Stock Market Updates: ಇಂದಿನ ಷೇರು ವಹಿವಾಟಿನಲ್ಲಿ ಗಳಿಕೆ ಯಾರದು, ನಷ್ಟ ಯಾರಿಗೆ? ಇಲ್ಲಿದೆ ವಿವರ

| Updated By: Ganapathi Sharma

Updated on: Oct 27, 2022 | 4:31 PM

ಕಳೆದ ಕೆಲವು ದಿನಗಳಿಂದ ಉತ್ತಮ ವಹಿವಾಟು ನಡೆಸುತ್ತಿರುವ ಭಾರತೀಯ ಷೇರುಪೇಟೆಗಳು ಗುರುವಾರ ಮತ್ತೆ ಗಳಿಕೆಯ ಓಟ ಮುಂದುವರಿಸಿವೆ.

Stock Market Updates: ಇಂದಿನ ಷೇರು ವಹಿವಾಟಿನಲ್ಲಿ ಗಳಿಕೆ ಯಾರದು, ನಷ್ಟ ಯಾರಿಗೆ? ಇಲ್ಲಿದೆ ವಿವರ
ಸಾಂದರ್ಭಿಕ ಚಿತ್ರ
Image Credit source: PTI
Follow us on

ಮುಂಬೈ: ಕಳೆದ ಕೆಲವು ದಿನಗಳಿಂದ ಉತ್ತಮ ವಹಿವಾಟು ನಡೆಸುತ್ತಿರುವ ಭಾರತೀಯ ಷೇರುಪೇಟೆಗಳು (Stock Market) ಮಂಗಳವಾರದ ವಹಿವಾಟಿನಲ್ಲಿ ತುಸು ಕುಸಿತ ಕಂಡಿದ್ದವು. ಗುರುವಾರ ಮತ್ತೆ ಗಳಿಕೆಯ ಓಟ ಮುಂದುವರಿಸಿವೆ. ಜಾಗತಿಕ ಆರ್ಥಿಕ ಅನಿಶ್ಚಿತತೆ, ಕಚ್ಚಾ ತೈಲ ಬೆಲೆ ಏರಿಕೆ ನಡುವೆಯೂ ಉತ್ತಮ ವಹಿವಾಟು ನಡೆಸಿದ ಬಿಎಸ್​ಇ ಸೆನ್ಸೆಕ್ಸ್ (BSE Sensex) 212.88 ಅಂಶ ಚೇತರಿಕೆ ಕಂಡು 59,756.84 ರಲ್ಲಿ ವಹಿವಾಟು ಕೊನೆಗೊಳಿಸಿತು. ಎನ್​ಎಸ್​ಇ ನಿಫ್ಟಿ (NSE Nifty) 80.60 ಅಂಶ ಚೇತರಿಸಿ 17,736.95 ರಲ್ಲಿ ವಹಿವಾಟು ಮುಕ್ತಾಯಗೊಳಿಸಿತು.

ಏರ್​ಟೆಲ್, ಎಚ್​ಡಿಎಫ್​ಸಿ ಗಳಿಕೆ ಓಟ:

ಭಾರ್ತಿ ಏರ್​ಟೆಲ್, ಎಚ್​ಡಿಎಫ್​ಸಿ, ಟಾಟಾ ಸ್ಟೀಲ್, ಪವರ್ ಗ್ರಿಡ್, ಸನ್ ಫಾರ್ಮಾ, ಟೈಟಾನ್, ಆ್ಯಕ್ಸಿಸ್ ಬ್ಯಾಂಕ್, ಡಾ. ರೆಡ್ಡೀಸ್ ಹಾಗೂ ಎನ್​ಟಿಪಿಸಿ ಉತ್ತಮ ಗಳಿಕೆ ದಾಖಲಿಸಿವೆ. ಜೆಎಸ್​ಡಬ್ಲ್ಯೂ ಸ್ಟೀಲ್ ಶೇಕಡಾ 5.47, ಹಿಂಡಾಲ್ಕೊ ಶೇಕಡಾ 3.51, ಟಾಟಾ ಸ್ಟೀಲ್ ಶೇಕಡಾ 2.96, ಅದಾನಿ ಪೋರ್ಟ್ಸ್ ಶೇಕಡಾ 2.61 ಗಳಿಕೆ ದಾಖಲಿಸಿವೆ.

ಇದನ್ನೂ ಓದಿ
Salary Hike Survey: ವೇತನ ಹೆಚ್ಚಳಕ್ಕೆ ಕಾಯುತ್ತಿದ್ದೀರಾ? ಸಿಹಿ ಸುದ್ದಿ ನೀಡಿದೆ ಹೊಸ ಸಮೀಕ್ಷೆ
Petrol Price on October 27: ಕಚ್ಚಾ ತೈಲದ ಬೆಲೆಯಲ್ಲಿ ಭಾರೀ ಏರಿಕೆ; ಇಂದಿನ ಪೆಟ್ರೋಲ್, ಡೀಸೆಲ್ ದರ ಹೀಗಿದೆ
Gold Price Today: ಚಿನ್ನ, ಬೆಳ್ಳಿ ದರ ತುಸು ಹೆಚ್ಚಳ; ಪ್ರಮುಖ ನಗರಗಳಲ್ಲಿ ಎಷ್ಟಿದೆ ಬೆಲೆ? ಇಲ್ಲಿದೆ ವಿವರ
Fake Currency: ಎಟಿಎಂನಲ್ಲಿ ಬಂದ 200 ರೂ. ನಕಲಿ ನೋಟುಗಳು, ಗ್ರಾಹಕರು ತಬ್ಬಿಬ್ಬು

ಇದನ್ನೂ ಓದಿ: ಹೂಡಿಕೆದಾರರಿಗೆ ಉತ್ತಮ ಗಳಿಕೆ ತಂದುಕೊಡಲು ಕಾರ್ಯತಂತ್ರ ಬದಲಿಸಿ: ಎಲ್​ಐಸಿಗೆ ಸರ್ಕಾರ

ಮತ್ತೊಂದೆಡೆ ಬಜಾಜ್ ಫಿನ್​ಸರ್ವ್, ಬಜಾಜ್ ಫೈನಾನ್ಸ್, ಏಷ್ಯನ್ ಪೇಂಟ್ಸ್, ಟೆಕ್ ಮಹೀಂದ್ರಾ, ವಿಪ್ರೋ ಹಾಗೂ ನೆಸ್ಲೆ ಷೇರು ಮೌಲ್ಯದಲ್ಲಿ ಕುಸಿತವಾಗಿದೆ. ಬಜಾಜ್ ಫೈನಾನ್ಸ್ ಶೇಕಡಾ 1.86, ಬಜಾಜ್ ಫಿನ್​ಸರ್ವ್ ಶೇಕಡಾ 1.66, ಏಷ್ಯನ್ ಪೇಂಟ್ಸ್ ಶೇಕಡಾ 1.34, ಬಜಾಜ್ ಆಟೊ ಶೇಕಡಾ 0.87 ಹಾಗೂ ನೆಸ್ಲೆ ಶೇಕಡಾ 0.74 ಕುಸಿತ ಕಂಡಿವೆ.

ರೂಪಾಯಿ ಚೇತರಿಕೆ:

ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಕಳೆದ ಕೆಲವು ದಿನಗಳ ಹಿಂದಷ್ಟೇ ಸಾರ್ವಕಾಲಿಕ ಕುಸಿತ ಕಂಡಿದ್ದ ರೂಪಾಯಿ ಮತ್ತೆ ಚೇತರಿಕೆ ಹಾದಿಗೆ ಮರಳಿದೆ. ಮಂಗಳವಾರ ಚೇತರಿಕೆ ದಾಖಲಿಸಿದ್ದ ರೂಪಾಯಿ ಮೌಲ್ಯ, ಗುರುವಾರ ಸಂಜೆಯೂ (3 ಗಂಟೆ ವೇಳೆಗೆ) 31 ಪೈಸೆ ವೃದ್ಧಿಯಾಗುವ ಮೂಲಕ 82.50 ತಲುಪಿತು.

ಕಚ್ಚಾ ತೈಲ ಬೆಲೆ ಹೆಚ್ಚಳ:

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಗುರುವಾರ ಪ್ರತಿ ಬ್ಯಾರೆಲ್​ಗೆ ಶೇಕಡಾ 0.3ರಷ್ಟು ಏರಿಕೆಯಾಗಿ 95.94 ಡಾಲರ್​ಗೆ ಹೆಚ್ಚಳವಾಗಿದೆ. ಯುಎಸ್ ವೆಸ್ಟ್ ಟೆಕ್ಸಾಸ್ ಇಂಟರ್​ಮೀಡಿಯೇಟ್ ಕಚ್ಚಾ ತೈಲ ಬೆಲೆ ಬ್ಯಾರೆಲ್​ಗೆ ಶೇಕಡಾ 0.2ರಷ್ಟು ಹೆಚ್ಚಾಗಿ 88.10 ಡಾಲರ್ ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ