗೆ ಸಭೆ ನಡೆಸಿದ್ದರು ಎಂಬ ಮಾಹಿತಿಯೂ ಸಿಕ್ಕಿದೆ. ಬರೀ ಇವಿಷ್ಟೇ ಅಲ್ಲ, ಪ್ರಶಾಂತ್ ಕಿಶೋರ್ ಮತ್ತು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಭೇಟಿಯೂ ಸಹ ಹಲವು ಊಹಾಪೋಹಗಳಿಗೆ ಕಾರಣವಾಗಿತ್ತು. ಸದ್ಯಕ್ಕಂತೂ ಪ್ರಶಾಂತ್ ಕಿಶೋರ್ ಮುಂದಿನ ನಡೆ ಬಗ್ಗೆ ಯಾವುದೇ ಮಾಹಿತಿಯೂ ಇಲ್ಲ.
ಇದನ್ನೂ ಓದಿ: Personal Finance: ಹಣದ ಎಮರ್ಜೆನ್ಸಿ ಇದ್ದಲ್ಲಿ ಎಫ್ಡಿ ಮೇಲೆ ಸಾಲ ತೆಗೆದುಕೊಳ್ಳೋದಾ ಅಥವಾ ಎಫ್ಡಿ ಮುರಿಸೋದಾ?
ವದುವೆಯಲ್ಲಿ ವರನ ಸಕತ್ ಡಾನ್ಸ್! ನಾಚಿ ನೀರಾದ ವಧುವಿನ ವಿಡಿಯೋ ವೈರಲ್
Prashant Kishor Resigns As Principal Advisor of Punjab Cm
Published On - 12:01 pm, Thu, 5 August 21