ವಯನಾಡ್: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಕೇರಳದ ವಯನಾಡ್‌ನಿಂದ ಸ್ಪರ್ಧಿಸುತ್ತಿರುವ ಮೊದಲ ಚುನಾವಣೆಯಲ್ಲಿಯೇ ನಿರೀಕ್ಷೆಗಿಂತ ಉತ್ತಮ ಪ್ರದರ್ಶನ ನೀಡಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ರಾಯ್ಬರೇಲಿ ಹಾಗೂ ಕೇರಳದ ವಯನಾಡು ಕ್ಷೇತ್ರಗಳಲ್ಲಿ ಗೆದ್ದಿದ್ದ ಅವರ ಸಹೋದರ ರಾಹುಲ್ ಗಾಂಧಿ ವಯನಾಡನ್ನು ತೊರೆದು ರಾಯ್ಬರೇಲಿಯನ್ನು ಆಯ್ಕೆ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ವಯನಾಡಿನಲ್ಲಿ ಉಪಚುನಾವಣೆ ಘೋಷಣೆಯಾಗಿತ್ತು. ವಯನಾಡಿನ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ 4 ಲಕ್ಷ ಮತಗಳ ಅಂತರದಿಂದ ಮುನ್ನಡೆಯಲ್ಲಿದ್ದಾರೆ. ಇದು ಅದೇ ಕ್ಷೇತ್ರದಿಂದ ಗೆದ್ದ ಅವರ ಸಹೋದರ ರಾಹುಲ್ ಗಾಂಧಿ ಗೆದ್ದ ಅಂತರಕ್ಕಿಂತ ಹೆಚ್ಚಿನ ಮತಗಳಾಗಿವೆ.
2024 ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರು ತಮ್ಮ ಎದುರಾಳಿಯನ್ನು 3,64,422 ಮತಗಳಿಂದ ಸೋಲಿಸಿ 6,47,445 ಮತಗಳೊಂದಿಗೆ ವಯನಾಡ್ ಅನ್ನು ಗೆದ್ದರು. ಸದ್ಯಕ್ಕೆ ಪ್ರಿಯಾಂಕಾ ಅವರು 6,17,942 ಮತಗಳನ್ನು ಪಡೆದಿದ್ದು, ಮತ ಎಣಿಕೆ ಮುಂದುವರಿದಿದೆ. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ)ಯ ಸತ್ಯನ್ ಮೊಕೇರಿ 2,02,261 ಮತಗಳನ್ನು ಪಡೆದು ತೀರಾ ಹಿಂದುಳಿದಿದ್ದರೆ, ಬಿಜೆಪಿ ಅಭ್ಯರ್ಥಿ ನವ್ಯಾ ಹರಿದಾಸ್ 1,06,724 ಮತಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: ಜೋ ಬೈಡೆನ್‌ನಂತೆ ಪ್ರಧಾನಿ ಮೋದಿಗೂ ನೆನಪಿನ ಶಕ್ತಿಯ ಸಮಸ್ಯೆಯಿದೆ; ರಾಹುಲ್ ಗಾಂಧಿ ಟೀಕೆ
ವಯನಾಡ್ ಕ್ಷೇತ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಪ್ರಿಯಾಂಕಾ ಸ್ಪರ್ಧಿಸಿದ್ದಾರೆ. ಈ ಹಿಂದೆ ರಾಹುಲ್ ಗಾಂಧಿ ಸಂಸದರಾಗಿದ್ದ ವಯನಾಡ್ ಕ್ಷೇತ್ರವು ಪ್ರಿಯಾಂಕಾ ಗಾಂಧಿ ವಾದ್ರಾ ರೇಸ್‌ಗೆ ಕಾಲಿಡುತ್ತಿದ್ದಂತೆ ರಾಷ್ಟ್ರವ್ಯಾಪಿ ಗಮನ ಸೆಳೆದಿದೆ. ಚಲಾವಣೆಯಾದ 9.52 ಲಕ್ಷ ಮತಗಳಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಸುಮಾರು 6 ಲಕ್ಷ ಮತಗಳನ್ನು ಗಳಿಸಬಹುದು ಎಂದು ಸ್ಥಳೀಯ ಕಾಂಗ್ರೆಸ್ ನಾಯಕರು ಭವಿಷ್ಯ ನುಡಿದಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ