ವಿವಿಧ ಕೃತಿಗಳಿಗೆ ‘ಪುಸ್ತಕ ಸೊಗಸು-ಮುದ್ರಣ ಸೊಗಸು’ ಬಹುಮಾನ

ಕನ್ನಡ ಪುಸ್ತಕ ಪ್ರಾಧಿಕಾರವು 2020ನೇ ಸಾಲಿನ ಪುಸ್ತಕ ಸೊಗಸು/ಮುದ್ರಣ ಸೊಗಸು ಬಹುಮಾನಗಳನ್ನು ಘೋಷಿಸಿದೆ. ಪ್ರಾಧಿಕಾರದ ಅಧ್ಯಕ್ಷ ಡಾ.ಎಂ.ಎನ್. ನಂದೀಶ್ ಹಂಚೆ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯನ್ನು ರಚಿಸಲಾಗಿತ್ತು.

ವಿವಿಧ ಕೃತಿಗಳಿಗೆ ‘ಪುಸ್ತಕ ಸೊಗಸು-ಮುದ್ರಣ ಸೊಗಸು’ ಬಹುಮಾನ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jul 13, 2021 | 6:33 PM

ಬೆಂಗಳೂರು : ಕನ್ನಡ ಪುಸ್ತಕ ಪ್ರಾಧಿಕಾರವು 2020ನೇ ಸಾಲಿನ ಪುಸ್ತಕ ಸೊಗಸು/ಮುದ್ರಣ ಸೊಗಸು ಬಹುಮಾನಗಳನ್ನು ಘೋಷಿಸಿದೆ. ಪ್ರಾಧಿಕಾರದ ಅಧ್ಯಕ್ಷ ಡಾ.ಎಂ.ಎನ್. ನಂದೀಶ್ ಹಂಚೆ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯನ್ನು ರಚಿಸಲಾಗಿತ್ತು. ಬಹುಮಾನಿತರ ವಿವರ ಈ ಕೆಳಗಿನಂತಿದೆ.

ಭವತಾರಿಣಿ ಪ್ರಕಾಶನ ಬೆಂಗಳೂರು, ಡಾ.ಎಸ್.ಗುರುಮೂರ್ತಿ ಅವರ ಸಮಗ್ರ ಅವಲೋಕನ ‘ಕದಂಬರು’ ಕೃತಿಗೆ ಪುಸ್ತಕ ಸೊಗಸು ಮೊದಲನೇ ಬಹುಮಾನ ರೂ. 25,000. ನ್ಯಾಯಮೂರ್ತಿ ಶಿವರಾಜ ವಿ.ಪಾಟೀಲ ಪ್ರತಿಷ್ಠಾನ (ರಿ) ರಾಯಚೂರು, ಸಂ:ಡಾ.ಅಮರೇಶ ಯತಗಲ್ ಅವರ ‘ಸಾರ್ಥಕ ಬದುಕು’ ಕೃತಿಗೆ ಪುಸ್ತಕ ಸೊಗಸು ಎರಡನೇ ಬಹುಮಾನ ರೂ. 20,000. ಪ್ರಕಾಶನ ಸಂಸ್ಥೆ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ (ರಿ) ಉಡುಪಿ, ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರ ‘ಕಲಾಸಂಚಯ’ ಕೃತಿಗೆ ಪುಸ್ತಕ ಸೊಗಸು ಮೂರನೇ ಬಹುಮಾನ ರೂ. 10,000. ಗೋಮಿನಿ ಪ್ರಕಾಶನ ತುಮಕೂರು ಜಿಲ್ಲೆ, ತಮ್ಮಣ್ಣ ಬೀಗಾರ ಅವರ ‘ಫ್ರಾಗಿ ಮತ್ತು ಗೆಳೆಯರು’ ಕೃತಿಗೆ ಮಕ್ಕಳ ಪುಸ್ತಕ ಸೊಗಸು ಬಹುಮಾನ ರೂ. 8,000 ದೊರೆತಿದೆ.

ಲಕ್ಷ್ಮೀಕಾಂತ ಮಿರಜಕರ ಅವರ ‘ಬಯಲೊಳಗೆ ಬಯಲಾಗಿ’ ಕೃತಿಗೆ ಮಾಡಿದ ಮುಖಪುಟ ಚಿತ್ರವಿನ್ಯಾಸಕ್ಕಾಗಿ ಕಲಾವಿದ ಟಿ.ಎಫ್ ಹಾದಿಮನಿ ಅವರಿಗೆ ರೂ. 10,000 ಬಹುಮಾನ ದೊರೆತಿದೆ. ಸಂ: ರೂಪ ಹಾಸನ ಅವರ ಹೆಣ್ಣೊಳನೋಟ ಕೃತಿಯ ಮುಖಪುಟ ಕಲಾವಿನ್ಯಾಸಕ್ಕೆ ರೂ.8,000. ರೀಗಲ್ ಪ್ರಿಂಟ್ ಸರ್ವೀಸ್ ಬೆಂಗಳೂರು, ಕಿರಣ್‍ ಭಟ್ ಅವರ ರಂಗಕೈರಳಿ ಕೃತಿಗೆ ಪುಸ್ತಕ ಮುದ್ರಣ ಸೊಗಸು ಬಹುಮಾನ ರೂ. 5,000 ಲಭಿಸಿದೆ. ಈ ಪ್ರಕಾರ ಬಹುಮಾನಿತರನ್ನು ಆಯ್ಕೆ ಮಾಡಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ : Padma Awards: ಅನಂತ್ ​ನಾಗ್​ಗೆ ಪದ್ಮ ಪ್ರಶಸ್ತಿ ನೀಡಿ; ಸೆಲೆಬ್ರಿಟಿಗಳಿಂದಲೂ ಶುರುವಾಯ್ತು ಟ್ವಿಟ್ಟರ್​ ಅಭಿಯಾನ

Published On - 6:32 pm, Tue, 13 July 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ