ಫೇಸ್‌ಬುಕ್ ಪೋಸ್ಟ್‌ಗೆ ಶಾಸಕಿ ಪೂರ್ಣಿಮಾ ಸ್ಪಷ್ಟನೆ, ಹಾಗಾದ್ರೆ ಬಿಜೆಪಿ ಬಗ್ಗೆ ಅವರು ಹೇಳಿದ್ದೇನು?

ಫೇಸ್‌ಬುಕ್ ಪೋಸ್ಟ್‌ಗೆ ಶಾಸಕಿ ಪೂರ್ಣಿಮಾ ಸ್ಪಷ್ಟನೆ, ಹಾಗಾದ್ರೆ ಬಿಜೆಪಿ ಬಗ್ಗೆ ಅವರು ಹೇಳಿದ್ದೇನು?
ಶಾಸಕಿ ಪೂರ್ಣಿಮಾ ಶ್ರೀನಿವಾಸ್

ಶಶಿಕಲಾ ಜೊಲ್ಲೆ ವಿರುದ್ಧ ಭ್ರಷ್ಟಾಚಾರ ಆರೋಪವಿತ್ತು. ಹೀಗಾಗಿ ಯಾದವ ಸಮುದಾಯದ ಏಕೈಕ ಶಾಸಕಿಯಾದ ನನಗೆ ಮಂತ್ರಿ ಸ್ಥಾನದ ನಿರೀಕ್ಷೆಯಿತ್ತು. ಮಾಧ್ಯಮಗಳಲ್ಲೂ ಈ ಬಗ್ಗೆ ವರದಿ ಬರುತ್ತಿತ್ತು. ಆದರೆ ಏಕಾಏಕಿ ಬೆಳಗ್ಗೆ 10 ಗಂಟೆಗೆ ಬದಲಾಯಿತು. ಇದಕ್ಕೆ ಕಾರಣ ಏನೆಂದು ನಾನು ಪ್ರಶ್ನೆ ಮಾಡಿದ್ದೇನೆ ಎಂದು ಶಾಸಕಿ ಪೂರ್ಣಿಮಾ ತಿಳಿಸಿದರು.

TV9kannada Web Team

| Edited By: Ayesha Banu

Aug 05, 2021 | 10:00 AM

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ತಮ್ಮ ಫೇಸ್‌ಬುಕ್ ಪೋಸ್ಟ್‌ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಪಕ್ಷದ ಮೇಲೆ ಮುನಿಸು ಎಂದು ಹಲವರು ಪ್ರಶ್ನಿಸಿದ್ದಾರೆ. ಖಂಡಿತವಾಗಿ ನನಗೆ ಪಕ್ಷದ ಮೇಲೆ ಮುನಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಬೊಮ್ಮಾಯಿ ಸಚಿವ ಸಂಪುಟದಲ್ಲಿ ಸಚಿವಾಕಾಂಕ್ಷಿಯಾಗಿದ್ದ ಶಾಸಕಿ ಪೂರ್ಣಿಮಾ ಹೆಸರು ಕೇಳಿ ಬಂದಿತ್ತು. ಈ ಬಗ್ಗೆ ಪೂರ್ಣಿಮಾ ಕೂಡ ಸಂತೋಷ ಹಂಚಿಕೊಂಡಿದ್ದರು. ಆದ್ರೆ ಅಧಿಕೃತ ಮಾಹಿತಿ ಸಿಕ್ಕಿಲ್ಲ ಎಂದು ತಿಳಿಸಿದ್ದರು. ಶಾಸಕಿ ಪೂರ್ಣಿಮಾಗೆ ಈ ಬಾರಿ ಸಚಿವೆ ಪಟ್ಟ ಸಿಗುವುದು ಬಹುತೇಕ ಖಚಿತವೆಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಬೆಳಗ್ಗೆ 10 ಗಂಟೆಯ ಬಳಿಕ ಈ ಸುದ್ದಿ ಸುಳ್ಳಾಯಿತು. ಬೊಮ್ಮಾಯಿ ಸಚಿವ ಸಂಪುಟದಲ್ಲಿ ತನ್ನ ಹೆಸರಿಲ್ಲ ಎಂಬ ಬಗ್ಗೆ ತಿಳಿಯುತ್ತಿದ್ದಂತೆ ಶಾಸಕಿ ಪೂರ್ಣಿಮಾ ತಮ್ಮ ಫೇಸ್ಬುಕ್ ಖಾತೆಯಲ್ಲಿ ಫೋಸ್ಟ್ವೊಂದನ್ನು ಹಂಚಿಕೊಂಡಿದ್ದರು. ಈ ಫೋಸ್ಟ್ ಬಳಿಕ ಅನೇಕರು ನೀವು ಪಕ್ಷದ ಮೇಲೆ ಮುನಿಸಿಕೊಂಡಿದ್ದೀರಾ ಎಂದು ಪ್ರಶ್ನಿಸಿದ್ದರು. ಸದ್ಯ ಜನರ ಅನುಮಾನಕ್ಕೆ ಪೂರ್ಣಿಮಾ ಉತ್ತರ ಕೊಟ್ಟಿದ್ದಾರೆ.

ಶಶಿಕಲಾ ಜೊಲ್ಲೆ ವಿರುದ್ಧ ಭ್ರಷ್ಟಾಚಾರ ಆರೋಪವಿತ್ತು

ಪಕ್ಷದ ಮೇಲೆ ಮುನಿಸು ಎಂದು ಹಲವರು ಪ್ರಶ್ನಿಸಿದ್ದಾರೆ. ಖಂಡಿತವಾಗಿ ನನಗೆ ಬಿಜೆಪಿ ಮೇಲೆ ಮುನಿಸು ಇಲ್ಲ. ನನ್ನ ಅಭಿಪ್ರಾಯವನ್ನ ಪಕ್ಷದ ಜತೆ ಹಂಚಿಕೊಂಡಿದ್ದೇನೆ. ಕಳೆದ ಬಾರಿ ಜೊಲ್ಲೆ ಮಂತ್ರಿ ಆದಾಗ ವಿರೋಧಿಸಿಲ್ಲ. ನಾನು ಸಚಿವ ಸ್ಥಾನ ಬೇಕೆಂದು ಲಾಬಿ ಮಾಡಿರಲಿಲ್ಲ. ಶಶಿಕಲಾ ಜೊಲ್ಲೆ ವಿರುದ್ಧ ಭ್ರಷ್ಟಾಚಾರ ಆರೋಪವಿತ್ತು. ಹೀಗಾಗಿ ಯಾದವ ಸಮುದಾಯದ ಏಕೈಕ ಶಾಸಕಿಯಾದ ನನಗೆ ಮಂತ್ರಿ ಸ್ಥಾನದ ನಿರೀಕ್ಷೆಯಿತ್ತು. ಮಾಧ್ಯಮಗಳಲ್ಲೂ ಈ ಬಗ್ಗೆ ವರದಿ ಬರುತ್ತಿತ್ತು. ಆದರೆ ಏಕಾಏಕಿ ಬೆಳಗ್ಗೆ 10 ಗಂಟೆಗೆ ಬದಲಾಯಿತು. ಇದಕ್ಕೆ ಕಾರಣ ಏನೆಂದು ನಾನು ಪ್ರಶ್ನೆ ಮಾಡಿದ್ದೇನೆ ಎಂದು ಶಾಸಕಿ ಪೂರ್ಣಿಮಾ ತಿಳಿಸಿದರು.

ಇನ್ನು ಮಾತು ಮುಂದುವರೆಸಿದ ಅವರು, ನನಗೆ ಅಲ್ಲದಿದ್ದರೂ ಪಕ್ಷದ ಬೇರೆ ಮಹಿಳೆಯರಿಗೆ ಅವಕಾಶ ನೀಡಬೇಕಿತ್ತು. ಮಹಿಳಾ ಶಾಸಕಿಯಾದ ನನಗೂ ಸಚಿವ ಸ್ಥಾನ ಕೊಟ್ಟಿಲ್ಲ. ನಮ್ಮ ಜಿಲ್ಲೆಗೂ ಸಚಿವ ಸ್ಥಾನವನ್ನು ಕೊಟ್ಟಿಲ್ಲ. ನನ್ನ ಅಭಿಪ್ರಾಯ ಪಕ್ಷವಿರೋಧಿ ಎಂದು ಹೇಳಬೇಡಿ. ನನ್ನ ಅಭಿಪ್ರಾಯದ ಬಗ್ಗೆ ಚಿಂತನೆ ಮಾಡಬೇಕಾಗಿದೆ. ಗೊಲ್ಲ ಸಮುದಾಯದ ನಾನೊಬ್ಬಳೇ ಶಾಸಕಿಯಾಗಿದ್ದೇನೆ. ಈ ಬಾರಿ ನಮ್ಮ ಜನಾಂಗದ ಬಗ್ಗೆ ಪಕ್ಷ ನಿರ್ಲಕ್ಷ್ಯ ಮಾಡಿದೆ? ಹೀಗಾಗಿ ಮನಸ್ಸಿನಲ್ಲಿ ಇರುವ ಬೇಸರವನ್ನ ವ್ಯಕ್ತಪಡಿಸಿದ್ದೇನೆ. ಈ ಹಿಂದೆ ಕಾಂಗ್ರೆಸ್, ಜನತಾದಳ ಸರ್ಕಾರ ನಮ್ಮ ಸಮುದಾಯಕ್ಕೆ ಅವಕಾಶ ನೀಡಿತ್ತು. ಇದನ್ನು ಪಕ್ಷ, ಹೈಕಮಾಂಡ್ ಅರ್ಥ ಮಾಡಿಕೊಳ್ಳಬೇಕು ಎಂದು ಚಿತ್ರದುರ್ಗ ಜಿಲ್ಲೆ ಹಿರಿಯೂರು ಶಾಸಕಿ ಪೂರ್ಣಿಮಾ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Tokyo Olympics: ಇದು ಐತಿಹಾಸಿಕ ಕ್ಷಣ ಪ್ರತಿಯೊಬ್ಬ ಭಾರತೀಯನ ನೆನಪಲ್ಲಿ ಉಳಿಯುವಂತಹ ದಿನ: ಪ್ರಧಾನಿ ಮೋದಿ

Follow us on

Related Stories

Most Read Stories

Click on your DTH Provider to Add TV9 Kannada