Ram Mandir: ಅಯೋಧ್ಯೆ ರಾಮಮಂದಿರ ಭೂಮಿಪೂಜೆ ವಾರ್ಷಿಕೋತ್ಸವ; ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಪ್ರಧಾನಿ ಮೋದಿ

Ram Temple Bhumi Puja Anniversary: ಭೂಮಿಪೂಜೆ ವಾರ್ಷಿಕೋತ್ಸವದ ನಿಮಿತ್ತ ಮಧ್ಯಾಹ್ನ 1 ಗಂಟೆಗೆ ಉಚಿತ ಪಡಿತರ ಯೋಜನೆ ಸಂಬಂಧಪಟ್ಟ ಸಮಾರಂಭದಲ್ಲಿ, ವರ್ಚ್ಯುವಲ್​ ಆಗಿ ಮಾತನಾಡಲಿದ್ದಾರೆ.

Ram Mandir: ಅಯೋಧ್ಯೆ ರಾಮಮಂದಿರ ಭೂಮಿಪೂಜೆ ವಾರ್ಷಿಕೋತ್ಸವ; ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಪ್ರಧಾನಿ ಮೋದಿ
ಅಯೋಧ್ಯೆ ರಾಮಮಂದಿರಕ್ಕೆ ಭೂಮಿ ಪೂಜೆ ನೆರವೇರಿಸಿದ ಸಂದರ್ಭ
Follow us
| Updated By: Lakshmi Hegde

Updated on:Aug 05, 2021 | 10:12 AM

ದೆಹಲಿ: ಕೋಟ್ಯಂತರ ಹಿಂದುಗಳ ನಿರೀಕ್ಷೆಯಾಗಿದ್ದ ಅಯೋಧ್ಯಾ ಶ್ರೀರಾಮಮಂದಿರ (Ayodhya Ram Temple) ನಿರ್ಮಾಣಕ್ಕೆ ನಾಂದಿ ಹಾಡಿ ಇಂದಿಗೆ ಒಂದುವರ್ಷ. ಅಂದರೆ 2020ರ ಆಗಸ್ಟ್​ 5ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಯವರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆ (ಪ್ರತಿಷ್ಠಾಪನೆ) (Bhoomi Pujan ನೆರವೇರಿಸಿದ್ದರು. ಇಂದು ಅದರ ವಾರ್ಷಿಕೋತ್ಸವದ ನಿಮಿತ್ತ ಮಧ್ಯಾಹ್ನ 1 ಗಂಟೆಗೆ ಉಚಿತ ಪಡಿತರ ಯೋಜನೆ ಸಂಬಂಧಪಟ್ಟ ಸಮಾರಂಭದಲ್ಲಿ, ವರ್ಚ್ಯುವಲ್​ ಆಗಿ ಮಾತನಾಡಲಿದ್ದಾರೆ. ಈ ಸಮಾರಂಭದಲ್ಲಿ 500ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಇನ್ನು ಭೂಮಿಪೂಜೆ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅಯೋಧ್ಯೆಗೆ ಭೇಟಿ ನೀಡಿ, ಅಲ್ಲಿನ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಭೂಮಿಪೂಜೆ ವಾರ್ಷಿಕೋತ್ಸವ ಆಚರಣೆ ಹಿನ್ನೆಲೆಯಲ್ಲಿ ವಿಶೇಷವಾಗಿ ಪ್ರಾರ್ಥನೆ ಸಲ್ಲಿಸಲು, ಧಾರ್ಮಿಕ ಆಚರಣೆಗೆ ವ್ಯವಸ್ಥೆ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರೂ ಕೂಡ ಇಲ್ಲಿಗೆ ಭೇಟಿ ನೀಡಲಿದ್ದಾರೆ ಎಂದು ಹೇಳಲಾಗಿದೆ.

ರಾಮಲಲ್ಲಾಗೆ ಹಳದಿ ರೇಷ್ಮೆ ಭೂಮಿಪೂಜೆ ವಾರ್ಷಿಕೋತ್ಸವ ನಿಮಿತ್ತ ಇಂದು ರಾಮಲಲ್ಲಾ ದೇವರಿಗೆ ಹಳದಿ ಬಣ್ಣದ ರೇಷ್ಮೆ ಬಟ್ಟೆಯಿಂದ ಅಲಂಕಾರ ಮಾಡಲಾಗಿದೆ. ಇದನ್ನು ಮನೀಶ್​ ತ್ರಿಪಾಠಿ ವಿನ್ಯಾಸ ಮಾಡಿದ್ದಾರೆ. ಇನ್ನು ಶ್ರೀರಾಮಮಂದಿರಕ್ಕೆ 2023ರಿಂದ ಭಕ್ತರಿಗೆ ಅವಕಾಶ ಸಿಗಲಿದೆ ಎಂದು ಬುಧವಾರ ಸರ್ಕಾರದ ಮೂಲಗಳು ತಿಳಿಸಿವೆ. ಆದಾಗ್ಯೂ ದೇವಾಲಯದ ಸುತ್ತ ಸುಮಾರು 70 ಎಕರೆ ಪ್ರದೇಶದಲ್ಲಿ ಕ್ಯಾಂಪಸ್​ ನಿರ್ಮಾಣ ಪೂರ್ಣಗೊಳ್ಳುವುದು 2025ರಲ್ಲಿ ಎಂದೂ ಹೇಳಲಾಗಿದೆ.

ಇದನ್ನೂ ಓದಿ: ಫೇಸ್‌ಬುಕ್ ಪೋಸ್ಟ್‌ಗೆ ಶಾಸಕಿ ಪೂರ್ಣಿಮಾ ಸ್ಪಷ್ಟನೆ, ಹಾಗಾದ್ರೆ ಬಿಜೆಪಿ ಬಗ್ಗೆ ಅವರು ಹೇಳಿದ್ದೇನು?

ಸಿಬಿಎಸ್‌ಇ 10ನೇ ತರಗತಿ ಫಲಿತಾಂಶದಲ್ಲಿ ಅಕ್ರಮ ಆರೋಪ; ಶ್ರೀ ಚೈತನ್ಯ ಶಾಲೆ ಬಳಿ ಪೋಷಕರ ಪ್ರತಿಭಟನೆ‌

PM Modi to virtually attend event ahead of Ayodhya bhoomi pujan anniversary

Published On - 9:59 am, Thu, 5 August 21

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ