ಮಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಹೊಡೆದಾಟ, ಪೊಲೀಸ್ ಎಂಟ್ರಿ
ಮಂಗಳೂರು ಕಾಂಗ್ರೆಸ್ ಪಕ್ಷದ ಕಚೇರಿ ಸೋಮವಾರ ಹೊಡೆದಾಟಕ್ಕೆ ಸಾಕ್ಷಿಯಾಯಿತು. ಮುಖಂಡರಿಬ್ಬರು ಹೊಡೆದಾಡಿಕೊಂಡ ಪರಿಣಾಮ ಪಕ್ಷದ ಕಚೇರಿಗೆ ಪೊಲೀಸರು ಆಗಮಿಸುವಂತಾಯಿತು. ಉಪಚುನಾವಣೆಯಲ್ಲಿ ಆಯ್ಕೆಯಾದವರಿಗೆ ಸನ್ಮಾನ ಮಾಡುವ ವಿಚಾರವಾಗಿ ಹೊಡೆದಾಟ ನಡೆದಿದೆ. ವಿಡಿಯೋ ಇಲ್ಲಿದೆ.
ಮಂಗಳೂರು, ಡಿಸೆಂಬರ್ 2: ಮಂಗಳೂರಿನ ಮಲ್ಲಿಕಟ್ಟೆ ಬಳಿ ಇರುವ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಮುಖಂಡರು ಹೊಡೆದಾಡಿಕೊಂಡಿದ್ದಾರೆ. ಪಂಚಾಯಿತಿ ಉಪಚುನಾವಣೆಯಲ್ಲಿ ಆಯ್ಕೆಯಾದವರನ್ನು ಸನ್ಮಾನಿಸುವ ವಿಚಾರವಾಗಿ ಆರಂಭವಾದ ಮಾತಿನ ಚಕಮಕಿ ನಂತರ ಹೊಡೆದಾಟಕ್ಕೆ ತಿರುಗಿದೆ. ಮೊದಲಿಗೆ ಕಾಂಗ್ರೆಸ್ ಮುಖಂಡ ಪ್ರಕಾಶ್ ಶೆಟ್ಟಿ ತುಂಬೆಗೆ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ಕುಮಾರ್ ಹೊಡೆದಿದ್ದಾರೆ. ಇದೇ ವೇಳೆ, ತಿರುಗಿಸಿ ಹರೀಶ್ಗೆ ಹೊಡೆಯಲು ಪ್ರಕಾಶ್ ಶೆಟ್ಟಿ ಮುಂದಾಗಿದ್ದಾರೆ.
ಘಟನೆ ಬೆನ್ನಲ್ಲೇ ಕಾಂಗ್ರೆಸ್ ಕಚೇರಿಗೆ ಪೊಲೀಸರು ಆಗಮಿಸಿದ್ದಾರೆ. ಸಂಟ್ರಲ್ ಎಸಿಪಿ ಮತ್ತು ಕದ್ರಿ ಪೊಲೀಸರು ಆಗಮಿಸಿದ್ದಾರೆ. ಸದ್ಯ ಕಾಂಗ್ರೆಸ್ ಕಚೇರಿ ಬಳಿ ಕಾರ್ಯಕರ್ತರು ಜಮಾಯಿಸುತ್ತಿದ್ದಾರೆ.
ಸಂಧಾನದ ಬಳಿಕವೂ ನಿಲ್ಲದ ಉದ್ವಿಗ್ನತೆ
ಕಾಂಗ್ರೆಸ್ ನಾಯಕರ ಮಧ್ಯೆ ಸಂಧಾನ ನಡೆಯಿತಾದರೂ ನಂತರವೂ ಕಚೇರಿ ಬಳಿ ಕಾರ್ಯಕರ್ತರು ಜಮಾಯಿಸಿದರು. ಉಭಯ ನಾಯಕರ ತಂಡದ ಕಾರ್ಯಕರ್ತರು ಜಮಾಯಿಸಿದರು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಪೊಲೀಸ್ ನಿಯೋಜನೆ ಮಾಡಲಾಗಿದೆ. ಒಂದು ಕೆಎಸ್ಆರ್ಪಿ ತುಕಡಿ ನಿಯೋಜನೆ ಮಾಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ