ಕೊವಿಡ್​ ನಿರ್ವಹಣೆ ವೇಳೆ ಕೋಟ್ಯಂತರ ರೂ. ಅವ್ಯವಹಾರ ಆರೋಪ: ಯಡಿಯೂರಪ್ಪ ಸೇರಿದಂತೆ 28 ಜನರ ವಿರುದ್ಧ ಲೋಕಾಯುಕ್ತಗೆ ದೂರು

ಬರೋಬ್ಬರಿ 821.22 ಕೋಟಿ ಬೃಹತ್ ಮೊತ್ತದ ಹಗರಣ ನಡೆಸಿದ ಆರೋಪ ಹಿನ್ನೆಲೆ ಮಾಜಿ ಸಿಎಂ ಬಿ.ಎಸ್​​ ಯಡಿಯೂರಪ್ಪ, ಸಚಿವರು ಮತ್ತು ಐಎಎಸ್​ ಅಧಿಕಾರಿಗಳು ಸೇರಿದಂತೆ ಒಟ್ಟು 28 ಜನರ ವಿರುದ್ಧ ಲೋಕಾಯುಕ್ತಗೆ ದೂರು ನೀಡಲಾಗಿದೆ.

ಕೊವಿಡ್​ ನಿರ್ವಹಣೆ ವೇಳೆ ಕೋಟ್ಯಂತರ ರೂ. ಅವ್ಯವಹಾರ ಆರೋಪ: ಯಡಿಯೂರಪ್ಪ ಸೇರಿದಂತೆ 28 ಜನರ ವಿರುದ್ಧ ಲೋಕಾಯುಕ್ತಗೆ ದೂರು
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ

Updated on: May 03, 2023 | 6:11 PM

ಬೆಂಗಳೂರು: ಬರೋಬ್ಬರಿ 821.22 ಕೋಟಿ ಬೃಹತ್ ಮೊತ್ತದ ಹಗರಣ ನಡೆಸಿದ ಆರೋಪ ಹಿನ್ನೆಲೆ ಮಾಜಿ ಸಿಎಂ ಬಿ.ಎಸ್​​ ಯಡಿಯೂರಪ್ಪ (BS Yediyurappa), ಸಚಿವರು ಮತ್ತು ಐಎಎಸ್​ ಅಧಿಕಾರಿಗಳು ಸೇರಿದಂತೆ ಒಟ್ಟು 28 ಜನರ ವಿರುದ್ಧ ಲೋಕಾಯುಕ್ತಗೆ ದೂರು ನೀಡಲಾಗಿದೆ. ದಾಖಲೆ ಸಮೇತ ಆರ್​ಟಿಐ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಎನ್ನುವವರಿಂದ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಕೊವಿಡ್​ ನಿರ್ವಹಣೆ ವೇಳೆ ಬಿಬಿಎಂಪಿಯಿಂದ ಕೋಟ್ಯಂತರ ಅವ್ಯವಹಾರ, ಆಂಬ್ಯುಲೆನ್ಸ್ ಖರೀದಿ ನೆಪದಲ್ಲಿ ಹೆಚ್ಚಿನ ವಾಹನಗಳ ಸಂಖ್ಯೆ ತೋರಿಸಿದ್ದಾರೆ. ಆ ಸಂದರ್ಭದಲ್ಲಿ ಬಿ.ಎಸ್. ಯಡಿಯೂರಪ್ಪ ಕೊವಿಡ್​ ವಲಯವಾರು ಉಸ್ತುವಾರಿಯಾಗಿದ್ದರು. ಸಚಿವರಾದ ವಿ.ಸೋಮಣ್ಣ ಅಶ್ವತ್ಥ್ ನಾರಾಯಣ, ಸುರೇಶ್ ಕುಮಾರ್, ಎಸ್.ಟಿ.ಸೋಮಶೇಖರ್, ಗೋಪಾಲಯ್ಯ ಜೋನಲ್ ಮ್ಯಾನೇಜ್​ಮೆಂಟ್ ನಿರ್ವಹಿಸಿದ್ದರು ಎಂದಿದ್ದಾರೆ.

ಆ್ಯಂಬುಲೆನ್ಸ್​ಗಳ ಖರೀದಿಗೆ ನಕಲಿ ದಾಖಲೆ ಸೃಷ್ಟಿ 

IAS ಅಧಿಕಾರಿಗಳಾದ ಗೌರವ್ ಗುಪ್ತಾ, ಪಿ.ಸಿ.ಜಾಫರ್​, ಮನೋಜ್ ಕುಮಾರ್ ಮೀನಾ, ರವಿಕುಮಾರ್, ವಿ.ಅನ್ಬುಕುಮಾರ್, ಉಜ್ವಲ್ ಕುಮಾರ್, ಪಂಕಜ್ ಕುಮಾರ್ ಕೋಆರ್ಡಿನೇಟ್​ ಮಾಡುತ್ತಿದ್ದರು. 821 ಕೋಟಿಗೂ ಹೆಚ್ಚು ಅವ್ಯವಹಾರದಲ್ಲಿ 28 ಜನರು ಭಾಗಿಯಾಗಿದ್ದಾರೆ. ಕೊವಿಡ್ ವೇಳೆ ಬೆಂಗಳೂರನ್ನು 8 ವಲಯಗಳಾಗಿ ವಿಂಗಡಿಸಿದ್ದರು. ಸಾವಿರಾರು ಆ್ಯಂಬುಲೆನ್ಸ್​ಗಳನ್ನು ಖರೀದಿಸುವುದಾಗಿ ನಕಲಿ ದಾಖಲೆ ಸೃಷ್ಟಿಸಿದ್ದಾರೆ.

ಇದನ್ನೂ ಓದಿ: ನಾವು ಹನುಮಂತನ ಭಕ್ತರು, ನಮ್ಮ ಪ್ರಣಾಳಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ: ಡಿಕೆ ಶಿವಕುಮಾರ್ ಸ್ಪಷ್ಟನೆ

ಹಗರಣದಲ್ಲಿ ಬಹುಪಾಲು ಸರ್ಕಾರಿ ಅಧಿಕಾರಿಗಳು ಭಾಗಿ ಆರೋಪ

ಆ್ಯಂಬುಲೆನ್ಸ್ ಹೊರತಾದ ವಾಹನಗಳ ನೋಂದಣಿ ಸಂಖ್ಯೆಗಳಿವೆ. ಬಿಎಸ್​ವೈ ಪುತ್ರ ಬಿ.ವೈ.ವಿಜಯೇಂದ್ರ ಆಪ್ತ ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಹಗರಣದಲ್ಲಿ ಬಹುಪಾಲು ಸರ್ಕಾರಿ ಅಧಿಕಾರಿಗಳು ಭಾಗಿಯಾಗಿದ್ದಾರೆ‌. ಕೊವಿಡ್ ವೇಳೆ ಜನರ ಹೆಣ ಮಾರಿ ಹಣ ಮಾಡಿದ್ದಾರೆ. ಟ್ರಾವೆಲ್ಸ್​ನಲ್ಲಿ ಖರೀದಿ ಮಾಡಿರುವುದಾಗಿ ದಾಖಲೆ ಸೃಷ್ಟಿಸಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು FIR ದಾಖಲಿಸಿ ತನಿಖೆ ಮಾಡಬೇಕಿದೆ. ಒಂದು ವೇಳೆ ದಾಖಲಿಸದಿದ್ದರೆ ಮುಂದೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಚ್ಚರಿಕೆ ನೀಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:43 pm, Wed, 3 May 23

ಗಂಗಾಧರ​ ಬ. ಸಾಬೋಜಿ

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Loading...
Unable to load recommendations.
Follow Us