ಶಿಸ್ತು ಸಮಿತಿಯ ಶೋಕಾಸ್​ ನೋಟಿಸ್​ ಬಗ್ಗೆ ಅನುಮಾವಿದೆ, ವಿಜಯೇಂದ್ರ ವಿರುದ್ಧ ಹೋರಾಟ ನಿರಂತರ: ಯತ್ನಾಳ್​​

|

Updated on: Dec 02, 2024 | 2:33 PM

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿವೈ ವಿಜಯೇಂದ್ರ ಅವರ ವಿರುದ್ಧ ಹೋರಾಟ ನಿರಂತರವಾಗಿರುತ್ತದೆ ಎಂದು ಹೇಳಿದ್ದಾರೆ. ಕರ್ನಾಟಕ ಬಿಜೆಪಿಯಲ್ಲಿ ಎರಡು ಬಣಗಳ ನಡುವೆ ಭಿನ್ನಾಭಿಪ್ರಾಯ ತೀವ್ರಗೊಂಡಿದೆ ಎಂಬುದನ್ನು ಇದು ಸೂಚಿಸುತ್ತದೆ.

ಶಿಸ್ತು ಸಮಿತಿಯ ಶೋಕಾಸ್​ ನೋಟಿಸ್​ ಬಗ್ಗೆ ಅನುಮಾವಿದೆ, ವಿಜಯೇಂದ್ರ ವಿರುದ್ಧ ಹೋರಾಟ ನಿರಂತರ: ಯತ್ನಾಳ್​​
ಬಸನಗೌಡ ಪಾಟೀಲ್​ ಯತ್ನಾಳ್
Follow us on

ನವದೆಹಲಿ/ಬೆಂಗಳೂರು, ಡಿಸೆಂಬರ್​ 02: ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ (BY Vijayendra) ಕೆಲಸ ಮಾಡುತ್ತಿಲ್ಲ. ಬಿ.ವೈ.ವಿಜಯೇಂದ್ರ ಅವರ ವಿರುದ್ಧ ಹೋರಾಟ ನಿರಂತರವಾಗಿರುತ್ತದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ (Basangouda Patil Yatnal)​​ ಹೇಳಿದರು. ಬಿಎಸ್​ ಯಡಿಯೂರಪ್ಪ ಬೆದರಿಕೆಯಿಂದ ಬಿವೈ ವಿಜಯೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಬಿ.ಎಸ್​.ಯಡಿಯೂರಪ್ಪ ಅವರ ವಿರುದ್ಧ ಗಂಭೀರವಾದ ಪ್ರಕರಣಗಳಿವೆ. ಬಿಎಸ್ ಯಡಿಯೂರಪ್ಪ, ಬಿವೈ ವಿಜಯೇಂದ್ರ ಅವರು ಹೆದರಬೇಕು, ನಾನು ಯಾಕೆ ಹೆದರಬೇಕು? ಎಂದು ಪ್ರಶ್ನಿಸಿದರು.

ನವದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನೊಟೀಸ್ ಬಂದ ಕೂಡಲೇ ಒಂದೇ ನಿಮಿಷದಲ್ಲಿ ಉತ್ತರ ಕೊಡುತ್ತೇನೆ. ಈಗಾಗಲೇ ಉತ್ತರ ಸಿದ್ಧಪಡಿಸಿದ್ದೇನೆ. ಆದರೆ, ಅಧಿಕೃತವಾಗಿ ಕೇಂದ್ರ ಸಮಿತಿಯಿಂದ ನೋಟಿಸ್ ಬಂದಿಲ್ಲ. ಬಿವೈ ವಿಜಯೇಂದ್ರ ಅವರು ನೋಟಿಸ್ ಕಳುಹಿಸಿರುವ ಸಾಧ್ಯತೆ ಇದೆ. ಹೀಗಾಗಿ ಉತ್ತರಿಸಲಿಲ್ಲ. ಇ-ಮೇಲ್​ ಅಥವಾ ರಿಜಿಸ್ಟರ್ ಪೋಸ್ಟ್​ ಮೂಲಕ ನೋಟಿಸ್​ ಬರಬೇಕು. ಪಕ್ಷದಿಂದ ಅಧಿಕೃತವಾಗಿ ನೋಟಿಸ್​ ಬಂದ ಮೇಲೆ ಉತ್ತರಿಸುತ್ತೇನೆ ಎಂದರು.

ಇದನ್ನೂ ಓದಿ: ಶೋಕಾಸ್​ ನೋಟಿಸ್​ ಬೆನ್ನಲ್ಲೇ ಯತ್ನಾಳ್​ ಬಣ ದೆಹಲಿಗೆ: ಕುತೂಹಲ ಮೂಡಿಸಿದ ಭೇಟಿ

ಇದುವರೆಗೆ ಮೂರು ನೋಟಿಸ್ ಬಂದಿತ್ತು. ಎರಡು ನೋಟಿಸ್​ಗೆ ಉತ್ತರಿಸಿದ್ದೇನೆ. ಮತ್ತೊಂದು ನೋಟಿಸ್ ಫೇಕ್ ಎಂಬ ಅನುಮಾನ ಬಂದಿತ್ತು. ಹೀಗಾಗಿ ಮೂರನೇ ನೋಟಿಸ್​ಗೆ ನಾನು ಯಾವುದೇ ಉತ್ತರ ನೀಡಲಿಲ್ಲ ಎಂದು ಹೇಳಿದರು.

ಹೊಂದಾಣಿಕೆ ರಾಜಕಾರಣ ಇರಬಾರದೆಂದು ವರಿಷ್ಠರೇ ಹೇಳಿದ್ದಾರೆ. ಇದು ಜನಪರ ಹೋರಾಟ, ಅವರದ್ದು ಕುಟುಂಬಶಾಹಿ ಹೋರಾಟ. ಅವರದ್ದು ಹೋರಾಟ ಅಲ್ಲ, ಪತ್ರಿಕಾಗೋಷ್ಠಿ ಅಷ್ಟೇ. ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರು ನಮ್ಮ ಜೊತೆ ಇದ್ದಾರೆ ಎಂದು ವಾಗ್ದಾಳಿ ಮಾಡಿದರು.

ಅನುಭವ ಮಂಟಪ ಪೀರ್ ಸಾಬ್​ ದರ್ಗಾ ಆಗಿದೆ. ಇವರಿಗೆ ತಾಕತ್ತಿದ್ದರೆ ಪೀರ್ ಸಾಬ್ ದರ್ಗಾ ತೆರವು ಮಾಡಬೇಕು. ಸೋಕಾಲ್ಡ್ ಲಿಂಗಾಯತ ನಾಯಕರು ಇದ್ದಾರಲ್ಲ ತೆರವು ಮಾಡಿಸಲಿ. ಶಾಮನೂರು ಶಿವಶಂಕರಪ್ಪ, ಭೀಮಣ್ಣ ಖಂಡ್ರೆ, ಬಿಎಸ್​ ಯಡಿಯೂರಪ್ಪ, ಈಶ್ವರ ಖಂಡ್ರೆ ಪೀರ್ ಸಾಬ್ ದರ್ಗಾ ತೆರವುಮಾಡಿಲಿ. ಸಚಿವ ಈಶ್ವರ ಖಂಡ್ರೆ ಅವರು ಸರ್ಕಸ್​ನಲ್ಲಿರುವ ಜೋಕರ್ ತರ ಇದ್ದಾರೆ. ಸಚಿವ ಈಶ್ವರ ಖಂಡ್ರೆ ಮಾನಸಿಕ ರೋಗಿ ಇದ್ದಂತೆ ಇದ್ದಾರೆ ಎಂದು ​ವಾಗ್ದಾಳಿ ಮಾಡಿದರು.

ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​, ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ, ವಾಗ್ದಾಳಿ ಮಾಡುತ್ತಿದ್ದಾರೆ. ಅಲ್ಲದೇ ಕರ್ನಾಟಕ ಬಿಜೆಪಿಯಲ್ಲಿ ಎರಡು ಬಣಗಳು ಸೃಷ್ಟಿಯಾಗಿವೆ. ಈ ಹಿನ್ನೆಲಯಲ್ಲಿ ಕೇಂದ್ರ ನಾಯಕರು ಬಸನಗೌಡ ಪಾಟೀಲ್​ ಅವರಿಗೆ ಶೋಕಾಸ್​ ನೋಟಿಸ್​ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:35 pm, Mon, 2 December 24